ಇಂದಿನ ಯುವಕ-ಯುವತಿಯರು ಲೈಫ್ನಲ್ಲಿ ಸೆಟಲ್ ಎನ್ನೋ ಹೆಸರಿನಲ್ಲಿ ಯೌವನವನ್ನು ಹಾಳುಮಾಡಿಕೊಂಡು ಮದ್ವೆಯನ್ನು ಮುಂದೂಡ್ತಿರೋ ಬಗ್ಗೆ ನಟ ರಮೇಶ್ ಅರವಿಂದ್ ಏನ್ ಹೇಳಿದ್ದಾರೆ ಕೇಳಿ...
ಇಂದಿನ ಯುವಕ-ಯುವತಿಯರ ಮದುವೆಯ ವಿಷಯಕ್ಕೆ ಬರೋದಾದ್ರೆ ಹೆಚ್ಚಿನವರು ತಾವು ಸೆಟ್ಲ್ ಆದ್ಮೇಲೆ ಮದ್ವೆಯಾಗ್ತೇವೆ ಎನ್ನೋದು ಸಹಜ. ಅದು ಹೆಣ್ಣು, ಗಂಡು ಯಾರೇ ಇರ್ಬೋದು. ಲೈಫ್ನಲ್ಲಿ ಸೆಟ್ಲ್ ಆಗ್ಬೇಕು, ಆಮೇಲೆ ಮದ್ವೆ ಬಗ್ಗೆ ಥಿಂಕ್ ಮಾಡೋಣ ಅಂತಾರೆ. ಒಂದು ಕಡೆ ಇಂದು ಹಲವು ಹೆಣ್ಣುಮಕ್ಕಳ ನಿರೀಕ್ಷೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇರುವುದರಿಂದ ಗಂಡು ಮಕ್ಕಳಿಗೆ ಮದ್ವೆ ಎನ್ನುವುದೇ ಮರೀಚಿಕೆ ಎನ್ನುವಂಥ ಸ್ಥಿತಿ ಬಂದೊದಿಗಿದೆ. ತಮ್ಮ ಮದುವೆಯಾಗುವವ ಹೀಗೆಯೇ ಇರಬೇಕು ಎನ್ನುವ ಅಗತ್ಯಕ್ಕಿಂತ ಹೆಚ್ಚಿನ ಕನಸು ಕೆಲವು ಹೆಣ್ಣುಮಕ್ಕಳಿಗೆ ಇರುತ್ತದೆ. ಜೀವನದಲ್ಲಿ ಐಷಾರಾಮಿ ಸೌಕರ್ಯಗಳನ್ನು ನೀಡುವ ಗಂಡು ತಮಗೆ ಸಿಗಬೇಕು ಎಂದು ಬಯಸುವವ ಹೆಣ್ಣುಮಕ್ಕಳು ಒಂದೆಡೆಯಾದರೆ, ಗಂಡಿನ ದುಡುಮೆಯ ಮೇಲೆ ಅವಲಂಬಿತರಾಗದೇ ತಮ್ಮ ಸ್ವಂತ ಕಾಲ ಮೇಲೆ ನಿಂತು ಆಮೇಲೆ ಮದುವೆಯಾಗಬೇಕು ಎನ್ನುವ ಬಯಕೆ ಇನ್ನು ಕೆಲವು ಹೆಣ್ಣುಮಕ್ಕಳಿಗೆ. ಗಂಡು ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ, ಲೈಫ್ನಲ್ಲಿ ಸಂಪೂರ್ಣ ಸೆಟ್ಲ್ (Settle) ಆದ ಮೇಲೆ ಮದುವೆ, ಮಕ್ಕಳ ಬಗ್ಗೆ ಯೋಚಿಸೋಣ ಎಂದುಕೊಳ್ಳುತ್ತಾರೆ. ತಾವು ಲೈಫ್ನಲ್ಲಿ ಸೆಟಲ್ ಆಗದೇ ಇದ್ದರೆ ತಮಗೆ ಸುಲಭದಲ್ಲಿ ಹೆಣ್ಣುಮಕ್ಕಳು ಸಿಗುವುದಿಲ್ಲ ಎನ್ನುವ ವಿಚಾರವೂ ಗಂಡುಮಕ್ಕಳಿಗೆ ತಿಳಿದಿದ್ದರಿಂದ ಸೆಟಲ್ ಆಗಬೇಕು ಎಂದುಕೊಳ್ಳುತ್ತಾರೆ. ಒಟ್ಟಿನಲ್ಲಿ ಹೆಣ್ಣು-ಗಂಡು ಇಬ್ಬರಿಗೂ ಸೆಟ್ಲ್ ಎನ್ನುವ ಪದ ಇತ್ತೀಚಿನ ದಿನಗಳಲ್ಲಿ ಮಾಮೂಲಾಗಿದೆ.
