ಮದುವೇಲಿ ಈ ಫ್ರೆಂಡ್ಸ್‌ ಕೊಟ್ಟ ಕಾಟ ಒಂದೊಂದಲ್ಲ ಕಣಣ್ಣ!

Published : Apr 18, 2025, 09:04 PM ISTUpdated : Apr 19, 2025, 12:25 PM IST
ಮದುವೇಲಿ ಈ ಫ್ರೆಂಡ್ಸ್‌ ಕೊಟ್ಟ ಕಾಟ ಒಂದೊಂದಲ್ಲ ಕಣಣ್ಣ!

ಸಾರಾಂಶ

ಮದುವೆ ವೇದಿಕೆಯಲ್ಲಿ ವರನ ಸ್ನೇಹಿತರು ಕ್ಯೂಆರ್ ಕೋಡ್ ಸ್ಕ್ಯಾನರ್‌ನ್ನು ಆತನ ಕೊರಳಿಗೆ ತೂಗುಹಾಕಿ ತಮಾಷೆ ಮಾಡಿದ್ದಾರೆ. ಸ್ನೇಹಿತರು ಒಬ್ಬೊಬ್ಬರಾಗಿ ಸ್ಕ್ಯಾನ್ ಮಾಡಿ ತಲಾ ಒಂದು ರೂಪಾಯಿ ಮುಯ್ಯಿ ಹಣ ನೀಡಿ, ವರನನ್ನು ಕಾಲೆಳೆದಿದ್ದಾರೆ. ವಧು ಮತ್ತು ಇತರರು ನೋಡಿ ನಕ್ಕಿದ್ದಾರೆ. ಕೆಲವರು ಸಿಟ್ಟಾಗಿದ್ದಾರೆ. ಕೊನೆಗೆ ವರ ಬಿಡುಗಡೆ ಕೋರಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಮದುವೆಗಳಿಗೆ ಹಾಗೂ ಮದುವೆ ಕಾರ್ಯಕ್ರಮಗಳಿಗೆ ಸ್ನೇಹಿತರು ಬಂದು ಕ್ವಾಟ್ಲೆ ಕೊಡುವುದು ಸಾಮಾನ್ಯವಾಗಿದೆ. ಇಲ್ಲೊಂದು ಮದುವೆ ವೇದಿಕೆಯಲ್ಲಿ ಮದುಮಗನಿಗೆ ಶುಭ ಕೋರಲು ಬಂದ ಆತನ ಸ್ನೇಹಿತರ ಪೈಕಿ ಒಬ್ಬ ಹುಡಿಗಿ ಕ್ಯೂ-ಆರ್ ಕೋಡ್ ಸ್ಕ್ಯಾನರ್ ಅನ್ನು ಆತನ ಕೊರಳಿಗೆ ತೂಗು ಹಾಕುತ್ತಾಳೆ. ಇದಾದ ನಂತರ ಉಳಿದ ಸ್ನೇಹಿತರು ಒಬ್ಬೊಬ್ಬರೇ ಬಂದು ಆತನ ಕುತ್ತಿಗೆಯಲ್ಲಿ ನೇತಾಡುತ್ತಿದ್ದ QR Code Scanಗೆ ಮುಯ್ಯಿ ಹಣವನ್ನು ಹಾಕಿ ಹೋಗುತ್ತಾರೆ. ಇದರಲ್ಲಿಯೂ ಒಂದು ಟ್ವಿಸ್ಟ್ ಇದೆ. ಅದೇನು ಎಂಬುದನ್ನು ನೀವೇ ನೋಡಿ..

