
ಪ್ರೀತಿಯೇ ಅಂತಹದ್ದು… ಮನಸ್ಸನ್ನು ಸಂಪೂರ್ಣವಾಗಿ ಒಬ್ಬರಿಗೆ ಅರ್ಪಣೆ ಮಾಡಿದಾಗ ಅವರಿಂದ ದೂರವಾಗೋದು ಸುಲಭದ ಮಾತಲ್ಲ. ಅವರು ನಮ್ಮಿಂದ ದೂರವಾದ್ರೆ ಅಥವಾ ನಮ್ಮ ನಂಬಿಕೆಗೆ ಅವರು ಮೋಸ ಮಾಡಿದ್ರೆ ಆಗುವ ನೋವನ್ನು ಮಾತಿನಿಂದ ಹೇಳಲು ಸಾಧ್ಯವಿಲ್ಲ. ಪ್ರತಿಕ್ಷಣವೂ ಅವರ ಜೊತೆಗಿನ ಮಾತು, ಅವರ ಜೊತೆ ಕಳೆದ ಸಂತೋಷದ ಕ್ಷಣಗಳು ಕಣ್ಣೆದುರು ಬಂದು ನೆಮ್ಮದಿ ಕೆಡಿಸುತ್ತವೆ. ಸದಾ ಅವರ ನೆನಪಿನಲ್ಲಿರುವ ಜನರು ಕೆಟ್ಟ ಆಲೋಚನೆ ಮಾಡ್ತಾರೆ, ಭವಿಷ್ಯ ಹಾಳು ಮಾಡಿಕೊಳ್ತಾರೆ. ಹೀಗೆ ಪ್ರೀತಿಯಲ್ಲಿ ಮೋಸ ಹೋದ, ಪ್ರೀತಿಯಿಂದ ದೂರವಾದವರು ಸದ್ಗುರು ಅವರ ಈ ಮಾತನ್ನು ಕೇಳಿದರೆ ದುಃಖದಿಂದ ಸುಲಭವಾಗಿ ಹೊರಬರಬಹುದು. ಯಾರೋ ನಿಮ್ಮ ಪ್ರೀತಿಗೆ ಮೋಸ ಮಾಡಿದಾಗ ನೀವು ಅದನ್ನು ಹೇಗೆ ಸ್ವೀಕರಿಸಬೇಕು, ಅದರಿಂದ ಹೇಗೆ ಹೊರ ಬರಬೇಕು ಎನ್ನುವುದನ್ನು ಸದ್ಗುರು ತಿಳಿಸಿದ್ದಾರೆ.
ನನಗೆ ಅವರಿಂದ ಮೋಸ (Cheating) ವಾಗಿದೆ ಎನ್ನುವ ಅಗತ್ಯವಿಲ್ಲ : ಸಾಮಾನ್ಯವಾಗಿ ಮೋಸಹೋದವರು ಅವನು ನನಗೆ ಮೋಸಮಾಡಿದ ಅಥವಾ ಅವಳು ನನಗೆ ಕೈ ಕೊಟ್ಟಳು ಎಂದು ಎಲ್ಲರಿಗೂ ಹೇಳುತ್ತಾರೆ. ಹೀಗೆ ತಾನು ಮೋಸಹೋದೆ ಎಂದು ಡಂಗುರಸಾರುವುದು ತಪ್ಪು. ನಾನು ನನ್ನ ಮುಂದಿನ ಉತ್ತಮ ಭವಿಷ್ಯ (Future) ದ ಬಗ್ಗೆ ಇಲ್ಲಸಲ್ಲದ ಕನಸನ್ನು ಕಾಣುತ್ತಿದ್ದೆ. ಆದರೆ ಆತ ನನ್ನ ತಪ್ಪುಕಲ್ಪನೆಯನ್ನು ದೂರಮಾಡಿದ. ಆ ಮೂಲಕ ಭವಿಷ್ಯದಲ್ಲಿ ಉಂಟಾಗುವ ನೋವನ್ನು, ಎದುರಾಗುವ ಆಘಾತವನ್ನು ದೂರಮಾಡಿದ ಎಂದು ತಿಳಿದುಕೊಳ್ಳಿ. ನೀವು ಮೋಸಹೋಗಿದ್ದೀರಿ ಎಂದು ಕೊರಗುವ ಬದಲು ಇಂತಹ ಉತ್ತಮ ವಿಚಾರಗಳು ನಿಮ್ಮ ಮುಂದಿನ ಜೀವನಕ್ಕೆ ಉತ್ಸಾಹ ನೀಡುತ್ತದೆ ಎಂದು ಸದ್ಗುರು (Sadhguru) ಹೇಳಿದ್ದಾರೆ.
ಅವಳನ್ನು ನೋಡಿದ್ರೆ ಮನಸ್ಸಿನಲ್ಲಿ ಕಚಗುಳಿ, ನಿಮ್ಗೆ ಲವ್ವಾಗಿದ್ಯಾ ತಿಳ್ಕೊಳ್ಳೋದು ಹೇಗೆ?
