Friendship ಉಳಿಸಿಕೊಳ್ಬೇಕಂದ್ರೆ ನೀವೇನ್ ಮಾಡ್ಬೇಕು?

By Suvarna News  |  First Published Jan 6, 2022, 9:52 AM IST

ಯಾವುದೇ  ಒಂದು ವಸ್ತು ಅಥವಾ ವ್ಯಕ್ತಿಯ ಪ್ರಾಮುಖ್ಯತೆಯು ಅದನ್ನು ಕಳೆದುಕೊಂಡಾಗ ಮಾತ್ರ ತಿಳಿಯುತ್ತದೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ. ಅದರಲ್ಲೂ ಗೆಳೆತನ ಬಹಳ ಅಮೂಲ್ಯವಾದ ಸಂಗತಿ. ಇದರ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವ ಅವಶ್ಯಕತೆಯಿದೆ.


ಗೆಳೆತನ (Friendship)-  ಎಂಥಾ ಸುಂದರ ಅನುಭವ! 

ನಮಗೆ ಎಷ್ಟೇ ಖುಷಿಯಾಗಲಿ, ಬೇಜಾರಾಗಲಿ, ಕಷ್ಟದಲ್ಲಿರಲಿ- ಅವಾಗೆಲ್ಲ ಸಮಾಧಾನ ಮಾಡುವುದಕ್ಕೆ ಯಾರೋ ಜೊತೆಗಿದ್ದಾರೆ ಎಂದರೆ ಬಹುಷಃ ಅವರು ಗೆಳೆಯರೇ ಆಗಿರುತ್ತಾರೆ. ಖುಷಿಯನ್ನು ಮಾತ್ರ ಹಂಚಿಕೊಳ್ಳದೆ, ಕಷ್ಟದಲ್ಲಿದ್ದಾಗ ನಾನು ಜೊತೆಯಲ್ಲಿ ಇದ್ದೇನೆ ಎಂಬ ಭರವಸೆ ನೀಡುವುದೇ ಗೆಳೆತನ.  'ಆಪತ್ತಿಗಾದವನೇ ನೆಂಟ' ಎಂಬ ಮಾತಿನಂತೆ ತೊಂದರೆಯಲ್ಲಿದ್ದಾಗ ಸಹಾಯ ಮಾಡುವ ಮೊದಲ ಕೈ ಸ್ನೇಹಿತರದ್ದಾಗಿರುತ್ತದೆ.  ಅದಕ್ಕೇ ಈಗಿನ ತಲೆಮಾರಿನ ಬಹುತೇಕರಿಗೆ ಗೆಳೆಯರೇ ನೆಂಟರು ಇಷ್ಟರು. 

Latest Videos

ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದು ಗೆಳೆಯರ ಬಳಗ ಇರುತ್ತದೆ ಅದು ದೊಡ್ಡದಿರಬಹುದು, ಸಣ್ಣದೂ ಇರಬಹುದು ಆದರೆ ಸ್ನೇಹಿತರು ಎಂದು ಹೇಳಿಕೊಳ್ಳುವುದಕ್ಕೆ ಯಾರದರೂ ಇದ್ದೇ ಇರುತ್ತಾರೆ. ಕೆಲವು ಸಂದರ್ಭಗಳಲ್ಲಿ ಮನೆಯವರಾಗಿರುತ್ತಾರೆ, ಕೆಲವು ಸಮಯದಲ್ಲಿ ಗುರುವಾಗಿರುತ್ತಾರೆ ಹೀಗೆ ಗೆಳೆತನ ಎಂಬ ಒಂದು ಪದಕ್ಕೆ ಹಲವು ಅರ್ಥಗಳಿರುತ್ತವೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆತನ ಗೆಳೆಯರ ಬಳಗವನ್ನು ನೋಡಿಯೇ ಹೇಳಬಹುದಂತೆ. 

