ಮಧ್ಯರಾತ್ರಿ 2.30ಕ್ಕೆ ಮಹಿಳೆ ಮನೆಯೊಳಗೆ ನುಗ್ಗಿದ ಶಿಕ್ಷಕ; ಬಟ್ಟೆ ಬಿಚ್ಚುವಾಗಲೇ ಗ್ರಾಮಸ್ಥರಿಗೆ ಲಾಕ್!

Published : Apr 25, 2025, 06:06 PM ISTUpdated : Apr 25, 2025, 06:18 PM IST
ಮಧ್ಯರಾತ್ರಿ 2.30ಕ್ಕೆ ಮಹಿಳೆ ಮನೆಯೊಳಗೆ ನುಗ್ಗಿದ ಶಿಕ್ಷಕ; ಬಟ್ಟೆ ಬಿಚ್ಚುವಾಗಲೇ ಗ್ರಾಮಸ್ಥರಿಗೆ ಲಾಕ್!

ಸಾರಾಂಶ

ಮಧ್ಯರಾತ್ರಿ ಮಹಿಳೆಯ ಮನೆಗೆ ನುಗ್ಗಿದ ಶಿಕ್ಷಕ ಅಮಿತ್ ಕುಮಾರ್, ಅಸಭ್ಯವಾಗಿ ವರ್ತಿಸಲು ಯತ್ನಿಸಿದ. ಮಹಿಳೆಯ ಕೂಗಿಗೆ ಓಡಿಬಂದ ಗ್ರಾಮಸ್ಥರು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದರು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.

ಮಹಿಳೆ ಬೇಡ, ಬೇಡ ಎಂದರೂ ಮಧ್ಯರಾತ್ರಿ 2.30ರ ವೇಳೆಗೆ ಮನೆಗೆ ನುಗ್ಗಿದ ಸರ್ಕಾರಿ ಶಾಲೆ ಶಿಕ್ಷಕ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಾ, ಇನ್ನೇನು ಬಟ್ಟೆ ಕಳಚಬೇಕು ಎನ್ನುವಾಗಲೇ ಗ್ರಾಮಸ್ಥರಿಗೆ ಸಿಕ್ಕಿಬಿದ್ದಿದ್ದಾನೆ.

ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ಒಂದು ಘಟನೆ ನಡೆದಿದ್ದು, ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಜನರು ನಿದ್ದೆಯಲ್ಲಿದ್ದಾಗ, ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಮಹಿಳೆಯ ಮನೆಗೆ ನುಗ್ಗಿದ್ದಾನೆ. ಆದರೆ ಮಹಿಳೆ ಧೈರ್ಯದಿಂದ ಕೂಗಾಡಿದಾಗ ಆತನ ದುಷ್ಕೃತ್ಯ ವಿಫಲವಾಗಿದೆ. ಗ್ರಾಮಸ್ಥರು ಸೇರಿ ಆತನನ್ನು ಹಿಡಿದು ಥಳಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಂಚಲನ ಮೂಡಿಸಿದೆ.

ಮನೆಗೆ ನುಗ್ಗಿ ಅಸಭ್ಯ ವರ್ತನೆ, ಗ್ರಾಮಸ್ಥರಿಂದ ಥಳಿತ: ಈ ಘಟನೆ ಹಲೈನಾ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ. ಜರುಬರ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಅಮಿತ್ ಕುಮಾರ್ ಗುರುವಾರ ರಾತ್ರಿ ಸುಮಾರು 2:30ಕ್ಕೆ ಮಹಿಳೆಯ ಮನೆಗೆ ನುಗ್ಗಿದ್ದಾನೆ. ಮಹಿಳೆ ತನ್ನ ಕೋಣೆಯಲ್ಲಿ ಮಲಗಿದ್ದಾಗ, ಆರೋಪಿ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಯತ್ನಿಸಿದ್ದಾನೆ. ತನ್ನ ಬಟ್ಟೆ ಬಿಚ್ಚುವ ಮುನ್ನವೇ ಮಹಿಳೆ ವಿರೋಧಿಸಿ ಕೂಗಾಡಿದಾಗ, ಆರೋಪಿ ಆಕೆಯ ಬಾಯಿ ಮುಚ್ಚಲು ಯತ್ನಿಸಿದ್ದಾನೆ. ಆದರೆ, ಮಹಿಳೆ ಧೈರ್ಯದಿಂದ ತಪ್ಪಿಸಿಕೊಂಡು ಮನೆಯಿಂದ ಹೊರಗೆ ಓಡಿಬಂದು ಸಹಾಯಕ್ಕಾಗಿ ಜೋರಾಗಿ ಕೂಗಾಡಿದ್ದಾಳೆ.