ಮೋಸ ಮಾಡಿದವರಿಗೆ ಥ್ಯಾಂಕ್ಯೂ ಹೇಳಿ : ನೀವು ಯಾರೊಂದಿಗೆ ನಿಮ್ಮ ಜೀವನವನ್ನು ಕಳೆಯಬೇಕು ಎಂದುಕೊಂಡಿದ್ರೋ ಅವರೇ ನಿಮಗೆ ಮೋಸ ಮಾಡಿದಾಗ ಉಂಟಾಗುವ ನೋವು ಅತಿಂಥದ್ದಲ್ಲ. ಅಂತಹ ನೋವಿನಿಂದ ಹೊರಬರುವುದು ಬಹಳ ಕಷ್ಟ. ಆದ್ದರಿಂದ ಅಂತಹ ನೋವನ್ನು ಹಾಗೂ ಮೋಸತನವನ್ನು ನೀವು ಬೇರೆಯದೇ ದೃಷ್ಟಿಯಿಂದ ನೋಡಬೇಕು ಆಗ ಅದು ನಿಮಗೆ ನೋವು ಎನಿಸೋದಿಲ್ಲ.
ನಿಮಗೆ ಮೋಸ ಮಾಡಿದವರಿಗೆ ಥ್ಯಾಂಕ್ಯೂ ಹೇಳಿ ಎಂದು ಸದ್ಗುರು ಹೇಳುತ್ತಾರೆ. ಏಕೆಂದರೆ ಅವರು ನಿಮಗೆ ವಾಸ್ತವ ಏನೆನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ನಿಮ್ಮನ್ನು ಭ್ರಮೆಯಿಂದ ಹೊರತಂದಿದ್ದಾರೆ. ಅವರು ಹಾಗೆ ಮೋಸಮಾಡದೇ ಇದ್ದರೆ ನೀವು ಜೀವನಪೂರ್ತಿ ಅದೇ ಮೋಸದ ಪ್ರೀತಿಯ ಜೊತೆ ಬದುಕು ನಡೆಸಬೇಕಾಗುತ್ತಿತ್ತು.
ಅಜ್ಜಂಗೆ 100, ಅಜ್ಜಿಗೆ 90: ಪ್ರೀತಿ ಆಚರಿಸಲು ಈ ಜನ್ಮ ಸಾಕಾಗಿಲ್ಲ ಅಂತಾರೆ ಈ ಹಿರಿಯರು!
ಭಗ್ನಪ್ರೀತಿ ನಿಮ್ಮನ್ನು ಇನ್ನಷ್ಟು ಗಟ್ಟಿಯಾಗಿಸುತ್ತೆ : ಒಮ್ಮೆ ಪ್ರೀತಿಯಲ್ಲಿ ಮೋಸವಾದರೆ ಮತ್ತೊಮ್ಮೆ ಯಾರ ಮೇಲೂ ವಿಶ್ವಾಸ ಮೂಡುವುದಿಲ್ಲ. ಆದರೆ ಒಮ್ಮೆ ನೀವು ನಿಮ್ಮ ಹಳೆ ಪ್ರೀತಿಯಿಂದ, ಆ ಜಗತ್ತಿನಿಂದ ಹೊರಬಂದು ನೋಡಿದಾಗ ನಿಮ್ಮಲ್ಲಿರುವ ಧೈರ್ಯ, ಒಂಟಿಯಾಗಿ ಎಲ್ಲವನ್ನು ಎದುರಿಸುವ ಶಕ್ತಿ ನಿಮಗಿದೆ ಎನ್ನುವುದು ತಿಳಿಯುತ್ತದೆ.
ಮೋಸಗಾರರನ್ನು ಕ್ಷಮಿಸಬೇಕಾ? : ಪ್ರೀತಿಸಿ ಮೋಸಮಾಡಿದವರನ್ನು ಕ್ಷಮಿಸಬೇಕೇ ಬೇಡವೇ ಎನ್ನುವುದು ನಿಮ್ಮ ವೈಯಕ್ತಿಕ ವಿಚಾರವಾಗಿದೆ. ಏಕೆಂದರೆ ಕೆಲವರು ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕು ಪ್ರೀತಿಯಿಂದ ದೂರವುಳಿಯುತ್ತಾರೆ. ನಿಮಗೆ ಮೋಸ ಮಾಡಬೇಕೆನ್ನುವ ಉದ್ದೇಶ ಅವರಿಗೆ ಇರೋದಿಲ್ಲ. ಅಂತವರನ್ನು ಕ್ಷಮಿಸುವುದಲ್ಲಿ ಯಾವ ತಪ್ಪೂ ಇಲ್ಲ. ಏಕೆಂದರೆ ಅವರು ಪರಿಸ್ಥಿತಿಯ ಕೈಗೊಂಬೆಗಳಾಗಿರುತ್ತಾರೆ. ಇನ್ಕೆಲವರಿಗೆ ನಿಮ್ಮ ಪ್ರೀತಿ ಕೇವಲ ಒಂದು ಚಾಯ್ಸ್ ಆಗಿರುತ್ತೆ. ನಿಮಗಿಂತ ಉತ್ತಮವಾದದ್ದು ಸಿಕ್ಕಿದಾಗ ಅವರು ನಿಮ್ಮನ್ನು ದೂರ ಮಾಡುತ್ತಾರೆ, ಅಂತವರನ್ನು ಕ್ಷಮಿಸಬಾರದು. ತಿಳಿದೂ ತಿಳಿದೂ ನಿಮ್ಮ ವಿಶ್ವಾಸಕ್ಕೆ ದ್ರೋಹ ಮಾಡುವ ಅಂತವರನ್ನು ಕ್ಷಮಿಸಬಾರದು. ಏಕೆಂದರೆ ಅವರು ನಿಮಗೆ ಮೋಸ ಮಾಡಿದ ಹಾಗೆ ಇನ್ನೊಬ್ಬರಿಗೂ ಮೋಸಮಾಡಬಹುದು ಎನ್ನುತ್ತಾರೆ ಸದ್ಗುರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.