
ಎಷ್ಟೋ ಸಲ ದೇವರನ್ನು ಶಪಿಸಿದ್ದಾಳೆ. ಕಂಬನಿ ಮಾತ್ರ ಯಾರಿಗೂ ಕಾಣದಂತೆ ಸುರಿಸಿದ್ದಾಳೆ. ಮೊನ್ನೆ ಅಮ್ಮ ಮಾತ್ರ ತೀರಾ ನೊಂದು ಕೊಂಡಿದ್ದಾಳೆ ಎಂಬ ಭಾವ ನನ್ನಲ್ಲಿ ಕಾಡಿತ್ತು. ಬದುಕಿನ ಹಾದಿಯನ್ನು ಎಳೆ ಎಳೆಯಾಗಿ ಹೇಳುತ್ತಾ ಹೋದ ಆಕೆಯ ಕಣ್ಣಲ್ಲಿ ಕಂಬನಿಯನ್ನು ಕಂಡೆ.
ಸುದ್ದಿವಾಹಿನಿಯಲ್ಲಿ ಕಳೆದ ಕೆಲವು ದಿನಗಳು;ಬದುಕು ಕಲಿಸಿದ ಆ ರೋಚಕ ಘಟನೆ!
ಬದುಕು ಅವಳಿಗೆ ಇಳಿ ವಯಸ್ಸಿನಲ್ಲಿಯೇ ಜವಾಬ್ದಾರಿಯ ಹೊರೆಯನ್ನು ಹೊರಸಿತ್ತು. ಕಾಲ ಅವಳಿಗೆ ಅರಿವಿಲ್ಲದೇ ಎಲ್ಲವನ್ನೂ ಸ್ವೀಕರಿಸುವ ಮನೋಭಾವವನ್ನು ಕಲಿಸಿ ಕೊಟ್ಟಿತ್ತು. ಗೊತ್ತಿಲ್ಲದೇ ಎಲ್ಲದ್ದಕ್ಕೂ ಒಗ್ಗಿಕೊಂಡು ಹೋದ ಅವಳ ಬದುಕನ್ನು ಕಂಡು, ‘ಯಾಕಮ್ಮಾ ಇಷ್ಟೆಲ್ಲಾ ಕಷ್ಟಪಡ್ತೀಯಾ, ಯಾರಿಗೋಸ್ಕರ ಈ ತಾಳ್ಮೆ, ಸಹಿಸುವಿಕೆ?’ ಎಂದು ಪ್ರಶ್ನಿಸಿದ್ದೆ ಕೂಡಾ. ಆಕೆ ಮಾತ್ರ ಬುದ್ಧನಂತೆ ಮಂದಸ್ಮಿತಳಾಗಿ ಮೌನವಾಗಿ ಬಿಟ್ಟಿದ್ದಳು.
ದಾಡಿ ಹುಡುಗರ ನಾಡಿಮಿಡಿತ;ಕಾರಿಡಾರ್ ಗಡ್ಡಧಾರಿಗಳಿಗೆ ಭಾರಿ ಡಿಮ್ಯಾಂಡು!
ಬದುಕಿನ ಬಗ್ಗೆ ಸಾಗರದಷ್ಟೂಕನಸು ಕಾಣುವುದು ಸಹಜ. ಆದರೆ ಅವಳ ಬದುಕಿನ ಬಹುದೊಡ್ಡ ಕನಸು ನಾನು. ಕೋಪದಿಂದ ಅವಳ ಮೇಲೆ ಸಿಡುಕಾಡುತ್ತೇನೆ. ಮತ್ತದೇ ಮೆತ್ತನೆಯ ಧ್ವನಿಯಲ್ಲಿ ‘ಅಮ್ಮ..’ ಎಂದು ಕರೆದರೆ ಸಾಕು, ನಕ್ಕು ಸುಮ್ಮನಾಗುತ್ತಾಳೆ. ತುಂಬಾ ಬೇಗನೇ ಎಲ್ಲರನ್ನೂ ನಂಬಿ ಬಿಡುವ ಸ್ವಭಾವ ಅವಳದು. ಚಿಕ್ಕ ವಯಸ್ಸಿನಲ್ಲಿಯೇ ಬಾಳ ಸಂಗಾತಿ, ತಂದೆ ತಾಯಿಯನ್ನು ಕಳೆದುಕೊಂಡ ಆಕೆಗೆ ಬದುಕು ತುಂಬಾನೇ ಕಲಿಸಿಕೊಟ್ಟಿದೆ. ಒಡಲಲ್ಲಿ ನೋವನ್ನು ತುಂಬಿದ್ದರೂ ನನ್ನ ನಗುವಿಗಾಗಿ ಪ್ರತಿದಿನ ನಗುತ್ತಾಳೆ.
