ಪ್ರೀತಿ ಹೆಸ್ರಲ್ಲಿ ನಡೆಯುತಿದ್ಯಾ ಷಡ್ಯಂತ್ರ? ಪಾಕಿಸ್ತಾನ ಗೆಳೆಯನ ಭೇಟಿಗೆ ತೆರಳಿದ ಭಾರತದ ಅಪ್ರಾಪ್ತೆ ವಶಕ್ಕೆ!

By Suvarna News  |  First Published Jul 29, 2023, 6:18 PM IST

ಪ್ರೀತಿಗೆ ಭಾಷೆ ಇಲ್ಲ, ಗಡಿಗಳ ಹಂಗಿಲ್ಲ. ಆದರೆ ಇತ್ತೀಚೆಗಿನ ಟ್ರೆಂಡ್ ಅಪಾಯದ ಮುನ್ಸೂಚನೆ ನೀಡುತ್ತಿದೆ. ಪಾಕಿಸ್ತಾನದಿಂದ ಸೀಮಾ ಹೈದರ್ ಭಾರತಕ್ಕೆ ಬಂದರೆ, ಭಾರತದಿಂದ ಅಂಜು, ಪಾಕಿಸ್ತಾನಕ್ಕೆ ತೆರಳಿ ನಾಸ್ರುಲ್ಲಾ ಮದುವೆಯಾಗಿದ್ದಾಳೆ. ಇದೀಗ ರಾಜಸ್ಥಾನದ 16 ವರ್ಷದ ಅಪ್ರಾಪ್ತ ಬಾಲಕಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಗೆಳೆಯನ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ. 


ನವದೆಹಲಿ(ಜು.29) ಭಾರತ ವಿರುದ್ಧ ನೇರಾ ನೇರ ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತಿರುವ ಪಾಕಿಸ್ತಾನ ಪ್ರೀತಿ ಹೆಸರಲ್ಲಿ ಷಡ್ಯಂತ್ರ ನಡೆಸುತ್ತಿದೆಯಾ? ಪಾಕಿಸ್ತಾನ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಕಾಳಿಗೆ ಭಾರತದ ಹೆಣ್ಣುಮಕ್ಕಳು ಬೀಳುತ್ತಿದ್ದಾರಾ? ಅಥವಾ ನಿಜಕ್ಕೂ ಪ್ರೀತಿ ಪ್ರೇಮವೇ? ಇದೀಗ ಈ ಪ್ರಶ್ನೆ ಭಾರಿ ಚರ್ಚೆಯಾಗುತ್ತಿದೆ. ಕಾರಣ ಗಡಿಯಾಚೆಗಿನ ಲವ್ ಇದೀಗ ಭಾರಿ ಟ್ರೆಂಡ್ ಆಗುತ್ತಿದೆ. ಪಾಕಿಸ್ತಾನದ ಸೀಮಾ ಹೈದರ್ ಭಾರತಕ್ಕೆ ಬಂದು ಸಚಿನ್ ಮೀನಾ ಜೊತೆ ಮದುವೆ, ಇತ್ತ ಭಾರತದ ಅಂಜು ಪಾಕಿಸ್ತಾನಕ್ಕೆ ತೆರಳಿ ನಾಸ್ರುಲ್ಲಾ ಜೊತೆ ಮದುವೆ ಘಚನೆಗಳು ವಿವಾದಕ್ಕೂ ಕಾರಣವಾಗಿದೆ. ಇದರ ಬೆನ್ನಲ್ಲೇ ಭಾರತ ಹಾಗೂ ಬಾಂಗ್ಲಾದೇಶದ ಪ್ರೇಮ ಕತೆಯೂ ಬಹಿರಂಗವಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ 16 ವರ್ಷದ ಅಪ್ರಾಪ್ತೆ ತನ್ನ ಪಾಕಿಸ್ತಾನದ ಬಾಯ್‌ಫ್ರೆಂಡ್ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಆದರೆ ಜೈಪುರ ವಿಮಾನ ನಿಲ್ದಾಣದಲ್ಲಿ ಅಪ್ರಾಪ್ತೆಯನ್ನು ಪೊಲೀಸರು ವಶಕ್ಕೆ ಪಡೆದು ಭಾರಿ ಅನುಹುತದಿಂದ ತಪ್ಪಿಸಿದ್ದಾರೆ.

