Break Up : ಕುಂತ್ರೂ, ನಿಂತ್ರೂ ಕಾಡೋ ಮಾಜಿಯನ್ನು ಮತ್ತೆ ಯಾಕೆ ಸಂಪರ್ಕಿಸ್ಬಾರ್ದು ಅಂದ್ರೆ..

By Suvarna NewsFirst Published Jan 6, 2022, 12:33 PM IST
Highlights

ಪ್ರೀತಿಯಲ್ಲಿ ಬಿದ್ದಾಗಲೂ ನಿದ್ರೆ ಬರಲ್ಲ, ಬ್ರೇಕ್ ಅಪ್ ಆದಾಗ್ಲೂ ನಿದ್ರೆ ಬರಲ್ಲ. ಪದೇ ಪದೇ ಮಾಜಿ ಲವರ್ ಕಣ್ಣ ಮುಂದೆ ಬಂದು ನಿಲ್ತಾರೆ. ಹುಚ್ಚು ಹಿಡಿದವರಂತೆ ಆಡುವ ಭಗ್ನಪ್ರೇಮಿಗಳು ಒಮ್ಮೆ ಮಾಜಿಗೆ ಕಾಲ್ ಮಾಡೋಣ ಅಂತಾ ಫೋನ್ ಎತ್ತಿಕೊಳ್ತಾರೆ. ಆದ್ರೆ ಹೀಗೆ ಮಾಡುವ ಮೊದಲು ಇದನ್ನೋದಿ.
 

ಪ್ರೀತಿ (Love )ಸಿದ ವ್ಯಕ್ತಿಯಿಂದ ದೂರವಿರುವುದು ಕಷ್ಟ. ಅದ್ರಲ್ಲೂ ಶಾಶ್ವತವಾಗಿ ದೂರವಾಗುವುದು ಸವಾಲಿನ ಕೆಲಸ. ಬ್ರೇಕಪ್ (Break Up )ನಿಂದ ಹೊರಗೆ ಬರುವ ವೇಳೆ ಭಾವನೆ (Emotion)ಗಳ ವಿರುದ್ಧ ಹೋರಾಡಬೇಕಾಗುತ್ತದೆ. ಅಂತರ್ಯುದ್ಧ ನಡೆಸಿ ಗೆಲ್ಲಬೇಕಾಗುತ್ತದೆ. ಮಾಜಿಯನ್ನು ಮರೆಯಲು ನೀವು ಏನೇ ಕಸರತ್ತು ಮಾಡಿದ್ರೂ ದಿಢೀರ್ ಅಂತಾ ನೆನಪಾಗ್ತಾರೆ. ಸುಂದರ ಕ್ಷಣಗಳಲ್ಲಿ ಅವರ ಅನುಪಸ್ಥಿತಿ ಕಾಡುತ್ತದೆ. ಸ್ನೇಹಿತ (Friend)ರ ಜೊತೆ, ಸಂಬಂಧಿಕರ ಜೊತೆ ಎಷ್ಟು ಹೊತ್ತು ಕಳೆದರೂ, ಮಾಜಿ ಮರೆಯಲು ಹೊಸ ಹೊಸ ಮಾರ್ಗ ಅನುಸರಿಸಿದ್ರೂ ಅಷ್ಟು ಬೇಗ ಮಾಸಿ ಹೋಗುವಂತಹ ನೆನಪು ಅದಾಗಿರುವುದಿಲ್ಲ.

