ಅಬ್ಬಬ್ಬಾ..ನೋಡಿದ್ರೆ ಎದೆ ಝಲ್ ಅನ್ನುತ್ತೆ, ಪರ್ವತದ ಮೇಲೆ ಮದ್ವೆಯಾಗಿ ಸ್ಕೈಡೈವಿಂಗ್‌ ಮಾಡಿದ ಜೋಡಿ!

Published : Jul 29, 2023, 01:30 PM ISTUpdated : Jul 29, 2023, 01:47 PM IST
ಅಬ್ಬಬ್ಬಾ..ನೋಡಿದ್ರೆ ಎದೆ ಝಲ್ ಅನ್ನುತ್ತೆ, ಪರ್ವತದ ಮೇಲೆ ಮದ್ವೆಯಾಗಿ ಸ್ಕೈಡೈವಿಂಗ್‌ ಮಾಡಿದ ಜೋಡಿ!

ಸಾರಾಂಶ

ಮದುವೆ ಎಲ್ಲರ ಜೀವನದಲ್ಲೂ ಸ್ಪೆಷಲ್ ದಿನ. ಹೀಗಾಗಿ ಈ ದಿನ ವಿಶೇಷವಾಗಿರಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಸ್ಪೆಷಲ್ ಆರೇಂಜ್‌ಮೆಂಟ್ಸ್ ಸಹ ಮಾಡಿಕೊಳ್ತಾರೆ. ಹಾಗೆಯೇ ಇಲ್ಲೊಂದು ಜೋಡಿ ತಮ್ಮ ವೆಡ್ಡಿಂಗ್ ಫುಲ್ ಮೆಮೊರೆಬಲ್ ಆಗಿರಬೇಕು ಅಂತ ಎಂಥಾ ರಿಸ್ಕ್ ತಗೊಂಡಿದ್ದಾರೆ ನೋಡಿ.

ವೆಡ್ಡಿಂಗ್ ಅಂದ್ರೆ ಎಲ್ಲರ ಜೀವನದಲ್ಲೂ ಬಿಗ್ ಡೇ. ಹೀಗಾಗಿ ಈ ದಿನ ವಿಶೇಷವಾಗಿರಬೇಕೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿ ಸ್ಪೆಷಲ್ ಆರೇಂಜ್‌ಮೆಂಟ್ಸ್ ಸಹ ಮಾಡಿಕೊಳ್ತಾರೆ. ಸ್ಪೆಷಲ್ ಡೆಕೊರೇಶನ್‌, ವಿಭಿನ್ನ ಫೋಟೋಶೂಟ್‌, ಡಿಫರೆಂಟ್‌ ಕಾಸ್ಟ್ಯೂಮ್, ಡೆಸ್ಟಿನೇಶನ್ ವೆಡ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆಯಲು ಯತ್ನಿಸುತ್ತಾರೆ. ಇದಲ್ಲದೆ ಕೇವಲ ಚೌಟ್ರಿ, ಮದ್ವೆ ಹಾಲ್‌ಗಳನ್ನು ಬಿಟ್ಟು ಡಿಫರೆಂಟ್ ಆಗಿ ಬೀಚ್ ಸೈಡ್‌, ಸಮುದ್ರದಲ್ಲಿ, ಫ್ಲೈಟ್‌ನಲ್ಲಿ ಮದುವೆಯಾಗುವವರೂ ಇದ್ದಾರೆ. ಹಾಗೆಯೇ ಇಲ್ಲೊಂದು ಜೋಡಿ ತಮ್ಮ ವೆಡ್ಡಿಂಗ್ ಫುಲ್ ಮೆಮೊರೆಬಲ್ ಆಗಿರಬೇಕು ಅಂತ ಎಂಥಾ ರಿಸ್ಕ್ ತಗೊಂಡಿದ್ದಾರೆ ನೋಡಿ.

ನವವಿವಾಹಿತ ದಂಪತಿಗಳು (Couples) ಬಂಡೆಯಿಂದ ಸ್ಕೈಡೈವಿಂಗ್ ಮಾಡುವ ಮೂಲಕ ತಮ್ಮ ಮದುವೆಯ ಸಂಭ್ರಮವನ್ನು ಹೆಚ್ಚಿಸಿದರು. ದಂಪತಿಗಳು ಸಾಹಸಮಯ ಆಚರಣೆಯನ್ನು ತಮಗಾಗಿ ಮಾತ್ರವಲ್ಲದೆ ಮದುವೆಯ ಅತಿಥಿ (Guest)ಗಳಿಗಾಗಿಯೂ ಆಯ್ಕೆ ಮಾಡಿದ್ದರು. ಎತ್ತರದ ಪರ್ವತದ ಮೇಲಿಂದ ಸ್ಕೈಡೈವ್ ಮಾಡುವ ಮೂಲಕ ಈ ಜೋಡಿ ಮದುವೆಯಾಗಿದ್ದಾರೆ. ಈ ಮೂಲಕ ತಮ್ಮ ಮದುವೆಯನ್ನು ಯಾವಾಗಲೂ ನೆನಪಿನಲ್ಲಿ (Memorable) ಇರುವಂತೆ ಮಾಡಿಕೊಂಡಿದ್ದಾರೆ. 