ಅಪ್ಪನ ಬಗ್ಗೆ ನನಗೆ ಅರಿವು ಬಂದಾಗಲೇ ವಿಧಿ ಅವನನ್ನೂ ಕರೆಸಿಕೊಂಡ. ಎಲ್ಲಿ ಮಗಳು ತಂದೆಯ ಪ್ರೀತಿಯನ್ನು ಹಂಬಲಿಸುತ್ತಾಳೋ ಎಂಬ ಭಯವಿತ್ತೇನೋ ಆಕೆಗೆ. ತಂದೆಯಾಗಿ ಮನೆಯ ಜವಾಬ್ದಾರಿ ಹೊತ್ತಳು. ತಾಯಿಯಾಗಿ ಕೈ ತುತ್ತು ಉಣಿಸಿ ಬೆಳೆಸಿದಳು. ಕೆಲವೊಮ್ಮೆ ನನಗೂ ಅನಿಸಿದ್ದು ಇದೆ, ತಂದೆ ಎಂಬ ಸಂಬಂಧ ಜೊತೆಗಿದ್ದರೂ ನನ್ನ ಬೇಕು, ಬೇಡಗಳನ್ನುಇಷ್ಟುಸುಲಭವಾಗಿ ಅರ್ಥೈಸಿಕೊಳ್ಳುತ್ತಿರುತ್ತಿರಲಿಲ್ಲವೇನೋ..
ಈಗೀಗ ತುಂಬಾ ಭಾವುಕಳಾಗುತ್ತಾಳೆ ಅಮ್ಮ. ನಾನು ಭೂಮಿಗೆ ಬಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದೆ. ಅದೇ ಗಳಿಗೆ ಹೆತ್ತಮ್ಮನನ್ನು ಅವಳು ಕಳೆದುಕೊಂಡಿದ್ದಳು. ವಿಧಿ ಬರಹದ ಮುಂದೆ, ಅವಳು ಅಮ್ಮ ಎಂದು ಕರೆಸಿಕೊಳ್ಳುವ ಹೊತ್ತಿಗಾಗಲೇ, ಅದೆಷ್ಟೋ ಜನರು ಅವಳಿಗೆ ಆಡಿದ ಚುಚ್ಚು ಮಾತಿಗೇ ಲೆಕ್ಕವೇ ಇರಲಿಲ್ಲ. ಇನ್ನೇನಿದ್ದರೂ ನನ್ನ ಬದುಕು ನನ್ನ ಮಗಳಿಗಾಗಿ ಎಂದು ಭಾವಿಸಿದ್ದಳು.
ಕಣ್ಣ ಮುಂದೆ ಪುಟ್ಟತಂಗಿ ತಮ್ಮಂದಿರು, ಅವಳೆಲ್ಲರಿಗೂ ಅಮ್ಮನ ಸ್ಥಾನದಲ್ಲಿ ನಿಂತು, ಜವಾಬ್ದಾರಿಯ ಹೊರೆಯನ್ನು ಹೊತ್ತುಕೊಂಡಿದ್ದ ಅಮ್ಮ, ತನಗಾಗಿ ಏನೇನ್ನೂ ಮಾಡಲೇ ಇಲ್ಲ. ಅವಳು ಬಾಳಿ ಬದುಕು ಬೇಕಾಗಿದ್ದ ಮನೆಯವರಿಗೆ ಇವಳ ಕಷ್ಟಕ್ಕೆ ಕಿವಿಗೊಡಲಿಲ್ಲ. ಎಲ್ಲವನ್ನೂ ಸಹಿಸಿಕೊಂಡ ಆಕೆ ಮಾತ್ರ ಇಂದಿಗೂ ಅವಳ ಮುಖದಲ್ಲಿ ನಗು ಮಾಸಿಲ್ಲ. ತನಗಾಗಿ ಅಲ್ಲದಿದ್ದರೂ, ತನ್ನವರಿಗಾಗಿ ನಗುತ್ತಾಳೆ ನನ್ನಮ್ಮ. ನಿನ್ನ ಈ ಬದುಕು ನನಗೆ ಎಷ್ಟೋ ಪಾಠಗಳನ್ನು ಕಲಿಸಿಕೊಟ್ಟಿದ್ದೆ. ನಿನ್ನ ಈ ಮಾತು, ಕನಸು, ನಗು, ಅಳು ಅದೇನಿದ್ದರೂ ನನ್ನ ಸುತ್ತಲೇ. ನಿನ್ನ ಈ ತಾಳ್ಮೆಗೆ ಸರಿಸಾಟಿ ಯಾರು ಇಲ್ಲಮ್ಮ. ನಿನ್ನ ಬದುಕಿದ ದಾರಿಯೇ ಸ್ಪೂರ್ತಿ. ಮಿಸ್ ಯೂ ಅಮ್ಮ..
ತಪ್ಪು ನಿಂದಲ್ಲ! ಹಾಸ್ಟೆಲಿನ ಬೆಸ್ಟ್ ಸಿಂಗರ್ ಬರೆದ ಸ್ನೇಹ ನಿವೇದನೆ
ಸಾಯಿನಂದಾ ಚಿಟ್ಪಾಡಿ, ವಿವೇಕಾನಂದ ಕಾಲೇಜು, ಪುತ್ತೂರು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.