ಅಪ್ಪನ ಜೊತೆ ರೆಸ್ಟೋರೆಂಟ್‌ಗೆ ಹೋದ ಮಹಿಳೆ ದುರುಗುಟ್ಟಿ ನೋಡಿದ ಜನ; ಈ ಬೋರ್ಡ್ ಹಿಡಿದು ಕುಳಿತ ಯುವತಿ!

By Roopa Hegde  |  First Published Jul 29, 2024, 3:02 PM IST

ಶುಗರ್ ಡ್ಯಾಡಿ, ಶುಗರ್ ಮಮ್ಮಿ ಕಲ್ಚರ್ ನಮ್ಮಲ್ಲಿ ಹೆಚ್ಚಾಗ್ತಿದೆ. ಯಾರ ಜೊತೆ ಹೋದ್ರೂ ಅನುಮಾನಿಸುವ ಜನರಿಗೆ ಮನವರಿಕೆ ಮಾಡೋದು ಕಷ್ಟ. ಆದ್ರೆ ಈ ಯುವತಿ, ಜನರ ಬಾಯಿ ಮುಚ್ಚಿಸಲು ಹೊಸ ವಿಧಾನ ಕಂಡುಕೊಂಡಿದ್ದಾಳೆ.
 


ಅಪ್ಪನ ಜೊತೆ ನೀವು ರೆಸ್ಟೋರೆಂಟ್ ಗೆ ಹೋಗಿರ್ತೀರಿ. ಅಲ್ಲಿದ್ದವರಲ್ಲ ನಿಮ್ಮನ್ನು ಅನುಮಾನದಿಂದ ನೋಡ್ತಾರೆ. ಇಬ್ಬರು ಡೇಟಿಂಗ್ ಬಂದಿದ್ದೀರಿ ಎನ್ನುವ ನಂಬಿಕೆಯಲ್ಲೇ ನಿಮ್ಮನ್ನು ನೋಡ್ತಿದ್ದರೆ ನಿಮಗೆ ಹೇಗಾಗುತ್ತೆ? ಅಲ್ಲಿನ ವಾತಾವರಣ ಉಸಿರುಗಟ್ಟಿಸೋದಲ್ಲದೆ, ಅವರು ನನ್ನ ಪ್ರೇಮಿ ಅಲ್ಲ, ಅಪ್ಪ ಅಂತ ಕೂಗಿ ಹೇಳುವ ಮನಸ್ಸಾಗುತ್ತೆ ಅಲ್ವಾ? ಯುವತಿ ಹೋಲಿ ಮೋರಿಸ್ ಗೂ ಅದೇ ಆಗಿತ್ತು. ರೆಸ್ಟೋರೆಂಟ್ ನಲ್ಲಿದ್ದ ಜನರ ಕಣ್ಣಿನಿಂದ ತಪ್ಪಿಸಿಕೊಳ್ಳಲು, ಅವರ ಕಣ್ನೋಟಕ್ಕೆ ಉತ್ತರ ನೀಡಲು ಹೋಲಿ ಮೋರಿಸ್ ಸಖರ್ ಉಪಾಯ ಮಾಡಿದ್ದಾಳೆ. ಅಪ್ಪನ ಜೊತೆ ಇಲ್ಲವೆ ಅಣ್ಣನ ಜೊತೆ ನೀವು ಶಾಪಿಂಗ್, ಡಿನ್ನರ್ ಅಂತ ಹೋಗುವ ಪ್ಲಾನ್ ಮಾಡಿದ್ರೆ ಹೋಲಿ ಮೋರಿಸ್ ಐಡಿಯಾ ಫಾಲೋ ಮಾಡ್ಬಹುದು.

ಈಗಿನ ದಿನಗಳಲ್ಲಿ ಅಪ್ಪ – ಮಗಳು, ಅಣ್ಣ – ತಂಗಿ, ಅಮ್ಮ - ಮಗ ಒಟ್ಟಿಗೆ ಹೋದ್ರೂ ಅವರನ್ನು ಕಣ್ಣು ಮಿಟುಕಿಸದೆ ಅನುಮಾನದಿಂದ ನೋಡುವವರ ಸಂಖ್ಯೆ ಜಾಸ್ತಿಯಾಗಿದೆ. ಅದಕ್ಕೆ ಕಾರಣ ಶುಗರ್ ಡ್ಯಾಡಿ (Sugar Daddy), ಶುಗರ್ ಮಮ್ಮಿ (Sugar Mommy) ಯಂತ ಕಲ್ಚರ್. ಭಾರತ (India) ಸೇರಿದಂತೆ ಬಹುತೇಕ ಎಲ್ಲ ದೇಶಗಳಲ್ಲೂ ವಯಸ್ಸಿಗೆ ಮೀರಿದ ಪ್ರೀತಿ ಕಾಣಸಿಗ್ತಿದೆ. ಅತಿ ಚಿಕ್ಕ ವಯಸ್ಸಿನ ಹುಡುಗ, ನಿವೃತ್ತ ಮಹಿಳೆ ಜೊತೆ ಪ್ರೀತಿ ಮಾಡೋದು, ಚಿಕ್ಕ ವಯಸ್ಸಿನ ಹುಡುಗಿ ನಿವೃತ್ತಿಗೊಂಡ ಪುರುಷನ ಜೊತೆ ಡೇಟ್ ಮಾಡೋದು ಕಾಮನ್ ಆಗ್ತಿದ್ದಂತೆ ಪ್ರತಿಯೊಬ್ಬರನ್ನೂ ಜನರು ಇದೇ ದೃಷ್ಟಿಯಲ್ಲಿ ನೋಡ್ತಿದ್ದಾರೆ. ಹೋಲಿ ಕೂಡ ಇದನ್ನು ಎದುರಿಸಿದ್ದಾಳೆ.

