
ಸೀಮಾಗೂ ಸುಕೇಶ್‌ಗೂ ಮದುವೆಯಾಗಿ ಮೂರು ವರ್ಷದ ನಂತರ ಚಿನ್ನಾರಿ ಹುಟ್ಟಿದಳು. ಮಗು ಬರೋ ಮುಂಚೆ ಇವರಿಬ್ಬರೂ ಕನಸು ಕಂಡಿದ್ದೆಷ್ಟು, ಮಗು ಹುಟ್ಟಿದ್ಮೇಲೆ ಏನೇನೆಲ್ಲ ಮಾಡ್ಬೇಕು ಅಂತ ಲಿಸ್ಟ್ ಮಾಡ್ಕೊಂಡಿದ್ದೆಷ್ಟು. ಮಗು ಬಂದ್ಮೇಲೆ ಅದನ್ನು ಆಟ ಆಡಿಸೋದು, ಸ್ನಾನ ಮಾಡಿಸೋದು, ಚೆಂದದ ಬಟ್ಟೆ ಹಾಕಿ ಸಿಂಗರಿಸೋದರ ಬಗ್ಗೆ ಕನಸು ಕಂಡಿದ್ದೇ ಕಂಡಿದ್ದು. ಆದರೆ ಮಗು ಹುಟ್ಟಿದ ಮೇಲೆ ಸೀನ್ ಕಂಪ್ಲೀಟ್ ಚೇಂಚ್. ಸಿಚ್ಯುವೇಶನ್ ಅವರು ಅಂದುಕೊಂಡ ಹಾಗೆ ರಮ್ಯವಾಗಿರಲಿಲ್ಲ. ರಾತ್ರಿಯಿಡೀ ಅಳೋ ಮಗು, ಅದು ಯಾಕಳ್ತಿದೆ ಅನ್ನೋ ಕಾರಣವೂ ಗೊತ್ತಿಲ್ಲ. ದಿನವಿಡೀ ಅದಕ್ಕೆ ತಿನಿಸೋದು, ಕ್ಲೀನ್ ಮಾಡೋದು ಇದರಲ್ಲೇ ಕಳೆದುಹೋಗುತ್ತೆ. ನಿದ್ದೆಯಿಲ್ಲದೇ ಇಬ್ಬರಿಗೂ ರೋಗಿಗಳ ಥರ ಫೀಲ್ ಬರ್ತಿತ್ತು. ಅಂಥಾ ಟೈಮಲ್ಲಿ ಒಂದೊಳ್ಳೆ ನಿದ್ದೆ ಸಿಕ್ಕಿದ್ರೆ ಸಾಕು ಅಂತಷ್ಟೇ ಇಬ್ಬರೂ ಬಯಸ್ತಿದ್ದಿದ್ದು. ಇನ್ನು ಇವರಿಬ್ಬರ ನಡುವೆ ಲವ್ವು, ರೊಮ್ಯಾನ್ಸ್ ಇದು ಪೂರ್ವಜನ್ಮದಲ್ಲೆಲ್ಲೋ ನಡೆದದ್ದು ಅನ್ನೋ ಫೀಲು. ಚಿಕ್ಕ ಫ್ಯಾಮಿಲಿಯಲ್ಲಿ ಬೆಳೆದು ಮಗುವಿನ ಬಗ್ಗೆ ರಮ್ಯ ಕನಸು ಕಂಡು ಆ ಕನಸು ನನಸಾದಾಗ ಜೀವನದಲ್ಲೇ ಆಸಕ್ತಿ ಕಳೆದುಕೊಂಡ ಹಾಗಾಗೋದು ಹೆಚ್ಚಿನವರ ಕತೆ.
ಮಗುವಿನ ಜನನದ ನಂತರ, ಪತಿ ಮತ್ತು ಹೆಂಡತಿಯ ನಡುವೆ ಅಂತರ ಸೃಷ್ಟಿಯಾಗುತ್ತದೆ. ಪತಿಗೆ ಜವಾಬ್ದಾರಿ ಹೆಚ್ಚಾದರೆ ಪತ್ನಿ ಮಗುವಿನ ಲಾಲನೆ ಪಾಲನೆಗೆ ಹೆಚ್ಚು ಒತ್ತು ಕೊಡುತ್ತಾಳೆ. ಹೀಗೆ ಮಗುವಿನ ಜನನದ ನಂತರ, ಗಂಡ ಮತ್ತು ಹೆಂಡತಿ ನಡುವೆ ಅಂತರ ಸೃಷ್ಟಿಯಾಗುತ್ತದೆ. ಇಬ್ಬರೂ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಮಕ್ಕಳಿಗಾಗಿ ಮೀಸಲಿಡುತ್ತಾರೆ. ಇಂತಹ ಸಮಯದಲ್ಲಿ ಪತಿ-ಪತ್ನಿಯ ನಡುವೆ ಒಂದಿಷ್ಟು ಅಂತರ ಸೃಷ್ಟಿಯಾಗುತ್ತದೆ. ಪ್ರೀತಿ ಬೆಟ್ಟದಷ್ಟಿದ್ದರೂ ಸಮಯವನ್ನು ಮೀಸಲಿಡಲು ಸಾಧ್ಯವಾಗುವುದಿಲ್ಲ, ಆಗ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತವೆ. ಈ ಪರಿಸ್ಥಿತಿಯನ್ನು ಎದುರಿಸುವುದನ್ನು ತಪ್ಪಿಸಬೇಕು ಅಂದರೆ ಒಂದಿಷ್ಟು ಟಿಪ್ಸ್ ಫಾಲೋ ಮಾಡ್ಬೇಕು.
