Relationship Tips : ದಾಂಪತ್ಯದ ಬಿರುಕಿಗೆ ಕಾರಣವಾಗುತ್ತೆ ಹಣಕಾಸಿನ ವಿಷಯ

Suvarna News   | Asianet News
Published : Feb 26, 2022, 03:02 PM IST
Relationship Tips : ದಾಂಪತ್ಯದ ಬಿರುಕಿಗೆ ಕಾರಣವಾಗುತ್ತೆ ಹಣಕಾಸಿನ ವಿಷಯ

ಸಾರಾಂಶ

ಹಣಕಾಸಿನ ವ್ಯವಹಾರ ಎಂದರೆ ಯಾವಾಗ್ಲೂ ಎಚ್ಚರಿಕೆ ವಹಿಸ್ಬೇಕು. ಸ್ನೇಹಿತರ ಮಧ್ಯೆ ಮಾತ್ರವಲ್ಲ ದಂಪತಿ ಮಧ್ಯೆಯೂ ಹಣಕಾಸಿನ ವಿಷ್ಯ ಬಿರುಕಿಗೆ ಕಾರಣವಾಗುತ್ತದೆ. ಹಣದ ವ್ಯವಹಾರ ಬಂದಾಗ ಸಂಗಾತಿಗಳ ಮಧ್ಯೆ  ಯಾವುದೇ ಮುಚ್ಚುಮರೆ ಇರಬಾರದು.   

ದಾಂಪತ್ಯ (Marriage )ದಲ್ಲಿ ಪ್ರೀತಿ (Love), ವಿರಸ, ಕೋಪ, ಜಗಳ, ಸರಸ ಸಾಮಾನ್ಯ. ಒಟ್ಟಿಗೆ ವಾಸಿಸುವಾಗ ದಂಪತಿ ಅಥವಾ ಪ್ರೇಮಿಗಳ ಮಧ್ಯೆ ಆಗಾಗ್ಗೆ ಕೆಲವು ವಿಷ್ಯಗಳ ಬಗ್ಗೆ ವಿವಾದವಾಗ್ತಿರುತ್ತದೆ. ಸಣ್ಣಪುಟ್ಟ ಜಗಳಗಳು ಪ್ರೀತಿಯನ್ನು ಹೆಚ್ಚಿಸುತ್ತದೆ. ಆದರೆ ಕೆಲವೊಮ್ಮೆ ವಾದಗಳು ದೊಡ್ಡ ಜಗಳಗಳಾಗಿ ಬದಲಾಗುತ್ತವೆ. ಜಗಳದ ಕಾರಣವನ್ನು ತಿಳಿದುಕೊಂಡು ಈ ಜಗಳಗಳನ್ನು ಸಮಯಕ್ಕೆ ಪರಿಹರಿಸದಿದ್ದರೆ, ನಂತರ ಬ್ರೇಕಪ್ (Breakup) ಆಗಬಹುದು. ಅದಕ್ಕಾಗಿಯೇ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವಿನ ಜಗಳಕ್ಕೆ ನಿಜವಾದ ಕಾರಣ ಏನು ಎಂದು ನೀವು ತಿಳಿದುಕೊಳ್ಳಬೇಕು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದಂಪತಿ ನಡುವಿನ ಜಗಳಕ್ಕೆ ಹಣ ಕಾರಣವಾಗಬಾರದು. ಹಣದ ಕಾರಣದಿಂದ ಜಗಳಗಳು ಸಂಬಂಧದಲ್ಲಿ ಕಹಿ ತರಬಹುದು. ದಂಪತಿ  ನಡುವೆ ಹಣದ ವಿಚಾರದಲ್ಲಿ ಜಗಳಕ್ಕೆ ಕಾರಣಗಳೇನು ಎಂಬುದನ್ನು ತಿಳಿದು, ಸಕಾಲದಲ್ಲಿ ಪರಿಹಾರ ಕಂಡುಕೊಳ್ಳಬಹುದು. ಇಂದು ದಂಪತಿ ಮಧ್ಯೆ ಹಣದ ವಿಷ್ಯದಲ್ಲಿ ಜಗಳ ನಡೆಯಲು ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.

