ಅಭಿಷೇಕ್ ಬಚ್ಚನ್ ಸೋದರಿ ಶ್ವೇತಾ ಬಚ್ಚನ್ ಹಾಗೂ ಪತಿ ನಿಕಿಲ್ ನಂದಾ ಮಧ್ಯೆಯೂ ವಿಚ್ಛೇದನ ನಡೆಯುತ್ತಿದೆ ಎಂಬ ಸುದ್ದಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು ಪತಿಯಿಂದ ದೂರ ವಾಸಿಸಲು ಶುರು ಮಾಡಿದ್ದ ಶ್ವೇತಾ ಪತ್ನಿಯಿಂದ ದೂರಾಗಿದ್ದ ಹೃತಿಕ್‌ಗೆ ಹತ್ತಿರವಾಗಿದ್ದರು ಎಂಬ ಸುದ್ದಿ ಆಗ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು.
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಬಚ್ಚನ್ ವಿಚ್ಛೇದನದ ಊಹಾಪೋಹಾದಿಂದಾಗಿ ಬಚ್ಚನ್ ಕುಟುಂಬ ಈ ಹಿಂದೆಂದಿಗಿಂತಲೂ ಹೆಚ್ಚು ಸುದ್ದಿಯಲ್ಲಿದೆ. ಐಶ್ವರ್ಯಾ ರೈ ಬಚ್ಚನ್ ತನ್ನ ಅತ್ತೆ ಜಯಾ ಬಚ್ಚನ್ ಹಾಗೂ ನಾದಿನಿ ಶ್ವೇತಾ ಬಚ್ಚನ್ ಅವರಿಂದ ರೋಸಿ ಹೋಗಿದ್ದು, ಇದೇ ಕಾರಣಕ್ಕೆ ಈ ಕುಟುಂಬದಿಂದಲೇ ದೂರ ಇರಲು ಬಯಸಿದ್ದಾರೆ ಎಂದು ಮಾಧ್ಯಮಗಳು ಒಂದಲ್ಲ ಒಂದು ವರದಿ ಮಾಡುತ್ತಿವೆ. ಅತ್ತಿಗೆ ಐಶ್ವರ್ಯಾ ಬಗ್ಗೆ ಶ್ವೇತಾ ಪೂರ್ವಗ್ರಹಪೀಡಿತರಾಗಿದ್ದು, ಅವರ ಕುಟುಂಬದಲ್ಲಿ ಶ್ವೇತಾ ಸದಾ ಕಡ್ಡಿ ಅಲ್ಲಾಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಬಚ್ಚನ್ ಕುಟುಂಬದ ಈ ಎಲ್ಲಾ ಊಹಾಪೋಹಗಳ ನಡುವೆ, ಹಿಂದೊಮ್ಮೆ ಅಭಿಷೇಕ್ ಬಚ್ಚನ್ ಸೋದರಿ ಶ್ವೇತಾ ಬಚ್ಚನ್ ಹಾಗೂ ಪತಿ ನಿಕಿಲ್ ನಂದಾ ಮಧ್ಯೆಯೂ ವಿಚ್ಛೇದನ ನಡೆಯುತ್ತಿದೆ ಎಂಬ ಸುದ್ದಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು ಎಂಬ ವಿಚಾರ ನಿಮಗೆ ಗೊತ್ತಾ.
