ಕನಸಿನಲ್ಲಿ ಪದೇ ಪದೇ ಶಿಶ್ನ ಕಾಣಿಸುತ್ತಿದೆಯಾ? ಏನೀದರ ಅರ್ಥ?

By Suvarna News  |  First Published Jun 20, 2023, 9:30 AM IST

ಕನಸಿನಲ್ಲಿ ಶಿಶ್ನ ಮಹಿಳೆಯರಿಗೂ ಕಾಣಬಹುದು, ಪುರುಷರಿಗೂ ಕಾಣಿಸಬಹುದು. ಆದರೆ ಈ ಕನಸಿನ ಅರ್ಥವೇನು? ಎಲ್ಲ ಬಗೆಯ ಶಿಶ್ನದ ದೃಶ್ಯವೂ ಲೈಂಗಿಕ ಬಯಕೆಯ ಸಂಕೇತವೇನಾ? ತಿಳಿಯೋಣ ಬನ್ನಿ. 
 


ಕೆಲವೊಮ್ಮೆ ನಮ್ಮ ಕನಸಿನಲ್ಲಿ ನಾವು ಊಹಿಸದ ಸಂಗತಿಗಳು ಕಾಣಿಸಿಕೊಳ್ಳಬಹುದು. ನಾವು ಹಗಲಿನಲ್ಲಿ ಆ ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಆದರೆ ರಾತ್ರಿ ಕನಸಿನಲ್ಲಿ ಆ ವಸ್ತು ಬಂದುಬಿಡುತ್ತದೆ. ಎಚ್ಚರವಾದಾಗ ನಮಗೆ ಈ ಬಗ್ಗೆ ವಿಸ್ಮಯವಾಗುತ್ತದೆ. ಮುಜುಗರವೂ ಆಗಬಹುದು. ಶಿಶ್ನದ ಕನಸು (penis dream) ಅಂಥ ಕನಸುಗಳಲ್ಲಿ ಒಂದು. ಇದು ಮಹಿಳೆಯರಿಗೂ ಬೀಳಬಹುದು, ಪುರುಷರಿಗೂ ಬೀಳಬಹುದು. ಆದರೆ ಈ ಕನಸಿನ ಅರ್ಥವೇನು?ಮನಶ್ಶಾಸ್ತ್ರಜ್ಷ ಸಿಗ್ಮಂಡ್ ಫ್ರಾಯ್ಡ್ ಈ ಕನಸನ್ನು ಅತೃಪ್ತ ಲೈಂಗಿಕ ಬಯಕೆಗಳ ಜತೆಗೆ ತಳುಕು ಹಾಕುತ್ತಾನೆ. ಆದರೆ ಶಿಶ್ನದ ಕನಸಿನಲ್ಲಿಯೇ ವೈವಿಧ್ಯಗಳು ಇರಲು ಸಾಧ್ಯವಿದೆ. ವೈವಿಧ್ಯಮಯವಾದ ರೀತಿಯ ಶಿಶ್ನಗಳು ಕಾಣಿಸಬಹುದು; ಅನೇಕ ಶಿಶ್ನಗಳು ಕಾಣಿಸಬಹುದು. ಒಂದೊಂದಕ್ಕೂ ಅರ್ಥ ಬೇರೆಬೇರೆಯೇ ಆಗಿರುತ್ತದೆ. ಹಾಗಿದ್ದರೆ ಆ ಕನಸಿನ ಅರ್ಥವೇನು ಎಂದು ತಿಳಿಯೋಣವೇ? 

ಆರೋಗ್ಯಕರವಾಗಿರುವ ಪುರುಷ ಅಥವಾ ಸ್ತ್ರೀಗೆ ಆರೋಗ್ಯಕರವಾದ ಶಿಶ್ನದ ಕನಸು ಬಿದ್ದರೆ, ನೀವು ಪ್ರೀತಿಯನ್ನು ಮಾಡಲು ತುಂಬಾ ಉತ್ಸುಕರಾಗಿದ್ದೀರಿ ಎಂದು ಸೂಚಿಸುತ್ತದೆ. ಆರೋಗ್ಯಕರ ಸಾಮಾನ್ಯ ಶಿಶ್ನದ ಕನಸು ಎಂದರೆ ಸಂತೋಷಕರ ಲೈಂಗಿಕ ಜೀವನವನ್ನು ನೀವು ಹೊಂದಿದ್ದೀರಿ ಎಂದರ್ಥ.

