ಬೇಡದ ದುಶ್ಚಟಗಳಿರುವ ವರನನ್ನು ವಧು ಮದುವೆ ಮಂಟಪದಲ್ಲಿಯೇ ತಿರಸ್ಕರಿಸಿ ಹೋದಂತಹ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ವಧುವೇ ದುಶ್ಚಟಕ್ಕೆ ದಾಸಿಯಾದರೆ ಏನು ಮಾಡೋದು? ರಾಜಸ್ಥಾನದ ಬರನ್ ಎಂಬಲ್ಲಿ ಇಂತಹ ಘಟನೆಯೊಂದು ನಡೆದಿದೆ.
ಜೈಪುರ: ಬೇಡದ ದುಶ್ಚಟಗಳಿರುವ ವರನನ್ನು ವಧು ಮದುವೆ ಮಂಟಪದಲ್ಲಿಯೇ ತಿರಸ್ಕರಿಸಿ ಹೋದಂತಹ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಆದರೆ ವಧುವೇ ದುಶ್ಚಟಕ್ಕೆ ದಾಸಿಯಾದರೆ ಏನು ಮಾಡೋದು? ರಾಜಸ್ಥಾನದ ಬರನ್ ಎಂಬಲ್ಲಿ ಇಂತಹ ಘಟನೆಯೊಂದು ನಡೆದಿದ್ದು, ವಧು ಗುಟ್ಕಾ ಸೇವಿಸುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿದೆ.
ದುಶ್ಚಟಗಳಿಗೆ ಒಮ್ಮೆ ದಾಸರಾದರೆ ಅವು ನಮ್ಮನ್ನು ನಿಯಂತ್ರಿಸಲು ಶುರು ಮಾಡುತ್ತವೆ. ಗುಟ್ಕಾ(Gutka), ಬೀಡಿ (Beedi) ಮದ್ಯಪಾನದಂತಹ ದುಶ್ಚಟಗಳಿಂದ ಅನೇಕರ ಬದುಕು ಬರ್ಬಾದ್ ಆಗಿದೆ. ಆದರೂ ಜನ ಬುದ್ದಿ ಕಲಿಯುತ್ತಿಲ್ಲ. ಗುಟ್ಕಾ ಸೇವನೆಯಿಂದ ಗಂಟಲು ಬಾಯಿಯ ಕ್ಯಾನ್ಸರ್‌ಗೆ ತುತ್ತಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ವಧು ನಾನ್ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮದ್ವೆ ಧಿರಿಸಿನಲ್ಲೇ ಗುಟ್ಕಾ ಸೇವಿಸಿದ ಘಟನೆ ನಡೆದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ವೀಡಿಯೋ ನೋಡಿದ ನೆಟ್ಟಿಗರು ಹಲವು ಹಾಸ್ಯಮಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
दुल्हन ने देसी अंदाज में दबाया गुटखा, फोन पर बतियाता रह गया दूल्हा pic.twitter.com/WygNDDQMGA
— Abhishek Roy (@abhiroy127)
undefined
ವೀಡಿಯೋದಲ್ಲೇನಿದೆ?