ಶ್ವೇತಾ ಬಚ್ಚನ್ ಅವರು ಉದ್ಯಮಿ, ಹಾಗೂ ರಾಜ್ ಕಪೂರ್ ಕುಟುಂಬದ ನಿಕಟ ಸಂಬಂಧಿ ನಿಖಿಲ್ ನಂದಾ ಅವರನ್ನು 1997ರಲ್ಲಿ ಮದುವೆಯಾಗಿದ್ದರು. ಮದುವೆಯ ಸಮಯದಲ್ಲಿ ಕೇವಲ 21ರ ಹರೆಯದವರಾದ ಶ್ವೇತಾ ನಂತರ ಈ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರು. (ಮಗಳು ನವ್ಯಾ ನವೇಲಿ ನಂದಾ ಹಾಗೂ ಮಗ ಆಗಸ್ತ್ಯಾ ನಂದ) ಆದರೂ ಕೆಲ ವರ್ಷಗಳ ದಾಂಪತ್ಯದ ನಂತರ ಶ್ವೇತಾ ಇದ್ದಕ್ಕಿದ್ದಂತೆ ದೆಹಲಿ ಬಿಟ್ಟು ಬಂದು ಮತ್ತೆ ಮುಂಬೈನಲ್ಲೇ ತನ್ನ ಪೋಷಕರೊಂದಿಗೆ ನೆಲೆಸಲು ಶುರು ಮಾಡಿದ್ದರು . ದೆಹಲಿಗೆ ತೆರಳುವ ಬದಲು ಶ್ವೇತಾ ಮುಂಬೈಗೆ ಶಿಫ್ಟ್ ಆಗಿದ್ದರು. ಬರೀ ಇಷ್ಟೇ ಅಲ್ಲದೇ ಶ್ವೇತಾ ಅವರು ತನ್ನ ಪತಿ ನಿಖಿಲ್ ಜೊತೆ ಬಹಳ ವಿರಳವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. ಕೆಲ ವರದಿಗಳ ಪ್ರಕಾರ ಮರ್ಯಾದೆಯ ಕಾರಣಕ್ಕೆ, ಮಕ್ಕಳ ಕಾರಣಕ್ಕೆ ದಾಂಪತ್ಯದಲ್ಲಿ ವಿರಸವಿದ್ದರೂ ಈ ಜೋಡಿ ವಿಚ್ಛೇದನದವರೆಗೆ ಹೋಗಿಲ್ಲ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದವು.
ಐಶ್ವರ್ಯಾ ರೈಗೆ ಬೇಕೆಂದೇ ಅವಮಾನಿಸಿದ್ರಾ ಅತ್ತಿಗೆ ಶ್ವೇತಾ ಬಚ್ಚನ್
ಪತಿಯಿಂದ ದೂರಾಗಿ ಹೃತಿಕ್ ರೋಷನ್‌ಗೆ ಹತ್ತಿರವಾಗಿದ್ದ ಶ್ವೇತಾ ಬಚ್ಚನ್
ಇತ್ತ ಶ್ವೇತಾ ಬಚ್ಚನ್ ಬಾಲ್ಯ ಗೆಳೆಯ ಹೃತಿಕ್ ರೋಷನ್ ಪತ್ನಿ ಸುಸ್ಸಾನೇ ಜೊತೆ 14 ವರ್ಷದ ದಾಂಪತ್ಯ ಜೀವನದ ನಂತರ ವಿಚ್ಛೇದನ ಪಡೆದುಕೊಂಡಿದ್ದರು. ಇದಾದ ನಂತರ ತನ್ನ ಬಾಲ್ಯದ ಗೆಳತಿಯೂ ಆದ ಶ್ವೇತಾ ಬಚ್ಚನ್ ಜೊತೆ ಬಹಳ ಆತ್ಮೀಯತೆಯಿಂದ ಇದ್ದರು. ಅಲ್ಲದೇ ಹೃತಿಕ್‌ಗೆ ಶ್ವೇತಾ ಬಚ್ಚನ್ ಬೆಸ್ಟ್ ಫ್ರೆಂಡ್ ಕೂಡ ಆಗಿದ್ದರು. ಆದರೆ ಇಬ್ಬರೂ ಮದುವೆಯ ನಂತರ ಸಂಪರ್ಕ ಕಡಿದುಕೊಂಡಿದ್ದರು. ಆದರೆ ಇತ್ತ ಪತ್ನಿಯಿಂದ ವಿಚ್ಛೇದನ ಪಡೆದು ಒಂಟಿಯಾಗಿದ್ದ ಹೃತಿಕ್‌ಗೆ ಅತ್ತ ತನ್ನ ಪತಿಯಿಂದ ದೂರಾದ ಶ್ವೇತಾ ಬಚ್ಚನ್ ಹತ್ತಿರವಾಗಿದ್ದರು. ಬಾಲ್ಯದ ಗೆಳೆಯರಾದ ಕಾರಣಕ್ಕೆ ಒಂಟಿಯಾಗಿದ್ದ ಹೃತಿಕ್‌ನನ್ನು ಶ್ವೇತಾ ಹಾಗೂ ಅಭಿಷೇಕ್ ಬಚ್ಚನ್ ಆಗಾಗ ಭೇಟಿ ಮಾಡಿ ಸಮಾಧಾನ ಹೇಳಿದ್ದರು. ಜೊತೆಗೆ ಶ್ವೇತಾ ಬಚ್ಚನ್ ಹೃತಿಕ್ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯಲು ಶುರು ಮಾಡಿದ್ದರು.
