
ಮನೆ (Home)ಗೆ ಮಗು (Child) ಬರ್ತಿದೆ ಅಂದ್ರೆ ಅದ್ರ ಖುಷಿ (Enjoy) ಹೇಳಲು ಸಾಧ್ಯವಿಲ್ಲ. ಮನೆಯಲ್ಲಿ ಮಗುವಿನ ಗಜ್ಜೆ ಸಪ್ಪಳ,ಅದರ ನಗು (Laugh)ಎಲ್ಲ ದುಃಖ,ನೋವನ್ನು ಮರೆಸುತ್ತದೆ. ಚಿಕ್ಕ ಮಗುವಿನ ಆಗಮನದೊಂದಿಗೆ ಆರೈಕೆಯ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಮಗುವಿನ ಆಗಮನವಾಗ್ತಿದೆ ಎಂಬ ಸುದ್ದಿ ಗೊತ್ತಾಗ್ತಿದ್ದಂತೆ ಪೋಷಕರು ತಮ್ಮ ಮಗುವಿಗೆ ಯಾವುದೇ ತೊಂದರೆಯಾಗದಂತೆ ಅವರಿಗೆ ಬೇಕಾದ ವಸ್ತುಗಳ ಪಟ್ಟಿಯನ್ನು ಮಾಡಲು ಪ್ರಾರಂಭಿಸುತ್ತಾರೆ. ಮಗುವಿನ ವಸ್ತುಗಳನ್ನು ಖರೀದಿ ಮಾಡುವಾಗ ಹೆಚ್ಚು ಕಾಳಜಿ ವಹಿಸಲಾಗುತ್ತದೆ. ಮಕ್ಕಳಿಗೆ ಅಗತ್ಯವಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದ್ದರಿಂದ ಪೋಷಕರು ಯಾವ ವಸ್ತುಗಳನ್ನು ಖರೀದಿ ಮಾಡ್ಬೇಕೆನ್ನುವ ಮಾಹಿತಿ ಇಲ್ಲಿದೆ.
ಟವೆಲ್ : ಮಗು ಜನಿಸುತ್ತಿದ್ದಂತೆ ಹೊರಗಿನ ತಾಪಮಾನಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹೆರಿಗೆ ನಂತ್ರ ಮಗುವನ್ನು ಟವೆಲ್ ನಲ್ಲಿ ಸುತ್ತಲಾಗುತ್ತದೆ. ಹಾಗಾಗಿ ಹೆರಿಗೆ ತಕ್ಷಣ ಆಸ್ಪತ್ರೆಯಲ್ಲಿ ಟವೆಲ್ ಕೇಳ್ತಾರೆ. ನವಜಾತ ಶಿಶುವನ್ನು ಕೆಲ ತಿಂಗಳುಗಳ ಕಾಲ ಟವೆಲ್ ನಲ್ಲಿ ಚೆನ್ನಾಗಿ ಸುತ್ತಿಡಬೇಕು. ಇದು ಮಗುವಿನ ದೇಹಕ್ಕೆ ಉಷ್ಣತೆಯನ್ನು ನೀಡುತ್ತದೆ. ಇದ್ರಿಂದ ಮಗು ಚೆನ್ನಾಗಿ ನಿದ್ರೆ ಮಾಡಲು ನೆರವಾಗುತ್ತದೆ. ಹಾಗಾಗಿ ಮಗು ಜನಿಸುವ ಮೊದಲು ನಿಮ್ಮ ಖರೀದಿ ಪಟ್ಟಿಯಲ್ಲಿ ಟವೆಲ್ ಇರಲಿ.
WEIGHT LOSS DIET: ಸಣ್ಣಗಾಗ್ಬೇಕಾ ? ತಟ್ಟೆಯಲ್ಲಿ ನೆಗೆಟಿವ್ ಕ್ಯಾಲೊರಿ ಫುಡ್ ಇರ್ಲಿ
ತೊಟ್ಟಿಲು : ಮಗುವಿಗೆ ತೊಟ್ಟಿಲು ಬಹಳ ಮುಖ್ಯ. ತೊಟ್ಟಿಲಲ್ಲಿ ಮಲಗುವುದರಿಂದ ಮಗು ಬೀಳುವ ಭಯವಿರುವುದಿಲ್ಲ. ಹಾಗೆಯೇ ಮಗುವಿಗೆ ಮಲಗಲು ತೊಟ್ಟಿಲು ತುಂಬಾ ಆರಾಮದಾಯಕವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತೊಟ್ಟಿಲು ಬಂದಿವೆ. ಅದ್ರಲ್ಲಿ ನಿಮಗಿಷ್ಟವಾದ ತೊಟ್ಟಿಲನ್ನು ನೀವು ಖರೀದಿ ಮಾಡಿ.
