ಸಂಬಂಧ ಕುರಿತ Anxiety ಬಗ್ಗೆ ನಿರ್ಲಕ್ಷ್ಯ ಬೇಡ; ದಾಂಪತ್ಯಕ್ಕೆ ಮುಳ್ಳಾಗ್ಬಹುದು ಈ ಖಾಯಿಲೆ

By Suvarna News  |  First Published Jan 13, 2022, 4:00 PM IST

ಸಂಬಂಧಕ್ಕೊಂದು ಲಕ್ಷ್ಮಣ ರೇಖೆಯಿರಬೇಕು. ಸದಾ ಸಂಗಾತಿ ಬಗ್ಗೆ ಆಲೋಚನೆ ಮಾಡ್ತಿದ್ದರೆ, ಅವರ ಪ್ರತಿಯೊಂದು ಹೆಜ್ಜೆಯನ್ನು ಪ್ರಶ್ನೆ ಮಾಡ್ತಿದ್ದರೆ ಸಂಬಂಧ ಉಳಿಯುವ ಬದಲು ಹಾಳಾಗುತ್ತದೆ. ಸಂಗಾತಿ ಬಿಟ್ಟು ಹೋಗಬಹುದು ಎಂಬ ಆತಂಕ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ.


ಬಂಧ(Relationship)ದಲ್ಲಿ ನಂಬಿಕೆ (Faith) ಬಹಳ ಮುಖ್ಯ. ಹಾಗೆ ಇಬ್ಬರ ಮಧ್ಯೆ ಹೊಂದಾಣಿಕೆಯಿರಬೇಕು. ಸಂಗಾತಿ (Partner)ಯ ಆಸಕ್ತಿ,ಅಭಿರುಚಿಗಳನ್ನು ತಿಳಿದಿರಬೇಕಾಗುತ್ತದೆ. ಸಂಗಾತಿ ನಡವಳಿಕೆ,ಕೆಲಸದ ಬಗ್ಗೆ ಸ್ವಲ್ಪ ಮಟ್ಟಿಗೆ ಗಮನವಿರಬೇಕು. ಅತಿಯಾದ್ರೆ ಅಮೃತವೂ ವಿಷ ಎಂಬ ಮಾತಿದೆ. ಹಾಗೆ ಸಂಬಂಧದಲ್ಲಿ ಯಾವುದೂ ಅತಿಯಾಗಬಾರದು. ಅವರ ಬಗ್ಗೆ ಅತಿ ಕಾಳಜಿ,ಅತಿಯಾದ ಪ್ರೀತಿ ಅಥವಾ ಅತಿಯಾದ ಜಾಗೃತಿ ಕೂಡ ಸಂಬಂಧ ಹಾಳು ಮಾಡುತ್ತದೆ. ಇದು ಅನುಮಾನಕ್ಕೆ ಕಾರಣವಾಗುತ್ತದೆ. ಸಂಗಾತಿಯ ಪ್ರತಿ ಹೆಜ್ಜೆಯನ್ನು ಮನಸ್ಸು ಪ್ರಶ್ನಿಸುತ್ತದೆ. ಸಂಬಂಧದಲ್ಲಿ ಅಭದ್ರತೆ ಅನುಭವಿಸುತ್ತೇವೆ.  ಮನಸ್ಸು ಸಂದಿಗ್ಧತೆಗೊಳಗಾಗುತ್ತದೆ. ಈ ಅಭದ್ರತೆಯನ್ನು ಸಮಯಕ್ಕೆ ಸರಿಯಾಗಿ ಕಿತ್ತೆಸೆಯಬೇಕು. ಇಲ್ಲದೆ ಹೋದಲ್ಲಿ ದಾಂಪತ್ಯ ಮುರಿದು ಬೀಳುವುದ್ರಲ್ಲಿ ಸಂಶಯವಿಲ್ಲ. ಇಂದು Relationship anxiety ( ಸಂಬಂಧದಲ್ಲಿ ಆತಂಕ)ದ ಬಗ್ಗೆ ಹೇಳ್ತೆವೆ. 