ಸಂಗಾತಿಗೆ ಟೈಮ್ ಕೊಡ್ಲೇಬೇಕು
ಇಬ್ಬರೂ ಡಿಸೈಡ್ ಮಾಡಿ. ದಿನದಲ್ಲಿ ಒಂದು ಸಮಯ ಒಬ್ಬರಿಗೊಬ್ಬರು ಮೀಸಲಿಡಲೇ ಬೇಕು. ಆ ಹೊತ್ತಿಗೆ ಮನೆಯ ಹಿರಿಯರ ಕೈಗೋ, ಮಗು ಮಲಗಿದ್ದಾಗಲೋ ಟೈಮ್ ಮಾಡಿಕೊಳ್ಳಬಹುದು. ಇಲ್ಲವಾದರೆ ಮಗುವಿನ ಜನನದ ನಂತರ, ದಂಪತಿಗೆ ರೊಮ್ಯಾನ್ಸ್ ಬಿಡಿ, ಪರಸ್ಪರ ಮಾತನಾಡಲೂ ಸಾಧ್ಯವಾಗದ ಹಾಗಾಗುತ್ತದೆ. ಇದರಿಂದಾಗಿ ಅನೇಕ ವಿಷಯಗಳು ಹಾಗೆಯೇ ಉಳಿದಿರುತ್ತವೆ. ಪತಿ-ಪತ್ನಿಯರ ನಡುವಿನ ಸಣ್ಣ ವಿಷಯಗಳು ದೊಡ್ಡ ವಿಷಯಗಳಾಗಲು ಪ್ರಾರಂಭಿಸುತ್ತವೆ.
Grandparents Day 2022: ಅಜ್ಜ-ಅಜ್ಜಿ ಮೊಮ್ಮಕ್ಕಳ ನಡುವಿನ ಸುಮಧುರ ಬಾಂಧವ್ಯ
ಸಮಯವಿದ್ದಾಗ ನಿದ್ದೆ ಮಾಡಿ
ಮಕ್ಕಳು ರಾತ್ರಿಯಿಡೀ ಮಲಗುವುದಿಲ್ಲ. ಅವರು ಇಡೀ ದಿನ ಮಲಗುತ್ತಾರೆ ಮತ್ತು ರಾತ್ರಿಯಲ್ಲಿ ದಂಪತಿಯನ್ನು ಮಲಗಲು ಬಿಡುವುದಿಲ್ಲ. ನಿಮಗೆ ನಿದ್ರೆಯಲ್ಲಿ ಅಡಚಣೆಯುಂಟಾದರೆ ದಿನಪೂರ್ತಿ ಕೋಪದಲ್ಲೇ ಇರುತ್ತೀರಿ.ಅಂತಹ ಪರಿಸ್ಥಿತಿಯಲ್ಲಿ ಮಗುವನ್ನು ಕಾಳಜಿ ವಹಿಸಬೇಕು. ನಿಮ್ಮ ಮಗುವಿಗೆ ಹಗಲಿನಲ್ಲಿ ಸಾಧ್ಯವಾದಷ್ಟು ನಿದ್ದೆ ಮಾಡದಿರಲು ಪ್ರಯತ್ನಿಸಿ. ಆದ್ದರಿಂದ ಅವರು ರಾತ್ರಿ ಬೇಗನೆ ನಿದ್ರಿಸುತ್ತಾರೆ.
ಬೇಬಿಮೂನ್ ಚೆನ್ನಾಗಿರುತ್ತೆ, ಟ್ರೈ ಮಾಡಿ
ಸಾಮಾನ್ಯವಾಗಿ ಮಗುವಿನ ಜನನದ ನಂತರ ಹೊರಗೆ ಹೋಗಲು ಬಯಸುವುದಿಲ್ಲ. ಮಗುವಿನೊಂದಿಗೆ ಹೊರಗೆ ಹೋದರೆ ನಾನಾ ಸಮಸ್ಯೆಗಳು ಎದುರಾಗುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಬೇಬಿಮೂನ್ ಅನ್ನು ಯೋಜಿಸಿ. ಯಾವುದೇ ಸುಂದರವಾದ, ನೆಚ್ಚಿನ ಸ್ಥಳದಲ್ಲಿ ನೀವು ನಿಮ್ಮ ಸಂಗಾತಿ, ಮಕ್ಕಳೊಂದಿಗೆ ಸಮಯ ಕಳೆಯಬೇಕು.
ಸೆಕ್ಸ್‌ನಲ್ಲಿ ಹುಡುಗರು ಮ್ಯಾಗಿ ಥರ ಅಂದ ರೆಜಿನಾ! ಉರಿದುಬಿದ್ದ ಪುರುಷ ನೆಟಿಜನ್ಸ್
ಹೀಗೆಲ್ಲ ಮಾಡಿದಾಗ ಮಗು ಆದ ಮೇಲೂ ಗಂಡ ಹೆಂಡತಿ ಸಂಬಂಧ ಚೆನ್ನಾಗಿರುತ್ತೆ. ಕಮ್ಯೂನಿಕೇಶನ್ ಸಮಸ್ಯೆಗಳು ಎದುರಾಗೋದಿಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳೋದು ಸಾಧ್ಯವಾಗುತ್ತೆ. ಇದರಿಂದ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಅನಗತ್ಯ ವಿಷಯಗಳಿಂದ ನೀವು ಸ್ವಲ್ಪ ವಿರಾಮವನ್ನು ಪಡೆಯುತ್ತೀರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.