ಬೇಕಾದ ವ್ಯಕ್ತಿ ದೂರವಾದಾಗ ಆತನಿಗಾಗಿ ಮನಸ್ಸನ್ನು ಹಂಬಲಿಸುತ್ತದೆ. ಮತ್ತೆ ಭೇಟಿಯಾಗುವ, ಮಾತನಾಡುವ ಬಯಕೆ ಮೂಡುತ್ತದೆ. ಒಮ್ಮೆ ಮಾತನಾಡಿ ಬಿಡೋಣ ಎಂದು ಮನಸ್ಸು ಹಾತೊರೆಯುತ್ತದೆ. ಮಾಜಿ ಬಳಿ ಸದಾ ಓಡುವ ಮನಸ್ಸನ್ನು ನಿಯಂತ್ರಿಸುವ ಅಗತ್ಯ ಹೆಚ್ಚಿದೆ. ಮುಂದೇನಾಗಬಹುದು ಎಂಬುದನ್ನು ಊಹಿಸದೆ ಕೆಲವರು ಮತ್ತೆ ಮಾಜಿ ಬಳಿ ಬರ್ತಾರೆ. ಆದ್ರೆ ಒಮ್ಮೆ ಬ್ರೇಕಪ್ ಆದ್ಮೇಲೆ ಮತ್ತೆ ಎಂದೂ ಮಾಜಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಬಾರದು. ಅದು ಏಕೆ ಎಂಬುದನ್ನು ನಾವು ಇಂದು ಹೇಳ್ತೇವೆ. ಮಾಜಿಯನ್ನು ಮತ್ತೆ ಸಂಪರ್ಕಿಸಿದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಸ್ನೇಹಿತರಾಗಲು ಸಾಧ್ಯವಿಲ್ಲ: ಸ್ನೇಹದಿಂದ ಪ್ರೀತಿ ಚಿಗುರೊಡೆದಿರಬಹುದು. ಹಾಗಂತ ಬ್ರೇಕಪ್ ಆದ್ಮೇಲೆ ಮತ್ತೆ ಸ್ನೇಹ ಬೆಳೆಸುವುದು ಸೂಕ್ತವಲ್ಲ. ಮಾಜಿ ಎಂದೂ ಫ್ರೆಂಡ್ ಆಗಲು ಸಾಧ್ಯವಿಲ್ಲ. ಅವರ ಜೊತೆಯಿದ್ದಾಗ ನಿಮಗೆ ಹಿಂದಿನ ಘಟನೆಗಳು ನೆನಪಿಗೆ ಬರಬಹುದು. ಮಾಜಿ ನಿಮಗೆ ಮೋಸ ಮಾಡಿದ್ದರೆ ಅದರ ನೆನಪಾಗಬಹುದು. ಇದರಿಂದ ನೋವು ಹೆಚ್ಚಾಗುತ್ತದೆಯೇ ವಿನಃ ಕಡಿಮೆಯಾಗುವುದಿಲ್ಲ. ಹಾಗಾಗಿ ಪ್ರೀತಿ ಮುರಿದು ಬಿದ್ದ ಮೇಲೆ ಅವರ ಬಳಿ ಹೋಗಿ `ಆಗಿದ್ದು ಆಯಿತು, ಮುಂದೆ ಸ್ನೇಹಿತರಾಗಿರೋಣ’ ಎಂಬ ಮಾತು ಬೇಡ. ಅವರನ್ನು ಅವರ ಪಾಡಿಗೆ ಬಿಟ್ಟು, ನಿಮ್ಮ ಜೀವನದ ಮುಂದಿನ ಗುರಿ ಬಗ್ಗೆ ಗಮನ ಹರಿಸಿ.

 Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ 

ತಪ್ಪಿನ ಮೇಲೆ ತಪ್ಪು: ಬ್ರೇಕಪ್ ಗೆ ಏನು ಕಾರಣ ಎಂಬುದನ್ನು ವಿಶ್ಲೇಷಣೆ ಮಾಡುತ್ತ ಸಮಯ ವ್ಯರ್ಥ ಮಾಡುವುದು ಮೊದಲ ತಪ್ಪು. ಪ್ರೇಮಿ ಬಿಟ್ಟು ಹೋಗಲು ನೀವು ಕಾರಣವಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎನ್ನುತ್ತ ಮತ್ತೆ ಅವರ ಬಳಿ ಹೋಗುವುದು ಎರಡನೇ ತಪ್ಪು. ನಿಮ್ಮ ತಪ್ಪನ್ನು ಒಪ್ಪಿ ಅವರು ಮರಳಿ ಬರಲು ಸಾಧ್ಯವಿಲ್ಲ. ನಿಮ್ಮ ಮೇಲೆ ಪ್ರೀತಿಯಿದ್ದರೆ ಬಿಟ್ಟು ಹೋಗ್ತಿರಲಿಲ್ಲ ಎಂಬುದನ್ನು ಅರಿಯಿರಿ. ಹಾಗಾಗಿ ತಪ್ಪು ತಿದ್ದಿಕೊಳ್ಳಲು ಹೋಗಿ ಮತ್ತಷ್ಟು ತಪ್ಪು ಮಾಡಬೇಡಿ.

