
ಸುರಕ್ಷತೆ ಎಂಬುದು ಮನುಷ್ಯನಿಗೆ ತುಂಬಾ ಅಗತ್ಯವಾದುದು, ಎಷ್ಟೇ ಸಂಪಾದಿಸಿದರು ಏನೇ ಶ್ರೀಮಂತಿಕೆ ಇದ್ದರೂ ತನಗೆ ಅಭದ್ರತೆ, ಅಸ್ಥಿರತೆ ಕಾಡುತ್ತಿದ್ದರೆ, ಜೊತೆಗೆ ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಯಾವುದೇ ಪ್ರಯೋಜನ ಇಲ್ಲ. ಪ್ರಪಂಚದಲ್ಲಿ ನೆಮ್ಮದಿ ಇಲ್ಲದೇ ಕಂಗೆಟ್ಟ ಸಾವಿರಾರು ಜನರಿದ್ದಾರೆ. ಇಂತಹವರನ್ನೇ ಬಂಡವಾಳವಾಗಿಸಿಕೊಂಡ ವ್ಯಕ್ತಿಯೊಬ್ಬರು ಗಂಟೆಗೆ ಏಳು ಸಾವಿರ ರೂಪಾಯಿ ದುಡಿಮೆ ಮಾಡುತ್ತಿದ್ದಾರೆ. ಎಂಥಾ ವಿಚಿತ್ರ ಅಲ್ವಾ ಪ್ರಪಂಚದಲ್ಲಿ ಎಂತೆಂಥಾ ಕೆಲಸಗಳಿರುತ್ತವೆ ಅಂತ ನಿಮಗೆ ಅಚ್ಚರಿ ಆಗಬಹುದು.
ಈ ಹಿಂದೆ ಮನೆ ಮನೆಗೆ ತೆರಳಿ ಮನೆಗಳಲ್ಲಿ ವಾರ್ಡ್‌ರೋಬ್‌ನ್ನು ಸಮರ್ಪಕವಾಗಿ ಜೋಡಿಸಿಕೊಟ್ಟು ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ ಮಾಡುವ ಮಹಿಳೆಯ ಬಗ್ಗೆ ವರದಿಯಾಗಿತ್ತು. ಈ ಸುದ್ದಿ ಓದಿದ ಬಹುತೇಕರು ಇಂತಹದ್ದೂ ಒಂದು ಕೆಲಸವಿದೆಯೇ ಎಂದು ಅಚ್ಚರಿಗೊಳಗಾಗಿದ್ದರು. ಅದೇ ರೀತಿ ಈಗ ವ್ಯಕ್ತಿಯೊಬ್ಬ ನಿಮಗೆ ಸುರಕ್ಷಿತ ಭಾವ ಮೂಡಿಸುವ ಮೂಲಕ ಗಂಟೆಗೆ ಸಾವಿರಾರು ರೂ ಸಂಪಾದನೆ ಮಾಡುತ್ತಾನೆ. 30 ವರ್ಷ ಪ್ರಾಯದ ಟ್ರೆವರ್ ಹೂಟನ್ ಎಂಬುವವರೇ ಹೀಗೆ ಅಪ್ಪುಗೆಯ ಮೂಲಕ ನಿಮಗೆ ಸುರಕ್ಷಿತ ಭಾವ ನೀಡಿ ಸಾವಿರಾರು ರೂ ಸಂಪಾದಿಸುವ ವೃತ್ತಿಪರ ವ್ಯಕ್ತಿ.
