ಆತ್ಮವಿಶ್ವಾಸ ಇರೋ ಗಂಡಸು ಯಾವ ರೀತಿಯ ಜನರಿಂದ ದೂರ ಇರ್ತಾನೆ ಗೊತ್ತಾ?

By Suvarna News  |  First Published Feb 6, 2023, 4:40 PM IST

ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯೊಂದಿಗೆ ಕೆಲವರು ಒಡನಾಡಲು ಹಿಂಜರಿಯಬಹುದು! ಏಕೆಂದರೆ ಅವರ ನೇರಾನೇರ ನಡೆನುಡಿ, ವಿಶ್ವಾಸದ ಮಾತುಗಳು ಮತ್ತು ವರ್ತನೆ ಅವರಿಗೆ ಹಿತವೆನ್ನಿಸದೆ ಇರಬಹುದು. ಆದರೆ, ಆತ್ಮವಿಶ್ವಾಸಿ ಪುರುಷರನ್ನು ಸುಲಭವಾಗಿ ಸೆಳೆಯಲು ಸಾಧ್ಯವಿಲ್ಲ. 
 


ದೇಹ ಸದೃಢವಾಗಿದ್ದರೂ ಕೆಲವರು ವೀಕ್ ಎನಿಸುತ್ತಾರೆ. ಅವರೊಂದಿಗಿನ ಒಡನಾಟ ಹಿತವೆನಿಸುವುದಿಲ್ಲ. ಏಕೆಂದರೆ, ಅವರಲ್ಲಿ ಆತ್ಮವಿಶ್ವಾಸವೇ ಇರುವುದಿಲ್ಲ. ಆತ್ಮವಿಶ್ವಾಸವಿಲ್ಲದ ವ್ಯಕ್ತಿಗಳು ತಮ್ಮೊಳಗೆ ತಾವು ಕುಗ್ಗುತ್ತಾರೆ, ಕೀಳರಿಮೆ ಹೊಂದಿರುತ್ತಾರೆ. ಮಹತ್ವದ ಸಮಯದಲ್ಲಿ ನಿರ್ಧಾರ ಕೈಗೊಳ್ಳಲು ಇನ್ನೊಬ್ಬರ ಮುಖ ನೋಡುತ್ತಾರೆ. ಅಷ್ಟೇ ಏಕೆ? ಅವರಲ್ಲಿ ಜನರೊಂದಿಗೆ ಮುಕ್ತವಾಗಿ ಒಡನಾಡುವ ಮನಸ್ಥಿತಿ ಕಡಿಮೆ. ಆದರೆ, ಆತ್ಮವಿಶ್ವಾಸದಿಂದ ಕೂಡಿರುವ ವ್ಯಕ್ತಿಯಲ್ಲಿ ಬೇರೆಯದೇ ರೀತಿಯ ಖದರ್ ಇರುತ್ತದೆ. ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಗೆ ತನ್ನ ಮೌಲ್ಯಗಳ ಅರಿವಿರುತ್ತದೆ. ಪುರುಷನೊಬ್ಬ ಆತ್ಮವಿಶ್ವಾಸಿಯಾಗಿದ್ದರೆ ಆತನನ್ನು ಸಿಲ್ಲಿ ಎನಿಸುವ ವರ್ತನೆಗಳ ಮೂಲಕ ಸೆಳೆಯಲು ಸಾಧ್ಯವಿಲ್ಲ. ತನ್ನ ಬಗ್ಗೆ ವಿಶ್ವಾಸ ಹೊಂದಿರುವ ವ್ಯಕ್ತಿ ಏಕಾಏಕಿ ಯಾವುದೋ ಒಂದು ನಿರ್ಧಾರಕ್ಕೆ ಬರುವುದಿಲ್ಲ. ಕೆಲವರನ್ನು ನೋಡಿ, ತಕ್ಷಣ ಯಾವುದೋ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಇದು ಅವರಲ್ಲಿನ ಹುಂಬತನವನ್ನು ತೋರುತ್ತದೆಯೇ ವಿನಾ ನಿಜವಾದ ಆತ್ಮವಿಶ್ವಾಸವನ್ನಲ್ಲ. ಆತ್ಮವಿಶ್ವಾಸಿಗಳು ಎಲ್ಲವನ್ನೂ ಅಳೆದು-ಸುರಿದು ವಿಚಾರ ಮಾಡುತ್ತಾರೆ. ಹಾಗೆಯೇ ಇವರಿಗೆ, ತೊಡುವ ಬಟ್ಟೆಯ ಮೇಲೆ ವ್ಯಕ್ತಿಯನ್ನು ಅಳೆಯುವ ಬುದ್ಧಿಯೂ ಇರುವುದಿಲ್ಲ. 

