ಬಾಲಿವುಡ್‌ನ ಝೆಡ್ ಜನರೇಷನ್ ನಟ ನಟಿಯರು ಒಬ್ಬರಾದ ಮೇಲೆ ಒಬ್ಬರಂತೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ.ಈಗ ಬಾಲಿವುಡ್‌ನ ಇನ್ನೊಂದು ಸ್ಟಾರ್ ಕಿಡ್, ಸೈಫ್ ಅಲಿಖಾನ್ ಪುತ್ರ ಇಬ್ರಾಹಿಂ ಖಾನ್ ಕೂಡ ನಟಿ ಪಾಲಕ್ ತಿವಾರಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ಬರು ಜೊತೆಯಾಗಿ ಹೊಸವರ್ಷವನ್ನು ಆಚರಿಸಿದ್ದಾರೆ.
ಬಾಲಿವುಡ್‌ನ ಝೆಡ್ ಜನರೇಷನ್ ಒಬ್ಬರಾದ ಮೇಲೆ ಒಬ್ಬರಂತೆ ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ದಿ ಆರ್ಚೀಸ್ ಜೋಡಿಯಾದ ಶಾರುಖ್ ಪುತ್ರಿ ಸುಹಾನಾ ಖಾನ್ ಹಾಗೂ ಅಭಿಷೇಕ್ ಅಳಿಯ ಆಗಸ್ತ್ಯ ನಂದಾ ಡೇಟಿಂಗ್‌ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದಾದ ನಂತರ ಇದೇ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಶ್ರೀದೇವಿ ಪುತ್ರಿ ಖುಷಿ ಕಪೂರ್ ಹಾಗೂ ಮಾಡೆಲ್ ವೇದಾಂಗ್ ರೈನಾ ಕೂಡ ಪರಸ್ಪರ ಪ್ರೇಮಿಸುತ್ತಿದ್ದಾರೆ ಎಂಬ ಗಾಸಿಪ್‌ಗಳು ಹಬ್ಬಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಕೆಲ ನಿಮಿಷಗಳ ಅಂತರದಲ್ಲಿ ಒಬ್ಬರಾದ ನಂತರ ಒಬ್ಬರು ಮುಂಬೈ ಏರ್‌ಪೋರ್ಟ್‌ಗೆ ಬಂದು ಹೊಸವರ್ಷ ಆಚರಿಸುವ ಸಲುವಾಗಿ ವಿಮಾನವೇರಿದ್ದರು. ಈಗ ಬಾಲಿವುಡ್‌ನ ಇನ್ನೊಂದು ಸ್ಟಾರ್ ಕಿಡ್, ಸೈಫ್ ಅಲಿಖಾನ್ ಪುತ್ರ ಇಬ್ರಾಹಿಂ ಖಾನ್ ಕೂಡ ನಟಿ ಪಾಲಕ್ ತಿವಾರಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ಇಬ್ಬರು ಜೊತೆಯಾಗಿ ಹೊಸವರ್ಷವನ್ನು ಆಚರಿಸಿದ್ದಾರೆ.
ಅಮೃತಾ ಸಿಂಗ್ ಹಾಗೂ ಸೈಫ್ ಅಲಿ ಖಾನ್ ಪುತ್ರನಾಗಿರುವ ಇಬ್ರಾಹಿಂ ಖಾನ್ ಸಿನಿಮಾ ಇಂಡಸ್ಟ್ರಿಗೆ ಬರುವುದಕ್ಕೂ ಮೊದಲೇ ಬಾಲಿವುಡ್‌ನಲ್ಲಿ ಪ್ರಸಿದ್ದಗೊಂಡಿದ್ದು, ಸರ್ಝಾಮೀನ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಈ ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಇದರ ಜೊತೆಗೆ ಗೆಳತಿ ಪಾಲಕ್ ತಿವಾರಿ ಜೊತೆಗಿನ ತಿರುಗಾಟದ ಕಾರಣಕ್ಕೆ ಇನ್ನಷ್ಟು ಸುದ್ದಿಯಲ್ಲಿದ್ದಾರೆ ಇಬ್ರಾಹಿಂ ಖಾನ್, ಈ ಪಾಲಕ್ ತಿವಾರಿ ಖ್ಯಾತ ನಟಿ ಶ್ವೇತಾ ತಿವಾರಿ ಸೋದರಿ.