ಹೀಗೆ ಓದು, ನಂತರ ಉದ್ಯೋಗ, ನಂತರ ಸೆಟ್ಲ್ಮೆಂಟ್ ಎಂದೆಲ್ಲಾ ಹೇಳುವ ಹೊತ್ತಿಗೆ ವಯಸ್ಸೇನು ನಿಲ್ಲುವುದಿಲ್ಲವಲ್ಲ. ಇದೇ ಕಾರಣಕ್ಕೆ ಈಗ ಹೆಣ್ಣು ಮತ್ತು ಗಂಡು ಮಕ್ಕಳು ಮದುವೆಯ ವಯಸ್ಸು ಮೀರಿದರೂ ಮದುವೆಯಾಗುತ್ತಿಲ್ಲ. ದುಡಿತ, ದುಡಿತ ಎಂದು ದುಡಿಮೆಯ ಬೆನ್ನ ಹತ್ತಿ ಸೆಟ್ಲ್ಮೆಂಟ್ ಎಂದು ಬರುವ ಹೊತ್ತಿಗೆ ಯೌವನ ದಾಟಿ ವಯಸ್ಸು 50ರ ಆಸುಪಾಸು ಬಂದಿರುತ್ತದೆ. ಕಾರಣಗಳು ಏನೇ ಇರಬಹುದು, ಅದು ಹೆಣ್ಣಿನಿಂದಲೇ ಆಗಿರಬಹುದು ಅಥವಾ ಗಂಡಿನಿಂದಲೇ ಆಗಿರಬಹುದು... ಒಟ್ಟಿನಲ್ಲಿ ಸಾಮಾನ್ಯವಾಗಿ ಇಂದು ಮದುವೆಯ ವಯಸ್ಸು ಮೀರಿದರೂ ಸೆಟಲ್ಮೆಂಟ್ ಹಿಂದೆಯೇ ಯುವಕ-ಯುವತಿಯರು ಸಾಗುತ್ತಿದ್ದಾರೆ.
ಪ್ರೀತಿಯಲ್ಲಿ ಮೋಸವಾದ್ರೆ ಹೀಗೆ ಮಾಡಿ ಅಂತಾರೆ ಸದ್ಗುರು
ಇಂಥವರಿಗೆ ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ (Ramesh Aravind) ಒಂದು ಸೂಪರ್ ಕಿವಿ ಮಾತು ಹೇಳಿದ್ದು, ಅದೀಗ ವೈರಲ್ ಆಗುತ್ತಿದೆ. ಈಗಿನ ಯುವಕ-ಯುವತಿಯರಿಗೆ ಮದುವೆ ಎನ್ನುವುದೇ ದೊಡ್ಡ ಸಮಸ್ಯೆಯಾಗಿರುವುದು ನಿಜವಾಗಿರುವ ಹೊತ್ತಿನಲ್ಲಿ ರಮೇಶ್ ಅವರ ಈ ಮಾತನ್ನು ಹಲವರು ಒಪ್ಪಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ರಮೇಶ್ ಅರವಿಂದ್ ಅವರ ಮಾತಿನಲ್ಲಿಯೇ ಹೇಳುವುದಾದರೆ: ಮದುವೆಯನ್ನೋದು ಯಂಗರ್ ಜನರೇಷನ್ಗೆ ಯಾಕೆ ಇಷ್ಟೊಂದು ಸಮಸ್ಯೆಯಾಗ್ತಿದೆ ಎನ್ನೋದೇ ಗೊತ್ತಾಗ್ತಿಲ್ಲ. ಒಂದು ಕಮಿಟ್ಮೆಂಟ್ ಮಾಡೋಕೆ ರೆಡಿ ಇಲ್ವಾ ಈ ಹುಡುಗ-ಹುಡುಗಿಯರು ಅನ್ನೋದೇ ಅರ್ಥವಾಗ್ತಿಲ್ಲ. ಎಲ್ಲವನ್ನೂ ಪೋಸ್ಟ್ಪೋನ್ಮೆಂಟ್ ಮಾಡ್ತಾ ಬಂದು 50 ಆಗೋ ಹೊತ್ತಿಗೆ ಸೆಟ್ಲ್ ಆಗ್ಬೋದು. ಆದರೆ ಯೌವನ ನಿಮ್ ಜೊತೆ ಇರಲ್ವಲ್ಲಾ ಎಂದು ರಮೇಶ್ ಪ್ರಶ್ನಿಸಿದ್ದಾರೆ. ಸೆಟ್ಲ್ ಆದ್ಮೇಲೆ ಮುಂದಿನ ಯೋಚನೆ ಮಾಡಿದ್ರೆ ಆಗ ಯೌವನವನ್ನು ನೀವು ಮಿಸ್ ಮಾಡ್ಕೋತೀರಿ. ಅದರ ಜೊತೆ ಹೋರಾಡಿ. ಅಂಥ ಹುಡುಗಿಯನ್ನು ಹುಡುಕಿ. ಸಂಬಂಧದ ಸೌಂದರ್ಯವನ್ನು ಕಳೆದುಕೊಳ್ಳಬೇಡಿ. ಗಂಡು-ಹೆಣ್ಣಿನ ಸಂಬಂಧ ಯೌವನದಲ್ಲಿ ಅದೊಂದು ರೀತಿಯ ಬ್ಯೂಟಿ. ನೀವು ಬರೀ ಲೈಫು, ಸೆಟ್ಲ್ಮೆಂಟು, ಸರ್ವೈವಲ್ ಅಂದುಕೊಂಡು ಬ್ಯೂಟಿನೇ ಬಿಡ್ತಾ ಇದ್ದೀರಾ ಎಂದಿದ್ದಾರೆ.
ಈ ಮಾತಿಗೆ ಕೆಲವರು ಅದರಲ್ಲಿಯೂ ಹೆಚ್ಚಾಗಿ ಯುವಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸೆಟಲ್ ಆಗಿಲ್ಲ ಅಂದ್ರೆ ಹುಡುಗೀನೇ ಒಪ್ಕೊಳಲ್ಲ ಸರ್, ಡಿಸಿಷನ್ (Decision) ತೊಗೊಳೊ ಮಾತೆಲ್ಲಿ ಎಂದು ಓರ್ವ ನೋವು ತೋಡಿಕೊಂಡಿದ್ದರೆ, ಸರ್ ಹುಡುಗಿಯರಿಗೆ 1 ಲಕ್ಷ ಇಲ್ಲಾ 2 ಲಕ್ಷ ಸಂಬಳನೇ ಬೇಕು. ಅದನ್ನು ಎಲ್ಲಿಂದ ತರೋದು ಸಾರ್ ಎಂದು ಇನ್ನೊಂದಿಷ್ಟು ಮಂದಿ ಹೇಳಿಕೊಂಡಿದ್ದಾರೆ. ಈಗಿನ ಕಾಲದಲ್ಲಿ ಜನಕ್ಕೆ ಎಷ್ಟ್ಟು ದುಡ್ಡು ಇದ್ರೂನು ಕಡಿಮೆ ಎನ್ನೋ ಭಾವನೆ ಬಂದಿದೆ, ಹೆಚ್ಚಿನ ಯುವ ಪಿಳೀಗೆ ದುಡ್ಡಿಗೆ ಮಹತ್ವ ಕೊಟ್ಟಿದ್ದಕ್ಕೆ ಈ ತರ ಜಾಸ್ತಿ ಆಗುತ್ತಾ ಇರೋದು ಅಲ್ವೇ ಎಂದು ಇನ್ನೋರ್ವ ಪ್ರಶ್ನಿಸಿದ್ದಾರೆ. ಇನ್ನು ಹುಡುಗಿಯರ ಕಮೆಂಟ್ ಬಗ್ಗೆ ಹೇಳುವುದಾದರೆ, ಸರ್ ತಮ್ಮ ತಾಯಿ ಅತ್ತೆ-ಮಾವನ ಕಿರುಕುಳದಿಂದ ನೊಂದು ಬೆಂದು ಹೋಗಿರುವುದನ್ನು ಹುಡುಗಿಯರು ನೋಡಿರ್ತಾರೆ, ಅದಕ್ಕೇ ಅವರು ಮದುವೆಯಾಗುವುದಕ್ಕೆ ಹೆದರುತ್ತಾರೆ ಎಂದಿದ್ದಾರೆ.
ಅಜ್ಜಂಗೆ 100, ಅಜ್ಜಿಗೆ 90: ಪ್ರೀತಿ ಆಚರಿಸಲು ಈ ಜನ್ಮ ಸಾಕಾಗಿಲ್ಲ ಅಂತಾರೆ ಈ ಹಿರಿಯರು!