ರಾಜಸ್ಥಾನದ ಸಿಕಾರ್ ಜಿಲ್ಲೆಯ ಶ್ರೀಮಾಧೋಪುರ್ ಗ್ರಾಮದ ನಿವಾಸಿಯಾಗಿರುವ 16 ವರ್ಷದ ಬಾಲಕಿ ಇನ್‌ಸ್ಟಾಗ್ರಾಂ ಮೂಲಕ ಪಾಕಿಸ್ತಾನದ ಅಸ್ಲಾಂ ಲಾಹೋರಿ ಪರಿಚಯವಾಗಿದೆ. ಅಸ್ಲಾಮ್ ಲಾಹೋರಿ ಮಾತಿಗೆ ಮರುಳಾದ ಬಾಲಕಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಕಳೆದ ಒಂದು ವರ್ಷದಿಂದ ಅಸ್ಲಾಂ ಲಾಹೋರಿ ಹಾಗೂ ಬಾಲಕಿ ನಡುವೆ ಗಾಢ ಪ್ರೀತಿ. ಪ್ರತಿ ದಿನ ವಿಡಿಯೋ ಕಾಲ್, ಮೆಸೇಜ್ ಸೇರಿದಂತೆ ಸಂಪರ್ಕ ನಡೆಯುತ್ತಲೇ ಇತ್ತು. ಆದರೆ ಪೋಷಕರಿಗೆ ಇದ್ಯಾವುದರ ಮಾಹಿತಿಯೂ ಇಲ್ಲ.

Tap to resize

Latest Videos

ಸೀಮಾ, ಅಂಜು ಬಳಿಕ ಭಾರತ-ಬಾಂಗ್ಲಾ ಲವ್ ಸ್ಟೋರಿ, ಆದ್ರೆ ಕಹಾನಿಯಲ್ಲಿ ಹಲವು ಟ್ವಿಸ್ಟ್!

ಭಾರತದ ಗೆಳತಿ ಅಪ್ರಾಪ್ತೆ ಅನ್ನೋದು ಅರಿತಿದ್ದರೂ ಅಸ್ಲಾಂ ಲಾಹೋರಿ, ಪಾಕಿಸ್ತಾನಕ್ಕೆ ಬರುವಂತೆ ಅಪ್ರಾಪ್ತೆಗೆ ಆಹ್ವಾನ ನೀಡಿದ್ದಾನೆ. ವಿಮಾನ ನಿಲ್ದಾಣಕ್ಕೆ ತೆರಳಿ ಟಿಕೆಟ್ ಖರೀದಿಸಿ ನೇರವಾಗಿ ಪಾಕಿಸ್ತಾನಕ್ಕೆ ಬರುವಂತೆ ಸೂಚಿಸಿದ್ದಾನೆ. ಪಾಕಿಸ್ತಾನ ವಿಮಾನ ನಿಲ್ದಾಣದಲ್ಲಿ ಇಳಿದ ಬಲಿಕ ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುತ್ತೇನೆ ಎಂದಿದ್ದಾನೆ. ಸ್ವರ್ಗದಂತಿರುವ ಪಾಕಿಸ್ತಾನದಲ್ಲಿ ನಾವು ಬದುಕೋಣ ಎಂದು ಅಪ್ರಾಪ್ತೆಗೆ ಅಸ್ಲಾಂ ಮಾತು ಕೊಟ್ಟಿದ್ದಾನೆ. ತನಗಿಂತ ಹಿರಿಯ ಹಾಗೂ ಕೈತುಂಬ ವೇತನ ಪಡೆಯುವ ಉದ್ಯೋಗ ಮಾಡುತ್ತಿರುವ ಅಸ್ಲಾಂ ಲಾಹೋರಿ ಇಷ್ಟು ಹೇಳಿದ ಮೇಲೆ ಇನ್ನೂ ಭಾರತದಲ್ಲಿ ಇದ್ದರೆ ನರಕ ಎಂದು ಅಪ್ತಾಪ್ತೆ ನೇರವಾಗಿ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದಾಳೆ.