ಮುಸ್ಲಿಂ ಮದ್ವೆಯಾದ ಕರೀನಾ ಆರಾಧಿಸುವ ಧರ್ಮ ಯಾವುದು? KWK ಶೋದಲ್ಲಿ ರಿವೀಲ್ ಆಯ್ತು ಸತ್ಯ!
ಹೊಸವರ್ಷದಾಚರಣೆಯ ದಿನ (ನಿನ್ನೆ) ಸಂಜೆ ಈ ಜೋಡಿ ಕಾರೊಂದರಲ್ಲಿ ಜೊತೆಯಾಗಿ ಹೋಗಿದ್ದನ್ನು ಪಪಾರಾಜಿಗಳು ಸೆರೆ ಹಿಡಿದಿದ್ದಾರೆ. ಈ ವೇಳೆ ಈ ಜೋಡಿ ಕ್ಯಾಮರಾಗೆ ಕಾಣದಂತೆ ಮುಖವನ್ನು ಮುಚ್ಚಿಕೊಂಡಿದ್ದಾರೆ. ಈ ಜೋಡಿ ನೀಲಿ ಬಣ್ಣದ ಐಷಾರಾಮಿ ಕಾರಿನಲ್ಲಿ ಕಾರಿನ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿ ಜೊತೆ ಹೋಗುತ್ತಿದ್ದಿದ್ದು ಕ್ಯಾಮರಾದಲ್ಲಿ ಸೆರೆ ಆಗಿದೆ. ಈ ವೇಳೆ ಇಬ್ರಾಹಿಂ ಕಂದು ಬಣ್ಣದ ಜಾಕೆಟ್ ಧರಿಸಿದ್ದರೆ, ಇತ್ತ ಪಾಲಕ್ ಕಪ್ಪು ಬಣ್ಣದ ಧಿರಿಸು ಧರಿಸಿದ್ದರು.
ಹಾಗಂತ ಈ ಜೋಡಿಗೆ ಹೀಗೆ ಪಪಾರಾಜಿ ಕ್ಯಾಮರಾದಲ್ಲಿ ಸೆರೆ ಆಗುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಕೂಡ ಹಲವು ಕಾರ್ಯಕ್ರಮಗಳಲ್ಲಿ ಪಾರ್ಟಿಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಇಬ್ರಾಹಿಂ ಹಾಗೂ ಪಾಲಕ್ ಅವರು ಜೊತೆಯಾಗಿಯೇ ಕಾಣಿಸಿಕೊಂಡಿದ್ದರು.
ಹಿಂದೆ ಪಾಲಕ್ ಅವರು ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾದಲ್ಲಿ ನಟಿಸಿದ್ದು ಈ ಸಿನಿಮಾದ ಟ್ರೈಲರ್ ರಿಲೀಸ್ ಆದ ನಂತರ ಇಬ್ರಾಹಿಂ ಖಾನ್ ಅವರಿಂದ ಏನಾದರೂ ಮೆಸೇಜ್ ನಿಮಗೆ ಬಂದಿತ್ತಾ ಎಂದು ಸಂದರ್ಶನವೊಂದರಲ್ಲಿ ನಿರೂಪಕ ಸಿದ್ಧಾರ್ಥ್ ಕಣ್ಣನ್ ಅವರು ಪಾಲಕ್ ಬಳಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಆಕೆ ನಾವು ದಿನವೂ ಮೆಸೇಜ್ ಮಾಡುತ್ತಾ ಕೂರುವುದಿಲ್ಲ, ಯಾವುದಾದರೂ ಸಮಾರಂಭಗಳಲ್ಲಿ ಮಾತ್ರವೇ ಭೇಟಿಯಾಗುತ್ತಿರುತ್ತೇವೆ. ಅವನು ನನಗೆ ಕೇವಲ ಸ್ನೇಹಿತ ಮಾತ್ರ ಎಂದು ಹೇಳಿದ್ದರು. ಅಲ್ಲದೇ ಆತನನ್ನು ನಾನು ಬಹಳ ಇಷ್ಟಪಡುತ್ತೇನೆ ಎಂದೂ ಹೇಳಿದ್ದರು ಪಾಲಕ್.
