ಡಿವೋರ್ಸ್ ಸದ್ಯ ಗಂಭೀರವಾಗ್ತಿರುವ ಸಂಗತಿ. ಯಂಗ್ ಜೋಡಿ ಮಾತ್ರವಲ್ಲ ವೃದ್ಧರೂ ಈಗ ವಿಚ್ಛೇದನ ಪಡೆಯುತ್ತಿದ್ದಾರೆ. ನಮ್ಮಲ್ಲಿ ಗ್ರೇ ಡಿವೋರ್ಸ್ ಕಡಿಮೆ ಇದ್ರೂ ಇದ್ರಲ್ಲಿ ಸ್ಟಾರ್ಸ್ ಹಿಂದೆ ಬಿದ್ದಿಲ್ಲ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ಡಿವೋರ್ಸ್ ಪೋಸ್ಟ್ ಒಂದಕ್ಕೆ ಲೈಕ್ ಒತ್ತಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದ್ದಾರೆ. ಅವರು ಲೈಕ್ ಮಾಡಿದ್ದು ಗ್ರೇ ಡಿವೋರ್ಸ್ ಗೆ ಸಂಬಂಧಿಸಿದ ಪೋಸ್ಟ್. ಇದ್ರಲ್ಲಿ ಬಿರುಕುಬಿಟ್ಟ ಹಾರ್ಟ್ ಚಿತ್ರವಿತ್ತು. ಗಂಡ – ಹೆಂಡತಿ ವಿರುದ್ಧ ದಿಕ್ಕಿನಲ್ಲಿ ಹೋಗ್ತಿದ್ದರು. ವಿಚ್ಛೇದನ ಯಾರಿಗೂ ಸುಲಭವಲ್ಲ. ಸದಾ ಖುಷಿಯಾಗಿರಬೇಕೆಂದು ಕನಸು ಕಾಣದವರು ಯಾರು ಅಂತ ಇದಕ್ಕೆ ಶೀರ್ಷಿಕೆ ಹಾಕಲಾಗಿತ್ತು. ಈ ಪೋಸ್ಟ್ ವೈರಲ್ ಆದ್ಮೇಲೆ ಗ್ರೇ ಡಿವೋರ್ಸ್ ಅಂದ್ರೇನು ಎನ್ನುವ ಪ್ರಶ್ನೆ ಅನೇಕರನ್ನು ಕಾಡ್ತಿದೆ.
ಗ್ರೇ ವಿಚ್ಛೇದನ (Grey Divorce) ಎಂದ್ರೇನು? : ದಂಪತಿ (Couple) ಮಧ್ಯೆ ಏನೂ ಸರಿಯಿಲ್ಲ ಎಂದಾಗ ಅದಕ್ಕಿರುವ ಒಂದೇ ಒಂದು ಪರಿಹಾರ ವಿಚ್ಛೇದನ. ಮನೆಯಲ್ಲಿ ಇಡೀ ದಿನ ಜಗಳವಾಡ್ತಾ, ಗಲಾಟೆ ಮಾಡ್ತಾ ನೆಮ್ಮದಿ ಕಳೆದುಕೊಳ್ಳುವ ಬದಲು ಬೇರೆಯಾಗಿ ಸಂತೋಷವಾಗಿರೋದು ಬೆಸ್ಟ್ ಅಂತ ಜನರು ಭಾವಿಸ್ತಾರೆ. ಮದುವೆಯಾದ ತಕ್ಷಣ ವಿಚ್ಛೇದನ ಪಡೆಯುವವರಿದ್ದಾರೆ. ಸಾಮಾನ್ಯವಾಗಿ ಮದುವೆ (Marriage) ಯಾದ 4-5 ವರ್ಷಕ್ಕೆ ಡಿವೋರ್ಸ್ ಪಡೆಯುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ವೃದ್ಧ ದಂಪತಿ ಕೂಡ ಬೇರೆಯಾಗ್ತಿರೋದನ್ನು ನೀವು ನೋಡ್ಬಹುದು. ಮಕ್ಕಳು ದೊಡ್ಡವರಾದ್ಮೇಲೆ ದೂರವಾಗುವ ದಂಪತಿ ಹೊಸ ಬದುಕು ಶುರು ಮಾಡ್ತಾರೆ. ಮದುವೆಯಾಗಿ 35 -40 ವರ್ಷದ ನಂತ್ರ ಬೇರೆಯಾಗುವ ದಂಪತಿ, ಒಟ್ಟಿಗೆ ತಮ್ಮೆಲ್ಲ ಜವಾಬ್ದಾರಿ ಮುಗಿಸಿರ್ತಾರೆ. ಮಕ್ಕಳನ್ನು ಒಟ್ಟಿಗೆ ಬೆಳೆಸಿ, ದಶಕಗಳ ಕಾಲ ಒಟ್ಟಿಗೆ ಹೆಣಗಾಡಿ ವೃದ್ಧಾಪ್ಯದಲ್ಲಿ ಬೇರೆಯಾಗುವ ನಿರ್ಧಾರಕ್ಕೆ ಬರ್ತಾರೆ. ನಮ್ಮ ದೇಶದಲ್ಲಿ ಇದು ಇತ್ತೀಚಿಗೆ ಹೆಚ್ಚಾಗ್ತಿದ್ದರೂ ವಿದೇಶದಲ್ಲಿ ಇದು ಸಾಮಾನ್ಯ ಸಂಗತಿಯಾಗಿದೆ. ಈ ವೃದ್ಧರು ತೆಗೆದುಕೊಳ್ಳುವ ವಿಚ್ಚೇದನವನ್ನು ಗ್ರೇ ಡಿವೋರ್ಸ್ ಎಂದು ಕರೆಯಲಾಗುತ್ತದೆ.
