ಪ್ರೀತಿಸಿ ಕೈಕೊಟ್ಟ ಹುಡುಗಿಗೆ ಹಾರ್ಟ್ ಬ್ರೇಕಿಂಗ್ ಗಿಫ್ಟ್ ನೀಡಿದ ಹುಡುಗ!

By Suvarna News  |  First Published Jan 19, 2024, 1:20 PM IST

ಪ್ರೀತಿಸಿದ ಹುಡುಗಿ ಮೋಸ ಮಾಡಿ ಬಾಯ್ ಫ್ರೆಂಡ್ ಗೆ ಟಾಟಾ ಹೇಳಿದ್ಲು. ಆದ್ರೆ ಪ್ರೀತಿ ಕಳೆದುಕೊಂಡ ಬಾಯ್ ಫ್ರೆಂಡ್ ತಿರುಗೇಟು ನೀಡಿದ್ದ. ಆತ ಕೊಟ್ಟ ಗಿಫ್ಟ್ ಆಕೆ ಮನಸ್ಸಿಗೆ ನಾಟಿದೆ.
 


ಪ್ರೀತಿಯಿಂದ ದೂರ ಸರಿಯುವ ನಿರ್ಧಾರ ಮಾಡಿದಾಗ ಜೋಡಿ ತಮ್ಮದೇ ರೀತಿಯಲ್ಲಿ ಮುಂದಿನ ಹೆಜ್ಜೆ ಇಡುತ್ತಾರೆ. ಒಬ್ಬರು ಮುನಿಸಿಕೊಂಡು ದೂರವಾದ್ರೆ ಮತ್ತೊಬ್ಬರು ಭಾವನೆಗಳಿಗೆ ಸ್ಪಂದಿಸಿ ದೂರವಾಗ್ತಾರೆ. ಇನ್ನು ಕೆಲವರು ಒಪ್ಪಂದದ ಮೇಲೆ ಬೇರೆಯಾಗ್ತಾರೆ. ದೂರ ಹೋಗುವ ಸಮಯದಲ್ಲಿ ಸಂಗಾತಿ ನೀಡಿದ್ದ ಹಳೆ ಉಡುಗೊರೆಗಳನ್ನು ವಾಪಸ್ ನೀಡುವವರು ಅನೇಕರಿದ್ದಾರೆ. ಸಂಗಾತಿ ನೀಡಿದ ಎಲ್ಲ ವಸ್ತುಗಳನ್ನು ಅವರಿಗೆ ವಾಪಸ್ ನೀಡಿ, ಸಂಬಂಧ ಕಡಿದುಕೊಳ್ಳೋದು ಒಂದು ರೀತಿಯಾದ್ರೆ, ಸಂಗಾತಿಗೆ ಹೊಸ ಉಡುಗೊರೆ ನೀಡಿ ಸಂಬಂಧದಿಂದ ಬೇರ್ಪಡುವವರು ಇನ್ನೊಂದು ರೀತಿ. 

ಈಗ ಏಳು ವರ್ಷದ ಪ್ರೀತಿ (Love) ಯಿಂದ ಬೇರ್ಪಟ್ಟ ಮಹಿಳೆಯೊಬ್ಬಳು ತನ್ನ ಕಥೆಯನ್ನು ಸಾಮಾಜಿಕ ಜಾಲತಾಣ (Social Network) ದಲ್ಲಿ ಹಂಚಿಕೊಂಡಿದ್ದಾಳೆ. ಬಾಯ್ ಫ್ರೆಂಡ್ (Boyfriend) ಗೆ ಮೋಸ ಮಾಡಿ ಆತನಿಂದ ದೂರವಾದ್ಮೇಲೆ ಆತ ತನಗೆ ನೀಡಿದ ಉಡುಗೊರೆ ಯಾವುದು, ಹಾಗೆ ಅದ್ರಿಂದ ತನಗೇನನ್ನಿಸ್ತು ಎಂಬುದನ್ನು ಆಕೆ ಹೇಳಿದ್ದಾಳೆ. ಇದಕ್ಕೆ ಸಾಮಾಜಿಕ ಜಾಲತಾಣ ಬಳಕೆದಾರರು ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ.