Relationship Anxiety ಎಂದರೇನು? : ಸಂಬಂಧದ ಆರಂಭದಲ್ಲಿ ಕೆಲವರು ಸಂಗಾತಿಯ ನಡವಳಿಕೆ, ಸ್ವಭಾವ ಮತ್ತು ತಮ್ಮ ಸಂಬಂಧ ಎಷ್ಟು ದಿನ ಹಾಗೂ ಎಷ್ಟರ ಮಟ್ಟಿಗೆ ಗಟ್ಟಿ ಎಂಬುದರ ಬಗ್ಗೆ ಭಯ ಹೊಂದಿರುತ್ತಾರೆ. ಈ ಭಾವನೆ ಆರಂಭದಲ್ಲಿ ಮಾತ್ರವಲ್ಲ ದೀರ್ಘಕಾಲದವರೆಗೆ ಮನಸ್ಸಿನಲ್ಲಿ ಬೇರೂರಿದ್ದರೆ ಅದನ್ನು relationship anxiety ಎಂದು ಕರೆಯಲಾಗುತ್ತದೆ. ಆತಂಕ ಖುಷಿ ದಾಂಪತ್ಯಕ್ಕೆ ಅಡ್ಡಿಯುಂಟು ಮಾಡುತ್ತದೆ. ಭಯದಲ್ಲಿಯೇ ಜೀವನ ಕಳೆಯುವಂತಾಗುತ್ತದೆ. ಸದಾ ಒತ್ತಡ ಮನೆ ಮಾಡಿರುತ್ತದೆ.

Latest Videos

undefined

ಇದರ ಲಕ್ಷಣ : Relationship Anxiety ಯಿಂದ ಬಳಲುತ್ತಿರುವ ಪತಿ ಅಥವಾ ಪತ್ನಿಯಲ್ಲಿ ಹಲವು ರೀತಿಯ ಲಕ್ಷಣಗಳು ಕಂಡುಬರುತ್ತವೆ. ಈ ಉದ್ವೇಗದಲ್ಲಿ ಬದುಕುವ ವ್ಯಕ್ತಿ ತನ್ನ ಸಂಗಾತಿಯ ಜೀವನದಲ್ಲಿ ತನ್ನ ಮಹತ್ವವೇನು ಎಂಬುದನ್ನು ಪದೇ ಪದೇ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ಇದಕ್ಕಾಗಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಾನೆ. ಅನೇಕ ಬಾರಿ ಇದ್ರಿಂದಾಗಿ  ಪತಿ ಅಥವಾ ಪತ್ನಿ ತಮ್ಮ ಸಂಗಾತಿಯ ಭಾವನೆಗಳನ್ನು ಅನುಮಾನಿಸಲು ಶುರು ಮಾಡ್ತಾರೆ. ನನ್ನ ಸಂಗಾತಿ ನನ್ನ ಬಗ್ಗೆ ಯಾವುದೇ ವಿಶೇಷ ಭಾವನೆ ಹೊಂದಿಲ್ಲ ಎಂಬ ನೋವನುಭವಿಸಲು ಶುರು ಮಾಡ್ತಾರೆ. ಸಂಗಾತಿ ಜೊತೆ ಹೆಚ್ಚಾಗಿ ಮಾತನಾಡುವುದಿಲ್ಲ. ಇಬ್ಬರ ಮಧ್ಯೆ ಗಲಾಟೆ ನಡೆದಾಗಲೂ ಅವರು ಮೌನವಾಗಿರುತ್ತಾರೆ. ಸಂಗಾತಿ ನನ್ನ ಮೇಲೆ ಬೇಸರಗೊಂಡು ದೂರವಾದ್ರೆ ಅಥವಾ ನನ್ನ ಬಳಿ ಬರದೆ ಹೋದ್ರೆ ಎಂಬ ಭಯದಲ್ಲಿರುತ್ತಾರೆ.

Sperm Count Increase: ವೀರ್ಯ ಸಂಖ್ಯೆ ಹೆಚ್ಚಲು ಬಳಸಿ ಈ ಪುಟಾಣಿ ಲವಂಗ

Relationship Anxiety ಗೆ ಕಾರಣಗಳು : 
ಸಂಬಂಧದಲ್ಲಿ ಆತಂಕ ಕಾಡಲು ಅನೇಕ ಕಾರಣಗಳಿವೆ. ಪತಿ ಅಥವಾ ಪತ್ನಿ, ತನ್ನ ಸಂಗಾತಿ ಪರಿಪೂರ್ಣವಾಗಬೇಕೆಂದು ನಿರೀಕ್ಷಿಸಲು ಪ್ರಾರಂಭಿಸಿದಾಗ ಈ ಸಮಸ್ಯೆ ಕೆಲವರಿಗೆ ಕಾಡಲು ಶುರುವಾಗುತ್ತದೆ.
ಸೌಂದರ್ಯ ಕೂಡ ಇದಕ್ಕೆ ಕಾರಣವಾಗಬಹುದು. ಅತಿಯಾದ ತೂಕ,ದೇಹದ ಆಕಾರ,ಬಣ್ಣ ಮತ್ತು ಅನಾರೋಗ್ಯ ಹೀಗೆ ಅನೇಕ ಕಾರಣಗಳಿಂದ ಸಂಗಾತಿ ನನ್ನ ಬಳಿ ಬರ್ತಿಲ್ಲ ಎಂದು ಇವರು ನಂಬಲು ಶುರು ಮಾಡ್ತಾರೆ. ಇದು ಮನಸ್ಸಿನಲ್ಲಿ ದೊಡ್ಡ ಮರವಾಗಿ ಬೆಳೆದು ಆತಂಕ ಹೆಚ್ಚಾಗುತ್ತದೆ. 

