Celebrities Sex Life : ಪಬ್ಲಿಕ್‌ನಲ್ಲಿ ಸೆಕ್ಸ್ ಎಂಜಾಯ್ ಮಾಡಿದ ಸೆಲೆಬ್ರಿಟಿಗಳಿವರು

Suvarna News   | Asianet News
Published : Jan 12, 2022, 02:19 PM IST
Celebrities Sex Life :  ಪಬ್ಲಿಕ್‌ನಲ್ಲಿ ಸೆಕ್ಸ್ ಎಂಜಾಯ್ ಮಾಡಿದ ಸೆಲೆಬ್ರಿಟಿಗಳಿವರು

ಸಾರಾಂಶ

ಪ್ರತಿಯೊಂದರಲ್ಲೂ ಹೊಸತನ್ನು ಬಯಸುವ ಜನರು  ಸೆಕ್ಸ್ ವಿಷ್ಯದಲ್ಲೂ ಹಿಂದೆ ಬಿದ್ದಿಲ್ಲ. ಸಂಭೋಗದಲ್ಲಿ ಮಿತಿ ಮೀರಿದ ಪ್ರಯೋಗ ನಡೆಸ್ತಾರೆ. ಸೆಲೆಬ್ರಿಟಿಗಳೂ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ವಿಮಾನ,ಕಾರ್,ಬಾಲ್ಕನಿ ಹೀಗೆ ಸಾರ್ವಜನಿಕ ಪ್ರದೇಶಗಳಲ್ಲಿ ಸೆಕ್ಸ್ ನಡೆಸಿದ ಜೋಡಿಗಳು ಇಲ್ಲಿದ್ದಾರೆ.

ಸೆಕ್ಸ್(Sex )ಕೇವಲ ದೈಹಿಕ ಸಂಬಂಧವಲ್ಲ. ಭಾವನೆ (Emotion)ಗಳು ಇಲ್ಲಿ ಮಹತ್ವ ಪಡೆಯುತ್ತವೆ. ಭಾವನಾತ್ಮಕವಾಗಿ ಒಂದಾಗುವ ಜೋಡಿ (Couple )ಸಂಭೋಗ ಸುಖವನ್ನು ದುಪ್ಪಟ್ಟಗೊಳಿಸಲು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಾರೆ. ಸಾಮಾನ್ಯವಾಗಿ ಒಂದೇ ರೀತಿಯ ದೈಹಿಕ ಸಂಬಂಧ ದಿನ ಕಳೆದಂತೆ ಬೋರ್ ಹೊಡೆಸುತ್ತದೆ. ಸಂಬಂಧ ಸದಾ ಹಸಿರಾಗಿರಬೇಕೆಂದ್ರೆ ವಿಭಿನ್ನ ಪ್ರಯತ್ನಗಳು ಅನಿವಾರ್ಯವಾಗುತ್ತವೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಹಾಗೆ ಎಲ್ಲ ಪ್ರದೇಶಗಳಲ್ಲಿ ಇದು ಸಾಧ್ಯವಿಲ್ಲ. ಭಾರತ(India)ದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಸಂಭೋಗ ಬೆಳೆಸುವುದು ಕಾನೂನು ಬಾಹಿರ. ಕೆಲ ದೇಶಗಳಲ್ಲಿ ಮಾತ್ರ ಇದಕ್ಕೆ ಅನುಮತಿಯಿದೆ. ಆದ್ರೆ ಕಾನೂನು ಮೀರಿ ಕೆಲವರು ಸಾರ್ವಜನಿಕ ಪ್ರದೇಶಗಳಲ್ಲಿ ಸಂಬಂಧ ಬೆಳೆಸಲು ಮುಂದಾಗ್ತಾರೆ.