ವರ ಕುಡುಕ, ಅನಕ್ಷರಸ್ಥ, ಧೂಮಪಾನ ಮಾಡ್ತಾನೆ, ಎಂಬೆಲ್ಲಾ ಕಾರಣಕ್ಕೆ ಅನೇಕ ವಧುಗಳು ಮದ್ವೆ ಮಂಟಪದಲ್ಲೇ ವರನನ್ನು ತಿರಸ್ಕರಿಸಿದ ಹೋದಂತಹ ಹಲವು ಘಟನೆಗಳು ನಡೆದಿದೆ. ಆದರೆ ಇಲ್ಲಿ ಸರಿ ಉಲ್ಟಾ, ವೀಡಿಯೋದಲ್ಲಿ ಕಾಣಿಸುವಂತೆ ವಧು ಹಾಗೂ ವರ ತಮ್ಮ ಮದುವೆ ಧಿರಿಸಿನಲ್ಲೇ ರಸ್ತೆಯಲ್ಲಿ ನಿಂತಿದ್ದಾರೆ. ಇವರ ಅಕ್ಕಪಕ್ಕದಲ್ಲೇ ಹಲವು ವಾಹನಗಳು ಹಾದು ಹೋಗುತ್ತಿದ್ದು, ವರ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದರೆ, ವಧು ತನ್ನ ಕೈಯಲ್ಲಿದ್ದ ಗುಟ್ಕಾ ಪ್ಯಾಕೇಟ್ ಅನ್ನು ತೆರೆದು ಅದನ್ನು ಅಂಗೈಗೆ ಹಾಕಿಕೊಳ್ಳುತ್ತಾಳೆ. ನಂತರ ಗುಟ್ಕಾ ತಿನ್ನುವವರ ಹವ್ಯಾಸದಂತೆ ಅದನ್ನು ಕೈಗಳಿಂದ ಉಜ್ಜಿ ಬಾಯಿಗೆ ಹಾಕಿಕೊಳ್ಳುತ್ತಾಳೆ. ಅತ್ತ ವರ ಫೋನ್‌ನಲ್ಲಿ ಬ್ಯುಸಿಯಾಗಿದ್ದು, 12 ಸೆಕೆಂಡ್‌ಗಳ ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.
ರಾಜಸ್ಥಾನದ ಬರನ್ ಪ್ರದೇಶದಲ್ಲಿ ನಡೆದ ಘಟನೆ ಎಂದು ಹೇಳಲಾಗುತ್ತಿದ್ದು, ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮದ್ವೆಯಾದ ಜೋಡಿ ಮದ್ವೆ ಮುಗಿಸಿ ಊರಿಗೆ ಹೊರಟಿದ್ದರು. ಅಷ್ಟರಲ್ಲಿ ವರನ ಫೋನ್ ರಿಂಗ್ ಆಗಿದ್ದು, ಆತ ಮಾತನಾಡುತ್ತಾ ನಿಂತಿದ್ದರೆ, ಈಕೆ ಸಿಕ್ಕಿದ್ದೇ ಚಾನ್ಸ್ ಅಂತ ಜರ್ದಾ ತಿನ್ನುವುದರಲ್ಲಿ ಬ್ಯುಸಿಯಾಗಿದ್ದಾಳೆ.
ಅಥಣಿಯಲ್ಲಿ ಎಗ್ಗಿಲ್ಲದೇ ನಡೆದಿದೆ ಮಾವಾ, ಗುಟ್ಕಾ ಮಾರಾಟ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ವೀಡಿಯೋ ನೋಡಿದ ನೆಟ್ಟಿಗರು ವಧುವರರ ಜಾತಕ ಹೊಂದಿಸುವಾಗ 36 ಗುಣಗಳ ಉಲ್ಲೇಖ ಮಾಡುವುದನ್ನು ಪ್ರಸ್ತಾಪಿಸಿ ಈಕೆ 36 ಗುಣಗಳನ್ನು ಹೊಂದಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈಕೆಗೆ ಬಾಲಿವುಡ್ ನಟರು ಸ್ಫೂರ್ತಿ ಎಂದು ಕಾಮೆಂಟ್ ಮಾಡಿದ್ದಾರೆ. ವರದಿಗಳ ಪ್ರಕಾರ ಮೇ 26 ರಂದು ಬರಾನ್‌ನಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ 2,222 ಜೋಡಿಗಳು ಹಸೆಮಣೆ ಏರಿದ್ದು, ಈ ಸಾಮೂಹಿಕ ಮದ್ವೆ (Mass Marriage) ಕಾರ್ಯಕ್ರಮ ಗಿನ್ನಿಸ್ ಪುಸ್ತಕದಲ್ಲಿ ಹೊಸ ದಾಖಲೆಯಾಗಿ ದಾಖಲಾಗಿದೆ.
ಮದ್ಯಪಾನ ಮಾಡಿ, ಗುಟ್ಕಾ ತಿನ್ನಿ, ಗಾಂಜಾ ಹೊಡೆಯಿರಿ; ಆದರೆ ನೀರು ಉಳಿಸಿ ಎಂದ BJP ಸಂಸದ..!