Alphabet Dating: ಅರೆರೇ.. ಇದ್ಯಾವುದಪ್ಪಾ ಹೊಸ ಬಗೆಯ ಡೇಟಿಂಗ್...!

Published : Apr 26, 2025, 12:36 PM ISTUpdated : Apr 27, 2025, 07:56 AM IST
Alphabet Dating: ಅರೆರೇ.. ಇದ್ಯಾವುದಪ್ಪಾ ಹೊಸ ಬಗೆಯ ಡೇಟಿಂಗ್...!

ಸಾರಾಂಶ

ಎಬಿಸಿ ಡೇಟಿಂಗ್, ಜೆನ್-ಝಡ್ ನಡುವೆ ಜನಪ್ರಿಯ ಹೊಸ ಟ್ರೆಂಡ್. ಡಿನ್ನರ್-ಸಿನಿಮಾಗಳಿಂದ ಹೊರಬಂದು, ಬಿಲ್ಲುಗಾರಿಕೆಯಿಂದ ಗಜಲ್ ರಾತ್ರಿಯವರೆಗೆ ವೈವಿಧ್ಯಮಯ ಡೇಟ್‌ಗಳನ್ನು ಅನುಭವಿಸಬಹುದು. 

ನಿಮ್ಮ ಸಂಬಂಧ ಕೂಡ ಚೆನ್ನಾಗಿರಬೇಕೆಂದರೆ ಈ ಡೇಟಿಂಗ್ ಟ್ರೆಂಡ್ ಗಳ ಬಗ್ಗೆ ನೀವೂ ತಿಳಿದಿರಬೇಕು. ಡೇಟಿಂಗ್‌ನಲ್ಲಿ ಹೊಸ ಟ್ರೆಂಡ್ ಆಗಿರುವ ಎಬಿಸಿ ಡೇಟಿಂಗ್ ಬಗ್ಗೆ  ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಲೇಖನದಲ್ಲಿ ಎಬಿಸಿ ಡೇಟಿಂಗ್ ಎಂದರೇನು?. ಇದು ಕಪಲ್ಸ್ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? ಎಂಬುದನ್ನು ತಿಳಿಸಲಾಗಿದೆ. 

ಎಬಿಸಿ ಡೇಟಿಂಗ್ ಎಂಬುದು ಜನರೇಶನ್ ಜೆಡ್ (ಜನರೇಶನ್ ಜೆಡ್ ಸಾಮಾನ್ಯವಾಗಿ 1990 ರ ದಶಕದ ಮಧ್ಯಭಾಗ ಮತ್ತು 2010 ರ ದಶಕದ ಆರಂಭದಲ್ಲಿ, ನಿರ್ದಿಷ್ಟವಾಗಿ 1997 ರಿಂದ 2012 ರ ನಡುವೆ ಜನಿಸಿದ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗಿದೆ. 2024 ರ ಹೊತ್ತಿಗೆ ಜೆನ್ Z ಸುಮಾರು 11 ರಿಂದ 27 ವರ್ಷ ವಯಸ್ಸಿನವರಾಗಿರುತ್ತಾರೆ) ಜೋಡಿಗಳನ್ನು ಪರಸ್ಪರ ಜೋಡಿಸುತ್ತಿರುವ ಹೊಸ ಟ್ರೆಂಡ್ ಆಗಿದೆ. ಅದರಲ್ಲೂ ಸಾಮಾಜಿಕ ಮಾಧ್ಯಮಗಳಿಂದಾಗಿ ಈ ಎಬಿಸಿ ಡೇಟಿಂಗ್ ಅಥವಾ ಆಲ್ಫಾಬೆಟ್ ಡೇಟಿಂಗ್ ಪರಿಕಲ್ಪನೆಯು ಭಾರಿ ಜನಪ್ರಿಯವಾಗುತ್ತಿದೆ. ಇನ್ನು ಸಿಂಪಲ್ಲಾಗಿ ಹೇಳುವುದಾದರೆ, ಪಾರ್ಟನರ್ಸ್ ವರ್ಣಮಾಲೆಯ ಪ್ರತಿಯೊಂದು ಅಕ್ಷರವನ್ನು ಆಧರಿಸಿ ಡೇಟ್‌ ಗಳನ್ನು ಯೋಜಿಸುವ ಲೆಕ್ಕ  ಹಾಕಿಕೊಳ್ಳುತ್ತಾರೆ.  