ಕಾರ್ (Car )ನಲ್ಲಿ ಸಂಭೋಗ ಬೆಳೆಸುವುದ್ರಿಂದ ಹಿಡಿದು ಬೀಚ್ (Beach) ನಲ್ಲಿ ಒಂದಾಗುವವರೆಗೆ ಅನೇಕ ಸರ್ಕಸ್ ಮಾಡಲು ಜನರು ಸಿದ್ಧರಿರ್ತಾರೆ. ಇದರಲ್ಲಿ ಜನಸಾಮಾನ್ಯರ ಜೊತೆ ಸೆಲೆಬ್ರಿಟಿ (Celebrity)ಗಳು ಮುಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಸಿಗೆ ವಿಷ್ಯಗಳನ್ನು ಜನರು ಬಹಿರಂಗವಾಗಿ ಮಾತನಾಡ್ತಿದ್ದಾರೆ. ಸೆಲೆಬ್ರಿಟಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷ್ಯವನ್ನು ಹಂಚಿಕೊಳ್ತಾರೆ. ಈಗ ಕೆಲ ಸೆಲೆಬ್ರಿಟಿಗಳು ಸೆಕ್ಸ್ ನಲ್ಲಿ ಸರ್ಕಸ್ ಮಾಡಿದ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಒಂದಾದ ಅವರ ಅನುಭವ ಹೇಳಿಕೊಂಡಿದ್ದಾರೆ. ಇಂದು ಹಾಲಿವುಡ್ (Hollywood )ನ ಕೆಲ ಸೆಲೆಬ್ರಿಟಿಗಳ ಹೇಳಿಕೆಯನ್ನು ನಿಮ್ಮ ಮುಂದಿಡ್ತಿದ್ದೇವೆ.

ಕ್ರಿಸ್ಸಿ ಟೈಜೆನ್ ಮತ್ತು ಜಾನ್ ಲೆಜೆಂಡ್ : ವಿಮಾನದಲ್ಲಿ ತನ್ನ ಪತಿಯೊಂದಿಗೆ ಸೆಕ್ಸ್ ಎಂಜಾಯ್ ಮಾಡಿದ್ದೇನೆ ಎಂದು ಮಾಡೆಲ್ ಕ್ರಿಸ್ಸಿ ಟೈಜೆನ್ ಹೇಳಿದ್ದಾರೆ. ಇಬ್ಬರು ರಗ್ ಹೊದ್ದುಕೊಂಡಿದ್ದೆವು. ಯಾರಿಗೂ ತಿಳಿಯದೆ ವಿಮಾನದಲ್ಲಿಯೇ ಸಂಭೋಗ ಬೆಳೆಸಿದ್ದೆವು. ಈ ಅನುಭವ ಅದ್ಭುತವಾಗಿತ್ತು. ಇದಕ್ಕಾಗಿ ಪ್ರಶಸ್ತಿ ಪಡೆಯಬೇಕೆಂದು ಕ್ರಿಸ್ಸಿ ಹೇಳಿದ್ದಾರೆ.

ಮೊದಲ ಸೆಕ್ಸ್ ತುಂಬಾ ನೋವುಂಟು ಮಾಡುತ್ತದೆಯೇ? ಮೊದಲ ರಾತ್ರಿಯ ಬಗ್ಗೆ ತಪ್ಪು ಕಲ್ಪನೆಗಳು

ಕೇಟ್ ಗ್ರಹಾಂ : ಸಂದರ್ಶನವೊಂದರಲ್ಲಿ ನಟಿ ಕೇಟ್, ಸಾರ್ವಜನಿಕ ಪ್ರದೇಶದಲ್ಲಿ ದೈಹಿಕ ಸಂಬಂಧ ಬೆಳೆಸಲು ಯಾವುದೇ ಅಭ್ಯಂತರವಿಲ್ಲ  ಎಂದಿದ್ದರು. ಅವರು ಒಮ್ಮೆ ತುಂಬಿದ ಪಾರ್ಕಿಂಗ್ ಸ್ಥಳದಲ್ಲಿ ಸಂಭೋಗ ಬೆಳೆಸಿದ್ದರಂತೆ. ಕಾರಿನ ಹಿಂದಿನ ಸೀಟಿನಲ್ಲಿ ಲೈಂಗಿಕತೆಯನ್ನು ಆನಂದಿಸಿದ್ದೆ. ತಾನು ಮತ್ತು ತನ್ನ ಪತಿ ಒಮ್ಮೆ ರೆಸ್ಟೋರೆಂಟ್‌ನ ಕತ್ತಲೆಯ ಭಾಗದಲ್ಲೂ ಸಂಭೋಗ ಬೆಳೆಸಿದ್ದೆವು ಎಂದು ಕೇಟ್ ಹೇಳಿದ್ದಾರೆ.

ಗೆರರ್ಡ್ ಜೇಮ್ಸ್ ಬಟ್ಲರ್ : ನಟ ಗೆರರ್ಡ್ ಬಟ್ಲರ್ ಅಪಾಯಕಾರಿ ಸ್ಥಳಗಳಲ್ಲಿ ಸಂಭೋಗ ಬೆಳೆಸಲು ಇಷ್ಟಪಡುತ್ತಾರಂತೆ. ಸ್ವಲ್ಪ ದೂರದಲ್ಲಿ ಜ್ವಾಲಾಮುಖಿ ಇದ್ದ ಸ್ಥಳದಲ್ಲಿ ಒಮ್ಮೆ ಸಂಭೋಗ ಬೆಳೆಸಿದ್ದೆ ಎಂದು ಬಟ್ಲರ್ ಹೇಳಿದ್ದಾರೆ. ಈ ಅನುಭವ ತುಂಬಾ ಹಾಟ್ ಆಗಿತ್ತು ಎಂದು ನಟ ಹೇಳಿದ್ದಾರೆ. ಇಷ್ಟೇ ಅಲ್ಲ ಮಂಜುಗಡ್ಡೆಯ ಮೇಲೂ ಸೆಕ್ಸ್ ಪ್ರಯೋಗ ಮಾಡಿದ್ದಾರಂತೆ. ಆದ್ರೆ ಈ ಅನುಭವ ಚೆನ್ನಾಗಿರಲಿಲ್ಲವೆಂದು ಬಟ್ಲರ್ ಹೇಳಿದ್ದಾರೆ. ಒಂದು ಕಡೆ ಚಳಿಯಾಗಿದ್ರೆ ಇನ್ನೊಂದು ಕಡೆ ಮಂಜುಗಡ್ಡೆಗೆ ದೇಹ ಅಂಟಿಕೊಂಡಿತ್ತು ಎಂದು ಹೇಳಿದ್ದಾರೆ.

Break Up : ನಿಮ್ಮ ಹುಡುಗಿ ಮುನಿಸು ಕಡಿಮೆಯಾಗ್ತಿಲ್ವಾ? ಈಗ್ಲೇ ಎಚ್ಚೆತ್ತುಕೊಳ್ಳಿ

ಜೆನ್ನಿಫರ್ ಲೋಪೆಜ್ : ಜೆನ್ನಿಫರ್ ಲೋಪೆಜ್ ಕೂಡ ತಮ್ಮ ವೈಲ್ಡ್ ಸೆಕ್ಸ್ ಅನುಭವವನ್ನು ಹಂಚಿಕೊಂಡಿದ್ದಾರೆ. ಬಾಲ್ಕನಿಯಲ್ಲಿ ತನ್ನ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಹೇಳಿದ್ದಾರೆ. ಅನೇಕ ಜನರ ಕಣ್ಣಿಗೆ ನಾವು ಬೀಳುವ ಅಪಾಯವಿತ್ತು. ಆದ್ರೂ ಬಾಲ್ಕನಿ ಸೆಕ್ಸ್ ನಾವು ಆನಂದಿಸಿದ್ದೇವೆಂದು ಅವರು ಹೇಳಿದ್ದಾರೆ.

Things to do Before sex: ಮಾಡಬೇಕಾದ 7 ವಿಷಯಗಳಿವು

ಕರ್ಸ್ಟನ್ ಡನ್ಸ್ಟ್ : ಕರ್ಸ್ಟನ್ ಡನ್ಸ್ಟ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ. ಕರ್ಸ್ಟನ್ ಡನ್ಸ್ಟ್ ತನ್ನ ಮಾಜಿ  ಜೇಕ್ ಗಿಲೆನ್‌ಹಾಲ್ ಜೊತೆ ನಡೆಸಿದ ಸಾರ್ವಜನಿಕ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಲೈಂಗಿಕ ಸುಖಕ್ಕಾಗಿ  ಕಾರು, ಬಾತ್ರೂಮ್ ಮತ್ತು ಸಮುದ್ರ ತೀರದಲ್ಲಿ ಸಂಭೋಗ ಬೆಳೆಸಿರುವುದಾಗಿ ಹೇಳಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!