Yoga for Sex: ಯೋಗದಿಂದ ಸೆಕ್ಸ್‌ ಲೈಫನ್ನೂ ಸುಧಾರಿಸಬಹುದು!

By Suvarna News  |  First Published Jun 21, 2023, 11:59 AM IST

ನೀವು ಇಂದಿನಿಂದಲೇ ಯೋಗ ಮಾಡಲು ಆರಂಭಿಸಿದರೆ, ಒಂದು ವಾರದಲ್ಲಿ ನಿಮ್ಮ ಲೈಂಗಿಕ ಜೀವನದ ಸೂಪರ್‌ ಆಗುವುದನ್ನು ನೀವೇ ನೋಡಬಹುದು. ಅದು ಹೇಗೆ ಅಂತೀರಾ?


ಯೋಗಾಸನದಿಂದ ಅನೇಕ ದೈಹಿಕ ನೋವುಗಳು ಇಲ್ಲವಾಗುವುದನ್ನು ಕಾಣಬಹುದು. ಹಾಗೆಯೇ ದೇಹ ಹಗುರವಾಗುತ್ತದೆ, ಉಲ್ಲಾಸ ಕಾಣಿಸಿಕೊಳ್ಳುತ್ತದೆ. ಇದರ ಪ್ರಮುಖ ಪ್ರಯೋಜನವನ್ನು ನಿಮ್ಮ ಲೈಂಗಿಕ ಜೀವನದಲ್ಲೂ ಕಾಣಬಹುದು! ಯೋಗದ ಮುಖ್ಯ ಪ್ರಯೋಜನವೆಂದರೆ ಒತ್ತಡವನ್ನು ಕಡಿಮೆ ಮಾಡುವುದು. ಇದು ಬೆಡ್‌ರೂಂನ ಒಳಗೂ ನಿಜ, ಹೊರಗೂ ನಿಜ. ಒತ್ತಡ ಹೆಚ್ಚಿಸುವ ಹಾರ್ಮೋನ್‌ ಕಾರ್ಟಿಸೋಲ್.‌ ಹೆಚ್ಚಿದ ಒತ್ತಡವು ದೇಹದ ಮೇಲೆ ಅನೇಕ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಲೈಂಗಿಕ ಬಯಕೆ ಕಡಿಮೆಯಾಗುವುದು ಅವುಗಳಲ್ಲಿ ಒಂದು. ನಿಯಮಿತ ಯೋಗಾಭ್ಯಾಸವು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ದೇಹದಲ್ಲಿನ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ.

ಯೋಗವು ಒಟ್ಟಾರೆ ಲೈಂಗಿಕ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಒಂದು ಅಧ್ಯಯನದಲ್ಲಿ, 40 ಮಹಿಳೆಯರು 12 ವಾರಗಳ ಕಾಲ ಯೋಗಾಭ್ಯಾಸ ಮಾಡಿದ್ದನ್ನು ದಾಖಲಿಸಿಕೊಳ್ಳಲಾಯಿತು. ನಂತರ ಪರೀಕ್ಷಿಸಲಾಗಿ, ಇವರು ತಮ್ಮ ಲೈಂಗಿಕ ಜೀವನದಲ್ಲಿ ಗಮನಾರ್ಹ ಸುಧಾರಣೆಯನ್ನು ಹೊಂದಿದುದೂ ಕಂಡುಬಂತು. ಇದೊಂದು ಸಣ್ಣ ಅಧ್ಯಯನ. ಆದರೆ ಯೋಗ ಮತ್ತು ಉತ್ತಮ ಲೈಂಗಿಕ ಜೀವನದ ನಡುವೆ ದೃಢವಾದ ಸಂಬಂಧ ಇರುವುದನ್ನು ಗಟ್ಟಿಯಾಗಿ ಸ್ಥಾಪಿಸಿದೆ. ನಿಯಮಿತ ಯೋಗಾಭ್ಯಾಸ ನಿಮ್ಮ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಬಹಳ ಮುಖ್ಯವಾದ ಪ್ರಸ್ತುತ ಕ್ಷಣದ ಅರಿವನ್ನು ನಿಮಗೆ ತರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಯೋಗ ಮಾಡುತ್ತಿದ್ದರೆ ಹೆಚ್ಚು ಸುಖ ಪಡೆಯಬಹುದು. ನಿಮ್ಮಿಬ್ಬರಿಗೂ ಅದು ಉತ್ತಮ ಅನುಭವ ನೀಡುತ್ತದೆ. ಸೆಕ್ಸ್ ಮತ್ತು ಯೋಗ ಎರಡೂ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಪ್ರಯೋಜನ ನೀಡುತ್ತವೆ ಎಂದು ತಜ್ಞರು ಹೇಳುತ್ತಾರೆ.

