ಹೆಂಡ​ತಿಗೆ 55 ಸಾವಿರ ರು. ಜೀವ​ನಾಂಶ​ವನ್ನು ನಾಣ್ಯ​ದಲ್ಲೇ ಕೊಟ್ಟ ಪತಿ​ರಾ​ಯ!

Published : Jun 21, 2023, 07:19 AM ISTUpdated : Jun 21, 2023, 07:32 AM IST
 ಹೆಂಡ​ತಿಗೆ 55 ಸಾವಿರ ರು. ಜೀವ​ನಾಂಶ​ವನ್ನು ನಾಣ್ಯ​ದಲ್ಲೇ ಕೊಟ್ಟ ಪತಿ​ರಾ​ಯ!

ಸಾರಾಂಶ

ಹೆಂಡತಿಗೆ ಜೀವನಾಂಶವಾಗಿ ನೀಡಬೇಕಿದ್ದ 55 ಸಾವಿರ ಹಣವನ್ನು ಪತಿರಾಯನೊಬ್ಬ 1 ಹಾಗೂ 2 ರುಪಾಯಿ ಮೌಲ್ಯದ ನಾಣ್ಯಗಳಲ್ಲಿ ನೀಡಿದ ಪ್ರಸಂಗ ಜೈಪು​ರದ ಕುಟುಂಬ ನ್ಯಾಯಾಲಯದಲ್ಲಿ ನಡೆದಿದೆ.

ಜೈಪುರ:ಇತ್ತೀಚೆಗೆ ಕೆಲವು ಯುವಕರು ತಾವು ನಾಣ್ಯಗಳಲ್ಲಿ ಕೂಡಿಟ್ಟ  ಹಣದಿಂದ, ಅಥವಾ ಕೇವಲ ಒಂದು ರೂ ಅಥವಾ ಎರಡು ರೂಪಾಯಿಯ ನಾಣ್ಯಗಳಿಂದ ತಮ್ಮ ಬಹುದಿನಗಳ ಕನಸ್ಸಾಗಿದ್ದ ಬೈಕ್‌ ಸ್ಕೂಟಿಗಳನ್ನು ಖರೀದಿಸಿದ್ದನ್ನು ನೋಡಿದ್ದೇವೆ. ಆದರೆ ಇಂತಹದ್ದೇ ಆದರೆ ನಾಣ್ಯಗಳ ವ್ಯವಹಾರದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.  ಪರಿಹಾರ ಕೇಳಿದ್ದ ವಿಚ್ಛೇದಿತ ಪತ್ನಿಗೆ  ಬುದ್ಧಿ ಕಲಿಸಲು ಮುಂದಾದ ಪತಿಯೋರ್ವ ಆಕೆಗೆ ಬರೀ ಒಂದು ಹಾಗೂ ಎರಡು ರೂಪಾಯಿಯ ನಾಣ್ಯಗಳಲ್ಲೇ ನೀಡಬೇಕಿದ್ದ 55 ಸಾವಿರ ರೂಪಾಯಿಯ ಪರಿಹಾರ ನೀಡಿದ್ದು, ಈತನ ವರ್ತನೆಗೆ ನ್ಯಾಯಾಧೀಶರೇ ಕ್ಷಣ ಕಾಲ ದಂಗಾದ ಘಟನೆ ನಡೆದಿದೆ.

ಹೆಂಡತಿಗೆ ಜೀವನಾಂಶವಾಗಿ ನೀಡಬೇಕಿದ್ದ 55 ಸಾವಿರ ಹಣವನ್ನು ಪತಿರಾಯನೊಬ್ಬ 1 ಹಾಗೂ 2 ರುಪಾಯಿ ಮೌಲ್ಯದ ನಾಣ್ಯಗಳಲ್ಲಿ ನೀಡಿದ ಪ್ರಸಂಗ ಜೈಪು​ರದ ಕುಟುಂಬ ನ್ಯಾಯಾಲಯದಲ್ಲಿ ನಡೆದಿದೆ. ದಶರಥ್‌ ಕುಮಾವತ್ ಹಾಗೂ ಸೀಮಾ ಎಂಬುವರು ಹತ್ತು ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಗೆ ವಿಚ್ಛೇದನವಾಗಿ ನ್ಯಾಯಾಲಯ ಸೀಮಾಗೆ ಮಾಸಿಕ 5 ಸಾವಿರ ನೀಡುವಂತೆ ಆದೇಶಿಸಿತ್ತು. ಆದರೆ ದಶರಥ್‌ ನೀಡದ ಕಾರಣ, ಜೂನ್ 17 ರಂದು ಆತನನ್ನು ಬಂಧಿ​ಸ​ಲಾ​ಗಿ​ತ್ತು. ಈಗ ಆತ 11 ತಿಂಗಳ ಜೀವ​ನಾಂಶ​ವಾ​ದ 55 ಸಾವಿರ ರು. ಹಣವನ್ನು ಒಟ್ಟಿಗೇ ನೀಡಿ​ದ್ದಾನೆ. ಆದರೆ ಅದು ನಾಣ್ಯಗಳ ರೂಪದಲ್ಲಿ. 7 ಚೀಲಗಳಲ್ಲಿ ಒಂದು ಹಾಗೂ ಎರಡು ರೂಪಾಯಿಯ ನಾಣ್ಯಗಳನ್ನು ತುಂಬಿಸಿ ಹೊತ್ತು ತಂದ ಗಂಡನ ಮನೆಯವರನ್ನು ನೋಡಿ ಪತ್ನಿ ಸೀಮಾ ಕಡೆ ವಕೀಲ ರಾಮಪ್ರಕಾಶ್ ಕುಮಾವತ್  ಇದೂ ಒಂದು ಹಿಂಸೆ ಎಂದು ದೂರಿ​ದ್ದಾ​ರೆ. ಅದಕ್ಕಾಗಿ ನ್ಯಾಯಾಲಯ, ಜೂ.26ರಂದು ಕೋ​ರ್ಟನಲ್ಲಿಯೇ ಈ  ಎಲ್ಲ ನಾಣ್ಯಗಳನ್ನು ದಶರಥ್‌ ಕಡೆಯವರೇ ಎಣಿಕೆ ಮಾಡಿ ನೀಡಬೇಕು  ಎಂದು ಆದೇಶ ನೀಡಿದೆ.

Viral Video : ಕನಸಿನ ಸ್ಕೂಟರ್ ಕೊಳ್ಳಲು ಕೇಜಿಗಟ್ಟಲೆ ಕಾಯಿನ್ ಕೊಟ್ಟ ವ್ಯಕ್ತಿ

ನಾಣ್ಯಗಳನ್ನು ಎಣಿಸಿ ಒಂದು ಸಾವಿರ ರೂಪಾಯಿಯ ಒಂದೊಂದು ಪ್ಯಾಕೇಟ್ ಮಾಡಿ ಅದನ್ನು ಜೂನ್ 26 ರಂದು ನಡೆಯುವ ವಿಚಾರಣೆ ವೇಳೆ ವಿಚ್ಚೇದಿತ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. 

ಕೇಂದ್ರ ಸರ್ಕಾರದಿಂದ 100 ರೂಪಾಯಿ ನಾಣ್ಯ, ಇಲ್ಲಿದೆ ವಿಶೇಷತೆ,ಬಿಡುಗಡೆ ದಿನಾಂಕ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!