Latest Videos

undefined

ಪುರುಷ ತನ್ನ ಜನನಾಂಗವನ್ನೇ ಕನಸಿನಲ್ಲಿ ಕಂಡರೆ, ಬೇರೆ ಯಾರಿಗೋ ಅದನ್ನು ತೋರಿಸಲು ಉತ್ಸುಕನಾಗಿದ್ದಾನೆ ಎಂದುಕೊಳ್ಳಬಹುದು. ಸಾಮಾನ್ಯವಾಗಿ ತನ್ನ ಗರ್ಲ್‌ಫ್ರೆಂಡ್‌ಗೆ ತೋರಿಸುವ ಇರಾದೆಯಿರುತ್ತದೆ. ಸ್ತ್ರೀ ತನ್ನ ಬಾಯ್‌ಫ್ರೆಂಡ್‌ನ ಶಿಶ್ನದ ಕನಸು ಕಂಡರೆ, ಅವನ ಕಾರ್ಯಕ್ಷಮತೆ ಆಕೆಗೆ ತೃಪ್ತಿ ತಂದಿಲ್ಲ ಎಂದು ಸೂಚಿಸುತ್ತದೆ. ನಿಗುರಿ ನಿಂತಿರುವ ಶಿಶ್ನವನ್ನು ಕನಸು ಕಾಣುವುದು ಒಂದು ರೀತಿಯ ಲೈಂಗಿಕ ಹಸಿವು. ಅದು ನಿಮ್ಮ ಲೈಂಗಿಕ ಆಸಕ್ತಿಯ ಸಂಕೇತ. ನಿಗುರುವಿಕೆ ಸಾಕಷ್ಟು ಕಂಡುಬಂದಿಲ್ಲ ಅಥವಾ ಇಳಿದ ಸ್ಥಿತಿಯಲ್ಲಿರುವ ಶಿಶ್ನವನ್ನು ಕಂಡರೆ ಇನ್ನಷ್ಟು ಲೈಂಗಿಕ ಸಾಧನೆಯ ಹಪಹಪಿಕೆ ಮನದಲ್ಲಿದೆ ಎಂದುಕೊಳ್ಳಬಹುದು. ತನ್ನ ಶಿಶ್ನ ಅಳತೆಗೆ ಮೀರಿ ಬೆಳೆದಂತೆ ಕಂಡರೆ, ತನ್ನ ಲೈಂಗಿಕ ಕಾರ್ಯಕ್ಷಮತೆಯ ಬಗ್ಗೆ ಉತ್ಪ್ರೇಕ್ಷೆಯ ಭಾವನೆ ಹೊಂದಿದ್ದಾನೆ ಎಂದರ್ಥ.

ಅನಾರೋಗ್ಯಕರ, ರೋಗಪೀಡಿತ ಶಿಶ್ನ ಕಂಡುಬಂದರೆ ಲೈಂಗಿಕ ಜೀವನ ತೃಪ್ತಿಕರವಾಗಿಲ್ಲ ಎಂದರ್ಥ. ಅಥವಾ ಸಂಸಾರದಲ್ಲಿ ಲೈಂಗಿಕ ಸುಖ ಪಡೆಯಲಾರದಷ್ಟು ಯಾತನೆಗಳು ಇರಬಹುದು. ಅಥವಾ ಸಂಗಾತಿ ಸಹಕರಿಸುತ್ತಿರಲಿಕ್ಕಿಲ್ಲ. ಎರಡು ಅಥವಾ ಹೆಚ್ಚಿನ ಶಿಶ್ನಗಳನ್ನು ಕಂಡರೆ ಅತೃಪ್ತಿಕರ ಲೈಂಗಿಕತೆ.

ಶಿಶ್ನವು ದೊಡ್ಡದಾಗಿದ್ದರೆ ಅಥವಾ ಚಿಕ್ಕದಾಗಿದ್ದರೆ, ಕನಸು ಕಾಣುವವರು ತನ್ನ ಶಕ್ತಿ- ಚೈತನ್ಯ ವರ್ಧಿಸುವ ಅಥವಾ ದುರ್ಬಲಗೊಳ್ಳುವ ಬಯಕೆ ಅಥವಾ ಆತಂಕ ಹೊಂದಿರುತ್ತಾರೆ. ಶಿಶ್ನಕ್ಕೆ ಗಾಯವಾದಂತೆ ಅದು ನಿಜವಾಗಿಯೂ ಯಾವುದೋ ಅನಾರೋಗ್ಯದ ಸೂಚನೆ. ಶಿಶ್ನ ಕತ್ತರಿಸಿದಂತೆ ಕನಸು ಕಂಡರೆ, ಅದು ನಿಮ್ಮ ಶಕ್ತಿ, ಕಾರ್ಯಕ್ಷಮತೆ ಅಥವಾ ಜೀವನ ಚೈತನ್ಯದ ನಷ್ಟದ ಬಗ್ಗೆ ಗಂಭೀರ ಭಯವನ್ನು ಸೂಚಿಸುತ್ತದೆ. ಅಥವಾ ಇದು ನಿಮ್ಮ ಮಗುವಿಗೆ ಉಂಟಾಗುವ ಆತಂಕದ ಸೂಚನೆಯೂ ಇರಬಹುದು.