ದೇಶದಲ್ಲಿ ಇದೀಗ ಮದುವೆ ಸೀಸನ್ ಆರಂಭವಾಗಿದೆ. ಹೀಗಾಗಿ, ಮದುವೆ ಸಂಬಂಧಿತ ವಿಡಿಯೋಗಳು, ರೀಲ್ಸ್‌ಗಳು ಭರ್ಜರಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದರಲ್ಲಿ ಮದುಮಕ್ಕಳಿಗೆ ಅವರು ಸ್ನೇಹಿತರು ಕೊಡುವ ಕ್ವಾಟ್ಲೆಗಳಿ ಒಂದೆರಡಲ್ಲ. ಆದರೆ, ಸ್ನೆಹಿತರು ಕೊಟ್ಟ ಕ್ವಾಟ್ಲೆಯನ್ನು ಮದುಮಕ್ಕಳು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು ಅಷ್ಟೇ. ಇದನ್ನು ಇತ್ತೀಚಿನ ಯುವಜನರು ಕೂಡ ಅರ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಅದ್ಧೂರಿಯಾಗಿ ಮದುವೆ ಮಾಡಿಕೊಳ್ಳುತ್ತಿದ್ದ ನವದಂಪತಿ ಇದ್ದ ವೇದಿಕೆಗೆ ಬಂದ ವರನ ಸ್ನೇಹಿತರು ಆತನಿಗೆ ಒಂದು ಕ್ವಾಟ್ಲೆ ಕೊಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಆನ್‌ಲೈನ್ ಪ್ರೀತಿ, ಕೊರಿಯಾ ಯುವಕನ ಮದ್ವೆಯಾಗಲು ಹೋದ ಹುಡುಗಿ ಅದೇ ಸ್ಪೀಡ್‌ಲ್ಲಿ ವಾಪಸ್

ಆರಂಭದಲ್ಲಿ ಬಿಳಿ ಬಣ್ಣದ ಹೂವಿನ ಸೀರೆ ಧರಿಸಿ ಬಂದ ಯುವತಿ ವರನ ಕುತ್ತಿಗೆಗೆ ಒಂದಿಉ ಕ್ಯೂ-ಆರ್ ಕೋಡ್ ಸ್ಕ್ಯಾನ್ ಹಾಕಲು ಮುಂದಾಗುತ್ತಾಳೆ. ಇದಕ್ಕೆ ವರ ವಿರೋಧ ಮಾಡಿದರೂ ಬಲವಂತವಾಗಿ ಆತನ ಕುತ್ತಿಗೆಗೆ ಅದನ್ನು ತೂಗು ಹಾಕಿ ಹೋಗುತ್ತಾಳೆ. ಇದಾದ ನಂತರ ಬರುವ ಆತನ ಇತರ ಮಹಿಳಾ ಸ್ನೇಹಿತರು ಒಬ್ಬೊಬ್ಬರೇ ಬಂದು ಆತನ ಎದೆ ಮೇಲೆ ಇದ್ದ ಕ್ಯೂ-ಆರ್ ಕೋಡ್‌ಗೆ ಸ್ಕ್ಯಾನ್ ಮಾಡಿ ಹಣವನ್ನು ಮುಯ್ಯಿ ಕೊಡುವುದಕ್ಕಾಗಿ ಪಾವತಿ ಮಾಡುತ್ತಾರೆ.  ಅದೇ ರೀತಿ ಮೂರ್ನಾಲ್ಕು ಯುವತಿಯರು ಆನ್‌ಲೈನ್ ಮೂಲಕ ಹಣ ಪಾವತಿಸುತ್ತಾರೆ. ಇದಾದ ನಂತರ ನಾಲ್ಕಾರು ಯುವಕರೂ ಕೂಡ ಸ್ಕ್ಯಾನ್ ಮಾಡಿ ಹೋಗುತ್ತಾರೆ.

