ಜನ್ಮವಿತ್ತ ಮಗ ಕಣ್ಣೆದುರು ಸತ್ತನೆಂದು ತಾನೂ ಪ್ರಾಣಬಿಟ್ಟ ತಾಯಿ

By Sathish Kumar KH  |  First Published May 31, 2023, 10:39 PM IST

ಬೆಳಗಾವಿಯಲ್ಲಿ ಮಗ ಸಾವನ್ನಪ್ಪಿದ ಸುದ್ದಿಯನ್ನು ಕೇಳಿದ ತಾಯಿಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.


ಬೆಳಗಾವಿ (ಮೇ 31): ಸಾಮಾನ್ಯವಾಗಿ 60 ವರ್ಷವಾದವರೆ ಅರಳು-ಮರಳು ಎನ್ನುವ ನಾವು 70 ವರ್ಷ ದಾಟಿದವರಿಗೆ ಊರು ಹೋಗು, ಕಾಡು ಬಾ ಎನ್ನುವ ವಯಸ್ಸಾಗಿದೆ ಎಂದು ಹೇಳುತ್ತೇವೆ. ಆದರೆ, ವೃದ್ಯಾಪ್ಯದಲ್ಲಿರುವ ತಾಯಿಯ ಮುಂದೆಯೇ ಜನ್ಮವಿತ್ತ ಮಗ ಸಾವನ್ನಪ್ಪಿದ್ದನ್ನು ಸಹಿಸಲಾಗದೇ ತಾಯಿಯೂ ಪ್ರಾಣಬಿಟ್ಟ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಸುರೇಬಾನ ಗ್ರಾಮದಲ್ಲಿ ನಡೆದಿದೆ.

ಹೌದು, ಸಾಮಾನ್ಯವಾಗಿ ಮನೆಯಲ್ಲಿನ ಯಾವ ಸದಸ್ಯರ ಸಾವಿನ ಸುದ್ದಿ ಕೇಳಿದರೂ ತೀವ್ರ ಆಘಾತ ಉಂಟಾಗುವುದು ಸಹಜ. ಆದರೆ, ತಾಜು ಜನ್ಮ ನೀಡಿದ ಮಗನೇ ತಾಯಿಯ ಕಣ್ಣೆದುರಿಗೆ ಪ್ರಾಣಬಿಡುತ್ತಾನೆ ಎಂದರೆ ಅದಕ್ಕಿಂತ ದೊಡ್ಡ ಸಂಕಟ ತಾಯಿಗೆ ಬೇರಾವುದೂ ಆಗಲಿಕ್ಕಿಲ್ಲ. ಅದೇ ರೀತಿ ತಾನು ಒಂಭತ್ತು ತಿಂಗಳು ಹೊತ್ತು, ಹೆತ್ತು ಸಾಕಿ ಸಲುಹಿದ ಮಗನೇ ತನ್ನ ಕಣ್ಣೆದುರಿಗೆ ಸಾವನ್ನಪ್ಪಿದ್ದಾನೆ ಎಂಬ ಸುದ್ದಿಯನ್ನು ಕೇಳಿದ ತಾಯಿಯೂ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾಳೆ. ಇನ್ನು ಈ ಮಹಾತಾಯಿಯ ಮತ್ತೊಬ್ಬ ಮಗನೂ ಕೂಡ ಕುಸಿದು ಬಿದ್ದಿದ್ದಾನೆ. ಈ ಘಟನೆಯಿಂದ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. 

