
ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ವಯಸ್ಸಾದ ವ್ಯಕ್ತಿಗೆ ಬಸ್ ಸೀಟು ಬಿಟ್ಟು ಕೊಟ್ಟ ಬಗ್ಗೆ ಮಾತನಾಡಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ವೈರಲ್ ಪೋಸ್ಟ್ ಗೆ ಕೊಟ್ಟಿರುವ ಶೀರ್ಷಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಎಲ್ಲರೂ ಅವರವರವ ದೃಷ್ಟಿಕೋನದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಇದಕ್ಕೆ ಲಿಂಕ್ ಮಾಡಿ ಉತ್ತರಿಸಿದ್ದಾರೆ. ಹಾಗಾದರೆ ಆ ವ್ಯಕ್ತಿ ಮಾಡಿದ ಪೋಸ್ಟ್ ನಲ್ಲಿ ಏನಿತ್ತು.
ಬಸ್, ರೈಲು ಮತ್ತು ಇತರ ಸ್ಥಳಗಳಲ್ಲಿ ಅಂಗವಿಕಲರು, ವೃದ್ಧರು, ಹಿರಿಯ ಪುರುಷರು ಮತ್ತು ಮಹಿಳೆಯರಿಗೆ ಸೀಟುಗಳನ್ನು ಕಾಯ್ದಿರಿಸಲಾಗಿದೆ. ಕಾಯ್ದಿರಿಸಿದ ಸೀಟಿನಲ್ಲಿ ಆ ವ್ಯಕ್ತಿ ಬಸ್ ಹತ್ತದಿದ್ದರೆ ನಾವೆಲ್ಲರೂ ಆ ಸೀಟಿಗೆ ಹೋಗಿ ಅಲ್ಲಿ ಸರಿಯಾದ ಸ್ಥಳದಲ್ಲಿ ಕುಳಿತುಕೊಳ್ಳುತ್ತೇವೆ. ಒಂದು ವೇಳೆ ಮುಂದಿನ ನಿಲ್ದಾಣದಲ್ಲಿ ಅಂಗವಿಕಲರು ಅಥವಾ ವೃದ್ಧ ವ್ಯಕ್ತಿಗಳು ಹತ್ತಿದರೆ ನಾವು ನಮ್ಮ ಆಸನದಿಂದ ಎದ್ದು ಅವರನ್ನು ಕುಳಿತುಕೊಳ್ಳಲು ಬಿಡುತ್ತೇವೆ. ಆದರೆ ಕೆಲವು ಸ್ಥಳಗಳಲ್ಲಿ ಈ ಬಗ್ಗೆ ವಿವಾದಗಳೂ ಇವೆ. ಆದರೆ ಇತ್ತೀಚೆಗೆ ಹಿರಿಯ ಜೀವೊಂದು ನಡೆದುಕೊಂಡ ರೀತಿ ಖಂಡಿತವಾಗಿಯೂ ನಿಮ್ಮನ್ನು ಯೋಚಿಸುವಂತೆ ಮಾಡುತ್ತದೆ.
Alphabet Dating: ಅರೆರೇ.. ಇದ್ಯಾವುದಪ್ಪಾ ಹೊಸ ಬಗೆಯ ಡೇಟಿಂಗ್...!
ಹೌದು, @Reddit ಬಳಕೆದಾರರಾದ @moamen12323 ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆ ವ್ಯಕ್ತಿ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದರು. ಆತುರದಿಂದ ಜನದಟ್ಟಣೆಯಿಂದ ತುಂಬಿದ್ದ ಬಸ್ ಹತ್ತಿ ಖಾಲಿ ಸೀಟಿನಲ್ಲಿ ಕುಳಿತುಕೊಂಡರು. ಸ್ವಲ್ಪ ಸಮಯದ ನಂತರ, ವೃದ್ಧ ವ್ಯಕ್ತಿ ಬಸ್ ಹತ್ತಿದರು. ಅವರು ತುಂಬಾ ದಣಿದಂತೆ ಕಾಣುತ್ತಿದ್ದರು. ಜೊತೆಗೆ ಅವರು ಬಹಳ ಸಮಯದಿಂದ ನಿಂತಿರುವಂತೆ ಕಾಣುತ್ತಿದ್ದರು. ಇವರನ್ನು ನೋಡಿದ ತಕ್ಷಣ ಆ ವ್ಯಕ್ತಿ ಸ್ವಲ್ಪವೂ ಯೋಚಿಸದೆ ತನ್ನ ಆಸನವನ್ನು ವೃದ್ಧರಿಗೆ ಬಿಟ್ಟುಕೊಟ್ಟರು.
ಪೋಸ್ಟ್ ನಲ್ಲಿ ಏನಿದೆ?
