ದೀರ್ಘಕಾಲ ಒಂದೇ ಸಂಬಂಧದಲ್ಲಿರುವವರ ಸಂಖ್ಯೆ ಈಗ ಅಪರೂಪ. ಒನ್ ನೈಟ್ ರಿಲೇಶನ್ಶಿಪ್ ಈಗಿನ ದಿನಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಆದ್ರೆ ಇದು ನಮ್ಮ ದೇಹದ ಮೇಲೆ ಯಾವೆಲ್ಲ ಪರಿಣಾಮ ಬೀರುತ್ತೆ ಎಂಬುದನ್ನು ಸದ್ಗುರು ಹೇಳಿದ್ದಾರೆ.
ಈಗಿನ ದಿನಗಳಲ್ಲಿ ಭಾವನಾತ್ಮಕ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಹಿಂದೆ ಮದುವೆಯಾಗಿ ದಾಂಪತ್ಯ ಶುರುವಾದ್ರೆ ಜೀವ ಇರುವವರೆಗೆ ಅವರ ಜೊತೆಯೇ ಬಾಳಿ ಬದುಕುತ್ತಿದ್ದರು. ಆದ್ರೀಗ ದಾಂಪತ್ಯಕ್ಕಿಂತ ದೈಹಿಕ ಸುಖ ಮುಖ್ಯವಾಗಿದೆ. ಸುಖವನ್ನು ಬಯಸುವ ಯುವ ಜನತೆ ದಿನಕ್ಕೊಂದು ಸಂಗಾತಿ ಜೊತೆ ಸಂಬಂಧ ಬೆಳೆಸುತ್ತಿದ್ದಾರೆ. ದೈಹಿಕ ಸುಖಕ್ಕಾಗಿ ಸಂಗಾತಿಯ ಬದಲಾವಣೆಯಿಂದ ನಾನಾ ಸಮಸ್ಯೆಗಳು ಎದುರಾಗುತ್ತವೆ. ಆರಂಭದಲ್ಲಿ ಇದು ಸಂತೋಷ, ಬದಲಾವಣೆ, ಸುಖ ನೀಡಿದ್ರೂ ದಿನ ಕಳೆದಂತೆ ಅದು ಹಿಂಸೆಯಾಗ್ತಾ ಬರುತ್ತದೆ. ಜೀವನದಲ್ಲಿ ತಳವೂರಲು ಸಾಧ್ಯವಾಗದ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ.
ಭಾವನೆ (Feeling) ಗಳಿಲ್ಲದೆ ದೈಹಿಕ ಸಂಬಂಧ ಬೆಳೆಸುವುದನ್ನು ಯುವಜನತೆ ಮೆಚ್ಚಿಕೊಳ್ತಿದ್ದಾರೆ. ಇದಕ್ಕೆ ಕಾರಣ ಜವಾಬ್ದಾರಿ (Responsibility) ಯಿಂದ ನುಣುಚಿಕೊಳ್ಳುವುದು. ಇಲ್ಲಿ ಯಾವುದೇ ಜವಾಬ್ದಾರಿ, ಹೊಣೆಗಾರಿಕೆ, ಕರ್ತವ್ಯವಿರೋದಿಲ್ಲ. ಬೇಕೆಂದಾಗ ಒಂದಾಗಿ, ಬೇಡವೆಂದಾಗ ದೂರವಾಗುವ ಸಂಬಂಧ ಇದು. ಅನೇಕ ಬಾರಿ ಪರಸ್ಪರ ಪರಿಚಯವೂ ಇಲ್ಲಿರೋದಿಲ್ಲ. ಆದ್ರೆ ಈ ಭಾವನೆಗಳಿಲ್ಲದ ಸಂಬಂಧ ಭವಿಷ್ಯದಲ್ಲಿ ಯಾವೆಲ್ಲ ಪರಿಣಾಮ ಬೀರಬಲ್ಲದು ಎಂಬುದಕ್ಕೆ ಸದ್ಗುರು (Sadhguru) ಉತ್ತರ ನೀಡಿದ್ದಾರೆ.
ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಸದ್ಗುರು ಮುಕ್ತವಾಗಿ ಉತ್ತರ ನೀಡುವ ಮೂಲಕ ಯುವಜನತೆಯನ್ನು ಈ ಜೇಡರ ಬಲೆಯಿಂದ ಬಿಡಿಸುವ ಯತ್ನ ಮಾಡಿದ್ದಾರೆ. ಭಾವನೆಗಳಿಲ್ಲದೆ ದೈಹಿಕ ಸಂಬಂಧ ಬೆಳೆಸುವ ಯುವಜನತೆಯ ಪ್ರವೃತ್ತಿ ಬಗ್ಗೆ ಹಾಗೂ ಇಂಥ ಸಂಬಂಧ ಮುಂದುವರೆದ್ರೆ ಜೀವನದಲ್ಲಿ ಯಾವೆಲ್ಲ ಸಮಸ್ಯೆ ಎದುರಾಗುತ್ತದೆ ಎನ್ನುವ ಬಗ್ಗೆ ಸದ್ಗುರು ವಿವರಿಸಿದ್ದಾರೆ.
ಈ ದೇಶದಲ್ಲಿರೋ ಹುಡುಗೀನ ಮದ್ವೆಯಾದ್ರೆ ಭರ್ತಿ ಮೂರು ಲಕ್ಷ ಸಿಗುತ್ತಂತೆ!
ಭಾವನೆಗಳಿಲ್ಲದ ದೈಹಿಕ ಸಂಬಂಧದ ಬಗ್ಗೆ ಸದ್ಗುರು ಹೇಳಿದ್ದೇನು? :
ದೇಹ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತದೆ : ನಮ್ಮ ದೇಹಕ್ಕೆ ಎಲ್ಲವೂ ನೆನಪಿರುತ್ತದೆ ಎನ್ನುತ್ತಾರೆ ಸದ್ಗುರು. ಅದನ್ನು ಅವರು ಉದಾಹರಣೆ ಸಹಿತ ವಿವರಿಸಿದ್ದಾರೆ. ಒಂದು ದಿನ ನಾಲ್ಕೈದು ಸ್ನೇಹಿತರ ಕೈ ಕುಲುಕಿರುತ್ತೇವೆ. ಮರುದಿನ ಇವರಲ್ಲಿ ಒಬ್ಬ ಸ್ನೇಹಿತರು ನಮ್ಮ ಹಿಂದಿನಿಂದ ಬಂದು ನಮ್ಮ ಭುಜವನ್ನು ಸ್ಪರ್ಶಿಸಿದ್ರೂ ನಮಗೆ ಆತ ಯಾರು ಎಂಬುದು ಗೊತ್ತಾಗುತ್ತದೆ. ನಮ್ಮ ದೇಹ ಅವರನ್ನು ಪತ್ತೆ ಮಾಡುತ್ತದೆ. ನಮ್ಮ ಮನಸ್ಸು ವಿಷ್ಯಗಳನ್ನು ಗಮನಿಸುತ್ತದೆ ನಿಜ. ಆದ್ರೆ ದೇಹ ಯಾವಾಗ್ಲೂ ಎಲ್ಲವನ್ನು ನೆನಪಿಟ್ಟುಕೊಳ್ಳುತ್ತದೆ ಎಂದು ಸದ್ಗುರು ಹೇಳಿದ್ದಾರೆ.
ಬಂಧದಲ್ಲಿ ಸಿಕ್ಕಿಬೀಳುವುದು : ಶಾರೀರಿಕ ಸ್ಮರಣೆಯನ್ನು ಋಣಾನುಬಂಧ ಎಂದು ಕರೆಯಲಾಗುತ್ತದೆ. ಇದು ರಕ್ತ ಮತ್ತು ದೈಹಿಕ ಸಂಬಂಧದ ಮೂಲಕ ಸಂಗ್ರಹವಾಗುತ್ತದೆ. ಇದೇ ಕಾರಣಕ್ಕೆ ನಮ್ಮ ಸಂಸ್ಕೃತಿಯಲ್ಲಿ ಹಸ್ತಲಾಘನ ಹಾಗೂ ಅಪ್ಪುಗೆ ಬದಲಾಗಿ ನಮಸ್ಕಾರದ ಪದ್ಧತಿಯಿದೆ. ಶರೀರದ ಬಂಧನ ಹೆಚ್ಚಾದಂತೆ ಗೊಂದಲಗಳು ಹೆಚ್ಚಾಗುತ್ತ ಹೋಗುತ್ತವೆ ಎನ್ನುತ್ತಾರೆ ಅವರು.
ಅಮೃತಧಾರೆ : ಮದ್ವೆಗೂ ಮೊದ್ವೇ ವಾಂತಿ ಮಾಡ್ಕೊಂಡು ಬಿಟ್ಳಲ್ಲಾ ಗೌತಮ್ ತಂಗಿ ಮಹಿಮಾ! ಮುಂದ?
ಶಾರೀರಿಕ ಸಂಬಂಧ (Physical Relationship) ಬೆಳೆಯುವುದು ಯಾವಾಗ? : ಆಲೋಚನೆ, ಭಾವನೆ ಮತ್ತು ದೇಹ ಎಲ್ಲವೂ ಸೇರಿ ಲೈಂಗಿಕ ಸಂಬಂಧ ಬೆಳೆಸಿದಾಗ ದೇಹಕ್ಕೆ ಹೆಚ್ಚಿನ ಸಂಖ್ಯೆಯ ನೆನಪುಗಳು ಅಂಟಿಕೊಂಡಿರುತ್ತವೆ. ಸಂಬಂಧವನ್ನು ಸರಳ ಮತ್ತು ಸ್ವಚ್ಛವಾಗಿ ಇಟ್ಟಲ್ಲಿ ಅದು ಅತ್ಯುತ್ತಮವಾಗುತ್ತದೆ ಎಂದು ಸದ್ಗುರು ಹೇಳ್ತಾರೆ.
ಎಂದಿಗೂ ಶಾಂತಿ (Peace of Mind) ಸಿಗಲು ಸಾಧ್ಯವಿಲ್ಲ : ಶರೀರಿದ ಜೊತೆ ಆತ ಏನು ಮಾಡಲು ಇಷ್ಟಪಡ್ತಾನೆ ಎಂಬುದು ವ್ಯಕ್ತಿಯನ್ನೇ ನಿರ್ಧರಿಸಿರುತ್ತದೆ. ಆತ ಹಲವಾರು ದೈಹಿಕ ನೆನಪುಗಳನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಬಯಸಿದ್ರೆ ಮುಂದಿನ ದಿನಗಳಲ್ಲಿ ಆತ ಎಷ್ಟೇ ಒಳ್ಳೆಯ ಕೆಲಸ ಮಾಡಲಿ ಇಲ್ಲ ಒಳ್ಳೆಯ ಘಟನೆಗಳು ನಡೆಯಲಿ ಆತನಿಗೆ ಜೀವನದಲ್ಲಿ ಎಂದಿಗೂ ಸುಖ ಮತ್ತು ಶಾಂತಿ ಸಿಗುವುದಿಲ್ಲ. ಇಲ್ಲಿ ನೈತಿಕತೆಯ ಪ್ರಶ್ನೆ ಬರೋದಿಲ್ಲ. ನಿಮ್ಮ ಶರೀರಿಕ್ಕಾಗಿ ನೀವು ಯಾವ ನಿರ್ಣಯ ತೆಗೆದುಕೊಳ್ತೀರಿ ಎಂಬುದು ಮುಖ್ಯವಾಗುತ್ತದೆ ಎನ್ನುತ್ತಾರೆ ಸದ್ಗುರು.