ಲವ್ ಅನ್ನೋದು ಒಂದು ಸ್ಪೆಷಲ್ ಫೀಲಿಂಗ್. ಆದ್ರೆ ಯಾರ ಮೇಲೆ ಈ ಫೀಲಿಂಗ್ ಆಗಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಅವಳನ್ನು ನೋಡಿದ್ರೆ ಮನಸ್ಸಿನಲ್ಲಿ ಕಚಗುಳಿ. ಆದ್ರೆ ಇದು ಲವ್ವೇ ಆಗಿರಬೇಕೆಂದಿಲ್ಲ ಕ್ರಶ್, ಅಫೆಕ್ಷನ್ ಸಹ ಆಗಿರಬಹುದು. ಹಾಗಿದ್ರೆ ನಿಮ್ಗೆ ಲವ್ವಾಗಿದ್ಯಾ ತಿಳ್ಕೊಳ್ಳೋದು ಹೇಗೆ? ಅದಕ್ಕಾಗಿ ಇಲ್ಲಿದೆ ಕೆಲವೊಂದು ಟ್ರಿಕ್ಸ್.
ಪ್ರೀತಿ ಕೇವಲ ಭಾವನೆಯಲ್ಲ, ಅದು ಒಂದು ಸ್ಥಿತಿ, ಪದಗಳಲ್ಲಿ ಹೇಳಲು ಕಷ್ಟಕರವಾದ ಅನುಭವ. ಕೆಲವರು ಇದನ್ನು ಸಂಪೂರ್ಣ ಭಾವನೆ ಎಂದು ವಿವರಿಸುತ್ತಾರೆ, ಆದರೆ ಇತರರು ತಮ್ಮ ಆತ್ಮ ಸಂಗಾತಿಯನ್ನು ಕಂಡುಕೊಂಡಿದ್ದಾರೆ ಎಂದು ಭಾವಿಸುತ್ತಾರೆ. ಆದ್ರೆ ಯಾರ ಮೇಲೆ ಈ ಫೀಲಿಂಗ್ ಆಗಿದೆ ಎಂದು ತಿಳಿದುಕೊಳ್ಳುವುದು ಕಷ್ಟ. ಅದಕ್ಕಾಗಿ ಇಲ್ಲಿದೆ ಕೆಲವೊಂದು ಟ್ರಿಕ್ಸ್.
ಅವನು/ಅವಳ ಬಗ್ಗೆ ಯಾವಾಗಲೂ ಯೋಚಿಸುತ್ತೀರಿ
ಯಾವುದೇ ವ್ಯಕ್ತಿಯ ಬಗ್ಗೆ ನೀವು ನಿರಂತರವಾಗಿ ಯೋಚಿಸುತ್ತಿದ್ದರೆ ಎಂದರೆ ನೀವು ಆ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೀರಿ ಎಂಬುದರ ಸೂಚನೆಯಾಗಿದೆ. ನೀವು ಕೆಲಸದಲ್ಲಿರಬಹುದು, ರಸ್ತೆಯಲ್ಲಿ ನಡೆಯುತ್ತಿರಬಹುದು ಅಥವಾ ಮಲಗಲು ಹೋಗುತ್ತಿರಬಹುದು. ಆದರೆ ಎಲ್ಲಾ ಸಂದರ್ಭದಲ್ಲಿಯೂ ಅವರ ನೆನಪು ನಿಮ್ಮ ಮನಸ್ಸಿನಲ್ಲಿ (Mind) ಮೂಡುತ್ತದೆ ಅಥವಾ ಅವರ ಧ್ವನಿ ನಿಮ್ಮ ಕಿವಿಯಲ್ಲಿ ಕೇಳುವಂತೆ ಭಾಸವಾಗುತ್ತದೆ. ಇದು ನೀವು ಆ ವ್ಯಕ್ತಿಯನ್ನು ಮನಸಾರೆ ಪ್ರೀತಿ (Love)ಸುತ್ತಿದ್ದೀರಿ ಎಂಬುದನ್ನು ತಿಳಿಸುತ್ತದೆ.
ರೆಸ್ಟೋರೆಂಟ್ನಲ್ಲಿ ಬಾಯ್ಫ್ರೆಂಡ್ ಜತೆ ಸಿಕ್ಕಿಬಿದ್ದ ಮಗಳು, ಎಲ್ಲರ ಮುಂದೆ ನಡೀತು ಹೈಡ್ರಾಮ!
ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಆದ್ಯತೆ ನೀಡುತ್ತೀರಿ
ಪ್ರೀತಿಯಲ್ಲಿರುವಾಗ, ನೀವು ಆ ವ್ಯಕ್ತಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತೀರಿ. ಎಲ್ಲಾ ಕೆಲಸವನ್ನು ಬದಗಿಟ್ಟು ಅವರಿಗಾಗಿ ಸಮಯವನ್ನು ಮೀಸಲಿಡುತ್ತೀರಿ. ಇದು ಸ್ಪಷ್ಟವಾಗಿ ನಿಮಗೆ ಆ ವ್ಯಕ್ತಿಯೆಡೆಗಿರುವ ಸೆಳೆತವನ್ನು ಸೂಚಿಸುತ್ತದೆ. ನೀವು ಆ ವಿಶೇಷ ವ್ಯಕ್ತಿಗಾಗಿ ನಿಮ್ಮ ಜೀವನದ (Life) ಹೆಚ್ಚಿನ ಸಮಯವನ್ನು ಮೀಸಲಿಡಲು ಸಿದ್ಧರಾಗಿರುತ್ತೀರಿ.
ಸಂತೋಷಪಡಿಸಲು ಬಯಸುತ್ತೀರಿ
ಪ್ರೀತಿಸುತ್ತಿರುವ ವ್ಯಕ್ತಿಯನ್ನು ಸಂತೋಷ (Happiness)ಪಡಿಸಲು ಬಯಸುವುದು ಸಹಜ. ಅವರಿಗೆ ಇಷ್ಟವಾದ ಕಲರ್ ಡ್ರೆಸ್ ಖರೀದಿಸುವುದಿರಲಿ ಅಥವಾ ಅವರಿಗೆ ಅಡುಗೆ ಮಾಡಿ ಕೊಡುವುದಿರಲಿ, ನಿಮ್ಮ ಸಂಗಾತಿಯನ್ನು ಮೆಚ್ಚಿಸುವ ಬಯಕೆ ನಿಮ್ಮ ಮನಸ್ಸಿನಲ್ಲಿ ಹೆಚ್ಚಾಗಿ ಇರುತ್ತದೆ. ನಿಮ್ಮ ಉತ್ತಮ ವ್ಯಕ್ತಿಯಾಗಿ ಮತ್ತು ನಿಮ್ಮ ಸಾಧನೆಗಳನ್ನು ಅವರಿಗೆ ತೋರಿಸುವ ಮೂಲಕ ನೀವು ಅವರನ್ನು ಮೆಚ್ಚಿಸಲು ಬಯಸುತ್ತೀರಿ.
Relationship Tips: ಇಂತಹ ಹುಡುಗರು ಪ್ರಪಂಚದಲ್ಲೇ ಬೆಸ್ಟ್ ಲವರ್ಸ್ ಆಗ್ತಾರೆ
ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತೀರಿ
ಯಾವುದೇ ವ್ಯಕ್ತಿಯ ಜೊತೆಗಿದ್ದಾಗ ನಿಮಗೆ ಸೇಫ್ ಮತ್ತು ಕಂಫರ್ಟೆಬಲ್ ಫೀಲ್ ಆದರೆ ನೀವು ಅವರನ್ನು ಇಷ್ಟಪಡಲು ಆರಂಭಿಸಿದ್ದೀರಿ ಎಂದರ್ಥ. ಅವರು ನಿಮ್ಮ ಬಗ್ಗೆ ಯಾವುದೇ ರೀತಿಯಲ್ಲಿ ತಪ್ಪು ತಿಳಿದುಕೊಳ್ಳಬಹುದು ಎಂಬ ಭಯ ನಿಮಗೆ ಇರುವುದಿಲ್ಲ. ಅವರ ಜೊತೆ ನೀವು ಯಾವುದೇ ಹಿಂಜರಿಕೆಯಿಲ್ಲದೆ ಆರಾಮವಾಗಿರಲು ಸಾಧ್ಯವಾಗುತ್ತದೆ.