ಇದಲ್ಲದೆ ಸದಾ ಕಾಡುವ ಒತ್ತಡ, ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳು ಕೂಡ ಇದಕ್ಕೆ ಕಾರಣವಾಗುತ್ತವೆ.

Sexomnia : ರಾತ್ರಿ ನಿದ್ರೆಯಲ್ಲಿ ಸಂಗಾತಿ ಜೊತೆ ಮಾಡ್ತಿರಾ ಈ ಕೆಲಸ ?

Relationship Anxiety ಯಿಂದ ರಕ್ಷಣೆ ಹೇಗೆ?: ಮೊದಲು ನೀವೂ ಈ ಆತಂಕದಿಂದ ಬಳಲ್ತಿದ್ದೀರಾ ಎಂಬುದನ್ನು ಪತ್ತೆ ಮಾಡಬೇಕು. ನಿಮ್ಮ ಉತ್ತರ ಹೌದು ಎಂದು ಬಂದಲ್ಲಿ ಈ ಕೆಳಗಿನ ಉಪಾಯದ ಮೂಲಕ ಸಮಸ್ಯೆಯಿಂದ ಹೊರ ಬರಬಹುದು.

ಸ್ವಯಂ ವಿಮರ್ಶೆ: ಸದಾ ಸಂಗಾತಿ ದೋಷಗಳನ್ನು ಕಂಡುಹಿಡಿಯುವ ಬದಲು, ನಿಮ್ಮನ್ನು ಮೌಲ್ಯಮಾಪನ ಮಾಡಿ. ನಿಮ್ಮ ಸಂಗಾತಿಯ ವರ್ತನೆಯ ಬಗ್ಗೆ ನೀವು ದಿನಕ್ಕೆ ಎಷ್ಟು ಬಾರಿ ದೂರು ನೀಡುತ್ತೀರಿ ಎಂದು ಯೋಚಿಸಿ. ಅವರು ನಿಮಗೆ ಅದೇ ರೀತಿ ಮಾಡುತ್ತಾರೆಯೇ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ. ನೀವು ನಿಮ್ಮ ಸ್ವಭಾವದಲ್ಲಿ ಬದಲಾವಣೆ ತರಲು ಪ್ರಯತ್ನಿಸಿ.

ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ: ಆತ್ಮವಿಶ್ವಾಸ ಎಲ್ಲ ಸಂದರ್ಭದಲ್ಲಿಯೂ ಬಹಳ ಮುಖ್ಯ. ನಿಮ್ಮ ಬಗ್ಗೆ ನಿಮಗೆ ನಂಬಿಕೆಯಿರಬೇಕು. ನೀವು ಯಾರಿಗೂ ಕಡಿಮೆಯಿಲ್ಲ ಎಂಬ ಆತ್ಮವಿಶ್ವಾಸ ಬೆಳೆಸಿಕೊಳ್ಳಿ. ನಿಮ್ಮಂತೆ ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೆಂದು ನೀವು ನಂಬಿ.

ನಿಮ್ಮನ್ನು ಪ್ರೇರೇಪಿಸಿಕೊಳ್ಳಿ: ನಕಾರಾತ್ಮಕ ಭಾವನೆಗಳು ಮನಸ್ಸನ್ನು ಹಾಳು ಮಾಡುತ್ತವೆ. ನಕಾರಾತ್ಮ ಆಲೋಚನೆಗಳಿಂದ ಮೊದಲು ಹೊರಗೆ ಬನ್ನಿ. ಸಂಗಾತಿ ಸದಾ ನಿಮ್ಮ ಜೊತೆಗಿರ್ತಾರೆ, ನಿಮ್ಮನ್ನು ಗೌರವಿಸುತ್ತಾರೆ ಎಂಬ ಧನಾತ್ಮಕ ಆಲೋಚನೆ ಮಾಡಿ.
 

click me!