ದಾಂಪತ್ಯ ಸುಖವಾಗಿರಬೇಕೆಂದ್ರೆ ಹೊಂದಾಣಿಕೆ, ಪ್ರೀತಿ ಜೊತೆ ಬುದ್ಧಿವಂತಿಕೆಯೂ ಮುಖ್ಯ. ಪತಿ – ಪತ್ನಿ ಇಬ್ಬರೂ ಸಂತೋಷವಾಗಿರಬೇಕೆಂದ್ರೆ ಕೆಲವೊಂದು ರಹಸ್ಯ, ರಹಸ್ಯವಾಗೇ ಇರಬೇಕು. ಅದನ್ನು ಬಾಯ್ಬಿಟ್ಟರೆ ಕೋಲಾಹಲ ಶುರುವಾಗೋದು ನಿಶ್ಚಿತ.
ಗಂಡ ಹೆಂಡತಿ ಮಧ್ಯೆ ಯಾವುದೇ ಮುಚ್ಚುಮರೆ ಇಲ್ಲ ಎಂದ್ರೂ ಕೆಲವೊಂದು ರಹಸ್ಯ ಅಡಗಿರುತ್ತದೆ. ಅದನ್ನು ಅವರು ಪರಸ್ಪರ ಹೇಳಿಕೊಳ್ಳೋದಿಲ್ಲ. ಇದು ಮೋಸ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ಆದ್ರೆ ಕೆಲವೊಂದು ವಿಷ್ಯವನ್ನು ಹೇಳಿದ್ರೆ ದಾಂಪತ್ಯ ಬಿರುಕುಬಿಡುವ, ಗಲಾಟೆಯಾಗುವ ಸಾಧ್ಯತೆ ಇರುತ್ತದೆ. ಗುಟ್ಟು ಮಹಿಳೆ ಬಾಯಲ್ಲಿ ನಿಲ್ಲೋದಿಲ್ಲ ಎನ್ನುವ ಮಾತಿದೆ. ಆದ್ರೆ ಇದು ಎಲ್ಲ ವಿಷ್ಯದಲ್ಲೂ ಸತ್ಯವಲ್ಲ. ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ತಮ್ಮಲ್ಲಿ ಕೆಲ ಗುಟ್ಟುಗಳನ್ನು ಇಟ್ಟುಕೊಂಡಿರುತ್ತಾರೆ. ಅದನ್ನು ಅವರು ಯಾರ ಮುಂದೆಯೂ ಹೇಳೋದಿಲ್ಲ. ಇನ್ನೊಬ್ಬರ ಮೇಲೆ ಆಕರ್ಷಣೆ, ಹಳೆ ಸಂಬಂಧ, ಹಣಕಾಸಿನ ವ್ಯವಹಾರ ಸೇರಿದಂತೆ ಕೆಲ ಸಂಗತಿ ಮಹಿಳೆಯರಲ್ಲೇ ಉಳಿದಿರುತ್ತದೆ. ಅದನ್ನು ಅಪ್ಪಿತಪ್ಪಿ ಗಂಡನ ಮುಂದೆ ಹೇಳಿದ್ರೆ ರದ್ದಾಂತ ಗ್ಯಾರಂಟಿ ಎಂಬುದು ಅವರಿಗೆ ತಿಳಿದಿರುತ್ತದೆ. ಕೆಲ ಮಹಿಳೆಯರು ಗಂಡನಿಂದ ಮುಚ್ಚಿಟ್ಟ ಕೆಲ ಆಸಕ್ತಿಕರ ವಿಷ್ಯಗಳನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ಎರಡು ಬಾರಿ ಗರ್ಭಪಾತ (Miscarriage) ವಾದ್ರೂ ಪತಿಗೆ ಹೇಳಿಲ್ಲ : ಈಕೆಗೆ ಮದುವೆ (Marriage) ಯಾಗಿ ಕೆಲ ವರ್ಷ ಕಳೆದಿದೆ. ಮದುವೆಯಾದ್ಮೇಲೆ ಮಕ್ಕಳನ್ನು ಪಡೆಯಲು ಎಲ್ಲ ದಂಪತಿ ನಿರ್ಧರಿಸ್ತಾರೆ. ಆದ್ರೆ ಈಕೆಗೆ ಮಕ್ಕಳನ್ನು ಪಡೆಯುವ ಇಚ್ಛೆ ಇಲ್ಲ. ಮದುವೆಗೆ ಮೊದಲು, ನಮಗೆ ಮಕ್ಕಳು ಬೇಡ. ಅವರನ್ನು ಸಾಕುವಷ್ಟು ಆರ್ಥಿಕ ಸ್ಥಿತಿ ನಮ್ಮಲ್ಲಿಲ್ಲ ಎಂದು ಪತಿ ಹೇಳಿದ್ದ ಕಾರಣಕ್ಕೆ ಆತನನ್ನು ಈಕೆ ಮದುವೆ ಆಗಿದ್ದಳು. ಮದುವೆ ಆದ್ಮೇಲೆ ಇಬ್ಬರೂ ಒಳ್ಳೆ ನೌಕರಿಯಲ್ಲಿರುವ ಕಾರಣ, ಗಂಡ ಬದಲಾಗಿದ್ದಾನೆ. ಮಕ್ಕಳು ಬೇಕು ಎನ್ನುತ್ತಿದ್ದಾನೆ. ಮಕ್ಕಳಿಗಾಗಿ ತನ್ನ ಜೀವನವನ್ನು ಬಲಿ ನೀಡಲು ಈಕೆಗೆ ಇಷ್ಟವಿಲ್ಲವಂತೆ. ಪತಿ ಅಂದ್ರೆ ನನಗೆ ಇಷ್ಟ. ಹಾಗಂತ ನನ್ನ ದೇಹದ ಮೇಲೆ ನನಗೆ ಅಧಿಕಾರವಿದೆ. ಅವನಿಗಾಗಿ ನನ್ನ ಜೀವನ ತ್ಯಾಗ ಮಾಡಲು ನನಗೆ ಇಷ್ಟವಿಲ್ಲ ಎನ್ನುವ ಈಕೆ ಎರಡು ಬಾರಿ ಗರ್ಭಪಾತ ಮಾಡಿಸಿಕೊಂಡಿದ್ದಾಳಂತೆ. ಈ ವಿಷ್ಯವನ್ನು ಪತಿಯಿಂದ ಮುಚ್ಚಿಟ್ಟಿದ್ದು, ಹೇಳಿದ್ರೆ ಆತ ನನ್ನಿಂದ ದೂರವಾಗ್ತಾನೆ ಎನ್ನುತ್ತಾಳೆ.