ಹಾಲಿನ ಬಾಟಲ್ : ಶಿಶುಗಳಿಗೆ ಹಾಲು ಕುಡಿಸುವುದು ಸುಲಭವಲ್ಲ. ಆರು ತಿಂಗಳ ಕಾಲ ತಾಯಿಯ ಹಾಲನ್ನು ನೀಡುವುದು ಅತ್ಯಗತ್ಯ. ಆದರೆ ಉದ್ಯೋಗಸ್ಥ ಮಹಿಳೆಯರು ಆರು ತಿಂಗಳುಗಳ ಕಾಲ ಎದೆ ಹಾಲನ್ನು ನೀಡಲು ಸಾಧ್ಯವಿಲ್ಲ. 6 ತಿಂಗಳ ಮಗುವಿಗೆ ತಾಯಿಯ ಹಾಲನ್ನು ಹೊರತುಪಡಿಸಿ ಹಾಲಿನ ಪುಡಿ ನೀಡಬಹುದು. ಆದ್ರೆ ಲೋಟದಲ್ಲಿ ಮಕ್ಕಳಿಗೆ ಹಾಲನ್ನು ನೀಡಲು ಕಷ್ಟ. ಹಾಗಾಗಿ ಹಾಲಿನ ಬಾಟಲಿಯಲ್ಲಿ ಸುಲಭವಾಗಿ ಹಾಲು ಕುಡಿಸಬಹುದು. ಹಾಗಾಗಿ ಹಾಲಿನ ಬಾಟಲಿಯನ್ನು ಖರೀದಿಸಿ.
ಬೇಬಿ ಬಾತ್ ಟಬ್ : ಮಗುವಿಗೆ ಸ್ನಾನ ಮಾಡಿಸುವುದು ಕಷ್ಟದ ಕೆಲಸ. ಆದ್ದರಿಂದ ಮಗುವಿಗಾಗಿ ಬಾತ್ ಟಬ್ ಬಳಸಬಹುದು. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಬಾತ್ ಟಬ್ ಲಭ್ಯವಿವೆ. ನಿಮ್ಮ ಬಜೆಟ್ ಮತ್ತು ಆದ್ಯತೆಗೆ ಅನುಗುಣವಾಗಿ ನೀವು ಯಾವುದೇ ಬೇಬಿ ಬಾತ್ ಟಬ್ ಅನ್ನು ಆಯ್ಕೆ ಮಾಡಬಹುದು.
Sweating Problem: ಮುಖ, ತಲೆ ವಿಪರೀತ ಬೆವರುತ್ತಿದ್ಯಾ ? ಗಾಬರಿ ಬೇಡ, ಇಲ್ಲಿದೆ ಪರಿಹಾರ
ಬೇಬಿ ವೈಪ್ಸ್ : ನವಜಾತ ಶಿಶುಗಳ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅವರ ದೇಹಗಳನ್ನು ಒರೆಸಲು ಒರಟಾದ ಬಟ್ಟೆ ಬಳಸಬಾರದು. ಮೃದುವಾದ ಬಟ್ಟೆ ಬಳಸಬೇಕು. ಚರ್ಮದ ದದ್ದುಗಳ ಸಮಸ್ಯೆ ಕಾಡಬಾರದು ಎಂದಾದ್ರೆ ಬೇಬಿ ವೈಪ್ಸ್ ಬಳಸಿ. ಒಳ್ಳೆಯ ಬ್ರಾಂಡ್ ನೋಡಿ ಅದನ್ನು ಖರೀದಿ ಮಾಡುವುದು ಬಹಳ ಮುಖ್ಯ.
ಡೈಪರ್ : ನವಜಾತ ಶಿಶುವಿಗೆ ಡೈಪರ್ ಬಹಳ ಮುಖ್ಯ. ಮಕ್ಕಳು ಕಂಡ ಕಂಡಲ್ಲಿ ಶೌಚ ಮಾಡುವುದ್ರಿಂದ ಡೈಪರ್ ಬಳಸುವುದು ಒಳ್ಳೆಯದು. ಆಗಾಗ ಡೈಬರ್ ಬದಲಿಸುತ್ತಿರಬೇಕಾಗುತ್ತದೆ. ನವಜಾತ ಶಿಶುಗಳಿಗೆ ಹೆಚ್ಚಿನ ಡೈಪರ್ ಅಗತ್ಯವಿದೆ. ಹಾಗಾಗಿ ಮಗು ಜನಿಸುವ ಮೊದಲೇ ಆದಷ್ಟು ಡೈಪರ್ ಖರೀದಿ ಮಾಡಿ.
ಮಸಾಜ್ ಎಣ್ಣೆ : ನವಜಾತ ಶಿಶುವಿಗೆ ಮಸಾಜ್ ಅಗತ್ಯವಿದೆ. ಮಸಾಜ್ ಮಾಡಲು ಎಣ್ಣೆಯನ್ನು ಬಳಸಲಾಗುತ್ತದೆ. ಆದ್ರೆ ಎಲ್ಲ ರೀತಿಯ ಎಣ್ಣೆ ಬಳಕೆ ಯೋಗ್ಯವಲ್ಲ. ಮಗುವಿನ ಚರ್ಮದ ಬಗ್ಗೆ ಕಾಳಜಿ ವಹಿಸಬೇಕು. ಹಾಗಾಗಿ ವೈದ್ಯರನ್ನು ಕೇಳಿ ಮಸಾಜ್ ಎಣ್ಣೆಯನ್ನು ಬಳಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.