ಅಮ್ಮ ಮಗ, ಅಪ್ಪ ಮಗಳ ನಡುವೆ ಹೆಚ್ಚುತ್ತಿರುವ ಅನೈತಿಕ ಸಂಬಂಧ, ಯಾಕೆ ಹೀಗಾಗುತ್ತೆ?

By Suvarna News  |  First Published Apr 22, 2022, 12:41 PM IST

ತಾನು ಹೆತ್ತ ಮಗನ ಜೊತೆಗೆ ಅಮ್ಮನಿಗೆ ಲೈಂಗಿಕ ಸಂಬಂಧ, ಮಗಳ ಜೊತೆ ಅನೈತಿಕ ಸಂಬಂಧ ಹೊಂದುವ ಅಪ್ಪ.. ವಾತ್ಸಲ್ಯದಿಂದ, ಬೇರೆ ಬಗೆಯಿಂದ ಕೂಡಿರಬೇಕಾದ ಸಂಬಂಧಗಳಲ್ಲಿ ಹೀಗ್ಯಾಕಾಗುತ್ತೆ?


ಕೆಲವು ಸಮಯದ ಹಿಂದಿನ ಘಟನೆ. ಒಬ್ಬ ತಾಯಿ ತನ್ನ ವಯಸ್ಸಿಗೆ ಬಂದ ಮಗನ ಜೊತೆಗೆ ಲೈಂಗಿಕ ಸಂಬಂಧ (Sexual Relationship) ಹೊಂದುತ್ತಾಳೆ. ಈ ಸಂಬಂಧ ತಾನು ಮಗು (Baby) ಪಡೆಯೋದಕ್ಕೆ ಅಂತ ಕಾರಣ ಕೊಡ್ತಾಳೆ. ನನ್ನ ಎರಡನೇ ಗಂಡನ ಜೊತೆಗಿನ ಸಂಬಂಧದಲ್ಲಿ ಮಕ್ಕಳಾಗಲಿಲ್ಲ. ಅವನಿಗೆ ಮಕ್ಕಳ ಮೇಲೆ ತುಂಬ ಪ್ರೀತಿ. ಮಕ್ಕಳಾಗದ ಕಾರಣಕ್ಕೆ ಅವನು ನನ್ನನ್ನು ನೆಗ್ಲೆಕ್ಟ್ (Neglect)ಮಾಡುತ್ತಿದ್ದಾನೆ. ಅವನಿಗೆ ಮಗು ನೀಡುವ ಅರ್ಹತೆ ಇಲ್ಲ ಅಂತ ಗೊತ್ತು. ಬೇರೆ ಗಂಡಸಿನ ಜೊತೆಗೆ ಸೆಕ್ಸ್ (Sex) ಮಾಡಿ ಮಗು ಪಡೆಯೋದು ಬಹಳ ಡೇಂಜರ್. ಅದಕ್ಕೋಸ್ಕರ ನಾನೇ ಹೆತ್ತ ಮಗನ ಜೊತೆಗೇ ಲೈಂಗಿಕ ಸಂಬಂಧ ಹೊಂದಿ ಈಗ ಗರ್ಭಿಣಿಯಾಗಿದ್ದೇನೆ ಎನ್ನುತ್ತಾಳೆ ಆ ಮಹಿಳೆ.