Tap to resize

Latest Videos

undefined

ರೆಸ್ಟೋರೆಂಟ್ ಗೆ ಅಪ್ಪನ ಜೊತೆ ಹೋದ ಹೋಲಿಯನ್ನು ಎಲ್ಲರೂ ಅನುಮಾನದಿಂದ ನೋಡ್ತಿದ್ದರು. ಶುಗರ್ ಡ್ಯಾಡಿ ಜೊತೆ ಹೋಲಿ ಬಂದಿದ್ದಾಳೆ. ಆತನ ಹಣಕ್ಕಾಗಿ ಪ್ರೀತಿ ಮಾಡ್ತಿದ್ದಾಳೆ ಎಂಬ ಅವರ ಕೊಂಕು ಕಣ್ಣಿನಲ್ಲಿ ಸ್ಪಷ್ಟವಾಗಿ ಕಾಣ್ತಿತ್ತು. ಇದ್ರಿಂದ ಅಸಮಾಧಾನಗೊಂಡ ಹೋಲಿ, ಅವರಿಗೆ ಉತ್ತರ ನೀಡಲು ಮುಂದಾದಳು. ತನ್ನ ಟೇಬಲ್ ಮೇಲೆ ಒಂದು ಬೋರ್ಡ್ ಅಂಟಿಸಿದ್ಲು. ಅದ್ರಲ್ಲಿ ಇವರು ನನ್ನ ತಂದೆ. ಶುಗರ್ ಡ್ಯಾಡಿ ಅಲ್ಲ ಎಂದು ಬರೆದಿದ್ದಳು. ಆಕೆ ಬೋರ್ಡ್ ಅಂಟಿಸಿದ ಮೇಲೆ ಯಾರೂ ಆಕೆಯನ್ನು ಅನುಮಾನದಿಂದ ನೋಡಲಿಲ್ಲ.

ಹೋಲಿ ಮೋರಿಸ್, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಆಕೆ ಸಾಕಷ್ಟು ಫಾಲೋವರ್ಸ್ ಹೊಂದಿದ್ದಾಳೆ. ಅಪ್ಪನ ಜೊತೆಗಿರುವ ಅನೇಕ ಫೋಟೋ, ವಿಡಿಯೋಗಳನ್ನು ಆಕೆ ಹಂಚಿಕೊಳ್ತಿರುತ್ತಾಳೆ. ಈ ಮಧ್ಯೆ ಹೋಲಿ ಮೋರಿಸ್ ಈ ವಿಡಿಯೋ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ ಹೋಲಿ ಮೋರಿಸ್ ತಂದೆ ಜೊತೆ ರೆಸ್ಟೋರೆಂಟ್ ನಲ್ಲಿದ್ದಾಳೆ. ಟೇಬಲ್ ಮೇಲೆ ಪ್ರಿಂಟ್ ಮಾಡಿದ ಪೇಪರ್ ಒಂದನ್ನು ಹೋಲಿ ಮೋರಿಸ್ ಇಡುವ ಪ್ರಯತ್ನ ಮಾಡ್ತಿದ್ದಾಳೆ. ನಂತ್ರ ಅದನ್ನು ಯಶಸ್ವಿಯಾಗಿ ಇಡ್ತಾಳೆ. 

ಹೋಲಿ ಮೋರಿಸ್ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. 2 ಕೋಟಿಗೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಣೆ ಮಾಡಲಾಗಿದೆ. ಆರು ಲಕ್ಷ 23 ಸಾವಿರಕ್ಕಿಂತಲೂ ಹೆಚ್ಚು ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 7 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಅನೇಕರು ತಮ್ಮ ಅನುಭವವನ್ನು ಕಮೆಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ಅದಿತಿ ಎನ್ನುವ ಮಹಿಳೆಯೊಬ್ಬರು ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ತಂದೆ ಜೊತೆ ಪ್ರವಾಸಕ್ಕೆ ಹೋಗ್ತಿರುತ್ತಾರೆ. ಪ್ರತಿ ಬಾರಿ ಪ್ರತ್ಯೇಕ ರೂಮ್ ಇಲ್ಲವೆ ಬೆಡ್ ಬುಕ್ ಮಾಡ್ತಾರೆ. ಒಂದು ಹೊಟೇಲ್ ನಲ್ಲಿ ಇವರಿಬ್ಬರನ್ನು ನೋಡಿದ ಸಿಬ್ಬಂದಿ, ಡಬಲ್ ಕಾಟ್ ನೀಡಿದ್ದಲ್ಲದೆ ಅದನ್ನು ಹನಿಮೂನ್ ರೀತಿ ಅಲಂಕರಿಸಿದ್ದರಂತೆ. ಇದನ್ನು ನೋಡಿ ಅದಿತಿ ತಂದೆ ಮುಜುಗರಕ್ಕೊಳಗಾಗಿದ್ದರು. ಅದಿತಿ, ನಾವಿಬ್ಬರು ಪ್ರೇಮಿಗಳಲ್ಲ, ಅಪ್ಪ – ಮಗಳು ಅಂದ್ಮೇಲೆ ಹೊಟೇಲ್ ಸಿಬ್ಬಂದಿ ಪ್ರತ್ಯೇಕ ಬೆಡ್ ನೀಡಿದ್ದರಂತೆ. 

 
 
 
 
 
 
 
 
 
 
 
 
 
 
 

A post shared by holly🌻 (@hollymorrisss)

click me!