ಅಮೃತಾ ಜೊತೆ ಮದ್ವೆಯಾಗಲು ಮನೆ ಬಿಟ್ಟು ಓಡಿ ಹೋಗಿದ್ದ ಸೈಫ್: KWK 8 ಶೋನಲ್ಲಿ ಮಗನ ಕಿತಾಪತಿ ನೆನೆದ ಅಮ್ಮ
ಇವರಿಬ್ಬರೂ ತಮ್ಮ ಸಂಬಂಧವನ್ನು ಏಕೆ ಮಾಧ್ಯಮಗಳಿಂದ ಅಡಗಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರಿಗೂ ಆತ್ಮೀಯರಾದ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದು, ಅದರಂತೆ ಈ ಸ್ಟಾರ್‌ಕಿಡ್‌ಗಳು ಮೊದಲನೆಯದಾಗಿ ತಮ್ಮ ಕೆರಿಯರ್ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಅದರತ್ತ ಗಮನ ಹರಿಸುತ್ತಿದ್ದಾರೆ. ತಮ್ಮ ಈ ಸಂಬಂಧ ತಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರುವುದು ಇಬ್ಬರಿಗೂ ಇಷ್ಟವಿಲ್ಲ ಇದೇ ಕಾರಣಕ್ಕೆ ಇವರು ತಮ್ಮ ಈ ಸಂಬಂಧವನ್ನು ಅಡಗಿಸುತ್ತಿದ್ದಾರೆ. ಅಲ್ಲದೇ ಇವರಿಬ್ಬರ ನಿರ್ಧಾರಕ್ಕೆ ಎರಡೂ ಕುಟುಂಬಗಳ ಒಪ್ಪಿಗೆ ಇದೆ ಎಂದೂ ಈ ಅಧಿಕೃತ ಮೂಲವೊಂದು ವರದಿ ಮಾಡಿದೆ.
ಈ ಹಿಂದೆ ಕಾಫಿ ವಿತ್ ಕರಣ್ ಶೋಗೆ ಆಗಮಿಸಿದ್ದ ಇಬ್ರಾಹಿಂ ಅಪ್ಪ ಹಾಗೂ ಬಾಲಿವುಡ್ ನಟ ಸೈಫ್ ಅಲಿಖಾನ್‌ಗೆ ಕರಣ್ ಅವರು, ಮಗ ಇಬ್ರಾಹಿಂ ಅಲಿ ಖಾನ್ ಶೋ ಜೊತೆ ಒಡನಾಡುವ ಹೆಣ್ಣು ಮಕ್ಕಳಿಗೆ ಯಾವುದಾದರೂ ಅರ್ಹತೆ ಇರಬೇಕು ಎಂದು ಬಯಸುವುದಾದರೆ ಏನು ಎಂದು ಕರಣ್ ಜೋಹರ್ ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಿದ ಸೈಫ್, ಇಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ ಇದೇ ಪ್ರಶ್ನೆಯನ್ನು ಮತ್ತೆ ಕೇಳಿದಾಗ ಮುಖ್ಯವಾಗಿ ಹುಡುಗಿ ಸಿಂಗಲ್ ಆಗಿರಬೇಕು ಅಷ್ಟೇ ಎಂದು ಹೇಳಿದ್ದರು.