ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಅತಿಮುಖ್ಯ ಪಾತ್ರವಹಿಸುತ್ತದೆ. ಅನಗತ್ಯ ಗರ್ಭಧಾರಣೆ, ಸೋಂಕನ್ನು ತಡೆದು ಲೈಂಗಿಕ ಆರೋಗ್ಯವನ್ನು ರಕ್ಷಿಸುತ್ತದೆ. ಆದ್ರೆ ಲೈಂಗಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ನಿಮ್ಮ ಬಳಿ ಇಲ್ಲವೆಂದಾಗ ನೀವು ನಿಮ್ಮನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು ಗೊತ್ತಾ?
ಅನಗತ್ಯ ಗರ್ಭಧಾರಣೆ ತಡೆಯುವುದು ಮಾತ್ರವಲ್ಲದೆ ಲೈಂಗಿಕವಾಗಿ ಹರಡುವ ಸೋಂಕುಗಳನ್ನು ತಡೆಯಲು ಕಾಂಡೋಮ್ ಬಳಕೆ ಅತ್ಯವಶ್ಯಕ. ಸುರಕ್ಷಿತ ಲೈಂಗಿಕ ಜೀವನ ಬಹಳ ಅವಶ್ಯಕ. ಪ್ರತಿ ಬಾರಿ ಸಂಭೋಗ ಬೆಳೆಸುವ ವೇಳೆ ನೀವು ಕಾಂಡೋಮ್ ಬಳಕೆಯನ್ನು ಮರೆಯಬಾರದು. ಕಾಂಡೋಮ್ ಎಲ್ಲ ರೀತಿಯಲ್ಲೂ ನಿಮ್ಮ ಲೈಂಗಿಕ ಜೀವನವನ್ನು ರಕ್ಷಿಸುತ್ತದೆ. ಆದ್ರೆ ಕೆಲವೊಮ್ಮೆ ಲೈಂಗಿಕ ಜೀವನ ನಡೆಸುವ ವೇಳೆ ಕಾಂಡೋಮ್ ನಿಮ್ಮ ಬಳಿ ಇರೋದಿಲ್ಲ. ಈ ಸಮಯದಲ್ಲಿ ಕಾಂಡೋಮ್ ಇಲ್ಲದೆ ಸಂಭೋಗ ಬೆಳೆಸಿದ್ರೆ ಅನಗತ್ಯ ಗರ್ಭಧಾರಣೆ ಜೊತೆಗೆ ಲೈಂಗಿಕ ಸೋಂಕು, ಹೆಚ್ ಐವಿಯಂತಹ ಅಪಾಯಕಾರಿ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಕಾಂಡೋಮ್ ಇಲ್ಲದ ಸಮಯದಲ್ಲಿ ನೀವು ಏನು ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.
ಸಂಭೋಗ ಬೆಳೆಸುವ ಸಾಹಸಕ್ಕೆ ಹೋಗ್ಬೇಡಿ : ಸಂಭೋಗ (Intercourse) ಬೆಳೆಸು ಸಮಯದಲ್ಲಿ ನಿಮ್ಮ ಬಳಿ ಕಾಂಡೋಮ್ ಇಲ್ಲದೆ ಹೋದ್ರೆ ನೀವು ಸೆಕ್ಸ್ ಆಸೆಯನ್ನು ನಿಯಂತ್ರಿಸಿಕೊಳ್ಳೋದು ಒಳ್ಳೆಯದು. ಯಾಕೆಂದ್ರೆ ಗರ್ಭಧಾರಣೆ (Pregnancy) ಮತ್ತು ಎಸ್ ಐಟಿಗಳನ್ನು ತಡೆಗಟ್ಟಲು ಕಾಂಡೋಮ್ ಅತ್ಯಗತ್ಯ. ಪ್ರತಿಯೊಬ್ಬರಿಗೂ ಸೆಕ್ಸ್ ಬಯಕೆಯನ್ನು ನಿಯಂತ್ರಿಸಿಕೊಳ್ಳೋದು ಕಷ್ಟವಾಗಬಹುದು ಆದ್ರೆ ಮುಂದೆ ಅಪಾಯ ಬರಬಾರದು ಎಂದಾದ್ರೆ ನೀವು ಈ ಕ್ಷಣದ ಆಸೆಯನ್ನು ಅದುಮಿಟ್ಟುಕೊಳ್ಳಬೇಕಾಗುತ್ತದೆ. ನೀವು ಹೀಗೆ ಮಾಡಲು ಯಶಸ್ವಿಯಾದ್ರೆ ನೀವು ಶೇಕಡಾ 100ರಷ್ಟು ಸುರಕ್ಷತೆಯನ್ನು ಪಡೆಯುತ್ತೀರಿ.
