
ಪಟನಾ: ಮದುವೆಯಾದ ಮೂರನೇ ದಿನಕ್ಕೆ ಗಂಡ ಬೇಡ ಎಂದು ವಧು ಪಟ್ಟು ಹಿಡಿದ ಘಟನೆ ಬಿಹಾರದ ಭೋಜಪುರ ಜಿಲ್ಲೆಯಲ್ಲಿ ನಡೆದಿದೆ. ಎರಡು ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿಯಾಗಿಯೇ ಮದುವೆ ನಡೆದಿತ್ತು. ಮದುವೆ ಸಮಯದಲ್ಲಿ ವಧುವಿನ ಪೋಷಕರು ಸಹ ಒಳ್ಳೆಯ ವರೋಪಚಾರ ಕೊಟ್ಟಿದ್ದರು. ಇನ್ನೇನು ಮಗಳ ಜವಾಬ್ದಾರಿ ಇಳಿತು ಅಂತ ನಿಟ್ಟುಸಿರು ಬಿಟ್ಟಿದ್ದ ಪೋಷಕರಿಗೆ ವಧು ಶಾಕ್ ಕೊಟ್ಟು, ಮದುವೆಯಾದ ಮೂರನೇ ದಿನಕ್ಕೆ ತವರು ಸೇರಿದ್ದಾಳೆ.
ಬಿಹಿಯಾ ನಿವಾಸಿಯಾಗಿರುವ ಯುವತಿ ಮದುವೆ ಮೂರು ದಿನಗಳ ಹಿಂದೆ ಪಟನಾದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದೀಗ ವಧು ತನ್ನ ಎಲ್ಲಾ ವಸ್ತುಗಳೊಂದಿಗೆ ತವರು ಸೇರಿದ್ದಾಳೆ. ನಂತರ ಪೊಲೀಸ್ ಠಾಣೆಗೆ ತೆರಳಿದ ವಧು, ನಾನು ಗಂಡನ ಮನೆಯಲ್ಲಿರಲು ಆಗದ ಕಾರಣ ತವರಿಗೆ ಹಿಂದಿರುಗಿದ್ದೇನೆ ಎಂದು ಮಾಹಿತಿ ನೀಡಿದ್ದಾಳೆ. ಆನಂತರ ಪೊಲೀಸರು ಎರಡೂ ಕುಟುಂಬಗಳ ಸದಸ್ಯರನ್ನು ಕರೆಯಿಸಿ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ವಧುವಿನ ನಡೆಯಿಂದ ವರ ಹಾಗೂ ಆತನ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.
ಐದು ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಪತ್ನಿ ಓಡಿ ಹೋಗಿದ್ದಕ್ಕೆ ತನ್ನದೇ ಮನೆಗೆ ಬೆಂಕಿ ಹಚ್ಚಿದ ಗಂಡ
ಪೊಲೀಸರ ಸಮ್ಮುಖದಲ್ಲಿಯೇ ರಾಜಿ ಪಂಚಾಯ್ತಿ ಎಲ್ಲಾ ನಡೆದಿದೆ. ಪೊಲೀಸರು ಮತ್ತು ಸಂಬಂಧಿಕರು ಎಷ್ಟೇ ತಿಳಿ ಹೇಳಿದ್ರೂ ಯುವತಿ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಕೊನೆಗೆ ಪೊಲೀಸರು ಗಂಡನ ಮನೆಗೆ ಯಾಕೆ ಹೋಗಲ್ಲ ಎಂದು ಹೇಳುವಂತೆ ಪೊಲೀಸರು ಹೇಳಿದ್ದಾರೆ. ಆಗ ಯುವತಿ, ನನಗೆ ಈ ಮದುವೆ ಇಷ್ಟವಿರಲಿಲ್ಲ. ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾಳೆ. ಕೊನೆಗೆ ಪೋಷಕರ ಜೊತೆ ವಧು ತವರು ಸೇರಿದ್ದಾಳೆ.
ಎಡವಿ ಬಿದ್ದವಳ ಅವಮಾನಿಸಿದ ಗಂಡ: ಮದುವೆಯಾದ ಮೂರೇ ನಿಮಿಷಕ್ಕೆ ತಲಾಖ್ ನೀಡಿದ ವಧು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.