ಮುದ್ದು ಮಾಡುವ ಥೆರಪಿ (cuddle therapy) ಎಂದು ಕರೆಯುವ ಈತನ ಈ ಕೆಲಸಕ್ಕೆ ಭಾರಿ ಬೇಡಿಕೆ ಇದೆ. ಈತನಿಗೆ ಗಂಟೆಗೆ ಏಳು ಸಾವಿರ ರೂಪಾಯಿ ನೀಡಿ ಈ ರೀತಿ ಬೆಚ್ಚನೆಯ ಅಪ್ಪುಗೆಯ ಥೆರಪಿ ಪಡೆಯಲು ಜನ ಸಾಲುಗಟ್ಟಿ ನಿಂತಿರುತ್ತಾರೆ. ಅವರು ಹಲವಾರು ತಿಂಗಳ ಹಿಂದೆ ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಸ್ಥಾಪಿಸಲಾದ ಈ ಕಡಲ್ ಥೆರಪಿಗೆ ಈಗ ಭಾರಿ ಬೇಡಿಕೆ ಇದೆ ಎಂದು ಮಿರರ್ ವರದಿ ಮಾಡಿದೆ.
ಜಗತ್ತಿನಲ್ಲಿ ಯಾರಿಗಿದೆ ಈ ರೀತಿಯ Z++++ ಭದ್ರತೆ: ಆನೆ ಹಿಂಡಿನ ವಿಡಿಯೋ ನೋಡಿ
ಹೂಟನ್ 'ಕನೆಕ್ಷನ್ಸ್ ಕೋಚಿಂಗ್' ಸೇರಿದಂತೆ ಹಲವು ಸೇವೆಗಳನ್ನು ನೀಡುತ್ತಿದ್ದು, ಇದು ಇತರರೊಂದಿಗೆ ಸಂಬಂಧಗಳನ್ನು ನಿರ್ಮಿಸಲು ಹೆಣಗಾಡುತ್ತಿರುವ ಜನರಿಗೆ ಸಹಾಯ ಮಾಡುತ್ತದೆಯಂತೆ. ಅವರ ಕೆಲಸವು ನಾವು ಪ್ರತಿದಿನ ಕಾಣುವ ವಿಷಯವಲ್ಲ, ಅದು ಹೆಚ್ಚು ಆತ್ಮೀಯವಾಗಿದೆ ಮತ್ತು ಸ್ಪರ್ಶದ ಮೂಲಕ ಯಾರಿಗಾದರೂ ಕಾಳಜಿ, ವಾತ್ಸಲ್ಯ ಮತ್ತು ಸದ್ಭಾವನೆಯನ್ನು ನೀಡುವುದು ಅಗತ್ಯವಾಗಿರುತ್ತದೆ. ಆದಾಗ್ಯೂ, ತಮ್ಮ ಕೆಲಸವನ್ನು ಹೆಚ್ಚಿನ ಜನರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ, ಕೆಲವರು ಅದನ್ನು ಲೈಂಗಿಕ ಕೆಲಸ ಎಂದು ತಪ್ಪಾಗಿ ಗ್ರಹಿಸುತ್ತಾರೆ ಎಂದು ಆತ ಹೇಳಿದ್ದಾಗಿ ಲೀಸೆಸ್ಟರ್‌ಶೈರ್ ಲೈವ್ ಅನ್ನು ಉಲ್ಲೇಖಿಸಿ ಮಿರರ್ ವರದಿ ಮಾಡಿದೆ.
ಮಾನವ ಸಂಪರ್ಕಗಳನ್ನು ನಿರ್ಮಿಸುವ ನನ್ನ ಉತ್ಸಾಹದ ಆಧಾರದ ಮೇಲೆ ನಾನು ಈ ವ್ಯವಹಾರವನ್ನು ನಿರ್ಮಿಸಿದ್ದೇನೆ. ಅನೇಕ ಜನರು ಅದನ್ನು ಮಾಡಲು ಹೆಣಗಾಡುತ್ತಾರೆ ಮತ್ತು ಅಲ್ಲಿ ನಾನು ಹೆಜ್ಜೆ ಹಾಕುತ್ತೇನೆ. ಇದು ಕೇವಲ ಮುದ್ದಾಡುವುದಕ್ಕಿಂತ ಹೆಚ್ಚಿನದಾಗಿದೆ, ಇದು ಜನರಿಗೆ ಅಗತ್ಯವಿರುವ ವಸ್ತುಗಳನ್ನು ನೀಡುತ್ತಿದೆ, ಅದು ಏನೇ ಇರಲಿ. ಮುದ್ದಾಡುವ ಚಿಕಿತ್ಸಕ ಸಮಯ, ಗಮನ ಮತ್ತು ಕಾಳಜಿಯನ್ನು ನೀವು ನೇಮಿಸಿಕೊಳ್ಳುತ್ತಿದ್ದೀರಿ. ಇದು ಕೇವಲ ಅಪರಿಚಿತರನ್ನು ತಬ್ಬಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿದೆ ಎಂದು ಹೂಟನ್ ಹೇಳಿದ್ದಾರೆ.
ಕೆಲವು ಜನರು ಮೊದಲಿಗೆ ಸ್ವಲ್ಪ ವಿಚಿತ್ರವಾಗಿ ಕಾಣುತ್ತಾರೆ, ಆದರೆ ಇದು ಸಂಪೂರ್ಣವಾಗಿ ಸಾಮಾನ್ಯ ವಿಚಾರವಾಗಿದೆ ಮತ್ತು ಕೆಲವರು ಬೇಗನೆ ಹಾಯಾಗಿರುತ್ತಾರೆ. ಜನರು ತಮ್ಮನ್ನು ತಾವು ಕೇಳಿಕೊಳ್ಳಬೇಕು, ನಿಮಗೆ ಒಂದು ಗಂಟೆಯ ಕಾಲ ನೀವು ಕಾಳಜಿ, ಬೆಂಬಲ ಮತ್ತು ಪ್ರೀತಿಯನ್ನು ಅನುಭವಿಸುವುದನ್ನು ಹೊರತುಪಡಿಸಿ ಏನನ್ನೂ ಮಾಡಲು ಇಲ್ಲದಿದ್ದರೆ ಅದು ನಿಮಗೆ ಹೇಗೆ ಅನಿಸುತ್ತದೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆಯು ಮೊದಲಿಗೆ ಸ್ವಲ್ಪ ಅನಾನುಕೂಲವಾಗಬಹುದು, ಆದರೆ ಕೊನೆಯಲ್ಲಿ ಅದು ಯೋಗ್ಯವಾಗಿದೆ ಎಂದು ಜನರು ಒಪ್ಪಿಕೊಂಡಿದ್ದಾರಂತೆ.
ಒಟ್ಟಿನಲ್ಲಿ ನಾವು ಇಲ್ಲಿಯವರೆಗೆ ನೀವು ವೈದ್ಯರು, ಎಂಜಿನಿಯರ್‌ಗಳು, ವಿಜ್ಞಾನಿಗಳು ಮತ್ತು ಉದ್ಯಮಿಗಳ ಹೀಗೆ ವಿವಿಧ ರೀತಿಯ ಕೆಲಸ ಮಾಡುವ ಉದ್ಯೋಗಿಗಳನ್ನು ಕಂಡಿದ್ದೇವೆ. ಆದಾಗ್ಯೂ, ಈ ರೀತಿಯ ವಿಚಿತ್ರ ಕೆಲಸ ಕಚಗುಳಿ ಇಡುವಂತಿರುವುದು ಸುಳ್ಳಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಇದು ಕೆಲಸ ಮಾಬಹುದು. ಆದರೆ ಭಾರತದಲ್ಲಿ ಹೀಗೆ ತಬ್ಬಿಕೊಳ್ಳುವ ಕೆಲಸ ಮಾಡ್ತಿದ್ದೇನೆ ಎಂದರೆ ಮುಖ ಊದೋದು ಪಕ್ಕಾ.
ಅಪ್ರಾಪ್ತ ವಯಸ್ಸಿನಲ್ಲಿಯೇ ಪ್ರೀತಿ-ಪ್ರೇಮ ಎಂಬ ಹುಚ್ಚಾಟಕ್ಕೆ ಬಿದ್ದು ಜೀವ ಕಳೆದುಕೊಂಡ ಜೋಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.