ಹುಡುಗೀನ ಇಂಪ್ರೆಸ್ ಮಾಡೋ ಭರದಲ್ಲಿ ಈ ರೀತಿ ಫ್ಲರ್ಟ್ ಮಾಡ್ಬೇಡಿ
ಅನಗತ್ಯ ಗರ್ಭಧಾರಣೆ ಹೀಗೆ ನಿಯಂತ್ರಿಸಿ : ಸಂಭೋಗ ಬಯಕೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಾದ್ರೆ, ಕಾಂಡೋಮ್ ಇಲ್ಲದೆ ನೀವು ಸಂಭೋಗ ಬೆಳೆಸಿದ್ರೆ ಅನಗತ್ಯ ಗರ್ಭಧಾರಣೆ ಬಗ್ಗೆ ಮುಖ್ಯ ಕಾಳಜಿವಹಿಸಬೇಕು. ಕಾಂಡೋಮ್‌ಗಳಿಗೆ ಪರ್ಯಾಯವಾದದ್ದನ್ನು ನೀವು ಬಳಸಬಹುದು. ನೀವು ಜನನ ನಿಯಂತ್ರಣ ಮಾತ್ರೆಗಳು, ಯುಐಡಿಗಳು ಮತ್ತು ಗರ್ಭನಿರೋಧಕ ಚುಚ್ಚುಮದ್ದು ಇತ್ಯಾದಿಗಳನ್ನು ಬಳಸಬಹುದು. ಈ ಎಲ್ಲ ಉಪಾಯಗಳು ಅನಗತ್ಯ ಗರ್ಭಧಾರಣೆ ತಡೆಯಲು ನಿಮಗೆ ನೆರವಾಗುತ್ತವೆ. ಆದ್ರೆ ಲೈಂಗಿಕವಾಗಿ ಹರಡುವ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ನಿಮಗೆ ಸೋಂಕು ತಗುಲಿ ಅಪಾಯ ಎದುರಾಗಬಹುದು.
ತುರ್ತು ಗರ್ಭನಿರೋಧಕ ಬಳಕೆ : ಕಾಂಡೋಮ್ ಇಲ್ಲದೆ ಸಂಭೋಗ ಬೆಳೆಸಿದರೆ, ಗರ್ಭಧರಿಸುವ ಅಪಾಯವಿದೆ ಎನ್ನಿಸಿದ್ರೆ ನೀವು ಗರ್ಭಧಾರಣೆಯನ್ನು ತಡೆಯಲು ತುರ್ತು ಗರ್ಭನಿರೋಧಕವನ್ನು ಬಳಸಬೇಕು. ಸಂಭೋಗದ ನಂತರ ಮುಂದಿನ 72 ಗಂಟೆಗಳ ಒಳಗೆ ನೀವು ತುರ್ತು ಗರ್ಭನಿರೋಧಕ ಮಾತ್ರೆಯನ್ನು ಸೇವನೆ ಮಾಡಬೇಕು. ಇದು ನೀವು ಗರ್ಭ ಧರಿಸುವುದನ್ನು ತಡೆಯುತ್ತದೆ.
ಅಬ್ಬಬ್ಬಾ..ನೋಡಿದ್ರೆ ಎದೆ ಝಲ್ ಅನ್ನುತ್ತೆ, ಪರ್ವತದ ಮೇಲೆ ಮದ್ವೆಯಾಗಿ ಸ್ಕೈಡೈವಿಂಗ್ ಮಾಡಿದ ಜೋಡಿ!
ಪ್ರಿ-ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ ಬಳಸಿ : ಕಾಂಡೋಮ್ ಇಲ್ಲದೆ ಸಂಭೋಗ ಬೆಳೆಸುವುದು ಅನಿವಾರ್ಯ ಎಂದಾಗ ಪ್ರಿ-ಎಕ್ಸ್ಪೋಸರ್ ಪ್ರೊಫಿಲ್ಯಾಕ್ಸಿಸ್ (PrEP) ಔಷಧಿಯ ಬಳಕೆಯನ್ನು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಹೆಚ್ ಐವಿ ಬಗ್ಗೆ ಹೆಚ್ಚಿನ ಅಪಾಯವಿರುವ ಜನರು ಇದನ್ನು ತೆಗೆದುಕೊಳ್ಳಬಹುದು. ಹೆಚ್ ಐವಿಯನ್ನು ಶೇಕಡಾ 99ರಷ್ಟು ಇದು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ನಿಮ್ಮ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳಿ : ಕೆಲವರು ಅಪರೂಪಕ್ಕೆ ಕಾಂಡೋಮ್ ಬಳಕೆ ಮಾಡದೆ ಸಂಭೋಗ ಬೆಳೆಸುತ್ತಾರೆ. ಮತ್ತೆ ಕೆಲವರು ಕಾಂಡೋಮ್ ನಿಂದ ದೂರವಿರ್ತಾರೆ. ಕಾಂಡೋಮ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿರುವ ಜನರು ಅನಗತ್ಯ ಗರ್ಭಧಾರಣೆ ಜೊತೆ ಲೈಂಗಿಕ ರೋಗದ ಸೋಂಕಿನ ಅಪಾಯವನ್ನು ಹೆಚ್ಚು ಎದುರಿಸುತ್ತಾರೆ. ಅಂಥವರು ಯಾವುದೇ ಸೋಂಕನ್ನು ಮೊದಲೇ ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ನಿಯಮಿತ ಎಸ್ ಟಿಐ ಪರೀಕ್ಷೆಗೆ ಒಳಪಡಬೇಕು. ಎಸ್ ಟಿಐ ಪರೀಕ್ಷೆ ಮಾಡಿಸಿಕೊಂಡಾಗ ನಿಮ್ಮಲ್ಲಿರುವ ಸಮಸ್ಯೆ ಪತ್ತೆಯಾಗುತ್ತದೆ. ತಕ್ಷಣ ನೀವು ಚಿಕಿತ್ಸೆಗೆ ಒಳಗಾದ್ರೆ ರೋಗದಿಂದ ಬಚಾವ್ ಆಗಬಹುದು.