ಕದ್ದು-ಮುಚ್ಚಿ ವ್ಯವಹಾರ : ಗಂಡ ಮತ್ತು ಹೆಂಡತಿ ಇಬ್ಬರೂ ಒಟ್ಟಿಗೆ ಸಂಪಾದಿಸುತ್ತಾರೆಂದುಕೊಳ್ಳಿ. ಅದ್ರಲ್ಲಿ ಒಬ್ಬರು ಕುಟುಂಬ ನಿರ್ವಹಣೆಗೆ ಹಣ ಖರ್ಚು ಮಾಡ್ತಾರೆ. ಇನ್ನೊಬ್ಬರ ಹಣವನ್ನು ಉಳಿತಾಯದ ದೃಷ್ಟಿಯಲ್ಲಿ ಇಟ್ಟಿರುತ್ತಾರೆ. ಆದ್ರೆ ಉಳಿತಾಯದ ಹಣವನ್ನು ಸಂಗಾತಿಗೆ ತಿಳಿಸದೆ ಬೇರೆ ಕಾರಣಗಳಿಗೆ ಖರ್ಚು ಮಾಡಿದ್ರೆ ಅಥವಾ ಬೇರೆಯವರಿಗೆ ನೀಡಿದರೆ ಅದು ಸಂಗಾತಿ ನೋವಿಗೆ ಕಾರಣವಾಗುತ್ತದೆ. ಇಬ್ಬರ ಮಧ್ಯೆ ಇದು ಜಗಳಕ್ಕೆ ಕಾರಣವಾಗುತ್ತದೆ. ಹಾಗಾಗಿ ನೀವು ಯಾರಿಗೇ,ಯಾವುದೇ ಕಾರಣಕ್ಕೆ ಹಣ ಖರ್ಚು ಮಾಡುವುದಿದ್ದರೂ ಸಂಗಾತಿ ಜೊತೆ ಮಾತನಾಡಿ. ಸಂಗಾತಿಗೆ ಹೇಳಿಯೇ ಹಣ ನೀಡಿ. ಒಂದು ವೇಳೆ ಪತಿ ದುಡಿಯುತ್ತಿದ್ದು,ಪತ್ನಿ ಮನೆಯಲ್ಲಿದ್ದು,ಪತಿ ಹಣವನ್ನು ಪತ್ನಿ ಬೇರೆಯವರಿಗೆ ನೀಡುವುದಾದ್ರೆ ಅಗತ್ಯವಾಗಿ ಈ ವಿಷ್ಯವನ್ನು ಪತಿಗೆ ಹೇಳಬೇಕು. ಇಲ್ಲವಾದ್ರೆ ದೊಡ್ಡ ಸಮಸ್ಯೆ ಎದುರಾಗುತ್ತದೆ.   

ಹೆಚ್ಚಾಗುವ ಖರ್ಚು ವಿವಾದಕ್ಕೆ ಕಾರಣವಾಗ್ಬಹುದು : ದಂಪತಿಗಳಿಬ್ಬರೂ ಗಳಿಸುತ್ತಿದ್ದರೂ ಅಥವಾ ಒಬ್ಬರೇ ಗಳಿಸುತ್ತಿದ್ದರೂ ಖರ್ಚಿನ ಬಗ್ಗೆ ಇಬ್ಬರೂ ಕುಳಿತು ನಿರ್ಧರಿಸಬೇಕು. ಕೆಲವೊಮ್ಮೆ ಇಬ್ಬರಲ್ಲಿ ಒಬ್ಬರು ಹೆಚ್ಚು ಖರ್ಚು ಮಾಡ್ತಾರೆ. ಐಷಾರಾಮಿ ವಸ್ತುಗಳು,ಉಡುಗೊರೆ,ಮೋಜಿಗಾಗಿ ಅವರ ಖರ್ಚು ಹೆಚ್ಚಿರುತ್ತದೆ. ಇನ್ನೊಬ್ಬರು ಕಡಿಮೆ ಖರ್ಚು ಮಾಡ್ತಾರೆ. ಬರುವ ಸಂಬಳದಲ್ಲಿ ಮನೆ ಜೊತೆ ಈ ಖರ್ಚು ಹೆಚ್ಚಿನ ಹೊಣೆಯಾಗುತ್ತದೆ. ಆಗ ಜಗಳಗಳು ಹೆಚ್ಚಾಗಬಹುದು. ಮೊದಲೇ ಹೇಳಿದಂತೆ ವೈಯಕ್ತಿಕ ಖರ್ಚು ಮಾಡುವ ಮೊದಲು ಸಂಗಾತಿಗೆ ಮಾಹಿತಿ ನೀಡಬೇಕು.  