Tap to resize

Latest Videos

ಟಿಕ್ ಟಾಕ್ ವಿಡಿಯೋದಲ್ಲಿ ಹುಡುಗಿ ಹೇಳಿದ್ದೇನು? : ಸಾಮಾಜಿಕ ಜಾಲತಾಣ ಟಿಕ್ ಟಾಕ್ ನ ರಿಚೆಲ್ ಹೆಸರಿನ ಖಾತೆಯಲ್ಲಿ ಮಹಿಳೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಆ ವಿಡಿಯೋದಲ್ಲಿ ಆಕೆ ಬಾಯ್ ಫ್ರೆಂಡ್ ನೀಡಿದ ಗಿಫ್ಟ್ ಓಪನ್ ಮಾಡೋದನ್ನು ನೀವು ನೋಡ್ಬಹುದು. ಕವರ್ ಒಂದನ್ನು ಆಕೆ ಓಪನ್ ಮಾಡ್ತಿದ್ದಾಳೆ. ಕವರ್ ಮೇಲೆ ಹಾರ್ಟ್ ಚಿತ್ರಗಳಿವೆ. ಒಳಗೆ ಒಂದು ಪುಸ್ತಕ ಹಾಗೂ ಬಾಯ್ ಫ್ರೆಂಡ್ ಲೆಟರ್ ಇದೆ. ಜಸ್ಟಿನ್ ಬೀಬರ್ ಬುಕ್ ನ ಒಂದು ಪೇಜ್ ಕೂಡ ಇದೆ. ಅದ್ರಲ್ಲಿ ಗೆಳತಿ ನಿನ್ನನ್ನು ನೀನು ಪ್ರೀತಿಸು ಎಂದು ಬರೆಯಲಾಗಿದೆ.

ಮೂವರು ಸೇರಿ ಸ್ಕಿಪ್ಪಿಂಗ್ ಮಾಡೋಕೆ ಸಾಧ್ಯವಾ? ಮೈ ಜುಮ್ ಅನ್ನಿಸೋ ಸಾಕ್ಷಿ ಇಲ್ಲಿದೆ ನೋಡಿ

ಪ್ರೀತಿಯನ್ನು ದೂರ ಮಾಡಿಕೊಂಡ ಹುಡುಗಿ : ಮಹಿಳೆ ಏಳು ವರ್ಷಗಳಿಂದ ಪ್ರೀತಿ ಮಾಡಿದ್ದ ವ್ಯಕ್ತಿಗೆ ಮೋಸ ಮಾಡಿದ್ದಾಳೆ. ಇದನ್ನು ಆಕೆಯೇ ಒಪ್ಪಿಕೊಂಡಿದ್ದಾಳೆ. ಕೊನೆಯಲ್ಲಿ ಇಬ್ಬರೂ ದೂರವಾಗಲು ನಿರ್ಧರಿಸಿದ್ದಾರೆ. ತನಗಿಂತ ಹೆಚ್ಚು ಬಾಯ್ ಫ್ರೆಂಡ್ ಪ್ರೀತಿ ಮಾಡ್ತಿದ್ದ ಮಹಿಳೆ ಆತನಿಂದ ದೂರವಾಗಿ, ಗಿಫ್ಟ್ ಪಡೆದ ಮೇಲೆ ನೊಂದುಕೊಂಡಿದ್ದಾಳೆ. ತಾನು ಕುಸಿದ ಅನುಭವವಾಗ್ತಿದೆ ಎಂದಿದ್ದಾಳೆ.  