ಅಲ್ಲದೇ ಕುನಾಲ್ ಕಪೂರ್ ಮದ್ವೆ ವೇಳೆ ಇವರಿಬ್ಬರು ಮತ್ತೂ ಹತ್ತಿರವಾದರು. ಇದೇ ಸಮಯದಲ್ಲಿ ಶ್ವೇತಾ ಬಚ್ಚನ್ ಮಕ್ಕಳಾದ ನವ್ಯಾ ನವೇಲಿ ನಂದಾ ಹಾಗೂ ಆಗಸ್ತ್ಯಾ ನಂದ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಇತ್ತ ಇದೇ ಸಮಯದಲ್ಲಿ ಶ್ವೇತಾ ಲೇಖಕಿಯಾಗಿ ಸ್ಟೈಲಿಸ್ಟ್ ಆಗಿಯೂ ಹೊಸ ವೃತ್ತಿ ಆರಂಭಿಸಿದ್ದರು. ಇತ್ತ ಶ್ವೇತಾಳ ಕಾರಣದಿಂದಾಗಿಯೇ ಹೃತಿಕ್ ರೋಷನ್, ನಟಿ ಕಂಗನಾ ರಣಾವತ್‌ಳಿಂದ ದೂರಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.
ಐಶ್ವರ್ಯಾ ರೈ ಅಭಿಷೇಕ್ ವಿಚ್ಛೇದನದ ಸುದ್ದಿಯ ಜೊತೆಗೆ ಮುನ್ನೆಲೆಗೆ ಬಂತು ಐಶ್ ವಿವೇಕ್ ಒಡನಾಟ!
ಶ್ವೇತಾ ಬಚ್ಚನ್ ಹೃತಿಕ್ ಸಂಬಂಧ ಮುಂದೇ ಹೋಗಲಿಲ್ಲವೇಕೆ?
ಇತ್ತ ತಮ್ಮೊಂದಿಗೆ ವಾಸ ಮಾಡುತ್ತಿದ್ದ ಮಗಳು ಶ್ವೇತಾ ಬಗ್ಗೆ ಪೋಷಕರಾದ ಬಚ್ಚನ್ ಕುಟುಂಬ ಚಿಂತೆಗೀಡಾಗಿತ್ತು. ಆದರೆ ಸಮಯದೊಂದಿಗೆ ಶ್ವೇತಾಳಲ್ಲಾದ ಬದಲಾವಣೆ ಅವರನ್ನು ಸಮಾಧಾನ ಪಡುವಂತೆ ಮಾಡಿದ್ದರೆ ಇತ್ತ ಕಂಗಾನಾ ಹಾಗೂ ಹೃತಿಕ್ ನಡುವಿನ ವಿರಸ ಮಾಧ್ಯಮಗಳಲ್ಲಿ ಹೆಡ್‌ಲೈನ್ ಆಗಿದ್ದವು. ಇದು ಭಾರೀ ವಿವಾದ ಸೃಷ್ಟಿಸುತ್ತಿದ್ದಂತೆ ಶ್ವೇತಾ ಅವರು ಈ ಸಂಬಂಧದಿಂದ ದೂರ ಉಳಿದು ವಿವಾದದಿಂದ ದೂರ ಉಳಿಯುವ ಪ್ರಯತ್ನ ಮಾಡಿದ್ದರು ಎಂದು ಆಗ ಮಾಧ್ಯಮಗಳು ವರದಿ ಮಾಡಿದ್ದವು.
