ಸರ್‌ಪ್ರೈಸ್ ಆಗಿ ಪ್ರಪೋಸ್ ಮಾಡುವುದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಕಾಲೇಜ್, ಮಾಲ್, ಹಿಲ್ ಸ್ಟೇಷನ್ ಹೀಗೆ ಎಲ್ಲೆಂದರಲ್ಲಿ ಲವರ್ಸ್ ಪ್ರಪೋಸ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ಪೈಲಟ್, ಫ್ಲೈಟ್‌ನಲ್ಲಿ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
ಜೀವನದಲ್ಲಿ ಪ್ರತಿಯೊಬ್ಬರೂ ಯಾರನ್ನಾದರೂ ಪ್ರೀತಿಸುತ್ತಾರೆ. ಕೆಲವೊಬ್ಬರು ಈ ಪ್ರೀತಿಯನ್ನು ವ್ಯಕ್ತಪಡಿಸಿದ ನಂತರ ಜೊತೆಗೆ ಬಾಳುತ್ತಾರೆ. ಇನ್ನು ಕೆಲವರು ಲವ್ ರಿಜೆಕ್ಟ್ ಆಗಿ ನಿರಾಶೆ ಅನುಭವಿಸುತ್ತಾರೆ. ಮತ್ತೆ ಕೆಲವರು ರಿಜೆಕ್ಟ್ ಆಗುತ್ತೆ ಅನ್ನೋ ಭಯಕ್ಕೆ ಪ್ರಪೋಸ್ ಮಾಡೋದಕ್ಕೇನೆ ಭಯ ಪಡುತ್ತಾರೆ. ಇನ್ನು ಕೆಲವರು ಸರ್‌ಪ್ರೈಸ್ ಆಗಿ ಪ್ರಪೋಸ್ ಮಾಡಿ ಪ್ರೇಯಿಸಿಯ ಮನ ಗೆಲ್ಲಲು ಯತ್ನಿಸುತ್ತಾರೆ. ಸರ್‌ಪ್ರೈಸ್ ಆಗಿ ಪ್ರಪೋಸ್ ಮಾಡುವುದು ಇತ್ತೀಚಿಗೆ ಟ್ರೆಂಡ್ ಆಗ್ತಿದೆ. ಕಾಲೇಜ್, ಮಾಲ್, ಹಿಲ್ ಸ್ಟೇಷನ್ ಹೀಗೆ ಎಲ್ಲೆಂದರಲ್ಲಿ ಲವರ್ಸ್ ಪ್ರಪೋಸ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಬ್ಬ ಪೈಲಟ್, ಫ್ಲೈಟ್‌ನಲ್ಲಿ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.
ಸರ್‌ಪ್ರೈಸ್ ಆಗಿ ಪ್ರಪೋಸ್ ಮಾಡಿದಾಗ ಹುಡುಗಿ (Girl) ಎಕ್ಸೈಟ್ ಆಗಿ ಒಪ್ಪಿಕೊಳ್ಳುತ್ತಾಳೆ ಅನ್ನೋ ಕಾರಣಕ್ಕೇನೂ ಯೂತ್ಸ್ ಇತ್ತೀಚಿಗೆ ಹೀಗೆ ಸಡನ್ ಆಗಿ ಸರ್‌ಪ್ರೈಸ್ ಕೊಟ್ಟು ಪ್ರಪೋಸ್ ಮಾಡೋ ಟ್ರೆಂಡ್ ಹುಟ್ಟುಹಾಕಿದ್ದಾರೆ. ಇತ್ತೀಚಿಗಷ್ಟೇ ಕೇದಾರನಾಥದಲ್ಲಿ ಯುವತಿಯೊಬ್ಬಳು, ಹುಡುಗನಿಗೆ ಪ್ರಪೋಸ್ ಮಾಡಿದ್ದಳು. ಈ ಹಿಂದೆ ಬೈಕರ್ಸ್ ತಂಡದಿಂದ ಸರ್‌ಪ್ರೈಸ್ ಕೊಡಿಸಿ ಯುವಕನೊಬ್ಬ (Boy) ಪ್ರಪೋಸ್ ಮಾಡಿದ್ದ. ಮಾಲ್‌ಗಳಲ್ಲಿ ಅಪರಿಚಿತರಿಂದ ರೋಸ್ ಕೊಡಿಸಿ ಪ್ರಪೋಸ್ ಮಾಡೋ ಸೀನ್ ಅಂತೂ ಆಗಾಗ ರಿಪೀಟ್ ಆಗುತ್ತಲೇ ಇರುತ್ತದೆ. ಇವೆಲ್ಲದರ ಮಧ್ಯೆ ಇಲ್ಲೊಬ್ಬ ಪೈಲಟ್, ಫ್ಲೈಟ್‌ನಲ್ಲಿ ತನ್ನ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ.
