ರಾಮಮಂದಿರದ ಉದ್ಘಾಟನೆ, ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಕ್ಷಣಗಣಗೆ ಶುರುವಾಗಿರುವ ಸಮಯದಲ್ಲಿ ದೇಶದೆಲ್ಲೆಡೆ ಉತ್ಸಾಹದ ವಾತಾವರಣ ನಿರ್ಮಾಣವಾಗಿದೆ. ಈ ಸಂತೋಷ ಇಂಡಿಗೋ ವಿಮಾನದಲ್ಲೂ ಪ್ರತಿಫಲಿಸಿದ್ದು, ಪ್ರಯಾಣಿಕರು ಸಾಮೂಹಿಕವಾಗಿ ರಾಮ್ ಆಯೇಂಗೆ ಹಾಡನ್ನು ಹಾಡಿರುವ ವಿಚಾರ ಇದೀಗ ವೈರಲ್ ಆಗಿದೆ.
ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆಗೆ ಇಡೀ ದೇಶವೇ ಕಾಯುತ್ತಿದೆ. ರಾಮಭಕ್ತರ ವಿನೂತನ ಭಕ್ತಿ ಮಾದರಿಗಳು ಜಗತ್ತಿಗೆ ಗೋಚರಿಸುತ್ತಿವೆ. ಒಬ್ಬರು ಇಡೀ ದೇಶಾದ್ಯಂತ ಪಾದಯಾತ್ರೆ ಮಾಡಿ ಅಯೋಧ್ಯೆ ತಲುಪುತ್ತಿದ್ದರೆ, ಮತ್ತೊಬ್ಬರು ಸೈಕಲ್ ಯಾತ್ರೆ ಮಾಡುತ್ತಾರೆ. ಯಾರೋ ಒಬ್ಬರು ತಮ್ಮ ಜೀವಮಾನದ ಗಳಿಕೆಯನ್ನೆಲ್ಲ ರಾಮನಿಗೆ ಮೀಸಲಿಟ್ಟರೆ, ಮತ್ತೊಬ್ಬರು ಹಲವಾರು ವ್ರತ-ನಿಯಮಗಳನ್ನು ಅನುಸರಿಸುವ ಮೂಲಕ ತಮ್ಮ ರಾಮಭಕ್ತಿಯನ್ನು ಮೆರೆಯುತ್ತಿದ್ದಾರೆ. ಒಟ್ಟಿನಲ್ಲಿ ಇಡೀ ದೇಶವೇ ರಾಮಮಂದಿರ ಉದ್ಘಾಟನೆ, ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸುಮುಹೂರ್ತವನ್ನು ಎದುರು ನೋಡುತ್ತಿದೆ. ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಇತ್ತೀಚೆಗೆ ರಚನೆಯಾಗಿ, ಜನಪ್ರಿಯವಾಗಿರುವ “ರಾಮ್ ಆಯೇಂಗೆ’ ಹಾಡಂತೂ ಎಲ್ಲೆಡೆ ಹವಾ ಸೃಷ್ಟಿಸಿದೆ. ಅದೊಂದು ಟ್ರೆಂಡ್ ರೂಪದಲ್ಲಿ ಎಲ್ಲರನ್ನೂ ಆವರಿಸಿದೆ. ದೇಶ-ವಿದೇಶಗಳ ಗಾಯಕರು ಈ ಹಾಡನ್ನು ಹಾಡುತ್ತಿರುವುದು ಕಂಡುಬರುತ್ತಿದೆ. ಬಸ್ಸು, ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಈ ರಾಮಭಕ್ತಿಯ ಹಾಡಿನಲ್ಲಿ ಮಿಂದೇಳುತ್ತಿದ್ದಾರೆ. ಇಂಥದ್ದೊಂದು ಉತ್ಸಾಹದಿಂದ ವಿಮಾನ ಪ್ರಯಾಣಿಕರು ದೂರವಿರಲು ಸಾಧ್ಯವೇ? ಅವರೂ ಸಹ “ರಾಮ್ ಆಯೇಂಗೆ’ ಹಾಡಿನಲ್ಲಿ ಸಾಮೂಹಿಕವಾಗಿ ಒಂದಾಗಿರುವ ಅಪರೂಪದ ವಿದ್ಯಮಾನವೂ ಜರುಗಿದೆ.