•    ತನ್ನ ಬಗ್ಗೆ ಕೊಚ್ಚಿಕೊಳ್ಳೋದಿಲ್ಲ (Exaggerate)
ಆತ್ಮವಿಶ್ವಾಸವಿಲ್ಲದ ವ್ಯಕ್ತಿ ತನ್ನ ಬಗ್ಗೆ ಸುಳ್ಳು (False) ಹೇಳುವುದು, ಕೊಚ್ಚಿಕೊಳ್ಳುವುದು ಹೆಚ್ಚು. ಆದರೆ, ಆತ್ಮವಿಶ್ವಾಸ (Self Confidence) ಹೊಂದಿದವರು ತಮ್ಮ ಬಗ್ಗೆ ಸುಳ್ಳು ಹೇಳಿಕೊಳ್ಳುವುದಿಲ್ಲ. ಭ್ರಮೆ ಮೂಡಿಸಲು ಪ್ರಯತ್ನಿಸುವುದಿಲ್ಲ. ಇನ್ನೊಬ್ಬರಲ್ಲಿ ತಮ್ಮ ಬಗ್ಗೆ ಸದಭಿಪ್ರಾಯ ಮೂಡಲೆಂದು ಸುಳ್ಳುಗಳ ಮೊರೆ ಹೋಗುವುದಿಲ್ಲ. ಅದು ಎಂದಾದರೊಮ್ಮೆ ತಮ್ಮ ಅಸ್ತಿತ್ವಕ್ಕೇ ಧಕ್ಕೆ ತರುತ್ತದೆ ಎನ್ನುವುದು ಇವರ ಅರಿವಿಗಿರುತ್ತದೆ. ಸಣ್ಣದೊಂದು ಸುಳ್ಳು (Lie) ಹೇಳಲಿಕ್ಕೂ ಇವರ ಮನಸ್ಸು ಒಡಂಬಡುವುದಿಲ್ಲ. ಸತ್ಯ ಹೇಳಿ ಕನ್ವಿನ್ಸ್ ಮಾಡುವುದು ಇವರಿಗೆ ಹಿತವೆನಿಸುವ ಮಾರ್ಗ. ಕೊಚ್ಚಿಕೊಳ್ಳುವವರನ್ನು ಇವರು ದೂರವೇ ಇಡುತ್ತಾರೆ.

Tap to resize

Latest Videos

Health Tips : ಬೇರೆಯವರ ಮಾತು ಕೇಳಿ ಮನಸ್ಸು ನೋಯಿಸ್ಕೊಳ್ಳೋರು ನೀವಾ?

•    ಸುಖಾಸುಮ್ಮನೆ ವಾಗ್ವಾದ (Confrontation) ಮಾಡೋದಿಲ್ಲ
“ತುಂಬಿದ ಕೊಡ ತುಳುಕೋದಿಲ್ಲ’ ಎನ್ನುವ ಮಾತು ಆತ್ಮವಿಶ್ವಾಸದ ವ್ಯಕ್ತಿತ್ವ (Personality) ಉಳ್ಳವರಿಗೂ ಹೊಂದುತ್ತದೆ. ಇವರು ಯಾರೊಂದಿಗೂ ಸುಖಾಸುಮ್ಮನೆ ಮಾತಿಗೆ ಇಳಿಯುವುದಿಲ್ಲ. ತಮ್ಮ ಜ್ಞಾನ ತೋರಿಸಿಕೊಳ್ಳುವ ಉದ್ದೇಶಕ್ಕೆ ಮಾತನಾಡುವುದಿಲ್ಲ. ಸುಖಾಸುಮ್ಮನೆ ವಾದ (Argue) ಮಾಡುವುದಿಲ್ಲ. ಹಾಗೆಂದು ಸರಿ ಎನಿಸುವ ವಿಚಾರಕ್ಕೆ ದೃಢವಾಗಿ ನಿಲ್ಲುತ್ತಾರೆ. ನೀವು ಅವರ ಕುರಿತು ಏನಾದರೂ ತಪ್ಪು ಮಾಡಿದರೆ ಅದನ್ನು ನೇರವಾಗಿ ಹೇಳುತ್ತಾರೆಯೇ ಹೊರತು ಮತ್ತೊಬ್ಬರಲ್ಲಿ ಚರ್ಚಿಸಲು ಹೋಗುವುದಿಲ್ಲ. ತರಲೆ ಮಾತಾಡುವವರಿಂದ ಇವರು ಮಾರುದೂರ ಇರುತ್ತಾರೆ. 