ಜೈಪುರ ವಿಮಾನ ನಿಲ್ದಾಣಕ್ಕೆ ಬಂದ ಅಪ್ರಾಪ್ತೆ ಪಾಕಿಸ್ತಾನಕ್ಕೆ ಟಿಕೆಟ್ ಖರೀದಿಸಲು ಮುಂದಾಗಿದ್ದಾಳೆ. ಆದರೆ ಈಕೆ ಬಳಿ ಪಾಸ್‌ಪೋರ್ಟ್ ಇಲ್ಲ, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಬಿಟ್ಟರೆ ಇನ್ಯಾವ ದಾಖಲೆಯೂ ಇಲ್ಲ. ಇದರಿಂದ ಅನುಮಾನ ಗೊಂಡ ವಿಮಾನ ನಿಲ್ದಾಣಧ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಅಪ್ರಾಪ್ತೆಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಅಮ್ಮನಿಗೆ ಕಾಯುತ್ತಿದ್ದ ಮಕ್ಕಳು ತಬ್ಬಲಿ, ಇಸ್ಲಾಂಗೆ ಮತಾಂತರವಾಗಿ ಪಾಕ್‌ನ ನಾಸ್ರುಲ್ಲಾ ಮದ್ವೆಯಾದ ಅಂಜು!

ಪೊಲೀಸರ ವಿಚಾರಣೆಯಲ್ಲಿ ಇನ್‌ಸ್ಟಾಗ್ರಾಂ ಲವ್ ಸ್ಟೋರಿ ಬಹಿರಂಗಪಡಿಸಿದ್ದಾಳೆ. ಯುವಕನ ಕುರಿತು ಹೆಚ್ಚಿನ ಮಾಹಿತಿಯೂ ಈಕೆಗೆ ಇಲ್ಲ. ಇದರ ಹಿಂದೆ ಭಾರಿ ಷಡ್ಯಂತ್ರವಿರುವುದು ಗಮನಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇತ್ತ ಬಾಲಕಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಕೇಳಿ ದಂಗಾದ ಪೊಲೀಸರು ಜೈಪುರ ವಿಮಾನ ನಿಲ್ದಾಣದತ್ತ ದೌಡಾಯಿಸಿದ್ದಾರೆ. ವಿಚಾರಣೆ ವೇಳೆ ತಾನು ಸೀಮಾ ಹೈದರ್ ಹಾಗೂ ಅಂಜು ಲವ್ ಸ್ಟೋರಿಯಿಂದ ಪ್ರೇರಿತಗೊಂಡಿಲ್ಲ ಎಂದಿದ್ದಾಳೆ. ಕಳೆದೊಂದು ವರ್ಷದಿಂದ ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ.

ಈ ಘಟನೆ ಬಳಿಕ ಪಾಕಿಸ್ತಾನ ಸಾಮಾಜಿಕ ಜಾಲತಾಣದ ಮೂಲಕ ಪ್ರೀತಿ ಹೆಸರಲ್ಲಿ ಭಾರತದ ವಿರುದ್ಧ ಯುದ್ಧ ಸಾರಿದೆಯಾ? ಅನ್ನೋ ಅನುಮಾನಗಳು ಮೂಡುತ್ತಿದೆ. ಕಾರಣ ಅಂಜು ಪ್ರಕರಣದಲ್ಲೂ ಹಲವು ಅನುಮಾನಗಳು ಕಾಡುತ್ತಿದೆ. ಇದೀಗ ಇದು ಅಪ್ರಾಪ್ತ ಬಾಲಕಿಯನ್ನು ಮರಳು ಮಾಡಿ ಪಾಕಿಸ್ತಾನಕ್ಕೆ ಕರೆಯಿಸಿಕೊಳ್ಳುವ ಷಡ್ಯಂತ್ರ ಸ್ಪಷ್ಟವಾಗಿದೆ. ಹೀಗಾಗಿ ಗಡಿಯಾಚೆಗಿನ ಲವ್ ಸ್ಟೋರಿ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತಿದೆ.

click me!