ಇತ್ತ ಶ್ವೇತಾ ಬಚ್ಚನ್ ಹೃತಿಕ್ ಪತ್ನಿ ಸುಸ್ಸಾನೇಗೂ ಆತ್ಮೀಯ ಸ್ನೇಹಿತೆಯಾಗಿದ್ದು, ಶ್ವೇತಾ ಜೊತೆಗೆ ತನ್ನ ಪತಿ ಹತ್ತಿರವಾಗುವುದನ್ನು ಆಕೆಯೂ ಇಷ್ಟಪಡಲಿಲ್ಲ ಅಲ್ಲದೇ ಅದರ ವಿರುದ್ಧ ಆಕೆಯೂ ಧ್ವನಿ ಎತ್ತಿದ್ದಳು. ಹೀಗಾಗಿಯೇ ಈ ಸಂಬಂಧವೂ ಹೆಚ್ಚು ಕಾಲ ಮುಂದುವರಿಯಲಿಲ್ಲ ಎನ್ನಲಾಗಿದೆ.
ಶಾರುಖ್ ಪುತ್ರನನ್ನು ತಬ್ಬಿಕೊಂಡ ಆರಾಧ್ಯ ಬಚ್ಚನ್ : ಅಮ್ಮನಂತೆ ಮಗಳು ಎಂದ ನೆಟ್ಟಿಗರು
ಇತ್ತ ಕೈಟ್ಸ್ ಸಿನಿಮಾದ ನಂತರ ಕಂಗನಾ ರಣಾವತ್ ಹಾಗೂ ಹೃತಿಕ್ ರೋಷನ್ ನಡುವಿನ ಸಂಬಂಧ ಬೆಳಕಿಗೆ ಬಂದಿತ್ತು. ಇದು ಕ್ರಿಶ್ 3 ಸಿನಿಮಾಗಾಗಿ ಮತ್ತೆ ಜೊತೆಯಾಗಿ ನಟಿಸಿದಾಗ ಇವರ ಪ್ರೇಮ ಇನ್ನಷ್ಟು ತೀವ್ರಗೊಂಡಿತ್ತು. ಆದರೆ ಅದೇನಾಯ್ತೋ ಏನೋ ಇಬ್ಬರು ಇದ್ದಕ್ಕಿದ್ದಂತೆ ದೂರಾಗಿದ್ದರು. ಬರೀ ಇಷ್ಟೇ ಅಲ್ಲ ಹೃತಿಕ್ ರೋಷನ್ ಆಕೆಯ ವಿರುದ್ಧ ಸೈಬರ್ ಸ್ಟಾಕಿಂಗ್ ಮಾಡುತ್ತಿದ್ದಾರೆ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು. ಇತ್ತ ಕಂಗನಾ ಕೂಡ ಹೃತಿಕ್ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಆತ ನನ್ನನ್ನು ಬಳಸಿಕೊಂಡ ಎಂದೆಲ್ಲಾ ಆರೋಪಿಸಿದ್ದರು. ತನ್ನ ವಿವಾಹೇತರ ಸಂಬಂಧ ಮುಚ್ಚಿಕೊಳ್ಳಲು ಆತ ಈ ರೀತಿ ದೂರು ದಾಖಲಿಸಿದ್ದ ಎಂದೆಲ್ಲಾ ದೂರಿದ್ದರು. ಇದು ಇತ್ತ ಆಗಷ್ಟೇ ಶ್ವೇತಾ ಬಚ್ಚನ್ ಜೊತೆ ಚಿಗುರುತ್ತಿದ್ದ ಪ್ರೇಮ ಸಂಬಂಧವನ್ನು ಅಲ್ಲೇ ಮುದುಡುವಂತೆ ಮಾಡಿತ್ತು.
ಶ್ವೇತಾ ಬಚ್ಚನ್ ಹಾಗೂ ಹೃತಿಕ್ ರೋಷನ್ ನಡುವಿನ ಈ ಸಂಬಂಧ ಸಾಕಷ್ಟು ಗಾಸಿಪ್‌ಗೆ ಕಾರಣವಾಗಿತ್ತು. ಆದರೂ ಶ್ವೇತಾ ಬಚ್ಚನ್ ಹಾಗೂ ಹೃತಿಕ್ ರೋಷನ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಲಿಲ್ಲ ಹಾಗೂ ಅವರು ಮತ್ಯಾವತ್ತೂ ಜೊತೆಯಾಗಿ ಕಾಣಿಸಿಕೊಳಲಿಲ್ಲ.