ಮಾಜಿ ಬಾಯ್ ಫ್ರೆಂಡ್ ನೀಡಿದ ಪತ್ರದಲ್ಲಿ ಏನಿದೆ? : ಬಾಯ್ ಫ್ರೆಂಡ್ ಬರೆದ ಪತ್ರದಲ್ಲಿ ಏನಿದೆ ಎಂಬುದನ್ನು ಮಹಿಳೆ ತೋರಿಸಿದ್ದಾಳೆ. ಈಗ ನೀನು ನನ್ನನ್ನು ಪ್ರೀತಿ ಮಾಡೋದಿಲ್ಲ ಎನ್ನುವ ವಿಷ್ಯ ನನಗೆ ಗೊತ್ತಾಗಿದೆ. ನಿನ್ನನ್ನು ನೀನು ಮೊದಲು ಪ್ರೀತಿ ಮಾಡೋದು ಕಲಿ ಎಂದು ಆಕೆಯ ಬಾಯ್ ಫ್ರೆಂಡ್ ಪತ್ರದಲ್ಲಿ ಬರೆದಿದ್ದಲ್ಲದೆ ಸಹಿ ಕೂಡ ಹಾಕಿದ್ದಾನೆ. 

ಸಾಮಾಜಿಕ ಜಾಲತಾಣ ಬಳಕೆದಾರರ ಕಮೆಂಟ್ : ಸಾಮಾಜಿಕ ಜಾಲತಾಣದಲ್ಲಿ ಆತನ ಗಿಫ್ಟ್ ಅನೇಕರಿಗೆ ಇಷ್ಟವಾಗಿದೆ. ಹದಿಮೂರು ಮಿಲಿಯನ್ ಗಿಂತಲೂ ಹೆಚ್ಚು ಬಾರಿ ಹುಡುಗಿಯ ಈ ಟಿಕ್ ಟಾಕ್ ವಿಡಿಯೋವನ್ನು ಜನರು ನೋಡಿದ್ದಾರೆ. ಹುಡುಗನ ಗಿಫ್ಟ್ ಅಧ್ಬುತವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಆತ ನಿನಗೆ ಶುಭಕೋರುತ್ತಿದ್ದಾನೆ ಎಂದು ಒಬ್ಬರು ಬರೆದ್ರೆ, ನಿನಗೆ ಪುಸ್ತಕ ನೀಡುವ ಮೂಲಕ ಆತ ಬಲಶಾಲಿ ಎಂಬುದನ್ನು ಸಾಬೀತುಪಡಿಸಿದ್ದಾನೆ ಎಂದು ಇನ್ನೊಬ್ಬ ಕಮೆಂಟ್ ಮಾಡಿದ್ದಾನೆ. ಮತ್ತೊಬ್ಬರು, ಇದು ಆತನ ಟೆಕ್ನಿಕ್. ನಿನ್ನನ್ನು ಮತ್ತೆ ಪಡೆಯಲು ಹೀಗೆ ಮಾಡಿದ್ದಾನೆ ಎಂದು ಬರೆದಿದ್ದಾರೆ. ಕೊನೆ ಕ್ಷಣದಲ್ಲಿ ಪುರುಷರಿಗೆ ಜ್ಞಾನೋದಯವಾಗುತ್ತೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಆಗಿದ್ದು ಆಯ್ತು, ಮತ್ತೆ ಆತನ ಬಳಿ ಹೋಗು, ಇಂಥ ಪ್ರೀತಿ ಮತ್ತೆ ಸಿಗೋದಿಲ್ಲ ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ.

ಸೆಕ್ಸ್ ಎಂಜಾಯ್ ಮಾಡಲು ಲ್ಯೂಬ್ರಿಕೆಂಟ್ ಬಳಸೋದ್ರಿಂದ ಏನೆಲ್ಲಾ ಸಮಸ್ಯೆಯಾಗುತ್ತೆ ನೋಡಿ!

click me!