ಈಗಿನ ದಿನಗಳಲ್ಲಿ ಪ್ರತಿಯೊಬ್ಬ ಪುರುಷನೂ ಸೀತೆಯಂತ ಪತ್ನಿ ಬೇಕು ಅಂತಾ ಬಯಸ್ತಾರೆ. ಅದೇ ತಾನು ಶ್ರೀರಾಮನಾಗ್ಬೇಕು ಎಂಬ ಆದರ್ಶವನ್ನಿಟ್ಟುಕೊಳ್ಳೋದಿಲ್ಲ. ನೀವೂ ಸೀತೆಯಂತ ಪತ್ನಿ ಬಯಸೋದಾದ್ರೆ ಮೊದಲು ಶ್ರೀರಾಮನಾಗಿ.
ಶ್ರೀರಾಮನನ್ನು ಮರ್ಯಾದಾ ಪುರುಷ ಎಂದು ಕರೆಯಲಾಗುತ್ತದೆ. ಶ್ರೀರಾಮ ತನ್ನ ಮಿತಿಯನ್ನು ಅರಿತಿದ್ದ. ಅದನ್ನು ಮೀರದೆ ಜೀವನ ನಡೆಸಿದ್ದ. ಪ್ರತಿಯೊಂದು ಸಂಬಂಧವನ್ನೂ ಹೇಗೆ ನಿಭಾಯಿಸಬೇಕು ಎಂಬುದು ಶ್ರೀರಾಮನಿಗೆ ತಿಳಿದಿತ್ತು. ಹಾಗಾಗಿಯೇ ಎಲ್ಲರಿಗೂ ಶ್ರೀರಾಮ ಅತ್ಯಂತ ಪ್ರೀತಿಯ ವ್ಯಕ್ತಿಯಾಗಿದ್ದ.
ಯಾವುದೇ ವ್ಯಕ್ತಿಯನ್ನು ತಿದ್ದುವ ಸಂದರ್ಭದಲ್ಲಿ ಶ್ರೀರಾಮ (Sri Rama) ನ ಉದಾಹರಣೆಯನ್ನು ತೆಗೆದುಕೊಳ್ಳಲಾಗುತ್ತದೆ. ಶ್ರೀರಾಮ ತನ್ನ ಶ್ರೇಷ್ಠ ವ್ಯಕ್ತಿತ್ವದಿಂದ ಪ್ರಸಿದ್ಧಿ ಪಡೆದಿದ್ದಾನೆ. ಒಬ್ಬ ಆದರ್ಶ (Ideal) ರಾಜ, ಮಗ, ಪತಿ, ಸಹೋದರನಾಗಿ ಶ್ರೀರಾಮ ಎಲ್ಲರಿಗೂ ಮಾದರಿ. ಕೆಲವರು ರಾಮನ ಗುಣವನ್ನು ತೆಗಳುತ್ತಾರೆ. ವನವಾಸ ಮುಗಿಸಿ ಬಂದ್ಮೇಲೆ ಸೀತೆಯನ್ನು ರಾಮ ತೊರೆದಿದ್ದೇಕೆ ಎಂದು ಪ್ರಶ್ನೆ ಮಾಡ್ತಾರೆ. ಸೀತೆಯನ್ನು ತ್ಯಜಿಸಿದ್ರೂ, ರಾಮ – ಸೀತೆ (Seeta) ಮಧ್ಯೆ ಪ್ರೀತಿಯಿತ್ತು. ರಾಜನಾಗಿ, ರಾಜನ ಧರ್ಮಪಾಲನೆಗಾಗಿ ನೋವಾದ್ರೂ ಸೀತೆಯನ್ನು ಶ್ರೀರಾಮ ತ್ಯಜಿಸಿದ್ದ. ಇದಕ್ಕಾಗಿ ತಾನೂ ಶಿಕ್ಷೆ ಅನುಭವಿಸಿದನಲ್ಲದೆ ಸೀತೆಯನ್ನು ತ್ಯಜಿಸಿದ ಮೇಲೂ ಪರಸ್ತ್ರಿ ಬಗ್ಗೆ ಆಲೋಚನೆ ಮಾಡಲಿಲ್ಲ. ಹಾಗಾಗಿಯೇ ರಾಮನನ್ನು ಆದರ್ಶ ಪತಿ ಎಂದು ಕರೆಯಲಾಗುತ್ತದೆ. ಶ್ರೀರಾಮನ ಎಲ್ಲ ಗುಣಗಳನ್ನು ಈಗಿನ ಕಾಲದಲ್ಲಿ ಅಳವಡಿಸಿಕೊಳ್ಳೋದು ಕಷ್ಟವಾಗಬಹುದು. ಆದ್ರೆ ಕೆಲವೊಂದು ಗುಣಗಳನ್ನು ಪಾಲನೆ ಮಾಡುವ ಮೂಲಕ ಆದರ್ಶ ಪತಿಯಾಗಿ ಪತ್ನಿಯ ಹೃದಯ ಗೆಲ್ಲಬಹುದು. ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನದಲ್ಲಿ ಶ್ರೀರಾಮನ ಕೆಲ ಗುಣಗಳನ್ನು ತಿಳಿದು, ಅದನ್ನು ಪಾಲಿಸಬೇಕು.