ಹಾಗೆಯೇ ಅಂತಹ ಒಂದು ಗೆಳೆತನವನ್ನು ಉಳಿಸಿಕೊಳ್ಳುವುದು ಕೂಡ ಬಹಳ ಮುಖ್ಯ.  ಮೊದಲಿಗೆ ಒಂದು ಕಿರುನಗೆಯಿಂದ (smile)  ಪ್ರಾರಂಭವಾಗುವ ಗೆಳೆತನ ಬೆಳೆಯ ಬೆಳೆಯುತ್ತಾ ಹೆಚ್ಚು ದೃಢವಾಗುತ್ತದೆ  (strong).  ನಮ್ಮ ಪ್ರತಿ ಸುಖ-ದುಃಖದಲ್ಲಿ ಅವರ ಪಾಲು ಇರುತ್ತದೆ. ಇಷ್ಟೆಲ್ಲಾ ಇರುವಾಗ ಗೆಳೆತನವನ್ನು ನಿಭಾಯಿಸುವುದು ಕೂಡ ಕೆಲವೊಮ್ಮೆ ಸವಾಲಾಗಿರುತ್ತದೆ (challenge).  ಒಂದು ಸಣ್ಣ ಮನಸ್ತಾಪ ಅಥವಾ ಜಗಳದಿಂದ ಆಪ್ತ ಸ್ನೇಹಿತರು ಬೇರೆ ಬೇರೆಯಾಗಿರುವ ಹಲವಾರು ಉದಾಹರಣೆಗಳಿವೆ.  ಆದರೆ, ಇಂಥ ಅಪರೂಪದ ಬಂಧಗಳನ್ನು ಹಾಗೆ ಸಾರಾಸಗಟಾಗಿ ಕಡಿದುಕೊಳ್ಳುವುದು ಪೆದ್ದುತನವಷ್ಟೇ. 

ಮಾತನಾಡಿ
ಗೆಳೆತನದಲ್ಲಿ ಯಾವುದೋ ಸಣ್ಣ ಜಗಳಕ್ಕೆಲ್ಲ ಮಾತು ಬಿಡವುದು ಬಹಳ ಬಾಲಿಶ. ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಒಬ್ಬರಿಗೊಬ್ಬರು ಹೇಳಿಕೊಂಡು ಚರ್ಚಿಸಿ ಅದನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ. ಇಲ್ಲವಾದರೆ ಅದೇ ಮುಂದೆ ದೊಡ್ಡ ವಿಷಯವಾಗಬಹುದು. ನೆನಪಿಡಿ, ಎಷ್ಟು ಜನರನ್ನು ಪರಿಚಯ ಮಾಡಿಕೊಳ್ಳುತ್ತೀರಿ ಅನ್ನುವುದಕ್ಕಿಂತ ಅದರಲ್ಲಿ ಎಷ್ಟು ಜನರನ್ನು ಹೆಚ್ಚು ದಿನಗಳ ಕಾಲ ಉಳಿಸಿಕೊಳ್ಳುತ್ತೀರಿ ಎನ್ನುವುದೇ ಮುಖ್ಯ.