ಇನ್ನೊಂದು ಘಟನೆ ನಾಲ್ಕೈದು ವರ್ಷ ಹಿಂದಿನದು. ಜಿಂಬಾಬ್ವೆಯ (Zimbabwe) 40 ವರ್ಷದ ವಿಧವೆ ಬೆಟ್ಟಿ ಎಂಬಾಕೆ ತನ್ನ 23 ವರ್ಷದ ಮಗನ ಜೊತೆಗೇ ಲವ್ವಲ್ಲಿ ಬಿದ್ದಳು. ಇಬ್ಬರಲ್ಲೂ ತಾಯಿ ಮಗನ ಪ್ರೀತಿಯನ್ನು ಮೀರಿದ ಲೈಂಗಿಕ ಆಕರ್ಷಣೆ (Sexual attraction) ಹುಟ್ಟಿಕೊಂಡಿತು. ಇಬ್ಬರ ಮಧ್ಯೆ ಸೆಕ್ಸ್ ಬೆಳೆದು ಬೆಟ್ಟಿ ಈಗ ಆರು ತಿಂಗಳ ಗರ್ಭಿಣಿ (Pregnent). ಮಗನಿಗೆ ಇಪ್ಪತ್ತು ವರ್ಷಗಳಾದಾಗಲೇ ಈ ಇಬ್ಬರ ನಡುವೆ ಆಕರ್ಷಣೆ ಹುಟ್ಟಿಕೊಂಡಿತಂತೆ. ಗಂಡ ಸತ್ತ ಬಳಿಕ ಮಗನನ್ನು ಬಹಳ ಕಷ್ಟಪಟ್ಟು ಸಾಕಿ, ಓದಿಸಿದ್ದೆ. ಅವನೀಗ ಸಂಪಾದಿಸುವ ಹಣದಲ್ಲಿ ಇನ್ನೊಬ್ಬ ಹೆಣ್ಣು ಮಜಾ ಮಾಡೋದು ನನಗಿಷ್ಟ ಇಲ್ಲ. ನನ್ನ ಮಗ ಬೇರೆ ಯಾರದೋ ಪಾಲಾಗಬಾರದು. ಕೊನೇವರೆಗೂ ನಾವಿಬ್ಬರೂ ಜೊತೆಯಾಗಿರಬೇಕು. ಅದಕ್ಕಾಗಿ ಮದುವೆ ಆಗುತ್ತಿದ್ದೇವೆ ಎಂದಳು ಆ ಮಹಿಳೆ.

Tap to resize

Latest Videos

ಈ ಥರ ಅಪ್ಪ ಮಗಳ ನಡುವೆಯೂ ಲೈಂಗಿಕತೆ ಬೆಳೆದ ಅನೇಕ ಉದಾಹರಣೆಗಳು ನಮ್ಮ ನಡುವೆ ಇದೆ. ಸ್ವಂತ ತಂದೆಯಿಂದಲೆ ಲೈಂಗಿಕ ದೌರ್ಜನ್ಯ (Sexual harassment) ಎದುರಿಸಿ, ಅದನ್ನು ಹೇಳಿಕೊಳ್ಳಲೂ ಆಗದೇ, ಮುಚ್ಚಿಡದಲೂ ಆಗದೇ ಅಪಾರ ನೋವು ಅನುಭವಿಸುತ್ತಿರುವ ಒಂದಿಷ್ಟು ಜನ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ತಂದೆ ಮಗಳ ನಡುವೆ ಆಕರ್ಷಣೆ ಹುಟ್ಟಿ ಅವರಿಬ್ಬರೂ ಸೆಕ್ಸ್ (Sex)ಸಂಬಂಧ ಹೊಂದಿರೋದಕ್ಕೂ ಉದಾಹರಣೆಯಾಗಿ ಒಂದಿಷ್ಟು ಸ್ಟೋರಿಗಳು ಜಗತ್ತಿನಾದ್ಯಂತ ಕಾಣ ಸಿಗುತ್ತವೆ.