undefined
ಸಂಗಾತಿಯ ಸಕ್ಸಸ್ ಕಂಡ್ರೆ ‘ಈ ರಾಶಿ’ಯವರಿಗೆ ಹೊಟ್ಟೆ ಉರಿ
ಶ್ರೀರಾಮನಂತಾಗಲು ಏನು ಮಾಡ್ಬೇಕು?:
ಪತ್ನಿಯ ಪ್ರೀತಿಯನ್ನು ಗೆಲ್ಲಿ : ಭಗವಂತ ವಿಷ್ಣುವಿನ ಅವತಾರವಾದ್ರೂ ಶ್ರೀರಾಮನಿಗೆ ಸೀತೆ ಸುಲಭವಾಗಿ ಸಿಗಲಿಲ್ಲ. ಶಿವನ ಭಾರವಾದ ಧನುಸ್ಸನ್ನು ಎತ್ತಿದ ನಂತ್ರ ಸೀತೆ ಸಿಕ್ಕಿದ್ದಳು. ಕೆಲಸ, ಸಂಬಳ, ಬ್ಯಾಂಕ್ ಬ್ಯಾಲೆನ್ಸ್ ತೋರಿಸಿ ನೀವು ಮದುವೆಯಾಗ್ಬಹುದು. ಆದ್ರೆ ಪತ್ನಿ ಪ್ರೀತಿ ಇಷ್ಟಕ್ಕೆ ಸೀಮಿತವಾಗೋದಿಲ್ಲ. ಅದಕ್ಕೆ ಇನ್ನಷ್ಟು ಪ್ರಯತ್ನಪಡಬೇಕು. ಪತ್ನಿಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸ, ಪ್ರೀತಿ ಹುಟ್ಟಬೇಕು. ಆಕೆಗೆ ನೀವು ಮನಸ್ಪೂರ್ವಕವಾಗಿ ಪ್ರೀತಿ ನೀಡಿದಾಗ ಮಾತ್ರ ಆಕೆ ನಿಮ್ಮನ್ನು ಆದರ್ಶ ಪತಿಯೆಂದು ಸ್ವೀಕರಿಸಲು ಸಾಧ್ಯ.
ಪತ್ನಿಯ ಸಮಸ್ಯೆ ಅರಿಯಿರಿ : ಅನೇಕ ಪುರುಷರಿಗೆ ತಮ್ಮ ಕೆಲಸ ಮಾತ್ರ ಸಮಸ್ಯೆ ಎನ್ನಿಸುತ್ತದೆಯೇ ವಿನಃ ಪತ್ನಿ ಮಾಡುವ ಕೆಲಸಗಳು ಕಣ್ಣಿಗೆ ಕಾಣೋದಿಲ್ಲ. ಆಕೆಯ ಸಂತೋಷಕ್ಕೆ ಅವರು ಬೆಲೆ ನೀಡುವುದಿಲ್ಲ. ಇದು ತಪ್ಪು. ಪತ್ನಿಯ ಸಂತೋಷ, ಸೌಕರ್ಯದ ಬಗ್ಗೆ ಪತಿ ಕಾಳಜಿವಹಿಸಬೇಕು. ಆಕೆ ತವರು ಬಿಟ್ಟು ನಿಮ್ಮೊಂದಿಗೆ ಜೀವಿಸಲು ಬಂದಿದ್ದಾಳೆ ಎಂಬುದನ್ನು ಅರಿತು ನೀವು ನಡೆದುಕೊಳ್ಳಬೇಕು. ತವರಿನಲ್ಲಿ ಸಿಗ್ತಿದ್ದ ಸುಖ, ನೆಮ್ಮದಿ ನಿಮ್ಮ ಮನೆಯಲ್ಲೂ ಸಿಗುವಂತೆ ಮಾಡ್ಬೇಕು. ವನವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ರಾಮ, ಸೀತೆಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಿದ್ದ ಎಂಬುದು ನೆನಪಿಡಿ.