ನಾನು ಕೆಲಸ ಮುಗಿಸಿ ಬರುತ್ತಿದ್ದಾಗ ಸುಸ್ತಾಗಿದ್ದೆ. ಯಾವುದಕ್ಕೂ ಮೂಡ್ ಇರಲಿಲ್ಲ. ತುಂಬಾ ಜನದಟ್ಟಣೆಯಿರುವ ಬಸ್ ಹತ್ತಿದೆ. ಕೊನೆಗೆ ಖಾಲಿ ಸೀಟನ್ನು ಕಂಡುಕೊಂಡು ಕುಳಿತೆ. ಸ್ವಲ್ಪ ಸಮಯದ ನಂತರ ವೃದ್ಧ ವ್ಯಕ್ತಿ ನನ್ನ ಬಸ್ ಹತ್ತಿದರು. ಅವರು ಸ್ವಲ್ಪ ದಣಿದಂತೆ ಕಾಣುತ್ತಿದ್ದರು ಮತ್ತು ನಿಂತಿದ್ದರು. ಹಾಗಾಗಿ ಯೋಚಿಸದೆ ನನ್ನ ಸೀಟನ್ನು ಕೊಟ್ಟೆ.
ಅವರು ನಗುತ್ತಾ ನನಗೆ ಧನ್ಯವಾದ ಹೇಳಿದರು. ಸ್ವಲ್ಪ ಸಮಯದ ನಂತರ ನನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು. ನನ್ನ ಕೆಲಸದ ಬಗ್ಗೆ ಮತ್ತು ಜೀವನ ಹೇಗೆ ನಡೆಯುತ್ತಿದೆ ಎಂದು ಕೇಳಿದರು. ಸಾಮಾನ್ಯವಾಗಿ ಮಾತನಾಡುತ್ತಿದ್ದೆವು. ಅವರು ಸ್ವಲ್ಪ ಶಾಂತ ವ್ಯಕ್ತಿ ಎಂದು ನನಗೆ ಅನಿಸಿತು. ಇದ್ದಕ್ಕಿದ್ದಂತೆ, ಅವರು ಹೇಳಿದರು, "ನಾನು ನಾಲ್ಕು ದಿನಗಳಿಂದ ಯಾರೊಂದಿಗೂ ಮಾತನಾಡಿಲ್ಲ, ನನ್ನ ಮಾತನ್ನು ಕೇಳಲು ನನಗೆ ಯಾರಾದರೂ ಬೇಕಾಗಿತ್ತು". ಅದು ನಿಜವಾಗಿಯೂ ನನ್ನ ಮೇಲೆ ದೊಡ್ಡ ಪರಿಣಾಮ ಬೀರಿತು. ನನಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ, ಆದರೆ ಅವರು ಇಳಿಯುವವರೆಗೂ ಮಾತನ್ನು ಆಲಿಸಿದೆ. ನಿಮ್ಮ ದಿನವನ್ನು ವಿಭಿನ್ನವಾಗಿಸುವ ಇಂತಹ ಸಣ್ಣ ಕ್ಷಣವನ್ನು ನೀವು ಎಂದಾದರೂ ಅನುಭವಿಸಿದ್ದೀರಾ ಅಥವಾ ನೀವು ಸಾಮಾನ್ಯವೆಂದು ಭಾವಿಸಿದ ಯಾವುದಾದರೂ ವಿಷಯದ ಬಗ್ಗೆ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುವಂತೆ ಮಾಡಿಕೊಂಡಿದ್ದೀರಾ? ಎಂದು ಬರೆದುಕೊಂಡಿದ್ದಾರೆ.
ನೆನಪಿನ ಪುಸ್ತಕದಲ್ಲಿ ಅಚ್ಚಳಿಯದೆ ಉಳಿದುಬಿಟ್ಟ ಮರ್ವಿನ್...!
ಆ ವ್ಯಕ್ತಿ ತನ್ನ ಸಹಾಯ ಹಸ್ತ ಒಬ್ಬರ ದಿನವನ್ನು ಎಷ್ಟು ವಿಶೇಷಗೊಳಿಸುತ್ತದೆ ಎಂಬುದನ್ನು ಅರಿತುಕೊಂಡರು ಮತ್ತು ಆ ಕುರಿತು ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಳ್ಳಲು ನಿರ್ಧರಿಸಿದರು. ಅವರು @Reddit ನಲ್ಲಿ @moamen12323 ಎಂಬ ಖಾತೆಯಡಿಯಲ್ಲಿ ಸಂಪೂರ್ಣ ಅನುಭವವನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ನಾನು ಬಸ್ಸಿನಲ್ಲಿ ಓರ್ವ ವೃದ್ಧ ವ್ಯಕ್ತಿಗೆ ಸೀಟು ಬಿಟ್ಟುಕೊಟ್ಟೆ. ಅವರು ಹೇಳಿದ ಮಾತುಗಳು ನನ್ನನ್ನು ತುಂಬಾ ಯೋಚಿಸುವಂತೆ ಮಾಡಿತು" ಎಂದು ಪೋಸ್ಟ್ ಗೆ ಶೀರ್ಷಿಕೆ ಕೊಟ್ಟಿದ್ದಾರೆ. ಈ ಪೋಸ್ಟ್ ನೋಡಿದ ನಂತರ ಒಂಟಿತನ, ಕರುಣೆ ಮತ್ತು ಮಾನವ ಸಂಬಂಧಗಳ ಮಹತ್ವದ ಬಗ್ಗೆ ತಮ್ಮ ಅನುಭವವನ್ನು ನೆಟ್ಟಿಗರು ಹಂಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.