ಇದನ್ನೂ ಓದಿ: Dog's Nightmare Ends: ಹೆಣ್ಣು ನಾಯಿ ಜೊತೆ ಟಾಯ್ಲೆಟ್​ ಒಳಗೆ ಅಜ್ಜ ಹೋದ: ಮಹಿಳೆ ಕೈಲಿ ಸಿಕ್ಕಿಬಿದ್ದ- ವಿಡಿಯೋ ವೈರಲ್​

ಕಂಬಕ್ಕೆ ಕಟ್ಟಿ ಥಳಿತ, ವಿಡಿಯೋ ವೈರಲ್: ಮಧ್ಯರಾತ್ರಿಯ ವೇಳೆ ಒಬ್ಬಂಟಿ ಮಹಿಳೆ ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿಸಿಕೊಂಡ ಗ್ರಾಮಸ್ಥರು ಎಚ್ಚರಗೊಂಡು ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಕೂಡಲೇ ಬಂದು ಮಹಿಳೆಯ ಮೇಲೆ ಎರಗಿದ್ದ ಆರೋಪಿಯನ್ನು ಹಿಡಿದಿದ್ದಾರೆ. ಅವನನ್ನು ಹಿಡಿದು ನೋಡಿದಾಗ ಶಿಕ್ಷಕ ಅಮಿತ್ ಕುಮಾರ್‌ ಎಂಬುದು ತಿಳಿದುಬಂದಿದೆ. ಕೂಡಲೇ ಆತನನ್ನು ಮಹಿಳೆಯ ಮನೆ ಮುಂದೆ ಇದ್ದ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಗ್ರಾಮಸ್ಥರು ತಲಾ ನಾಲ್ಕು ಏಟು ಎಂಬಂತೆ ಚೆನ್ನಾಗಿ ಥಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಆಡಳಿತವನ್ನು ಎಚ್ಚರಿಸಿದೆ.

ಪೊಲೀಸರಿಂದ ಆರೋಪಿ ವಶ, ತನಿಖೆ ಮುಂದುವರಿಕೆ: ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಲ್ಲದೇ ಈತನಿಗೆ ಶಿಕ್ಷೆ ಕೊಡಿಸಬೇಕು ಎಂದು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ, ವಿಚಾರವನ್ನು ತಿಳಿಸಿದ್ದಾರೆ. ಕಾಮುಕ ಶಿಕ್ಷಕನನ್ನು ಗ್ರಾಮಸ್ಥರು ಹಿಡಿದು ಥಳಿಸಿದ ಮಾಹಿತಿ ತಿಳಿದ ತಕ್ಷಣ ಹಲೈನಾ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ರಕ್ಷಿಸಿದ್ದಾರೆ. ಪೊಲೀಸರು ಆರೋಪಿಯನ್ನು ಶಾಂತಿಭಂಗದ ಆರೋಪದ ಮೇಲೆ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಭಾವಿ ಪತಿ ಜೊತೆ ಚೆಂದದ ಪೋಸ್​ ಕೊಟ್ಟು, ಅವನ ಮುಗಿಸಲು ಸುಪಾರಿನೂ ಕೊಟ್ಟಳು!

ಇನ್ನು ಶಿಕ್ಷಕನಿಂದ ದಾಳಿಗೆ ಒಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಯಾವ ಕೃತ್ಯ ನಡೆದಿದೆ ಎಂಬುದನ್ನು ವೈದ್ಯಕೀಯ ವರದಿ ಮೂಲಕ ಖಚಿತಪಡಿಸಿಕೊಳ್ಳಲು ಪೊಲೀಸರು ಕಾಯುತ್ತಿದ್ದಾರೆ. ಜೊತೆಗೆ, ಶಿಕ್ಷಕ ಮಹಿಳೆಯ ಆಹ್ವಾನ ಇಲ್ಲದೆಯೇ ಮಧ್ಯರಾತ್ರಿ ಮನೆಗೆ ನುಗ್ಗಿ ಆಕೆಯ ಮೇಲೆ ಎರಗುತ್ತಾನೆ ಎಂದರೆ ನಂಬಲು ಸಾಧ್ಯವಿಲ್ಲ. ಮಹಿಳೆಯ ಪಾತ್ರ ಏನಿದೆ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸರ್ಕಾರಿ ಶಾಲೆ ಶಿಕ್ಷಕನಾಗಿರುವ ಅಮಿತ್ ಕುಮಾರ್‌ನನ್ನು ಕೂಡಲೇ ಸರ್ಕಾರಿ ನೌಕರಿಯಿಂದ ವಜಾಗೊಳಿಸಬೇಕು ಎಂದು ಗ್ರಾಮಸ್ಥರು ಶಿಕ್ಷಣ ಇಲಾಖೆಗೆ ಒತ್ತಾಯ ಮಾಡಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!