ಅವರೊಂದಿಗೆ ಸಮಯ ಕಳೆಯಲು ಕಾರಣ ಹುಡುಕುತ್ತೀರಿ
ನಾವು ಯಾರನ್ನಾದರೂ ಪ್ರೀತಿಸಿದಾಗ ಅವರೊಂದಿಗೆ ಸಮಯ (Time) ಕಳೆಯಲು ಮನಸ್ಸು ಹಾತೊರೆಯುತ್ತದೆ. ಅವರೊಂದಿಗೆ ಯಾವಾಗಲೂ ಹೊಸ ನೆನಪುಗಳನ್ನು ರಚಿಸಲು ಮತ್ತು ನಿಮ್ಮ ಬಂಧವನ್ನು ಬಲಪಡಿಸಲು ಮಾರ್ಗಗಳನ್ನು ಹುಡುಕುತ್ತಿರಿ. ಔಟಿಂಗ್, ಮೂವಿ, ಸುಮ್ಮನೆ ಕುಳಿತು ಮಾತನಾಡುವುದಾದರೂ ಸರಿ ಎಲ್ಲವೂ ನಿಮಗೆ ಇಷ್ಟವಾಗುತ್ತದೆ.
ಸ್ನೇಹಿತರೊಂದಿಗೆ ಅವರ ಬಗ್ಗೆಯೇ ಮಾತನಾಡುತ್ತೀರಿ
ಯಾವುದೇ ವ್ಯಕ್ತಿಯ ಬಗ್ಗೆ ನೀವು ಇನ್ನೊಬ್ಬರಲ್ಲಿ ನೀವು ಹೆಚ್ಚು ಹೆಚ್ಚು ಮಾಹಿತಿಗಳನ್ನು ಹೇಳುವಾಗ ನಿಮ್ಮ ಮನಸ್ಸನ್ನು ಅವರು ಆವರಿಸಿಕೊಂಡಿದ್ದಾರೆಂದು ಅರ್ಥ. ಅದು ನೀವು ಪ್ರೀತಿಸುತ್ತಿರುವ ಸಂಕೇತವಾಗಿರಬಹುದು. ಅವರು ನಿಮ್ಮ ಆಲೋಚನೆಗಳಲ್ಲಿ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ. ಮತ್ತು ಎಲ್ಲರ ಬಳಿಯೂ ಎಷ್ಟು ಅದ್ಭುತವಾಗಿದ್ದಾರೆ ಎಂಬುದರ ಕುರಿತು ನೀವು ಹೇಳದೇ ಇರಲು ಸಾಧ್ಯವಾಗುವುದಿಲ್ಲ. ಅವರ ಮಾತು, ನಡವಳಿಕೆಯ ಕುರಿತಾಗಿ ಹೇಳುವುದರ ಜೊತೆಗೆ ಭವಿಷ್ಯದ ಯೋಜನೆಗಳನ್ನು ಚರ್ಚಿಸುವವರೆಗೆ, ಸಂಭಾಷಣೆಯಲ್ಲಿ ಅವರ ಮೇಲಿನ ನಿಮ್ಮ ಪ್ರೀತಿ ನಿಮ್ಮಿಂದ ಹೊರಹೊಮ್ಮುತ್ತದೆ.
ಅವರ ಸಂತೋಷಕ್ಕಾಗಿ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದೀರಿ
ನಿಜವಾದ ಪ್ರೀತಿ ಎಂದರೆ ತ್ಯಾಗ ಮಾಡುವುದು. ಸಂಗಾತಿಯ ಸಂತೋಷಕ್ಕಾಗಿ ನಿಮ್ಮ ಸ್ವಂತ ಆಸೆಗಳನ್ನು ಬಿಡಲು, ರಾಜಿ ಮಾಡಿಕೊಳ್ಳಲು ನೀವು ಸಿದ್ಧರಿದ್ದರೆ, ಇದು ಅವರ ಜೊತೆ ಜೀವನ ನಡೆಸಲು ನೀವು ಹೆಚ್ಚು ಇಷ್ಟಪಡುತ್ತೀರಿ ಎಂಬುದನ್ನು ಸೂಚಿಸುತ್ತದೆ. ನೀವು ಉತ್ತಮ ವ್ಯಕ್ತಿಯಾಗಲು ಬಯಸುವ ವ್ಯಕ್ತಿಯನ್ನು ನೀವು ಕಂಡುಕೊಂಡಿದ್ದರೆ ಮತ್ತು ಅವರನ್ನು ಸಂತೋಷಪಡಿಸಲು ನೀವು ಕೆಲಸ, ಮನೆ ಯಾವುದನ್ನೂ ಬಿಡಲು ಸಿದ್ಧರಾಗುತ್ತೀರಿ.