ಎಲ್ಲರ ಕಣ್ಣಂಚನ್ನು ತೇವಗೊಳಿಸುತ್ತಿದೆ ಅಪ್ಪನ ನೆನಪಿಗಾಗಿ ಮದುವೆ ದಿನ ಮಗಳು ಮಾಡಿದ ಕಾರ್ಯ

ಈಗೋ
ಬಹುತೇಕ ಸಂಬಂಧಗಳನ್ನು ಹಾಳು ಮಾಡುವುದು ಅತಿಯಾದ ಸ್ವಾಭಿಮಾನ (self respect) ಹಾಗೂ ಅಹಂಕಾರ (ego). ಹಲವು ಬಾರಿ ಗೆಳೆತನ ತೊರೆದಿದ್ದಕ್ಕೆ ಸ್ವಾಭಿಮಾನ ಕಾರಣ ನೀಡಲಾಗುತ್ತದೆ. ಆದರೆ ಅದು ಸ್ವಾಭಿಮಾನಕ್ಕಿಂತ ಅಹಂಕಾರವೇ ಆಗಿರುತ್ತದೆ. ಈಗೋ ಕಾರಣದಿಂದ ಒಬ್ಬರ ಮುಖ ಇನ್ನೊಬ್ಬರು ನೋಡದೇ ಇರುವ ಅಷ್ಟರ ಮಟ್ಟಿಗೆ  ದ್ವೇಷ ಬೆಳೆಸಿಕೊಳ್ಳುತ್ತಾರೆ. ದಿನದಿಂದ ದಿನಕ್ಕೆ ಈ ಅಂತರ (distance) ಹೆಚ್ಚುತ್ತಲೇ ಹೋಗುತ್ತದೆ. ಅದರಿಂದಾಗಿ ಇಬ್ಬರೂ ಕೂಡ ನೋವನ್ನು ಅನುಭವಿಸುತ್ತಾರೆ ಹೊರತು ಸಂತೋಷ ದಕ್ಕುವುದಿಲ್ಲ. ಸಂತೋಷವಿರುವುದು ಜೊತೆಗಿರುವುದರಲ್ಲಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. 

Unwanted pregnancy ತಪ್ಪಿಸಲು ಆಯುರ್ವೇದ ವಿಧಾನಗಳು..

ನಂಬಿಕೆ ಕಳೆದುಕೊಳ್ಳಬೇಡಿ
ಕೇವಲ ಗೆಳೆತನ ಮಾತ್ರವಲ್ಲ, ಯಾವುದೇ ಸಂಬಂಧವಾದರೂ ಅಷ್ಟೇ, ಜೋಪಾನ ಮಾಡಿಕೊಳ್ಳಬೇಕು. ಒಮ್ಮೆ ಬಿರುಕು ಮೂಡಿದರೆ ಅದು  ಸರಿ ಹೋಗುವುದು ಬಹಳ ಕಷ್ಟ. ಯಾರೇ ನಮ್ಮ ಮೇಲೆ ನಂಬಿಕೆ (trust) ಇಟ್ಟಿದ್ದಾರೆ ಎಂದರೆ ಅದನ್ನು ಉಳಿಸಿಕೊಳ್ಳುವ ದೊಡ್ಡ ಜವಾಬ್ದಾರಿ ನಮ್ಮದು. ಅದರಲ್ಲಿ ಎಂದಿಗೂ ಸೊಲಬಾರದು. ಸಂಬಂಧ ಗಟ್ಟಿಯಾಗಿರಬೇಕು ಎಂದರೆ ಯಾವಾಗಲೂ ಜೊತೆಯಲ್ಲಿಯೇ ಇರಬೇಕಾದ ಅವಶ್ಯಕತೆಯಿಲ್ಲ, ದೂರದಲ್ಲಿದ್ದರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಗುಣ ಇಬ್ಬರಲ್ಲೂ ಇರಬೇಕು. ಅದರ ಜೊತೆಗೆ ನಂಬಿಕೆ ಗಟ್ಟಿ ಆಗಿರಬೇಕು. ಒಬ್ಬರ ಗುಟ್ಟುಗಳನ್ನು ಮತ್ತೊಬ್ಬರೆದುರು ಬಿಟ್ಟು ಕೊಡಬಾರದು. ಹಾಗಿದ್ದಾಗ ಮಾತ್ರ ಬದುಕು ಸುಂದರವೆನಿಸುತ್ತದೆ. ಬದುಕಿನಲ್ಲಿ ಜನಬಲವಿದ್ದರೆ ಅದರಷ್ಟು ಮಾನಸಿಕ ಶಕ್ತಿ ನೀಡುವುದು ಮತ್ತೊಂದಿಲ್ಲ. ಗೆಳೆತನವನ್ನು ಜತನ ಮಾಡಿ.

click me!