Latest Videos

undefined

ಹಾಗಾದರೆ, ಯಾವ ಯಾವ ಆಸನಗಳು ಲೈಂಗಿಕ ಶಕ್ತಿಗೆ ಪೂರಕ ಎಂಬುದನ್ನು ನೋಡೋಣ.

 

ನೀರಿನ ಮೇಲೆ ಮಲಗಿದ ಯೋಗ ಸಾಧಕ: ಜಲಯೋಗ ನೀವು ಪ್ರಯತ್ನಿಸಬೇಡಿ

1. ಮಾರ್ಜಾಲಾಸನ (ಬೆಕ್ಕಿನ ಭಂಗಿ), ಬಿತಿಲಾಸನ (ಹಸುವಿನ ಭಂಗಿ)
ಇವೆರಡರ ನಡುವೆ ಸಣ್ಣ ವ್ಯತ್ಯಾಸ ಮಾತ್ರ ಇದೆ. ಈ ಭಂಗಿಗಳು ಬೆನ್ನುಮೂಳೆಯನ್ನು ಸಡಿಲಗೊಳಿಸಲು ಮತ್ತು ವಿಶ್ರಾಂತಿ ಪಡೆಯಲು ನಿಮಗೆ ಸಹಾಯ ಮಾಡುತ್ತವೆ. ಇದು ನಿಮ್ಮ ಒಟ್ಟಾರೆ ಒತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೂಡ್‌ಗೆ ಬರಲು ಸುಲಭವಾಗುತ್ತದೆ.

2. ಸೇತು ಬಂಧ ಸರ್ವಾಂಗಾಸನ (ಸೇತುವೆಯ ಭಂಗಿ)
ಈ ಭಂಗಿಯು ನಿಮ್ಮ ಬೆನ್ನಿನ ಹಾಗೂ ಸೊಂಟದ ಭಾಗವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಈ ಸ್ನಾಯುಗಳನ್ನು ಬಲಪಡಿಸುವುದು ಸಂಭೋಗದ ಸಮಯದಲ್ಲಿ ಶ್ರಮ ಕಡಿಮೆ ಮಾಡುತ್ತದೆ. ಗಂಡಸರಿಗೆ ಹೆಚ್ಚು ಹೊತ್ತು ಸ್ಥಿರವಾಗಿರಲು ಇದು ಅನುಕೂಲ.

3. ಆನಂದ ಬಾಲಾಸನ (ಮಗುವಿನ ಭಂಗಿ)
ಇದೊಂದು ಜನಪ್ರಿಯವಾದ ವಿಶ್ರಾಂತಿ ಭಂಗಿ. ಈ ಭಂಗಿಯು ನಿಮ್ಮ ಕೆಳ ಬೆನ್ನನ್ನು ಹಿಗ್ಗಿಸುತ್ತದೆ. ಇದು ಸ್ತ್ರೀಯರ ಬೆನ್ನಿಗೆ ಹೆಚ್ಚಿನ ಬಲ ನೀಡಿ, ಮಿಷನರಿ ಭಂಗಿಯಲ್ಲಿ ಗಂಡಸಿಗೆ ಮುದ ನೀಡಲು ಸಹಾಯವಾಗುತ್ತದೆ. ಹಾಸಿಗೆಯಲ್ಲಿ ಇದನ್ನು ಪ್ರಯತ್ನಿಸುವಾಗ, ನಿಮ್ಮ ಸಂಗಾತಿಯೊಂದಿಗೆ ಮಿಷನರಿ ಭಂಗಿಯಲ್ಲಿ ಪ್ರಾರಂಭಿಸಿ, ತದನಂತರ ನಿಮ್ಮ ಕಾಲುಗಳನ್ನು ವಿಸ್ತರಿಸಿ ಮತ್ತು ನಿಮ್ಮ ಸಂಗಾತಿಯ ಸೊಂಟದ ಸುತ್ತಲೂ ಸುತ್ತಿಕೊಳ್ಳಿ.

ಈ ರಾಶಿಯವರು ಅತ್ಯಂತ ರೋಮ್ಯಾಂಟಿಕ್...

4. ಏಕ ಪಾದ ರಾಜಕಪೋತಾಸನ (ಒಂದು ಕಾಲಿನ ಪಾರಿವಾಳ)
ಪಾರಿವಾಳದ ಹಲವು ಭಂಗಿಗಳಿವೆ. ಅವೆಲ್ಲವೂ ಸೊಂಟವನ್ನು ಹಿಗ್ಗಿಸಲು ಮತ್ತು ಗಟ್ಟಿಗೊಳಿಸಲು ಉತ್ತಮ. ಬಿಗಿಯಾದ ಸೊಂಟಗಳು ಲೈಂಗಿಕತೆಯನ್ನು(sex drive) ಅನುಕೂಲಗೊಳಿಸಬಹುದು. ವಿಭಿನ್ನ ಲೈಂಗಿಕ ಸ್ಥಾನಗಳನ್ನು ಪ್ರಯತ್ನಿಸುವಂತೆ ಅವು ನಿಮ್ಮನ್ನು ಪ್ರೇರೇಪಿಸಬಹುದು.

ಯೋಗ ಕಲಿತು ಆರೋಗ್ಯವಾಗಿರ್ಬೇಕಾ? ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು

5. ಬಾಲಾಸನ (ಶಿಶು ಭಂಗಿ)
ಈ ಭಂಗಿಯು ನಿಮ್ಮ ಸೊಂಟವನ್ನು ಹೆಚ್ಚಿನ ಕಷ್ಟಕ್ಕೊಳಪಡಿಸದೆ ಆಳವಾದ ವಿಶ್ರಾಂತಿಯನ್ನು(Rest) ಕಂಡುಕೊಳ್ಳಲು ಅದ್ಭುತ ಮಾರ್ಗ. ಇದು ಶ್ರಮವನ್ನು ಇಳಿಸುವ ಭಂಗಿ. ನಿಮ್ಮ ಗಮನವು ಭಂಗಿಯ ಉದ್ದಕ್ಕೂ ವಿಶ್ರಾಂತಿ ಮತ್ತು ಉಸಿರಾಟದ ಮೇಲೆ ಇರಬೇಕು. ಇದು ಯಾವುದೇ ಒತ್ತಡ(Stress) ಮತ್ತು ಆತಂಕವನ್ನು ಕರಗಿಸುತ್ತದೆ.

6. ಶವಾಸನ (ಶವದ ಭಂಗಿ)
ಯೋಗ ತರಗತಿಗಳು ಸಾಮಾನ್ಯವಾಗಿ ಶವದ ಭಂಗಿ ಅಥವಾ ಶವಾಸನದಲ್ಲಿ ಕೊನೆಗೊಳ್ಳುತ್ತವೆ. ಇದೂ ಕೂಡ ಸಹಾಯಕಾರಿ. ಈ ಭಂಗಿಯು(Position) ನಿಮಗೆ ವಿಶ್ರಾಂತಿ ಪಡೆಯಲು ಮತ್ತು ಒತ್ತಡವನ್ನು ಹೊರಬಿಡಲು ಸಹಾಯ ಮಾಡುತ್ತದೆ. ನಿಮ್ಮ ಯೋಗಾಭ್ಯಾಸದ ಕೊನೆಯಲ್ಲಿ ಇದೊಂದು ಮಿನಿ ಧ್ಯಾನದ(Meditation) ಸೆಷನ್ ಎಂದು ಯೋಚಿಸಿ ಇದನ್ನು ಮಾಡಿ.

click me!