ಆತ್ಮಗೌರವಕ್ಕೆ ಧಕ್ಕೆ: ಮಾಜಿ ತಪ್ಪು ಮಾಡಿದ್ದು, ನೀವು ಅದನ್ನು ಸಹಿಸಿಕೊಂಡು ಮತ್ತೆ ಅವರ ಬಳಿ ಹೋದ್ರೆ ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗುತ್ತದೆ. ನನ್ನ ಪ್ರೀತಿ ಇವರನ್ನು ದುರ್ಬಲಗೊಳಿಸಿದೆ ಎಂಬ ಸತ್ಯ ಅವರ ಅರಿವಿಗೆ ಬರುತ್ತದೆ. ಎಷ್ಟು ತಪ್ಪು ಮಾಡಿದ್ರೂ ಮತ್ತೆ ಮತ್ತೆ ನನ್ನ ಬಳಿ ಇವರು ಬರ್ತಾರೆಂಬ ವಿಶ್ವಾಸ ಅವರಿಗೆ ಬರುತ್ತದೆ. ಇದು ನಿಮ್ಮ ಆತ್ಮಗೌರವವನ್ನು ತಗ್ಗಿಸುತ್ತದೆ. ಇದರ ಬದಲು ನಿಮ್ಮ ಗೌರವ ಬಲಪಡಿಸುವ ಕೆಲಸ ಮಾಡಿ. ನಕಾರಾತ್ಮಕ ಸಂಗತಿಗಳಿಂದ ದೂರವಿರಿ.

 ಈ ವರ್ಷ ಮದುವೆಯಾಗೋ ಯೋಚನೆ ಇದೆಯೇ? ಹಾಗಿದ್ರೆ ಇದನ್ನ ನೆನಪಿಡಿ

ಪಶ್ಚಾತಾಪ : ಮಾಜಿ ತಪ್ಪು ತಿದ್ದಿಕೊಂಡಿದ್ದಾರೆ ಅಥವಾ ತಿದ್ದಿಕೊಳ್ಳಲು ಒಂದು ಅವಕಾಶ ನೀಡೋಣ ಎಂದು ನೀವು ಅವರನ್ನು ಮತ್ತೆ ಸಂಪರ್ಕಿಸಿರುತ್ತೀರಿ. ಮತ್ತೆ ನಿಮ್ಮ ಬಳಿ ಬಂದ ಮಾಜಿ  ಹಳೆ ವಿಷ್ಯಗಳನ್ನು ಪುನರಾವರ್ತಿಸುತ್ತಾರೆ. ಬ್ರೇಕಪ್ ನಂತ್ರ ಮಾಜಿ ಸುಧಾರಿಸಿರಬಹುದು ಎಂದು ಅನೇಕರು ಭಾವಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಸುಧಾರಣೆ ಬದಲು ಮತ್ತಷ್ಟು ಹದಗೆಟ್ಟಿರುತ್ತಾರೆ. ಅವರನ್ನು ನಂಬಿ ಮತ್ತೆ ಸಂಬಂಧದಲ್ಲಿ ಬಿದ್ದರೆ ಕೊನೆಯಲ್ಲಿ ಪಶ್ಚಾತಾಪ ಪಡಬೇಕಾಗುತ್ತದೆ. 
 

click me!