ರಾತ್ರಿ ವಿಚಿತ್ರವಾಗಿ ಆಡುವ ಪತಿಯಿಂದ ಹಾಳಾಯ್ತು ಮಹಿಳೆ ಸೆಕ್ಸ್ ಲೈಫ್

ಬಹಳ ಹಿಂದೆಯೇ ಸೈಕಾಲಜಿಸ್ಟ್ ಸಿಗ್ಮಂಡ್ ಈ ಪಾಲಿಮಾರ್ಫಸ್‌ ಸೆಕ್ಸುವಾಲಿಟಿ ಬಗ್ಗೆ ಬರೆದು ಜಗತ್ತಿನಾದ್ಯಂತ ಟೀಕೆಗೆ ಗುರಿಯಾಗಿದ್ದರು. ಅವರ ಪ್ರಕಾರ, ಗಂಡು ಮಗು ತಾಯಿಯ ಎದೆಹಾಲು ಕುಡಿಯುವಾಗಲೇ ಗಂಡು ಮಕ್ಕಳಲ್ಲಿ ಲೈಂಗಿಕ ವಾಂಛೆ ಹುಟ್ಟಿರುತ್ತದೆ. ಇದಕ್ಕೆ ಪೂರಕವಾಗಿ ಅನೇಕ ಉದಾಹರಣೆಗಳನ್ನೂ ಅವರು ನೀಡುತ್ತಾರೆ. ಹೀಗೆ ಬೆಳೆಯುವ ಗಂಡು ಮಕ್ಕಳು ತಂದೆಯನ್ನು ಪ್ರತಿಸ್ಪರ್ಧಿಯಂತೆ ಕಾಣುತ್ತಾರೆ. ಈಡಿಪಸ್ ಕಾಂಪ್ಲೆಕ್ಸ್ ಅಂತನೂ ಕರೀತಾರೆ. ಇದಕ್ಕೆ ಗ್ರೀಕ್ ಪುರಾಣಗಳಲ್ಲಿ, ಷೇಕ್ಸ್‌ಪಿಯರ್ ನಾಟಕಗಳಲ್ಲಿ ಪುರಾವೆಗಳು ಸಿಗುತ್ತವೆ. ಇದೇ ಥರ ಹೆಣ್ಣು ಮಗುವಿನಲ್ಲೂ ಬಾಲ್ಯದಿಂದಲೇ ತಂದೆಯ ಬಗ್ಗೆ ಲೈಂಗಿಕ ಆಕರ್ಷಣೆ ಬೆಳೆಯುವ ಸಾಧ್ಯತೆ ಇದೆ. ಅದು ಎಲೆಕ್ಟ್ರೋ ಕಾಂಪ್ಲೆಕ್ಸ್. ಕಾರ್ಲ್ ಜಂಗ್ ಮನಃಶಾಸ್ತ್ರದಲ್ಲಿ ಈ ಬಗ್ಗೆ ಡೀಟೇಲ್ ಆಗಿ ಬರೆದಿದ್ದಾನೆ. ಆದರೆ ಈ ಸಂಬಂಧದಿಂದ ಹುಟ್ಟುವ ಮಕ್ಕಳಲ್ಲಿ ಬುದ್ಧಿಮಾಂದ್ಯತೆ, ಅಂಗವಿಕಲತೆ ಹುಟ್ಟುವ ಕಾರಣಕ್ಕೆ ರಕ್ತ ಸಂಬಂಧದ ನಡುವೆ ಲೈಂಗಿಕತೆ ನಿರ್ಬಂಧಿಸಲಾಗಿದೆ. ಮತ್ತು ಅದನ್ನು ಸಮಾಜ ಘೋರ ಅಪರಾಧವಾಗಿ ನೋಡುತ್ತದೆ.

ಅತಿರೇಕಕ್ಕೆ ಹೋಯ್ತು ಅತ್ತೆ-ಅಳಿಯನ ಸಂಬಂಧ..ಮಗಳ ಬಾಯ್‌ಫ್ರೆಂಡ್ ಜೊತೆ ತಾಯಿಯ ಚೆಲ್ಲಾಟ !

ಆದರೆ ಇತ್ತೀಚೆಗೆ ಇಂಥಾ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಇದನ್ನು ಅಪರಾಧ ಅಂತ ಪರಿಗಣಿಸಿದರೂ ಪ್ರತೀ ವರ್ಷ ಇಂಥಾ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದಕ್ಕೆ ಹೆಚ್ಚುತ್ತಿರುವ ಪೋರ್ನ್ ವೆಬ್‌ಸೈಟ್‌ಗಳು (Porn website), ಈ ಸೈಟ್‌ಗಳು ಎಲ್ಲ ವಯಮಾನದವರ ಕೈಗೂ ಸಿಗುತ್ತಿರುವುದು ಅಸಹಜ ಲೈಂಗಿಕ ಆಸಕ್ತಿ ಬೆಳೆಯಲು ಕಾರಣವಾಗುತ್ತವೆ. ಆದರೆ ಹೀಗೆ ಬೆಳೆದ ಸಂಬಂಧವನ್ನು ಮಹಾನ್ ಅಪರಾಧ ಅಂತ ಸಮಾಜ ಭಾವಿಸುವ ಕಾರಣ ಈ ಸಂಬಂಧ ಇರುವವರಲ್ಲಿ ಅಭದ್ರತೆ (Insecurity), ಕೀಳರಿಮೆ, ಖಿನ್ನತೆ(Depression) ಬೆಳೆಯಬಹುದು. ಇದು ಬದುಕನ್ನೇ ಬಲಿಪಡೆಯಬಹುದು. ಇಂಥಾ ಸಮಸ್ಯೆಗಳಿಗೆ ಮನಃಶಾಸ್ತ್ರದಲ್ಲಿ (Psychology) ಚಿಕಿತ್ಸೆ ಇದೆ.

Tips for Couple: ಹೊಸದಾಗಿ ಮದುವೆಯಾದ ಕಪಲ್ಸ್ ಈ ರಹಸ್ಯಗಳನ್ನು ತಿಳ್ಕೊಳ್ಳಿ
 

click me!