High Sex Drive: ಸೆಕ್ಸ್ ಬಗ್ಗೆ ಸಿಕ್ಕಾಪಟ್ಟೆ ಇಂಟರೆಸ್ಟ್, ಈ ಹೈ ಲಿಬಿಡೋಗೆ ಕಾರಣವೇ ಅರ್ಥ ಆಗ್ತಿಲ್ಲ!

ಮಹಿಳೆಯಲ್ಲಿ ಏಕಕಾಲಕ್ಕೆ ಶಿಶ್ನದ ಹಾಗೂ ಋತುಸ್ರಾವದ ಕನಸು ಬಿದ್ದರೆ, ಆಕೆ ಗರ್ಭಿಣಿಯಾಗಬೇಕೆಂದು ಆಶಿಸಿದ್ದಾಳೆ ಎಂದರ್ಥ. ಪುರುಷನ ಶಿಶ್ನವನ್ನು ಕತ್ತರಿಸಿದಂತೆ ಸ್ತ್ರೀ ಕನಸು ಕಂಡರೆ ಆಕೆ ಡಾಮಿನೇಟಿಂಗ್ ಮಾಡಲು ಬಯಸುತ್ತಿದ್ದಾಳೆ. ಆಕೆ ಯಶಸ್ವಿಯೂ ಆಗುವ ಹಾದಿಯಲ್ಲಿದ್ದಾಳೆ. ಪುರುಷನಿಗೆ ಹಾಗೆ ಬಿದ್ದರೆ ಅನಾರೋಗ್ಯ.

ಕೆಲವೊಮ್ಮೆ ಸಣ್ಣ ಗಂಡು ಮಗುವಿನಲ್ಲಿ ಶಿಶ್ನದ ಕನಸು ಬೀಳಬಹುದು. ಇದು ಯಾವುದೇ ಲೈಂಗಿಕ ಕನಸಲ್ಲ. ಬದಲಾಗಿ ತನ್ನ ತಾಯಿಯ ಹೆಚ್ಚಿನ ಪ್ರೀತಿಯನ್ನು ಆ ಮಗು ಬಯಸುತ್ತಿದೆ ಎಂದರ್ಥ. ಹಾಗೇ ತಾಯಿಗೆ ತನ್ನ ಮಗುವಿನ ಶಿಶ್ನದ ಕನಸು ಬಿದ್ದರೆ, ಆಕೆ ತನ್ನ ಮಗುವಿನ ಆರೈಕೆಯನ್ನು ಸಾಕಷ್ಟು ಮಾಡುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದಾಳೆ ಎಂದರ್ಥ. ಗರ್ಭಣಿಗೆ ಶಿಶ್ನದ ಕನಸು ಬಿದ್ದರೆ ಅದು ಗಂಡು ಮಗುವಿನ ಬಯಕೆಯ ಸಂಕೇತವಾಗಿರಬಹುದು. 

ಕೆಲವೊಮ್ಮೆ ಬ್ರಹ್ಮಚಾರಿಗಳಿಗೆ, ಯಾವುದೇ ರೀತಿಯಲ್ಲೂ ಸ್ತ್ರೀಯ ಸಂಪರ್ಕದಲ್ಲಿ ಇಲ್ಲದವರಿಗೆ ಶಿಶ್ನದ ಕನಸು ಬೀಳಬಹುದು. ಸ್ಖಲನವಾಗದೆ ಶಿಶ್ನ ಹಾಗೇ ಇದ್ದರೆ ಲೈಂಗಿಕ ಬಯಕೆಗಳನ್ನು ಆತ ಹಿಡಿದಿಟ್ಟುಕೊಳ್ಳಬಲ್ಲ ಎಂದರ್ಥ. ಇನ್ನ ಕೆಲವೊಮ್ಮೆ ಆಧ್ಯಾತ್ಮಿಕ ಸಾಧನೆ ಮಾಡುತ್ತಿರುವವರಿಗೆ ಈ ಕನಸು ಬೀಳಬಹುದು. ಅದು ಅವರ ಸಾಧನೆಯ ಎತ್ತರವನ್ನು ಸೂಚಿಸುತ್ತದೆ. ಹಾಗೇ ಸಾಧನೆಯ ಹಾದಿಯಲ್ಲಿ ಇರಬಹುದಾದ ಎಡರುತೊಡರುಗಳನ್ನೂ ಸೂಚಿಸುತ್ತದೆ.

Intimate Health: ಮುತ್ತಿಡುವುದ್ರಿಂದ ಹರಡುತ್ತಾ ಲೈಂಗಿಕ ರೋಗ?
 

click me!