Sammy Griner: ಈ ವೈರಲ್ ಮೀಮ್ ಬಾಯ್ ಯಾರು ಗೊತ್ತೇ?

ಪಾಲುದಾರರ ಮೇಲೆ ಜವಾಬ್ದಾರಿಯ ಹೊರೆ : ಇತ್ತೀಚಿನ ದಿನಗಳಲ್ಲಿ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದ್ರಿಂದ ಮನೆ ನಿರ್ವಹಣೆ ಸುಲಭವಲ್ಲ. ಅದ್ರಲ್ಲೂ ಮಕ್ಕಳನ್ನು ಪಡೆದ ಮೇಲೆ ಖರ್ಚು ಹೆಚ್ಚಾಗುತ್ತದೆ. ಆಗ ಇಬ್ಬರೂ ಸಂಪಾದನೆ ಮಾಡುವುದು ಮುಖ್ಯವಾಗುತ್ತದೆ. ಆದರೆ ಹಣಕಾಸಿನ ಹೊಣೆಗಾರಿಕೆ ಹೊರೆ ಒಬ್ಬರ ಮೇಲೆ ಬಿದ್ದಾಗ, ಅವರಿಗೆ ಸಹಜವಾಗಿಯೇ ಕೋಪ ಬರುತ್ತದೆ. ಇನ್ನೊಬ್ಬರು ಖರ್ಚಿಗೆ ಹಣ ಕೇಳಿದಾಗ ಜಗಳವಾಗಬಹುದು. ಪ್ರತಿಯೊಂದು ಖರ್ಚಿಗೆ ಲೆಕ್ಕ ಕೇಳಬಹುದು. ಆಗ ಪಾಲುದಾರರ ಮಧ್ಯೆ ಬಿರುಕು ಕಾಣಿಸಿಕೊಳ್ಳುತ್ತದೆ.ಈ ಸಂದರ್ಭದಲ್ಲಿ ಸಾಧ್ಯವಾದ್ರೆ ಇಬ್ಬರೂ ಕೆಲಸ ಮಾಡುವುದು ಒಳ್ಳೆಯದು. ಇಲ್ಲವೆಂದಾದ್ರೆ ಅವರ ಪರಿಸ್ಥಿತಿ ಅರಿಯಬೇಕು. ಅವರು ಖರ್ಚಿನ ಪಟ್ಟಿ ಕೇಳಿದಾಗ ಅದನ್ನು ನೀಡಬೇಕು. ಖರ್ಚು ಕಡಿಮೆ ಮಾಡಲು ಪ್ರಯತ್ನಿಸಬೇಕು.    

SOCIAL ANXIETY: ಹೊಸಬರ ಭೇಟಿಯಾಗಲು ಆತಂಕ ಬೇಡ, ಸಿದ್ಧತೆ ಹೀಗಿರಲಿ

ಸಾಲದ ವಿಷ್ಯಕ್ಕೆ ಮುನಿಸು : ಆರ್ಥಿಕ ಸಮಸ್ಯೆ ಎದುರಾದಾಗ ಜನರು ಸಾಲ ಪಡೆಯುತ್ತಾರೆ. ಒಬ್ಬರು ಪಡೆದ ಸಾಲದ ಬಗ್ಗೆ ಇನ್ನೊಬ್ಬರಿಗೆ ಮಾಹಿತಿ ಇರುವುದಿಲ್ಲ. ಸಾಲ ನೀಡಿದವರು ಮನೆಗೆ ಬಂದಾಗ ವಿಷ್ಯ ಗೊತ್ತಾಗುತ್ತದೆ. ಆಗ ಇಬ್ಬರ ಮಧ್ಯೆ ಜಗಳವಾಗುತ್ತದೆ. ಸಂಗಾತಿಗಳಲ್ಲಿ ಒಬ್ಬರಿಗೆ ಸಾಲ ಮಾಡುವ ಅಭ್ಯಾಸವಿದ್ದರೆ, ಇನ್ನೊಬ್ಬರು ಕುಟುಂಬ ಮತ್ತು ಸಮಾಜದ ಮುಂದೆ ಮುಜುಗರವನ್ನು ಎದುರಿಸಬೇಕಾಗಬಹುದು. ಸಾಲ ಅನೇಕರ ಕುಟುಂಬಗಳನ್ನು ಮುರಿದಿದೆ ಎಂಬುದು ನೆನಪಿರಲಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು