ಮದುವೆಯಾದ್ಮೇಲೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ: ಕರ್ನಾಟಕ ಹೈ ಕೋರ್ಟ್

Published : Jun 20, 2023, 11:58 AM ISTUpdated : Jun 20, 2023, 12:06 PM IST
ಮದುವೆಯಾದ್ಮೇಲೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ: ಕರ್ನಾಟಕ ಹೈ ಕೋರ್ಟ್

ಸಾರಾಂಶ

ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ಪರಸ್ಪರರಿಗೆ ಲೈಂಗಿಕ/ದೈಹಿಕ ಸಂಬಂಧಕ್ಕೆ ನಿರಾಕರಿಸಿದರೆ ಅದು ಹಿಂದೂ ವಿವಾಹ ಕಾಯ್ದೆ 1995ರ ಪ್ರಕಾರ ಕ್ರೌರ್ಯತೆ ಆಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಬೆಂಗಳೂರು: ದಾಂಪತ್ಯದಲ್ಲಿ ಪತಿ ಅಥವಾ ಪತ್ನಿ ಪರಸ್ಪರರಿಗೆ ಲೈಂಗಿಕ/ದೈಹಿಕ ಸಂಬಂಧಕ್ಕೆ ನಿರಾಕರಿಸಿದರೆ ಅದು ಹಿಂದೂ ವಿವಾಹ ಕಾಯ್ದೆ 1995ರ ಪ್ರಕಾರ ಕ್ರೌರ್ಯತೆ ಆಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಆದರೆ ಭಾರತೀಯ ದಂಡ ಸಂಹಿತೆ ಅಡಿ ಇದು ಅಪರಾಧ ಅಲ್ಲ, ಆದರೆ ಹಿಂದೂ ವಿವಾಹ ಕಾಯ್ದೆಯಡಿ ಇದು ಕ್ರೌರ್ಯ ಎಂದು ಪರಿಗಣಿಸಲ್ಪಡುತ್ತದೆ ಎಂದು ಹೈಕೋರ್ಟ್ ಹೇಳುವ ಮೂಲಕ ಪತ್ನಿ, ಪತಿ ಹಾಗೂ ಆತನ ಪೋಷಕರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಿದೆ. 

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498 ಎ ಹಾಗೂ 1961ರ ವರದಕ್ಷಿಣೆ ವಿರೋಧಿ ಕಾಯ್ದೆಯ ಸೆಕ್ಷನ್ 4ರ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪತ್ನಿ ದಾಖಲಿಸಿದ್ದ ಆರೋಪಪಟ್ಟಿ ವಿರುದ್ಧ ಪತಿ ಹೈಕೋರ್ಟ್‌ನಲ್ಲಿ (High court) ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿದಾರರ ವಿರುದ್ಧ ಇರುವ ಒಂದೇ ಒಂದು ಆರೋಪವೆಂದರೆ, ಆತ ಓರ್ವ  ಧಾರ್ಮಿಕ ಗುರುವಿನ ಅನುಯಾಯಿಯಾಗಿದ್ದು, ಆತ ಹೇಳಿದಂತೆ ಪ್ರೀತಿ ಎಂದರೆ ದೈಹಿಕ ಸಂಬಂಧವಲ್ಲ, ಅದು ಆತ್ಮಗಳ ಸಮ್ಮಿಲನ ಎಂದು ಹೇಳಿ ಪತ್ನಿಯ ಜೊತೆ ದೈಹಿಕ ಸಂಬಂಧ ನಡೆಸಲು ಆತ ನಿರಾಕರಿಸಿರುವುದು' 

ನಾವು ನಮ್ಮ ಕಾನೂನನ್ನೇ ಅನುಸರಿಸುತ್ತೇವೆ, ಆದರೆ ಏಕ​ರೂಪ ಸಂಹಿ​ತೆ ವಿರುದ್ಧ ಬೀದಿಗೆ ಇಳಿಯಲ್ಲ: ಜಮೀಯ​ತ್‌ ಮುಖ್ಯಸ್ಥ

ಈತನ ಅರ್ಜಿಯ ವಿಚಾರಣೆ ನಡೆಸುವ ವೇಳೆ  ಈ ವಿಚಾರವನ್ನು ಗಮನಿಸಿದ ನ್ಯಾಯಾಧೀಶರಾದ ನಾಗರತ್ನ (nagaratna) ಅವರು, ಆತ ಪತ್ನಿ ಜೊತೆ ದೈಹಿಕ ಸಂಬಂಧವನ್ನು (Physical Relationship) ಹೊಂದುವ ಬಗ್ಗೆ ಎಂದು ಯೋಚಿಸಿಯೇ ಇಲ್ಲ ಎಂಬುದನ್ನು ಗಮನಿಸಿದರು. ಇದು ನಿಶಂಸಯಾಸ್ಪದವಾಗಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 12(1)(ಎ) ಅಡಿ ಪರಸ್ಪರರ ಆಸೆಗಳನ್ನು ಪೂರೈಸದ ಕಾರಣ ಕ್ರೌರ್ಯವಾಗುತ್ತದೆ. ಆದರೆ ಇದು ಭಾರತೀಯ ದಂಡ ಸಂಹಿತೆಯ 498(ಎ) ಅಡಿ ಉಲ್ಲೇಖಿಸಿದ ಕ್ರೌರ್ಯದಡಿಯಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ. 

2019ರ ಡಿಸೆಂಬರ್ 18 ರಂದು ಈ ಜೋಡಿ ವಿವಾಹವಾಗಿತ್ತು. ಪತ್ನಿ ತನ್ನ ಪತಿಯ ಮನೆಯಲ್ಲಿ ಕೇವಲ 28 ದಿನಗಳಷ್ಟೇ ವಾಸವಿದ್ದಳು. ಇದಾದ ನಂತರ 2022ರ ಫೆಬ್ರವರಿ 5 ರಂದು ಪತ್ನಿ ಐಪಿಸಿ ಸೆಕ್ಷನ್ 498ರ (IPC section 498) ಅಡಿ ಹಾಗೂ ವರದಕ್ಷಿಣೆ (Dowry Act) ಕಾಯ್ದೆಯಡಿ ಪತಿ ಹಾಗೂ ಆತನ ಪೋಷಕರ ವಿರುದ್ಧ ಕೇಸ್ ದಾಖಲಿಸಿದ್ದಳು. ಇದರ ಜೊತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಪ್ರಕರಣ ದಾಖಲಿಸಿದ್ದಳು. 

ಹಿಂದೂ ವಿವಾಹದಲ್ಲಿ ವಧು, ವರನ ಎಡಭಾಗದಲ್ಲಿ ಏಕೆ ಕುಳಿತುಕೊಳ್ಳುತ್ತಾಳೆ?

2022ರ ನವಂಬರ್‌ನಲ್ಲಿ ಮದುವೆಯನ್ನು  ರದ್ದುಗೊಳಿಸಲು ಕೋರಿ ನವೆಂಬರ್ 16, 2022 ರಂದು ಮದುವೆ ರದ್ದುಗೊಳಿಸಿದಾಗ ಪತ್ನಿ ಕ್ರಿಮಿನಲ್ ಪ್ರಕರಣವನ್ನು ಮುಂದುವರಿಸಲು ನಿರ್ಧರಿಸಿದರು. ಈ ಹಿನ್ನೆಲೆಯಲ್ಲಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ  ಕ್ರಿಮಿನಲ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗುವುದಿಲ್ಲ ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು  ಹೇಳಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!