Relationship Tips: ಹುಡುಗಿಯರು ಬ್ರೇಕ್ ಅಪ್ ಆದ ನಂತರ ಈ 5 ಕೆಲಸ ಮಾಡುತ್ತಾರೆ! ತಿಳಿದರೆ ಅಚ್ಚರಿಪಡ್ತೀರಿ!

ಅಷ್ಟಕ್ಕೂ ಎಬಿಸಿ ಡೇಟಿಂಗ್ ಎಂದರೇನು?
ಇಂಗ್ಲಿಷ್ ವರ್ಣಮಾಲೆಯ ಅಕ್ಷರಗಳನ್ನು ಆಧರಿಸಿ ಡೇಟಿಂಗ್ ನಿಗದಿಪಡಿಸುವುದನ್ನು ಎಬಿಸಿ ಡೇಟಿಂಗ್ ಎಂದು ಕರೆಯಲಾಗುತ್ತದೆ. ಅಂದರೆ ಆಲ್ಫಾಬೆಟ್ ಡೇಟಿಂಗ್ ದಂಪತಿಗಳು ಹೊಸ ಹೊಸ ವಿಷಯಗಳನ್ನು ಒಟ್ಟೊಟ್ಟಿಗೆ ಹಂಚಿಕೊಳ್ಳಲು ಆಕರ್ಷಿಸುವುದರ ಜೊತೆಗೆ ರೊಮ್ಯಾನ್ಸ್ ಅನ್ನು ರೀ ಸ್ಟಾರ್ಟ್ ಮಾಡಲು ಮತ್ತು  ರೋಮಾಂಚನಕಾರಿಯಾರಲು ಸಹಾಯ ಮಾಡುತ್ತದೆ. ಹಾಗೆ ನೋಡಿದರೆ ಆಲ್ಫಾಬೆಟ್ ಡೇಟಿಂಗ್ ಇಂದು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ. ಅಲ್ಲಿ ಕಪಲ್ಸ್  ತಮ್ಮ ಡೇಟ್ ಅನುಭವಗಳನ್ನು ಪ್ರತ್ಯೇಕವಾಗಿ ಅಥವಾ ಕ್ಯುರೇಟೆಡ್ ಲಿಸ್ಟ್‌ ನಲ್ಲಿ ಹಂಚಿಕೊಳ್ಳುವುದುನ್ನು ನೋಡಬಹುದು. 

ಆಲ್ಫಾಬೆಟ್ ಡೇಟಿಂಗ್ ಜನಪ್ರಿಯತೆ ಹೆಚ್ಚುತ್ತಿರಲು ಕಾರಣಗಳು
ನೀವು ಮತ್ತು ನಿಮ್ಮ ಸಂಗಾತಿ ಹೊಸ ಹೊಸ ಕೆಲಸಗಳನ್ನು ಮಾಡಲು ಪ್ರೋತ್ಸಾಹಿಸುವುದರ ಜೊತೆಗೆ, ಆಲ್ಫಾಬೆಟ್ ಡೇಟಿಂಗ್ ನಿಮಗೆ  ಆಕರ್ಷಕ ಸಂಬಂಧವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ . ಅನೇಕ ಜೋಡಿಗಳು ಒಂದೇ ಡೇಟ್ಸ್ ಗೆ  ಪದೇ ಪದೇ ಮರಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಡೇಟ್ಸ್‌ ನಲ್ಲಿ  ಪ್ರಾಥಮಿಕವಾಗಿ ಡಿನ್ನರ್, ಸಿನಿಮಾ ಅಥವಾ ಕಾಫಿ ಡೇಟ್ ಸೇರಿವೆ. ವಿಶೇಷವೆಂದರೆ ಆಲ್ಫಾಬೆಟ್ ಡೇಟಿಂಗ್ ನಿಮ್ಮ ಹಳೆಯ ಡೇಟಿಂಗ್ ಅಭ್ಯಾಸಗಳನ್ನು ಬ್ರೇಕ್ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಸದನ್ನು ಒಟ್ಟಿಗೆ ಕಾರ್ಯಗತಗೊಳಿಸಲು ನಿಮಗೆ ಚಾಲೆಂಜ್ ಮಾಡುತ್ತದೆ. 

