ಫೇರಿ ಟೇಲ್‌ಗಳನ್ನು ಓದಿ ಭ್ರಮಿತರಾಗ್ತಾರಂತೆ ಮಕ್ಕಳು!

By Suvarna News  |  First Published Aug 1, 2020, 4:45 PM IST

ಫೇರಿ ಟೇಲ್‌ಗಳನ್ನು ಮಕ್ಕಳಿಗೆ ಓದಿಸುತ್ತಾ, ಡಿಸ್ನಿ ಫಿಲಂಗಳನ್ನು ಅವರಿಗೆ ತೋರಿಸುತ್ತಾ, ನಾವು ಮಕ್ಕಳನ್ನು ಭ್ರಮಾಲೋಕಕ್ಕೆ ತಳ್ಳುತ್ತಿದ್ದೇವಾ?


ಜರ್ಮನಿಯ ಒಬ್ಬಾಕೆ ಸೈಕಾಲಜಿಸ್ಟ್ ಬಳಿಗೆ ಒಂದು ವಿಚಿತ್ರ ಕೇಸು ಬಂತು, ಹನ್ನೆರಡು ವರ್ಷದ ಹುಡುಗಿ ಇದ್ದಕ್ಕಿದ್ದಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಳು. ಕುದುರೆಯೇರಿ ನನ್ನ ರಾಜಕುಮಾರ ಬರ್ತಾನೆ, ನನ್ನನ್ನು ಕರೆದುಕೊಂಡು ಹೋಗಿ ಮದುವೆಯಾಗ್ತಾನೆ, ಅರಮನೆಯಲ್ಲಿ ಸುಖವಾಗಿಡ್ತಾನೆ ಎಂದೆಲ್ಲ ಹೇಳಲಾರಂಭಿಸಿದ್ದಳು. ಅದಕ್ಕೆ ತಕ್ಕಂತೆ ಆಕೆ ಸ್ಕೂಲು ಶಿಕ್ಷಣದಲ್ಲಿ ಆಸಕ್ತಿ ಹೊರಟುಹೋಗಿತ್ತು. ಪಾಠ ಓದುತ್ತಿರಲಿಲ್ಲ. ಯಾವಾಗಲೂ ಕನಸಿನ ಲೋಕದಲ್ಲೇ ಇರುತ್ತಿದ್ದಳು. ಸೈಕಾಲಜಿಸ್ಟ್ ಕೌನ್ಸೆಲಿಂಗ್ ಮಾಡಿದಾಗ ಗೊತ್ತಾದದ್ದು- ಆಕೆ ಫೇರಿ ಟೇಲ್‌ಗಳನ್ನು ಕೇಳುತ್ತ ಓದುತ್ತ ಬೆಳೆದವಳು. ಯಾವಾಗಲೂ ಡಿಸ್ನಿ ಫಿಲಂಗಳನ್ನು ನೋಡುತ್ತಿದ್ದಳು. ಅಲ್ಲಿದ್ದ ರಂಜನೀಯ ವಿಚಾರಗಳೆಲ್ಲ ಆಕೆಯ ತಲೆಯಲ್ಲಿ ಅಚ್ಚೊತ್ತಿತ್ತು. ರಿಯಾಲಿಟಿಗೂ ಫ್ಯಾಂಟಸಿಗೂ ನಡುವಿನ ಕೊಂಡಿ ಕಡಿದುಹೋಗಿತ್ತು. ಅದನ್ನು ಮನವರಿಕೆ ಮಾಡಿಕೊಡಲು ಹೆತ್ತವರೂ ಪ್ರಯತ್ನ ಮಾಡಿರಲಿಲ್ಲ. 