ಹೈಸ್ಕೂಲಲ್ಲಿ ಪ್ರೀತಿಸಿದ್ದ ಹುಡುಗಿಗೆ 63 ವರ್ಷದ ನಂತ್ರ ಪ್ರಪೋಸ್ ಮಾಡಿದ ಅಜ್ಜ!
ವಿಮಾನದೊಳಗೆ ಗೆಳತಿಗೆ ಪ್ರಪೋಸ್, ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋ ಪ್ರಯಾಣಿಕರಿರುವ ವಿಮಾನದ (Flight) ಒಳಭಾಗವನ್ನು ತೋರಿಸುತ್ತದೆ. ಪ್ರಯಾಣಿಕರು ಫ್ಲೈಟ್‌ನಲ್ಲಿ ಕುಳಿತುಕೊಂಡಿರುತ್ತಾರೆ. ಒಬ್ಬ ಹುಡುಗಿ ತನ್ನ ಸೀಟಿನಲ್ಲಿ ಒಬ್ಬಂಟಿಯಾಗಿ ಕುಳಿತಿರುವುದನ್ನು ಕಾಣಬಹುದು ಮತ್ತು ಇತರ ಪ್ರಯಾಣಿಕರು (Passengers) ಅವಳ ಹಿಂದೆ ಕುಳಿತಿರುವುದನ್ನು ಕಾಣಬಹುದು. ಈ ಮಧ್ಯೆ ಕ್ಯಾಪ್ಟನ್ ಇಂಟರ್‌ಕಾಮ್‌ನಲ್ಲಿ ಅನೌನ್ಸ್‌ಮೆಂಟ್ ಮಾಡುತ್ತಾರೆ. 'ಲೇಡೀಸ್ ಮತ್ತು ಜೆಂಟಲ್‌ಮೆನ್, ಇದು ಕ್ಯಾಪ್ಟನ್ ಮರ್ಫಿ ಮಾತನಾಡುತ್ತಿದ್ದಾರೆ. ನಾವೀಗ 10000 ಅಡಿ ತಲುಪಿದ್ದೇವೆ. ನಾವು ಇಂದು ವಿಮಾನದಲ್ಲಿ ವಿಶೇಷ ಅತಿಥಿಯನ್ನು ಹೊಂದಿದ್ದೇವೆ. ನನ್ನ ಗೆಳತಿ ವನೆಸ್ಸಾ' ಎಂದು ಹೇಳುತ್ತಾನೆ.
ಪೈಲಟ್ ತನ್ನ ಹೆಸರನ್ನು ಘೋಷಿಸಿದ ನಂತರ ಒಬ್ಬಂಟಿಯಾಗಿ ಕುಳಿತಿರುವ ಹುಡುಗಿ ತಕ್ಷಣವೇ ಪ್ರತಿಕ್ರಿಯಿಸುತ್ತಾಳೆ. ಇದಲ್ಲದೆ, ಪೈಲಟ್ ಇಂದು ಆಕೆಯ ಜನ್ಮದಿನ ಎಂದು ಘೋಷಿಸುತ್ತಾರೆ. ಪ್ರತಿಯೊಬ್ಬರೂ ಅವಳಿಗೆ ಬರ್ತ್‌ಡೇ ಶುಭಾಶಯಗಳನ್ನು ಕೋರುವಂತೆ ಕೇಳಿಕೊಳ್ಳುತ್ತಾರೆ. ಸಹ ಪ್ರಯಾಣಿಕರು ಚಪ್ಪಾಳೆ ತಟ್ಟುವಾಗ ಮೂಲಕ ಆಕೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತಾರೆ.
ಮಾಜಿ ಗರ್ಲ್‌ಫ್ರೆಂಡ್‌ಗಾಗಿ ಚಳಿಯಲ್ಲೂ ಬರೋಬ್ಬರಿ 21 ಗಂಟೆ ಮಂಡಿಯೂರಿ ಕುಳಿತ ಪ್ರೇಮಿ!