Intimate Health: ಮುತ್ತಿಡುವುದ್ರಿಂದ ಹರಡುತ್ತಾ ಲೈಂಗಿಕ ರೋಗ?
ಪತ್ನಿಯ ಮಾತು ಕೇಳಿ, ಅರ್ಥ ಮಾಡಿಕೊಳ್ಳಿ : ಪತ್ನಿಯ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳುವುದು ಪತಿಯ ಧರ್ಮ. ಮಹಿಳೆಯರು ಬುದ್ಧಿವಂತರಾಗಿರ್ತಾರೆ. ಅವರು ಹೇಳಿದ ಮಾತುಗಳನ್ನು ನಿರ್ಲಕ್ಷ್ಯಿಸುವ ತಪ್ಪು ಮಾಡ್ಬೇಡಿ. ಸಣ್ಣ ಸಣ್ಣ ವಿಷ್ಯದಲ್ಲಿ ಪತ್ನಿಯ ಸಂತೋಷ ಅಡಗಿದೆ. ಅದನ್ನು ಪೂರೈಸಿದಾಗ ಆಕೆ ಖುಷಿಯಾಗ್ತಾಳೆ.
ಪರಸ್ತ್ರೀ ಬಗ್ಗೆ ಆಲೋಚನೆ, ಹೋಲಿಕೆ ಬೇಡ : ಅನೇಕ ಪುರುಷರಿಗೆ ಮನೆಯಲ್ಲಿರುವ ಬುದ್ದಿವಂತ, ಸುಂದರ ಪತ್ನಿಗಿಂತ ಪಕ್ಕದಲ್ಲಿರುವ ಪರಸ್ತ್ರಿ ಸುಂದರವಾಗಿ ಕಾಣ್ತಾಳೆ. ಮದುವೆ ನಂತ್ರ ಪರಸ್ತ್ರಿ ಬಗ್ಗೆ ಆಲೋಚನೆ ಮಾಡೋದು ಅಪರಾಧ. ಸೀತೆ ಜೊತೆಯಲ್ಲಿಲ್ಲದ ಸಂದರ್ಭದಲ್ಲಿ ಕೂಡ ಶ್ರೀರಾಮ ಆಕೆಯ ಬಗ್ಗೆಯೇ ಆಲೋಚನೆ ಮಾಡ್ತಿದ್ದ.
ಪತ್ನಿ ಮೇಲೆ ನಂಬಿಕೆಯಿರಲಿ : ಅಪನಂಬಿಕೆ, ಅನುಮಾನಗಳು ಸಂಸಾರವನ್ನು ಹಾಳು ಮಾಡುತ್ತವೆ. ನಿಮ್ಮ ಪತ್ನಿ ಮೇಲೆ ನಿಮಗೆ ನಂಬಿಕೆ ಇರುವುದು ಬಹಳ ಮುಖ್ಯ. ರಾವಣ ಅಪರಹಿಸಿದ ನಂತ್ರವೂ ಸೀತೆ ಶೀಲದ ಬಗ್ಗೆ ರಾಮ ಚಕಾರ ಎತ್ತಿರಲಿಲ್ಲ. ಸೀತೆ, ಕುಟುಂಬಕ್ಕೆ ಕಳಂಕ ತರುವ ಕೆಲಸ ಮಾಡುವುದಿಲ್ಲವೆಂದು ರಾಮ ನಂಬಿದ್ದ.