Tap to resize

Latest Videos

ಹಾವು ಕಚ್ಚಿದ ಪುತ್ರನಿಗೆ ಕಿಡ್ನಿ ಕೊಟ್ಟು ಮರುಜನ್ಮ ನೀಡುತ್ತಿರುವ ತಾಯಿ: ಆರ್ಥಿಕ ಸಹಾಯಕ್ಕೆ ಮನವಿ

ನೇರಳೆ ಹಣ್ಣು ಕೀಳುತ್ತಿದ್ದಾಗ ಜಾರಿಬಿದ್ದು ಸಾವು: ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿರುವುದು ಬೆಳಗಾವಿಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ. ಬಾಳಪ್ಪ ವೆಂಕಪ್ಪ ತಳವಾರ (50) ಹಾಗೂ ರುದ್ರವ್ವ ತಳವಾರ (70) ಮೃತರು. ಇನ್ನು ಜೀವನದ ಬಂಡಿಯನ್ನು ಸಾಗಿಸಲು ನೇರಳೆಹಣ್ಣು ವ್ಯಾಪಾರ ಮಾಡಿಕೊಂಡಿದ್ದ ಮೃತ ಬಾಳಪ್ಪ, ನೇರಳೆ ಮರವನ್ನು ಹತ್ತಿ ಹಣ್ಣುಗಳನ್ನು ಕೀಳುತ್ತಿದ್ದಾಗ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸುದ್ದಿಯನ್ನು ಮನೆಯಲ್ಲಿದ್ದ ತಾಯಿಗೆ ಹೇಳುತ್ತಿದ್ದಂತೆ ಮಾತೆ ರುದ್ರವ್ವ ಕೂಡ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದ್ದಾಳೆ. 

ಗ್ರಾಮಸ್ಥರಿಂದ ಅಂತ್ಯಕ್ರಿಯೆ: ತಾಯಿ ರುದ್ರವ್ವ ತಳವಾರ ಹಾಗೂ ಸಹೋದರ ಬಾಳಪ್ಪ ತಳವಾರ ಸಾವಿನ ಸುದ್ದು ತಿಳಿಯುತ್ತಿದ್ದಂತೆ ರುದ್ರವ್ವನ ಮತ್ತೊಮ್ಮ ಕಿರಿಯ ಮಗ ಬಸವರಾಜ್‌ ತಳವಾರ ಕೂಡ ಕುಸಿದು ಬಿದ್ದಿದ್ದಾರೆ. ಮನೆಯಲ್ಲಿ ಒಂದೇ ದಿನ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಮಗ ಆಸ್ಪತ್ರೆಗೆ ಸೇರಿದ್ದಾರೆ. ಇದರಿಂದ ಇಡೀ ಕುಟುಂಬದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಕುಸಿದುಬಿದ್ದ ಚಿಕ್ಕ ಮಗನನ್ನು ಆಸ್ಪತ್ರೆಗೆ ದಾಖಲಿಸಿ ಮೃತರನ್ನು ಉಳಿದ ಕುಟುಂಬ ಸದಸ್ಯರೊಂದಿಗೆ ಸೇರಿ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ‌ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಕ್ರಮ ಸಂಬಂಧ ಗೊತ್ತಿದ್ರೂ ಸುಮ್ಮನಿದ್ದ ಗಂಡನನ್ನೇ ಕೊಲ್ಲಿಸಿದ ಪತ್ನಿ: ಜಾನಪದ ಕಲಾವಿದನ ಮಕ್ಕಳು ಅನಾಥ

ಬೆಳಗಾವಿ (ಮೇ 31): ನದಿಯಲ್ಲಿ ಒಬ್ಬಂಟಿಯಾಗಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಜಲಸಮಾಧಿ ಆಗಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ. ಸದಲಗಾ ಪಟ್ಟಣದ ಹೊರವಲಯದ ದೂಧಗಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗಿರಗಾಂವ್ ಗ್ರಾಮದ ನಿವಾಸಿ ಸಾಗರ ದಿನಕರ್ ವಾಳಕೆ (22) ಮೃತ ದುರ್ದೈವಿ ಯುವಕನಾಗಿದ್ದಾನೆ. ಸ್ಥಳಕ್ಕೆ ಅಗ್ನಿ ಶಾಮಕ ಹಾಗೂ ಸದಲಗಾ ಪೊಲೀಸರ ಭೇಟಿ ಪರಿಶೀಲನೆ ಮಾಡಿದ್ದಾರೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಮೃತ ದೇಹಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧನೆ ಮಾಡುತ್ತಿದ್ದಾರೆ. 

click me!