Latest Videos

undefined

ಸಣ್ಣವರಾಗಿದ್ದಾಗ ಎಲ್ಲರೂ ಫೇರಿ ಟೇಲ್‌ಗಳನ್ನು ಓದಿರುತ್ತಾರೆ. ಸಿಂಡ್ರೆಲ್ಲಾ, ಸ್ಲೀಪಿಂಗ್ ಬ್ಯೂಟಿ, ಬ್ಯೂಟಿ ಆಂಡ್‌ ದಿ ಬೀಸ್ಟ್‌ ಮುಂತಾದ ಕತೆಗಳಲ್ಲಿ ಕಷ್ಟಗಳೆಲ್ಲ ಮುಗಿದು ಕೊನೆಗೆ ರಾಜಕುಮಾರ ಬಂದು ಆಕೆಯನ್ನು ಮದುವೆಯಾಗಿ ಸುಖವಾಗಿದ್ದರು ಎಂಬಲ್ಲಿಗೆ ಕತೆ ಮುಗಿಯುತ್ತೆ.  ಕತೆ ಓದುವ ಅಥವಾ ನೋಡುವ ಮಕ್ಕಳು ಆ ಪಾತ್ರಗಳಲ್ಲಿ ತಮ್ಮನ್ನು ಸಮೀಕರಿಸಿಕೊಳ್ಳುತ್ತಾರೆ. ಉದಾಹರಣೆಗೆ ಸಿಂಡ್ರೆಲ್ಲಾ ಕತೆಯಲ್ಲಿ ಶಿಕ್ಷೆ ಕೊಡುವ ಅಮ್ಮನನ್ನು ಕತೆಯಲ್ಲಿ ಬರುವ ಮಲತಾಯಿಗೆ ಹೋಲಿಸಿಕೊಳ್ಳುತ್ತಾರೆ. ಮುಂದೆಂದೋ ತನ್ನನ್ನು ಈ ನರಕದಿಂಧ ಬಿಡುಗಡೆ ಮಾಡುವ ರಾಜಕುಮಾರ ಬರುತ್ತಾನೆ ಎಂದು ಕನಸು ಕಾಣುತ್ತಾರೆ. ಹಾಗೇ ಹುಡುಗರು, ಅಲ್ಲಾದ್ದೀನ್‌ ಮತ್ತು ಅದ್ಭುತ ದೀಪದಂಥ ಕತೆಗಳನ್ನು ಓದುತ್ತ, ಅನೇಕ ಕಷ್ಟಗಳನ್ನು ಪಟ್ಟು ಕೊನೆಯಲ್ಲಿ ತಾನು ರಾಜನಾಗುವಂತೆ, ಅಥವಾ ದೊಡ್ಡದೊಂದು ನಿಧಿಯನ್ನು ಪಡೆಯುವಂತೆ ಕಸನು ಕಾಣುತ್ತಾರೆ. ಆದರೆ ಕನಸುಗಳೆಲ್ಲ ನಿಜವಾಗುತ್ತವಾ? ನಿಜಕ್ಕೂ ರಿಯಾಲಿಟಿ ಹಾಗಿರುತ್ತಾ? ಆ ವಯಸ್ಸಿನಲ್ಲಿ ಅದು ಗೊತ್ತಾಗುವುದೇ ಇಲ್ಲ. ಆ ಮಕ್ಕಳಿಗೆ ಮನದಟ್ಟು ಮಾಡಿಸಬೇಕಾದ ಹೆತ್ತವರು ಅದನ್ನು ಮರೆಮಾಚುತ್ತಾರೆ ಅಥವಾ ಸರಿಯಾಗಿ ತಿಳಿಸಿರುವುದಿಲ್ಲ. 

 