ಪ್ರಯಾಣಿಕರ ಸಹಾಯದಿಂದ ವಿಲ್ ಯೂ ಮ್ಯಾರಿ ಮಿ ಎಂದು ಕೇಳಿದ ಪೈಲೆಟ್
ಇದಲ್ಲದೆ, ಪೈಲೆಟ್ ಪ್ರಯಾಣಿಕರೆಲ್ಲರ ಸಹಾಯವನ್ನು ಕೋರುತ್ತಾರೆ. ಪ್ರಯಾಣಿಕರು ತಮ್ಮ ಪೈಲಟ್‌ಗೆ ಸಹಾಯ ಮಾಡಲು ಸಿದ್ಧರಾಗುತ್ತಾರೆ. ಪೈಲಟ್ ಸೂಚನೆಯಂತೆ, ಪ್ರಯಾಣಿಕರು ಸೀಟಿನ ಪಾಕೆಟ್‌ಗಳಿಂದ ಕಾಗದದ ತುಂಡನ್ನು ಹೊರತೆಗೆದು ಸಾಲಾಗಿ ನಿಲ್ಲುತ್ತಾರೆ. ಇದನ್ನು ಒಂದೊಂದು ಕಾರ್ಡ್‌ನಲ್ಲಿ ಒಂದೊಂದು ವರ್ಡ್ ಬರೆದಿರಲಾಗಿರುತ್ತದೆ. ಸಂಪೂರ್ಣವಾಗಿ 'ವಿಲ್ ಯು ಮ್ಯಾರಿ ಮಿ' ಎಂಬ ವಾಕ್ಯವನ್ನು ನೋಡಬಹುದು.
ನಂತರ ಪೈಲಟ್, 'ಸೀಟಿನ ಪಾಕೆಟ್‌ನಿಂದ ಪತ್ರವನ್ನು ಹೊರತೆಗೆದು ಯುವತಿ ಅದನ್ನು ಓದುವಂತೆ ಕೇಳಿಕೊಳ್ಳುತ್ತಾನೆ. ಹುಡುಗಿ ಪತ್ರವನ್ನು ಗಟ್ಟಿಯಾಗಿ ಓದಲು ಪ್ರಾರಂಭಿಸುತ್ತಾಳೆ. 'ವೆನೆಸ್ಸಾ, ಜನ್ಮದಿನದ ಶುಭಾಶಯಗಳು. ಈ ರೀತಿಯೆಲ್ಲಾ ಮಾಡುವ ಮೂಲಕ ನಾನು ನಿನಗೆ ಮುಜುಗರ ಮಾಡುತ್ತಿದ್ದೇನೆಂದು ತಿಳಿದಿದೆ. ಆದರೆ ಇಂದು, ನಾವು ಮೊದಲು ಭೇಟಿಯಾದ ಅದೇ ವಿಮಾನದಲ್ಲಿ ನಾವು ಹಾರುತ್ತಿದ್ದೇನೆ. ಮತ್ತು ನೀವು ಅದೇ ಆಸನದಲ್ಲಿ ಕುಳಿತಿದ್ದಿ. ನೀನು, ನನ್ನ ಜೀವನದಲ್ಲಿ ನೋಡಿರುವ ಅತ್ಯಂತ ಸುಂದರವಾದ ಯುವತಿ. ಈಗ ನೀನು ಹಿಂತಿರುಗಿ ಕಾರ್ಡ್ ಓದಬೇಕೆಂದು ನಾನು ಬಯಸುತ್ತೇನೆ' ಎಂದು ಬರೆದಿರುತ್ತದೆ.
ಹುಡುಗಿ ಹಿಂತಿರುಗಿ ನೋಡಿದ ತಕ್ಷಣ ಉತ್ಸಾಹದಿಂದ ಕಿರುಚುತ್ತಾಳೆ. ತಕ್ಷಣವೇ ಕ್ಯಾಪ್ಟನ್ ಕಾಕ್‌ಪಿಟ್‌ನಿಂದ ಹೊರಗೆ ಬಂದು ಆಕೆಯ ಎದುರು ಮಂಡಿಯೂರಿ ಪ್ರಪೋಸ್ ಮಾಡುತ್ತಾನೆ. ತಕ್ಷಣ ಯುವತಿ ಯೆಸ್ ಎಂದು ಆನ್ಸರ್ ಮಾಡುತ್ತಾಳೆ. ಎಲ್ಲರೂ ಜೋರಾಗಿ ಹರ್ಷೋದ್ಗಾರ ಮಾಡುವುದರೊಂದಿಗೆ ಇಬ್ಬರ ಪ್ರೀತಿಗೆ ಮೆಚ್ಚುಗೆ ಸೂಚಿಸುತ್ತಾರೆ. ಟೇಲರ್ ವ್ಯಾಟ್ಸನ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.