ಸ್ಮಶಾನದಲ್ಲಿ ಮದುವೆಯ ಮಂಗಳ ವಾದ್ಯ..ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ಎತ್ತರದ ಬಂಡೆಯ ಮೇಲೆ ರೋಮಾಂಚನಕಾರಿ ಸ್ಕೈಡೈವಿಂಗ್ ಸಾಹಸ
ದಂಪತಿಗಳಾದ ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೊ ಲೆಕ್ವೆರ್ಸ್ ಮೇಲಿಂದ ಧುಮುಕುವ ಮೊದಲು ಬಂಡೆಯ ಅಂಚಿನಲ್ಲಿ ಮದುವೆಯಾಗಿದ್ದು, ತಮ್ಮ ಹೊಸ ಆರಂಭವನ್ನು ಮರೆಯಲಾಗದ ರೀತಿಯಲ್ಲಿ ಆಚರಿಸಿಕೊಂಡರು. ವೈರಲ್ ವೀಡಿಯೊದಲ್ಲಿ ವಧು- ವರ ಮತ್ತು ಅವರ ವಿವಾಹಕ್ಕೆ ಬಂದ ಅತಿಥಿಗಳು ಎತ್ತರದ ಬಂಡೆಯ ಮೇಲೆ ರೋಮಾಂಚನಕಾರಿ ಸ್ಕೈಡೈವಿಂಗ್ ಸಾಹಸವನ್ನು ಪ್ರದರ್ಶಿಸಿರುವುದನ್ನು ನೋಡಬಹುದು. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗ್ತಿದೆ. 

ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ದಂಪತಿಗಳು ಪ್ರಿಸ್ಸಿಲ್ಲಾ ಆಂಟ್ ಮತ್ತು ಫಿಲಿಪ್ಪೊ ಲೆಕ್ವೆರ್ಸ್ ಎತ್ತರದ ಬಂಡೆಯ ಅಂಚಿನಲ್ಲಿ ಮದುವೆಯಾಗುವುದನ್ನು ಕಾಣಬಹುದು. ವಿವಾಹ ಸಮಾರಂಭವು ಪೂರ್ಣಗೊಂಡ ನಂತರ, ನವವಿವಾಹಿತರು ತಮ್ಮ ಅತಿಥಿಗಳೊಂದಿಗೆ ಈ ಸಂದರ್ಭವನ್ನು ಆಚರಿಸಲು ಬಂಡೆಯಿಂದ ಸ್ಕೈಡೈವ್ ಮಾಡುತ್ತಾರೆ. ಸಾಹಸ ಪ್ರದರ್ಶಿಸುವ ಎಲ್ಲಾ ಜನರು ಸೂಕ್ತ ಸುರಕ್ಷತಾ ಕವಚಗಳನ್ನು ಧರಿಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸಾಕಷ್ಟು ಕಾಮೆಂಟ್‌ಗಳನ್ನು ಗಳಿಸಿದೆ.

ಕಾರಲ್ಲ..ಬಸ್ಸಲ್ಲ..ಸಿಂಗರಿಸಿದ ಜೆಸಿಬಿಯಲ್ಲಿ ಮದುಮಗಳ ಮೆರವಣಿಗೆ ಕರೆತಂದ ವರ!

ಒಬ್ಬ ಬಳಕೆದಾರರು, 'ನಾನು ಮದುವೆ ದಿನ ಇಂಥಾ ಸಾಹಸವನ್ನು ತುಂಬಾ ಇಷ್ಟಪಡುತ್ತೇನೆ' ಎಂದು ಬರೆದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ನನ್ನ ಮದುವೆಯಂದು ನಾನು ಇದನ್ನು ಮಾಡಲು ಖಂಡಿತವಾಗಿಯೂ ಬಯಸುತ್ತೇನೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ವ್ಯಕ್ತಿ, 'ಸಾಹಸದ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭವಾಗಲಿ' ಎಂದು ಹಾರೈಸಿದ್ದಾರೆ  ಒಟ್ನಲ್ಲಿ ಮದ್ವೆ ದಿನವೇ ಸ್ಕೈ ಡೈವಿಂಗ್ ಮಾಡಿರೋ ಜೋಡಿಯ ವಿಡಿಯೋ ಎಲ್ಲರ ಹುಬ್ಬೇರುವಂತೆ ಮಾಡಿರೋದಂತೂ ನಿಜ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು