
ನವದೆಹಲಿ(ಏ.18) ಆನ್‌ಲೈನ್ ಮೂಲಕ ಪ್ರೀತಿ ಶುರುವಾಗಿ ದೇಶ ಗಡಿ ದಾಡಿ ಬಂದು, ಗಡಿ ದಾಟಿ ತೆರಳಿದ ಹಲವು ಘಟನೆಗಳಿವೆ. ಈ ಪೈಕಿ ಸೀಮಾ ಹೈದರ್ ಸೇರಿದಂತೆ ಹಲವು ಪ್ರೀತಿ ಹಾಗೂ ಮದುವೆ ಭಾರಿ ಸದ್ದು ಮಾಡಿದೆ. ದೇಶ ವಿದೇಶಗಳ ಗಡಿ ದಾಟಿದ ಪ್ರೀತಿ ಮದುವೆ ಅರ್ಥ ಪಡೆದಿದೆ. ಇದೀಗ ಭಾರತದ 17ರ ಹರೆಯದ ಬಾಲಕಿಗೆ ಆನ್‌ಲೈನ್ ಮೂಲಕ ಒಬ್ಬರನ ಪರಿಚಯವಾಗಿದೆ. ಪ್ರೀತಿ ಗಾಢವಾಗಿದೆ. ವಿಡಿಯೋ ಕಾಲ್ ನಿರಂತರವಾಗಿದೆ. ಕೊನೆಗೆ 17 ಬಾಲಕಿ ಗಟ್ಟಿ ಮನಸ್ಸು ಮಾಡಿ ತಾನು ಇಷ್ಟು ದಿನ ಪ್ರೀತಿಸಿದ ಕೊರಿಯಾ ಹುಡುಗನ ಜೊತೆ ಮದುವೆಯಾಗಲು ತೆರಳಿದ್ದಾಳೆ. ಹುಡುಗ ಹೇಳಿದ ಸ್ಥಳಕ್ಕೆ ಹೋದಾಗ ಬಾಲಕಿಗೆ ಭ್ರಮನಿರಸನವಾಗಿದೆ. ಹೋದ ಸ್ಪೀಡಲ್ಲೇ ವಾಪಸ್ ಬಂದ ಘಟನೆ ನಡೆದಿದೆ.
ಚಾಟಿಂಗ್ ಪ್ರೀತಿಗೆ ವಿಡಿಯೋ ಕಾಲ್ ಸ್ಪರ್ಶ
ಭಾರತದ 17ರ ಬಾಲಕಿ ಈ ಪ್ರೀತಿ ಕತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆನ್‌ಲೈನ್ ಪ್ರೀತಿ, ಮದುವೆ ಕೊನೆಗೆ ದಿಢೀರ್ ಯೂಟರ್ನ್ ಪಡೆದ ಘಟನೆ ಪೋಸ್ಟ್‌ಗಳು ಸದ್ದು ಮಾಡುತ್ತಿದೆ. ಆದರೆ ಘಟನೆ ಕುರಿತು ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ. ಸೋಶಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಭಾರತದ 17ರ ಹರೆಯದ ಬಾಲಕಿಗೆ ಆನ್‌ಲೈನ್ ಮೂಲಕ ವಿದೇಶಿಗನ ಪರಿಚಯವಾಗಿದೆ. ಆರಂಭದಲ್ಲಿ ಹೆಸರು, ಊರು ಕೇಳಿ ಚಾಟಿಂಗ್ ಶುರುವಾಗಿದೆ. ಚಾಟಿಂಗ್ ಹೆಚ್ಚಾದಂತೆ ಬಾಲಕಿಗೆ ಪ್ರೀತಿ ಗಾಢವಾಗಿದೆ. ವಿಡಿಯೋ ಕಾಲ್ ಶುರುವಾಗಿದೆ. ಇದು ಹೀಗೆ ಮುಂದುವರಿದಿತ್ತು. ಈಕೆ ಚಾಟಿಂಗ್ ಮಾಡುತ್ತಿದ್ದ ಹುಡುಗ ಭಾರತದಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಭೇಟಿಯಾಗುವ ಮನಸ್ಸಾಗಿದೆ.
ಹುಡುಗ ಭೇಟಿ ದಿನಾಂಕ ಮುಂದೂಡುತ್ತಲೇ ಹೋಗಿದ್ದಾನೆ, ಆದರೆ ಪ್ರೀತಿ ಹೀಗೆ ಮುಂದುವರಿದಿತ್ತು. ಇದರ ನಡುವೆ ಪ್ರೀತಿಗೆ ಮದುವೆ ಅರ್ಥ ಕೊಡಲು ಆಕೆ ಮುಂದಾಗಿದ್ದಾಳೆ. ಹುಡುಗ ಹೇಗೋ ಭಾರತದಲ್ಲಿ ಕೆಲಸ ಮಾಡುತ್ತಿದ್ದಾನೆ. ಇನ್ನೇನು, ಭೇಟಿಯಾಗಿ ಮದುವೆಯಾಗಲು ಪ್ಲಾನ್ ಹಾಕಿದ್ದಾಳೆ. ಆತ ಕೂಡ ಒಪ್ಪಿಕೊಂಡಿದ್ದಾನೆ.
ಹೇಳದೇ ಕೇಳದೆ ಭೇಟಿಗೆ ಮನಸ್ಸಾಗಿದೆ
ಯಾರಿಗೂ ಹೇಳದೆ ಕೊರಿಯಾ ಹುಡುಗನ ಭೇಟಿಯಾಗಲು ತೆರಳಿದ್ದಾಳೆ. ಪ್ರಯಾಣ ಮಾಡಿ ತೆರಳಿದ ಈಕೆಗೆ ಭ್ರಮನಿರಸನವಾಗಿದೆ. ಹುಡುಗನ ನೋಡಿ ನಿರಾಸೆಗೊಂಡಿದ್ದಾಳೆ. ಕಾರಣ ಈಕೆ ಪ್ರೀತಿಸಿದ್ದು ಕೊರಿಯಾ ಹುಡುಗ ಅಲ್ಲ, ಆತ ನೇಪಾಳಿ. ಕಣ್ಣು ಸ್ವಲ್ಪ ಚಿಕ್ಕದಾಗಿದೆ. ಕೊರಿಯಾಗೆ ಯಾವುದೇ ಹೋಲಿಕೆ ಇಲ್ಲ. ಈತನ ನೋಡಿದ ತಕ್ಷಣವೇ ಈಕೆಗೆ ತಾನು ಪ್ರೀತಿಸಿದ ಹುಡುಗ ಬಿಲ್ಡಪ್ ಕೊಟ್ಟಿದ್ದು ಅನ್ನೋದು ಗೊತ್ತಾಗಿದೆ. ನಿರಾಸೆಗೊಂಡ ಬಾಲಕಿ ಅಷ್ಟೇ ವೇಗದಲ್ಲಿ ವಾಪಾಸ್ ಆದ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಈ ಘಟನೆ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ಯಾವದೇ ಖಚಿತತೆ ಒದಿಗಿಸುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಇಲ್ಲಿ ನೀಡಲಾಗಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.