undefined
ಸಾಮಾನ್ಯವಾಗಿ 40 ವರ್ಷದ ನಂತ್ರ ಕೂದಲಿನ ಬಣ್ಣ ಬದಲಾಗುತ್ತದೆ. ಹಾಗಾಗಿಯೇ ಕೂದಲಿಗೆ ಹೋಲಿಕೆ ಮಾಡಿ ಅದಕ್ಕೆ ಗ್ರೇ ಡಿವೋರ್ಸ್ ಎಂದು ನಾಮಕರಣ ಮಾಡಲಾಗಿದೆ. ಇದನ್ನು ಡೈಮಂಡ್ ಡಿವೋರ್ಸ್ ಎಂದೂ ಕರೆಯಲಾಗುತ್ತದೆ.
ಗ್ರೇ ಡಿವೋರ್ಸ್ ಗೆ ಕಾರಣ ಏನು? : ಇಷ್ಟು ವರ್ಷ ಜೊತೆಗಿದ್ದವರಿಗೆ ಈಗ ವಿಚ್ಛೇದನ ಪಡೆಯುವ ಅವಶ್ಯಕತೆ ಏನಿತ್ತು? ವಯಸ್ಸು ಹೆಚ್ಚಾಗ್ತಿದ್ದಂತೆ ಜೀವನ ನಿರ್ವಹಣೆ ಕಷ್ಟ ಎಂದು ಅನೇಕರು ಭಾವಿಸ್ತಾರೆ. ಆದ್ರೆ ಈ ವಯಸ್ಸಿನಲ್ಲಿ ವಿಚ್ಛೇದನ ಪಡೆಯುವವರ ಉದ್ದೇಶ ಭಿನ್ನವಾಗಿರುತ್ತದೆ. ಸಾಮಾಜಿಕ ಮತ್ತು ಮಾನಸಿಕ ಒತ್ತಡ, ದಾಂಪತ್ಯ ದ್ರೋಹ ಇದಕ್ಕೆ ಮುಖ್ಯ ಕಾರಣ. ವಿಚ್ಛೇದನ ಮಕ್ಕಳ ಜೀವನದ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣಕ್ಕೆ ದಂಪತಿ ಒಟ್ಟಿಗೆ ಜೀವನ ನೂಕುತ್ತಿರುತ್ತಾರೆ. ಮಕ್ಕಳು ಸ್ವತಂತ್ರ ಜೀವನ ಶುರು ಮಾಡಿದ ಮೇಲೆ ದಂಪತಿ ಬೇರೆಯಾಗುವ ನಿರ್ಧಾರಕ್ಕೆ ಬರ್ತಾರೆ. ಅದೆಷ್ಟೋ ದಂಪತಿ, ವಿಚ್ಛೇದನ ಪಡೆಯಲು ಮಕ್ಕಳು ದೊಡ್ಡವರಾಗೋದನ್ನು ಕಾಯೋದಿದೆ.
ಅಬ್ಬಾ ಕರೀನಾ ಬದಲು ಕರಿಷ್ಮಾನನ್ನು ಮದುವೆಯಾಗಿಲ್ಲ, ಸೈಫ್ ಆಗಾಗ ಈ ಮಾತು ಹೇಳೋದೇಕೆ?
ಅನೇಕ ಬಾರಿ ಹಣಕಾಸಿನ ವಿಷ್ಯ 40-50ನೇ ವಯಸ್ಸಿನಲ್ಲಿ ವಿಚ್ಛೇದನಕ್ಕೆ ಕಾರಣವಾಗುತ್ತದೆ. ಹಣದ ಕೊರತೆ, ಆರ್ಥಿಕ ವಿಷ್ಯದಲ್ಲಿ ಭಿನ್ನಾಭಿಪ್ರಾಯ ಇದಕ್ಕೆ ದಾರಿಯಾಗುವ ಸಾಧ್ಯತೆ ಇದೆ. ಗ್ರೇ ಡಿವೋರ್ಸ್ ಪಡೆದ ಬಾಲಿವುಡ್ ಸ್ಟಾರ್ಸ್ : ಭಾರತದಲ್ಲಿ ಸಾಮಾನ್ಯ ಜನರ ಸಂಖ್ಯೆ ಇದ್ರಲ್ಲಿ ಕಡಿಮೆ ಎಂದ್ರೂ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮದುವೆಯಾದ 20 ವರ್ಷಗಳ ನಂತ್ರ ವಿಚ್ಛೇದನ ಪಡೆದವರು ಅನೇಕರು. ಅದ್ರಲ್ಲಿ ಮಲೈಕಾ ಅರೋರಾ, ಅರ್ಬಾಜ್ ಖಾನ್ ಸೇರಿದ್ದಾರೆ. ಇಷ್ಟೇ ಅಲ್ಲ, ಅಮೀರ್ ಖಾನ್ 15 ವರ್ಷಗಳ ಕಾಲ ಒಟ್ಟಿಗಿದ್ದ ಕಿರಣ್ ರಾವ್ ಗೆ ವಿಚ್ಛೇದನ ನೀಡಿದ್ದಾರೆ. ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸ್ಸಿಯಾ 21 ವರ್ಷಗಳ ನಂತ್ರ ವಿಚ್ಛೇದನ ಪಡೆದಿದ್ದಾರೆ.