ಯಾವ ದೇಶಗಳಲ್ಲಿ ಅತ್ಯಂತ ಕಡಿಮೆ ಡಿವೋರ್ಸ್ ಆಗುತ್ತೆ? ಕಾರಣ ಏನು?

ಪಟ್ಟಿ ಮಾಡಿ... 
ಈ ಟ್ರೆಂಡ್ ಅನುಸರಿಸಲು, ಸ್ಫೂರ್ತಿಯಾಗಿ (A ನಿಂದ Z ವರೆಗೆ) ವರ್ಣಮಾಲೆಯನ್ನು ಬಳಸಿಕೊಂಡು ಸೂಕ್ತವಾದ ಡೇಟ್ ಪಟ್ಟಿಯನ್ನು ಮಾಡಿ. ಉದಾಹರಣೆಗೆ, ನೀವು ಬಿಲ್ಲುಗಾರಿಕೆ ಅಥವಾ ಆರ್ಕೇಡ್ ಡೇಟ್‌ನೊಂದಿಗೆ ಪ್ರಾರಂಭಿಸಬಹುದು, ನಂತರ ಬೌಲಿಂಗ್ ಅಥವಾ ಬೀಚ್ ಡೇಟ್‌ಗೆ ಹೋಗಬಹುದು. ಅದೇ ರೀತಿ, Z ಅಕ್ಷರದವರೆಗೆ ಡೇಟಿಂಗ್ ವಿಚಾರಗಳನ್ನು ಪಟ್ಟಿ ಮಾಡಿ. Z ವರೆಗೆ ಡೇಟ್ ಕಂಪ್ಲೀಟ್ ಆದ ನಂತರ ನೀವು ಮತ್ತೆ ಪ್ರಾರಂಭಿಸಬಹುದು.

ಪ್ರಾರಂಭಿಸುವುದು ಹೇಗೆ?  
ಮೊದಲನೆಯ ಹಂತವೆಂದರೆ ನೀವು ಡೇಟ್ ಅನ್ನು ಒಟ್ಟಿಗೆ ಅಥವಾ ಪರ್ಯಾಯವಾಗಿ ನಿಗದಿಪಡಿಸಬೇಕೆ ಎಂದು ನಿರ್ಧರಿಸಿ. ನಿಮ್ಮ ಡೇಟ್ ಐಡಿಯಾಗಳೊಂದಿಗೆ ಕ್ರಿಯೇಟಿವ್ ಆಗಿರಿ. 'X' ಮತ್ತು 'Z' ನಂತಹ ಟ್ರಿಕಿ ಅಕ್ಷರಗಳಿಗೆ, ಈ ಅಕ್ಷರಗಳನ್ನು ಒಳಗೊಂಡಿರುವ ಪದಗಳನ್ನು ಬಳಸುವುದನ್ನು ಪರಿಗಣಿಸಿ, ಉದಾಹರಣೆಗೆ 'X' ಗಾಗಿ "ಎಕ್ಸ್‌ಪ್ಲೋರ್" ಅಥವಾ "ಬಜಾರ್" ಔಟಿಂಗ್ ಅಥವಾ 'Z' ಗಾಗಿ "ಗಜಲ್" ನೈಟ್ ಏರ್ಪಡಿಸಿ. ಕೆಲವು ಅಕ್ಷರಗಳು ಆಲ್ಫಾಬೆಟ್ ಯೋಜನಾ ಸವಾಲುಗಳನ್ನು ಒಡ್ಡಬಹುದು. ಆದ್ದರಿಂದ  ಅದಕ್ಕೆ ಹೊಂದಿಕೊಂಡು ಮತ್ತು ಅಗತ್ಯವಿರುವಂತೆ ನಿಮ್ಮ ಯೋಜನೆಗಳನ್ನು ಅಳವಡಿಸಿಕೊಳ್ಳಬಹುದು ಎನ್ನುತ್ತಾರೆ ಇದನ್ನೆಲ್ಲಾ ಬಲ್ಲವರು. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!