ಕನಸಿನಲ್ಲಿ ಸಂಗಾತಿಗೆ ವಂಚಿಸಿದ್ರಾ? ಹಾಗಾದ್ರೆ ನೀವಿದನ್ನು ಓದಿ... 
ಮಕ್ಕಳಿಗೆ ಕತೆಗಳನ್ನು ಹೇಳಬೇಕು, ನಿಜ. ಅದು ಅವರ ಕಲ್ಪನಾಶಕ್ತಿ, ಸೃಜನಶೀಲತೆಗಳನ್ನು ಬೆಳೆಸುತ್ತದೆ. ನಾವೀಗ ಮಕ್ಕಳನ್ನು ಬೆಳೆಸುವಾಗ ಅವರನ್ನು ಶಾಲೆಗೆ ಕಳಿಸುವಾಗ, ಅಲ್ಲಿನ ಪಠ್ಯಗಳಲ್ಲಿ ಕತೆಗಳ ಕೊರತೆಯೂ ಇರುವುದು ನಿಜ. ಆದರೆ ಮಕ್ಕಳಿಗೆ ಫ್ಯಾಂಟಸಿ ಅಗತ್ಯವಾಗಿ ಬೇಕು. ಅದರಲ್ಲೇ ಅವರ ಲೋಕ ಬೆಳೆಯುವುದು, ವಿಸ್ತಾರವಾಗುವುದು. ನಾವು ಇಲ್ಲಿ ಸಾಂಪ್ರದಾಯಿಕವಾಗಿ ಮಕ್ಕಳಿಗೆ ರಾಮಾಯಣ ಮಹಾಭಾರತಗಳಂಥ ಕತೆಗಳನ್ನು ಹೇಳುತ್ತೇವೆ. ಇದನ್ನು ಕೇಳುತ್ತ ಬೆಳೆದ ಮಕ್ಕಳು ಪುರಾಣ ಲೋಕಕ್ಕೂ ನಮ್ಮ ಈಗಿನ ವಾಸ್ತವಿಕ ಲೋಕಕ್ಕೂ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸುತ್ತಾರೆ. ಆದರೆ ಫೇರಿ ಟೇಲ್‌ಗಳಲ್ಲಿ ಬರುವ ಲೋಕ ಯುರೋಪ್‌ ಅಮೆರಿಕಗಳ ಮಕ್ಕಳಿಗೆ ತೀರ ಅಪರಿಚಿತವಾದ ಲೋಕವಲ್ಲ. ಯಾಕೆಂದರೆ ಅಂಥ ಜೀವನಶೈಲಿ ಹಾಗೂ ಸಿನಿಮಾಗಳು ಆರಂಭದಿಂದಲೂ ಅವರಿಗೆ ಜೊತೆಯಾಗಿರುತ್ತವೆ. ಆದರೆ ಹದಿಹರೆಯಕ್ಕೆ ಬಂದ ಕೂಡಲೇ ಇದೆಲ್ಲ ನಿಜವಲ್ಲ ಎಂಬ ವಾಸ್ತವ ಇದ್ದಕ್ಕಿದ್ದಂತೆ ಅಪ್ಪಳಿಸಿ ಅವರ ಭ್ರಮೆಯನ್ನು ಹರಿಯುತ್ತದೆ. ಇದು ಅಪಾಯಕರ.

#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ! 
ಹಾಗಿದ್ದರೆ ಮಕ್ಕಳನ್ನು ಬೆಳೆಸಬೇಕಾದ್ದು ಹೇಗೆ? ಎಂಥ ಕತೆಗಳನ್ನು ಅವರಿಗೆ ಹೇಳಬೇಕು? ನೀತಿ ಕತೆಗಳನ್ನು ಹೇಳಬೇಕು. ಫೇರಿ ಟೇಲ್‌ಗಳನ್ನೂ ಹೇಳೋಣ. ಆದರೆ, ಅದರಲ್ಲಿ ಬರುವ ಎಲ್ಲ ವಿಚಾರವೂ ನಿಜವಲ್ಲ ಎಂಬುದನ್ನೂ ಆ ಮಕ್ಕಳಿಗೆ ಗೊತ್ತು ಮಾಡಬೇಕು. ಅಂದರೆ ವಾಸ್ತವ ಜೀವನದ ಕಷ್ಟ ಸಂಕಟಗಳು. ನೋವು ಯಾತನೆಗಳ ಅರಿವು ಮೂಡಿಸಬೇಕು. ಆಮೇಲೆ ಎಲ್ಲರೂ ಸುಖವಾಗಿದ್ದರು ಎಂಬುದು ಜೀವನದಲ್ಲಿ ನಡೆಯುವುದಿಲ್ಲ. ಕೊನೆಯವರೆಗೂ ದುಃಖ ಜೊತೆಯಾಘಿ ಇರುವುದೂ ಇದೆ. ಸಂಬಂಧಗಳೆಲ್ಲವೂ ಹಿತವಾಗಿರುವುದಿಲ್ಲ. ಕಷ್ಟ ಕೊಡುವ, ದುಃಖ ಉಂಟುಮಾಡುವ ಸಂಬಂಧಗಳೂ ಇರುತ್ತವೆ. ಇದನ್ನೂ ಮಕ್ಕಳಿಗೆ ಮನದಟ್ಟು ಮಾಡಿಸಬೇಕು. ಆಗ ಮಾತ್ರ ಮಕ್ಕಳಿಗೆ ನಿಜಜೀವನ ಎದುರಿಸುವುದು ಸಾಧ್ಯವಾಗುತ್ತದೆ. 
ಕೆಮ್ಮು ಶೀತದ ರಾಮಬಾಣ ಅರಿಶಿನದ ಹಾಲು ಮಾಡುವ ಪರ್ಫೆಕ್ಟ್‌ ವಿಧಾನ 

click me!