ದೇಶಾದ್ಯಂತ ಈಗ ಉತ್ಸಾಹ (Enthusiasm) ಮತ್ತು ಪ್ರೇರಣಾದಾಯಕ ಪರಿಸರ (Environment) ಸೃಷ್ಟಿಯಾಗಿದೆ. ಇದು ಎಲ್ಲೆಲ್ಲೂ ಗೋಚರಿಸುತ್ತಿದೆ. ನಾಸ್ತಿಕರು ಇದರಿಂದ ದೂರವಿದ್ದರೆ, ರಾಜಕೀಯ ಕಾರಣಗಳಿಂದಾಗಿ ಕೆಲವರು ಈ ಉತ್ಸಾಹದಿಂದ ಹೊರಗಿರಬಹುದು ಅಷ್ಟೆ. ಉಳಿದ ದೇಶವಾಸಿಗಳು ರಾಮಭಕ್ತಿಯ (Ram Bhakti) ಉತ್ಸಾಹದಲ್ಲಿದ್ದಾರೆ. ಇಂತಹ ಉತ್ಸಾಹ ಇತ್ತೀಚೆಗೆ ಇಂಡಿಗೋ ವಿಮಾನದಲ್ಲೂ (Indigo Airplane) ಕಂಡುಬಂದಿರುವುದು ವಿಶೇಷ. ಅಯೋಧ್ಯಾಕ್ಕೆ ಹೊರಟಿದ್ದಇಂಡಿಗೋ ವಿಮಾನ ಅಪರೂಪದ ವಿದ್ಯಮಾನವೊಂದಕ್ಕೆ ಇತ್ತೀಚೆಗೆ ಸಾಕ್ಷಿಯಾಗಿದೆ. ಬಹುತೇಕ ಎಲ್ಲ ಪ್ರಯಾಣಿಕರು ಸೇರಿ “ರಾಮ್ ಆಯೇಂಗೆ’ ಹಾಡನ್ನು (Song) ಸಾಮೂಹಿಕವಾಗಿ (Unison) ಹಾಡುತ್ತ ಚಪ್ಪಾಳೆ ತಟ್ಟುತ್ತ ಎಂಜಾಯ್ ಮಾಡುತ್ತಿರುವ ಸನ್ನಿವೇಶವನ್ನು ಒಳಗೊಂಡ ವೀಡಿಯೋವನ್ನು ಭಾರತ ಸರ್ಕಾರದ ಅಧಿಕೃತ (Official) ವೆಬ್ ಸೈಟ್ ಆಗಿರುವ “MyGov’ ಇತ್ತೀಚೆಗೆ ಹಂಚಿಕೊಂಡಿದೆ.
ಮೊಳಗಿದ ರಾಮ್ ಆಯೇಂಗೆ (Ram Ayenge)
ಸರ್ಕಾರದ ವೆಬ್ ಸೈಟ್ ಹಂಚಿಕೊಂಡಿರುವ ವೀಡಿಯೋದಲ್ಲಿ ಈ ದೃಶ್ಯವಿದೆ. ಸಾಮಾನ್ಯವಾಗಿ ವಿಮಾನಗಳಲ್ಲಿ ಪ್ರಯಾಣಿಕರು ಗಂಭೀರವಾಗಿದ್ದು, ಹೆಚ್ಚು ಮಾತನಾಡದೆ ಮೌನ ವಹಿಸುವುದು ಕಂಡುಬರುತ್ತಾರೆ. ಕೆಲವು ಪ್ರಯಾಣಿಕರಂತೂ ಮಾತನಾಡುವುದರಿಂದ ಅಲ್ಲಿನ ವಾತಾವರಣವೇ ಹಾಳಾಗುವುದೇನೋ ಎನ್ನುವ ಭಾವನೆಯಲ್ಲಿ ವರ್ತಿಸುತ್ತಾರೆ.
ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ದೇಗುಲದ ಆವರಣವನ್ನು ತಿಕ್ಕಿತಿಕ್ಕಿ ತೊಳೆದ ನಟ ಜಾಕಿ ಶ್ರಾಫ್
ಘನಗಂಭೀರವಾದ ಪರಿಸರದಲ್ಲಿ ವಿಮಾನ ಪ್ರಯಾಣ ಉಸಿರುಕಟ್ಟಿಸುವಂತಿರುತ್ತದೆ ಎಂದು ಅನೇಕರು ತಮ್ಮ ಅನುಭವಗಳನ್ನು ಹೇಳಿಕೊಳ್ಳುತ್ತಾರೆ. ಆದರೆ, ಇಂಥ ಸಾಮಾನ್ಯ ಸ್ಥಿತಿಗೆ ಅಪವಾದ ಎನ್ನುವಂತೆ ಅಯೋಧ್ಯಾಕ್ಕೆ ಹೊರಟಿರುವ ಇಂಡಿಗೋ ಪ್ರಯಾಣಿಕರು (Travellers) ವರ್ತಿಸಿರುವುದು ವಿಶೇಷ. “ರಾಮ್ ಆಯೇಂಗೆ’ ಗಾಳಿಯಲ್ಲೂ ಪ್ರತಿಧ್ವನಿಸುತ್ತಿದೆ’ ಎಂದು ಸರ್ಕಾರಿ ವೆಬ್ ಸೈಟ್ ಈ ಸನ್ನಿವೇಶಕ್ಕೆ ಪ್ರತಿಕ್ರಿಯಿಸಿದೆ.
ವಿಮಾನದಲ್ಲಿ ಸಾಮೂಹಿಕವಾಗಿ ಹಾಡು ಹೇಳುವುದಿರಲಿ, ನಾಲ್ಕು ಜನ ಸೇರಿ ಗಟ್ಟಿಯಾಗಿ ಮಾತನಾಡಲು ಸಹ ಹಿಂದೇಟು ಹಾಕುವ ವಾತಾವರಣದಲ್ಲಿ “ರಾಮ್ ಆಯೇಂಗೆ’ ಹಾಡು ಮೊಳಗಿರುವುದು ಬಹಳಷ್ಟು ಜನರಲ್ಲಿ ಸಂತಸ ತಂದಿದೆ. ಈ ವೀಡಿಯೋವನ್ನು 1 ಕೋಟಿ 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ಲಕ್ಷಾಂತರ ಜನ ಲೈಕ್ ಮಾಡಿದ್ದಾರೆ. ಸಾವಿರಾರು ಕಾಮೆಂಟ್ ಗಳು ಸಹ ಬಂದಿವೆ.
ರಾಮ ಲಲ್ಲಾ ವಿಗ್ರಹಕ್ಕೆ ಬಳಸಿದ್ದು 30 ಲಕ್ಷ ವರ್ಷಗಳಷ್ಟು ಹಳೆಯ ಶಿಲೆ!
ಅಮೇಜಿಂಗ್ (Amazing)
ವಿಮಾನದಲ್ಲಿ ಇಂಥದ್ದೊಂದು ದೃಶ್ಯ ಅಮೇಜಿಂಗ್ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. “ಇದು ಬ್ಯೂಟಿಫುಲ್’ ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು “ವಾವ್, ಇದು ನ್ಯೂ ಇಂಡಿಯಾ (New India)’ ಎಂದು ಬಣ್ಣನೆ ಮಾಡಿದ್ದಾರೆ. “ಇದನ್ನು ನೋಡಲು ಸಖತ್ ಖುಷಿಯಾಗುತ್ತದೆ’ ಎಂದು ಹಲವರು ಹೇಳಿದ್ದರೆ, ಕೆಲವರು “ದೇಶದಲ್ಲಿ ಇಂಥದ್ದೊಂದು ಸ್ಫೂರ್ತಿ ನಿರ್ಮಾಣವಾಗಿರುವುದು ಸಂತಸದ ಸಂಗತಿ’ ಎಂದು ಹೇಳಿದ್ದಾರೆ. ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಹಿನ್ನೆಲೆಯಲ್ಲಿ ದೇಶದಲ್ಲಿ ಅಭೂತಪೂರ್ವ ಉತ್ಸಾಹ ಸೃಷ್ಟಿಯಾಗಿರುವುದಕ್ಕೆ ಇಂಡಿಗೋ ವಿಮಾನದ ದೃಶ್ಯವೇ ಉತ್ತಮ ಸಾಕ್ಷಿ.