ಮಗಳ ವಯಸ್ಸಿನವಳ ಜೊತೆ 3ನೇ ಬಾರಿ ಅರ್ಬಾಜ್ ಖಾನ್ ಮದುಮಗ! ಡೇಟ್ ಫಿಕ್ಸ್: ಹೊಟ್ಟೆ ಉರಿಸಿಕೊಳ್ತಿರೋ ಅವಿವಾಹಿತರು!
ಪತಿಗಿಂತ ಆತನ ಅಣ್ಣ ಸುಂದರಾಂಗ : ಈಕೆ ಮನಸ್ಥಿತಿ ಭಿನ್ನವಾಗಿದೆ. ಪತಿಗಿಂತ ಈಕೆಗೆ ಆತನ ಅಣ್ಣನ ಮೇಲೆ ಆಕರ್ಷಣೆ ಹೆಚ್ಚು. ಅಣ್ಣ, ಕಾಲೇಜಿ (College) ನಲ್ಲಿ ಸಿನಿಯರ್ ಆಗಿದ್ದು, ಆತನ ಜೊತೆ ಡೇಟಿಂಗ್ ಮಾಡ ಬಯಸಿದ್ದಳಂತೆ. ಆದ್ರೆ ಮದುವೆಯಾದ್ಮೇಲೆ ಪತಿಗೆ ಪ್ರಾಮಾಣಿಕವಾಗಿದ್ದಾಳೆ. ಪತಿಯನ್ನು ಹೆಚ್ಚು ಪ್ರೀತಿ ಮಾಡ್ತಾಳೆ. ಇಬ್ಬರ ಮಧ್ಯೆ ಒಳ್ಳೆ ಸಂಬಂಧವಿದೆ. ಹಾಗಂತ ಅಪ್ಪಿತಪ್ಪಿಯೂ ಅಣ್ಣ ನಿನಗಿಂತ ಸುಂದರ ಎಂಬ ತನ್ನ ಭಾವನೆಯನ್ನು ಪತಿ ಮುಂದೆ ಹೇಳಲಾರೆ ಎನ್ನುತ್ತಾಳೆ ಈಕೆ.
ಪತಿಗೆ ಹೇಳದೆ ಸ್ನೇಹಿತನಿಗೆ ಹಣದ ಸಹಾಯ : ಈಕೆ ಹಾಗೂ ಈಕೆ ಪತಿ ಜಂಟಿ ಖಾತೆ ಹೊಂದಿದ್ದಾರೆ. ಅದ್ರಲ್ಲಿ ತಿಂಗಳ ಉಳಿತಾಯದ ಸ್ವಲ್ಪ ಹಣವನ್ನು ಜಮಾ ಮಾಡ್ತಾರೆ. ಆದ್ರೆ ಆ ಖಾತೆಯ ಹಣವನ್ನು ತೆಗೆದ ಮಹಿಳೆ ಇದನ್ನು ಸ್ನೇಹಿತನಿಗೆ ನೀಡಿದ್ದಾಳೆ. ಆತ ಕೆಲಸ ಕಳೆದುಕೊಂಡಿದ್ದಾನೆ. ಮನೆ ಖರ್ಚಿಗೆ ಹಣವಿಲ್ಲ. ಹಾಗಾಗಿ ಆತನಿಗೆ ಸಹಾಯ ಮಾಡಿದ್ದೇನೆ. ಇದು ನನ್ನ ಪತಿಗೆ ತಿಳಿದಿಲ್ಲ. ನಾವಿಬ್ಬರೂ ಸೇರಿ ಉಳಿತಾಯ ಮಾಡಿದ ಹಣವನ್ನು ಪತಿಗೆ ತಿಳಿಯದೇ ತೆಗೆಯೋದು ದೊಡ್ಡ ತಪ್ಪು. ಹಾಗಂತ ಇದನ್ನು ಹೇಳಿದ್ರೆ ಆತ ರಂಪ ಮಾಡ್ತಾನೆ. ಹಣವನ್ನು ನಾನು ಖರ್ಚು ಮಾಡಿಲ್ಲ, ಸ್ನೇಹಿತನಿಗೆ ನೀಡಿದ್ದೇನೆ ಎಂಬುದನ್ನು ಹೇಳಲು ಭಯವಾಗುತ್ತದೆ. ಆತ ಕೇಳಿದ್ರೆ ಏನು ಹೇಳ್ಬೇಕು ಎಂಬುದು ಗೊತ್ತಿಲ್ಲ ಎನ್ನುತ್ತಾಳೆ ಈಕೆ.
ನೀವು ಈ ರೀತಿ ಇದ್ರೆ, ಜನ ನಿಮಗೆ ಫಿದಾ ಆಗ್ಬಿಡ್ತಾರೆ! ಬೇರೆಯವರನ್ನು ಆಕರ್ಷಿಸೋದೊಂದು ಕಲೆ!