•    ಸ್ಕ್ರೀನ್ ಹಿಂದುಗಡೆ (Behind Screen) ಇರೋ ಜನವಲ್ಲ
ಕೆಲವು ಜನ ತಾವು ಮಾಡಬೇಕಾದ ಕೆಲಸವನ್ನು ಸುಲಭವಾಗಿ ಬೇರೊಬ್ಬರಿಗೆ ಒಪ್ಪಿಸುತ್ತಾರೆ. ಮನೆಯವರಿಗೋ, ಸ್ನೇಹಿತರಿಗೋ ಒಪ್ಪಿಸಿ “ಹೀಗೆ ಮಾಡು’ ಎಂದು ನಿರ್ದೇಶನ (Direction) ಮಾಡುತ್ತಾರೆ. ಅಂತಹ ಕೆಲಸಗಳು ಸಾಮಾನ್ಯವಾಗಿ ಮತ್ತೊಬ್ಬರೊಂದಿಗೆ ವ್ಯವಹರಿಸುವುದಕ್ಕೆ ಸಂಬಂಧಿಸಿರುತ್ತದೆ. ಇದು ಅವರಲ್ಲಿರುವ ವಿಶ್ವಾಸದ ಕೊರತೆಯನ್ನು ತೋರುತ್ತದೆ. ಆದರೆ, ಆತ್ಮವಿಶ್ವಾಸದಿಂದ ಕೂಡಿರುವವರು ಎಲ್ಲವನ್ನೂ ತಾವೇ ಮುಂದೆ ನಿಂತು ಮಾಡುತ್ತಾರೆ. ತಾವೇ ಎಲ್ಲರೊಂದಿಒಗೆ ನೇರವಾಗಿ (Direct) ವ್ಯವಹರಿಸುತ್ತಾರೆ. ಸಾಧ್ಯವಾದಷ್ಟು ಕೆಲಸಗಳನ್ನು ತಾವೊಬ್ಬರೇ ಮಾಡಿ ಮುಗಿಸಲು ಪ್ರಯತ್ನಿಸುತ್ತಾರೆ. ಬೇರೆಯವರ ಸಹಕಾರ (Help) ಕೇಳುವುದು ಸಹ ಕಡಿಮೆ. ಏಕೆಂದರೆ, ಬೇರೆಯವರ ಸಹಾಯ ಪಡೆದುಕೊಳ್ಳುವುದು ಇವರನ್ನು ಕುಗ್ಗಿಸುತ್ತದೆ. 

•    ಇತರರನ್ನು ಕುಗ್ಗಿಸಲು (Treating Poor) ಯತ್ನಿಸುವುದಿಲ್ಲ
ಆತ್ಮವಿಶ್ವಾಸ ಹೊಂದಿರುವ ಪುರುಷರು (Male) ಇನ್ನೊಬ್ಬರನ್ನು ಕಳಪೆಯಾಗಿ ಎಂದಿಗೂ ಭಾವಿಸುವುದಿಲ್ಲ. ಎಲ್ಲರಿಗೂ ಅವರ ಗೌರವ (Respect) ಇದ್ದೇ ಇದೆ ಎನ್ನುವ ಭಾವನೆ ಹೊಂದಿರುತ್ತಾರೆ. ಇತರರನ್ನು ಬ್ಲೇಮ್ (Blame) ಮಾಡುವುದೆಂದರೆ ಇವರಿಗೆ ಆಗದು.

Relationship Tips: ನಿಮ್ಮ ಸುತ್ತ ಇರೋ ನೆಗೆಟಿವ್ ಜನರಿಂದ ಅಂತರ ಕಾಯ್ಕೊಳ್ಳೋದು ಹೇಗೆ?

•    ಪೀರ್ ಪ್ರೆಷರ್ (Peer Pressure) ನಿಂದ ದೂರ 
ತಮ್ಮ ಬಗ್ಗೆ ತಾವು ಕಾನ್ಫಿಡೆನ್ಸ್ ಆಗಿರುವವರು ಸಮಕಾಲೀನರ ಒತ್ತಡದಿಂದ (Peer Pressure) ದೂರವಿರುತ್ತಾರೆ. ಸ್ನೇಹಿತರು (Friends) ಮಾಡಿದರೆಂದು ತಾವೂ ಮಾಡುವುದು, ಅವರು ಕಾರು ಕೊಂಡರೆಂದು ಇವರೂ ಕೊಳ್ಳುವಂತಹ ಅಭ್ಯಾಸಗಳಿಂದ ಭಾರೀ ಅಂತರ ಕಾಯ್ದುಕೊಂಡಿರುತ್ತಾರೆ. “ಅವರ ಬದುಕು, ಇಷ್ಟಾನಿಷ್ಟ ಅವರಿಗೆ, ನಮ್ಮ ಬದುಕು ನಮಗೆ’ ಎನ್ನುವ ಸ್ಪಷ್ಟತೆ (Clarity) ಹೊಂದಿರುತ್ತಾರೆ. ಎಂದಿಗೂ ಹೋಲಿಕೆ (Comparison) ಮಾಡಿಕೊಳ್ಳುವುದಿಲ್ಲ. 
 

click me!