ಸ್ನೇಹತರ ಈ ಕ್ವಾಟ್ಲೆಯನ್ನು ನೋಡಿ ವರ ನಗಾಡುತ್ತಾನೆ. ಆತನ ಪಕ್ಕದಲ್ಲಿ ನಿಂತಿದ್ದ ವಧು ಇಲ್ಲೇನು ನಡೆಯುತ್ತಿದೆ, ಏಕೆ ನನ್ನ ಗಂಡನಿಗೆ ಹೀಗೆ ಮಾಡುತ್ತಿದ್ದಾರೆ ಎಂದು ಸ್ವಲ್ಪ ಕೋಪ ಮಾಡಿಕೊಂಡು ನೋಡಿದರೂ ಆಕೆಯ ನೋಟಕ್ಕೆ ಇಲ್ಲಿ ಯಾರೂ ಪ್ರಾಮುಖ್ಯತೆಯನ್ನು ನೀಡಿಲ್ಲ. ಇಲ್ಲಿ ಸ್ನೇಹಿತರು ಮಾಡುತ್ತಿದ್ದ ಗೇಲಿಯನ್ನೂ ವಿರೋಧ ಮಾಡುವುದಕ್ಕೆ ವರನ ಮನಸ್ಸು ಒಪ್ಪುವುದಿಲ್ಲ. ಈ ಎಲ್ಲ ಘಟನೆಯನ್ನು ಒಬ್ಬರು ವಿಡಿಯೋ ಮಾಡಿದ್ದಾರೆ. ಅದರಲ್ಲಿ ಎಲ್ಲರೂ ವರನಿಗೆ ಮುಯ್ಯಿ ಮಾಡಿದ್ದ ಹಣ ಎಷ್ಟು ಎಂಬುದನ್ನು ತೋರಿಸಿದ್ದಾರೆ. ಎಲ್ಲರೂ ತಲಾ ಒಂದೊಂದು ರೂ. ಮುಯ್ಯಿ ಮಾಡಿ ಭರ್ಜರಿಯಾಗಿ ಭೋಜನ ಮಾಡಿಕೊಂಡು ಹೋಗುತ್ತಿದ್ದುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಆಕೆಗೆ 13 ವರ್ಷ, ಆತ ಡ್ರೈವರ್; ಇಬ್ಬರ ಪ್ರೀತಿಗೆ ಕೊಳ್ಳಿ ಇಟ್ಟವರಾರು?

ಇಷ್ಟೆಲ್ಲಾ ಮುಗಿದ ನಂತರ ಸಾಕು ನನ್ನನ್ನು ಬಿಟ್ಟುಬಿಡಿ ಎಂದು ವರ ಕೇಳುತ್ತಾನೆ. ಆದರೂ ಮದುವೆಗೆ ಬಂದಿದ್ದ ಎಲ್ಲ ಸ್ನೇಹಿತರೂ ಸ್ಕ್ಯಾನ್ ಮಾಡಿ ತಲಾ ಒಂದೊಂದು ರೂ. ಹಣ ಪಾವತಿಸುತ್ತಾರೆ. ಇದನ್ನು ಮದುವೆ ಮನೆಯಲ್ಲಿದ್ದ ಎಲ್ಲರೂ ನೋಡಿ ನಗಾಡುತ್ತಾರೆ. ಕೆಲವು ಸಂಪ್ರದಾಯಸ್ಥರು ಸಿಟ್ಟು ಮಾಡಿಕೊಂಡಿದ್ದೂ ಉಂಟು. ಕೊನೆಗೆ ಸಾಕು ನನ್ನನ್ನು ಬಿಟ್ಟುಬಿಡಿ ಎಂದು ವರ ಕೈಮುಗಿದು ಕೇಳಿಕೊಂಡಿದ್ದಾನೆ. ಇದನ್ನೆಲ್ಲಾ ನೋಡುತ್ತಿದ್ದ ವಧು ನಗಾಡಿದ್ದಾಳೆ.

ಈ ವಿಡಿಯೋವನ್ನು ಮಾನಸ ಆರ್. ಗೌಡ (Manasa R Gowda) ಎನ್ನುವವರು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡಿದ್ದಾರೆ. 1.8 ಲಕ್ಷಕ್ಕೂ ಅಧಿಕ ಜನರು ಲೈಕ್ ಮಾಡಿದ್ದಾರೆ. ನೂರಾರು ಜನರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಈ ಪೈಕಿ ಹಲವರು ವರನ ಬಗ್ಗೆ ಪಾಪ ಎಂದು ಸಿಂಪತಿ ತೋರಿಸಿದ್ದಾರೆ. ಇನ್ನು ಕೆಲವರು ಮದುಮಗಳಿಗೆ ಒಂದು ರೂ. ಆದರೂ ಮುಯ್ಯಿ ಕೊಡೋದಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಹುಡುಗ ರಿಯಲೀ ಗುಡ್, ಕೇವಲ 1 ರೂ. ಹಣವನ್ನು ಕೊಟ್ಟರೂ ತುಂಬಾ ಖುಷಿಪಟ್ಟಿದ್ದಾನೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!