ಹಗ್‌ ಥೆರಪಿ; ಅರ್ಧ ಗಂಟೆ ತಬ್ಬಿಕೊಳ್ಳೋಕೆ 7,000 ರೂ. ಫೀಸ್ !

Published : Jul 15, 2022, 03:59 PM ISTUpdated : Jul 15, 2022, 04:03 PM IST
ಹಗ್‌ ಥೆರಪಿ; ಅರ್ಧ ಗಂಟೆ ತಬ್ಬಿಕೊಳ್ಳೋಕೆ 7,000 ರೂ. ಫೀಸ್ !

ಸಾರಾಂಶ

ಅಪ್ಪುಗೆ ಮನಸ್ಸಿನ ಮಾತನ್ನು ಮೌನವಾಗಿ ಹೇಳುವ ಪ್ರಕ್ರಿಯೆ. ಪ್ರೀತಿ, ಆರೈಕೆ, ಸಂತೋಷ, ಕಾಳಜಿ ಈ ಎಲ್ಲಾ ಭಾವನೆಗಳನ್ನು ಒಂದು ಹಗ್ ವ್ಯಕ್ತಪಡಿಸುತ್ತದೆ. ಆದ್ರೆ ಹಗ್ ಮಾಡೋಕೆ ಫೀಸ್ ತಗೊಳ್ತಾರೆ ಅಂದ್ರೆ ನೀವು ನಂಬ್ತೀರಾ ? ಹೌದು, ಇಲ್ಲೊಬ್ಬ ಪ್ರೊಫೆಶನಲ್ ಹಗ್ ಪರ್ಸನ್ ಅರ್ಧ ಗಂಟೆ ಹಗ್ ಮಾಡೋಕೆ, ಭರ್ತಿ 7,000 ರೂ. ಚಾರ್ಜ್ ಮಾಡ್ತಾರೆ.

ಜಸ್ಟ್‌ ಒಂದು ಹಗ್ ಮಾಡುವುದರಿಂದ ನಿಮ್ಮ ಮನಸ್ಸಿನ ಭಾವನೆಗಳು ನಿಮ್ಮ ಸಂಗಾತಿಯ ಮನಸ್ಸನ್ನು ಮುಟ್ಟುತ್ತದೆ. ಮಾತಿನಲ್ಲಿ ಹೇಳಲಾಗದ ಎಷ್ಟೋ ವಿಚಾರಗಳನ್ನು ಸ್ಪರ್ಶ ಹೇಳುತ್ತದೆ. ಪ್ರೀತಿ, ಆರೈಕೆ, ಸಂತೋಷ, ಕಾಳಜಿ ಈ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಹಗ್ ಮಾಡುವುದು ಒಳ್ಳೆಯ ಮಾರ್ಗ. ಇದು ನಿಮ್ಮ ಭಾವನೆಯನ್ನು ನೇರವಾಗಿ ನಿಮ್ಮ ಸಂಗಾತಿಯ  ಹೃದಯಕ್ಕೆ (Heart) ತಲುಪಿಸುತ್ತದೆ. ಹಗ್ ಮಾಡುವುದು ಎಂದರೆ ಬರಿಯ ರೊಮ್ಯಾನ್ಸ್ ಎಂದರ್ಥವಲ್ಲ. ಬದಲಿಗೆ ಎರಡು ಹೃದಯಗಳು ಪರಸ್ಪರ ಮಾತನಾಡಿಕೊಳ್ಳುವ ವಿಶೇಷ ಸಮಯ.

ಅರ್ಧ ಗಂಟೆ ಹಗ್‌ಗೆ 7,000 ರೂ. ಫೀಸ್‌
ಬಾಯಿ ಮಾತಿನಲ್ಲಿ ಹೇಳಲಾಗದ ಎಷ್ಟೋ ಸಂಗತಿಗಳನ್ನು ಈ ಸಣ್ಣ ಕ್ರಿಯೆ ಅರ್ಥ ಮಾಡಿಸುತ್ತದೆ. ನೀವು ಹೇಳುತ್ತಿರುವ ಭಾವನೆಗಳನ್ನು ಅಪ್ಪುಗೆ ನಿಮ್ಮ ಸಂಗಾತಿಯ ಮನ ಮುಟ್ಟುವಂತೆ ಅರ್ಥ ಮಾಡಿಸುತ್ತದೆ. ಇದು ಸುಮ್ಮನೆ ಹೇಳುತ್ತಿರುವ ಮಾತಲ್ಲ, ಇದರ ಬಗ್ಗೆ ಸಂಶೋಧನೆಗಳು ಕೂಡ ನಡೆದಿವೆ. ಹಾಗಾಗಿ ವೈಜ್ಞಾನಿಕವಾಗಿಯೂ ಕೂಡ ಈ ಎಲ್ಲ ಸಂಗತಿಗಳು ಸಾಬೀತಾಗಿದೆ. ಒತ್ತಡ (Pressure) ಹಾಗೂ ಉದ್ವೇಗ ಇಂತಹ ಸೂಕ್ಷ್ಮ ವಿಚಾರಗಳನ್ನು ಸ್ಪರ್ಶದಿಂದ ಕಡಿಮೆ ಮಾಡಬಹುದು ಅಂದರೆ ಶೇಕ್ ಹ್ಯಾಂಡ್ ಅಥವಾ ಹಗ್ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಗೆ ಧೈರ್ಯ ನೀಡಬಹುದು ಅವರ ಬಗ್ಗೆ ಅವರಿಗೆ ಆತ್ಮವಿಶ್ವಾಸ (Confidence) ಮೂಡುವಂತೆ ಮಾಡಬಹುದು ಹಾಗೂ ನಂಬಿಕೆ ಹೆಚ್ಚಿಸಬಹುದು. ಸಾಮಾನ್ಯವಾಗಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಹಗ್ ಮಾಡ್ತಾರೆ. ಆದ್ರೆ ದುಡ್ಡು ಕೊಟ್ಟು ಹಗ್ ಮಾಡ್ಕೊಳ್ಳೋ ಬಗ್ಗೆ ನಿಮ್ಗೆ ಗೊತ್ತಾ ?

ಯಾವತ್ತೂ ತೋರದ ಪ್ರೀತಿ ಗಂಡ ತೋರಿದರೆ ಹೆಂಡ್ತಿಗೇಕೆ ಡೌಟ್?

ಹಗ್‌ ಮೂಲಕ ಸಾಂತ್ವನ ನೀಡುವ ಥೆರಪಿ
ಹಗ್ ಮಾಡಿನೂ ದುಡ್ಡು ಮಾಡ್ತಾರಪ್ಪಾ ಅಂತ ಅಂದ್ಕೋಬೇಡಿ. ಹೌದು, ಅಚ್ಚರಿ ಎನಿಸಿದ್ರೂ ಇದು ನಿಜ. ಯುಕೆಯ ಬ್ರಿಸ್ಟಲ್‌ನಲ್ಲಿ ನೆಲೆಸಿರುವ ಟ್ರೆಷರ್, ಜನರು ಸುರಕ್ಷಿತವಾಗಿ ಮತ್ತು ಶಾಂತವಾಗಿರಲು ಸಹಾಯ ಮಾಡುವ ಒಂದು ಗಂಟೆ ಅವಧಿಯ ಅಪ್ಪುಗೆಗೆ (Hug) ಏಳು ಸಾವಿರ ರೂ. ಫೀಸ್ ಪಡೆಯುತ್ತಾರೆ. ಹಣ ಪಡೆದುಕೊಂಡು ವ್ಯಕ್ತಿಗೆ ಅಗತ್ಯವಾದ ಸ್ಪರ್ಶದ ಮೂಲಕ ಕಾಳಜಿ, ವಾತ್ಸಲ್ಯ ಮತ್ತು ಸದ್ಭಾವನೆಯನ್ನು ನೀಡುತ್ತಾರೆ. ಕೆನಡಾದ ಮಾಂಟ್ರಿಯಲ್‌ನಿಂದ ಬಂದಿರುವ ಟ್ರೆಷರ್, ಪ್ರತಿಯೊಬ್ಬರೂ ತಮ್ಮ ವ್ಯಾಪಾರವು ಏನು ನೀಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು. ಕೆಲವರು ಅದನ್ನು ಲೈಂಗಿಕ (Sex) ಕೆಲಸ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಆದರೆ ಇದು ಹಾಗಲ್ಲ, ಇದು ಸಾಂತ್ವನ ನೀಡುವ ಕೆಲಸವಾಗಿದೆ ಎಂದು ವಿವರಿಸಿದ್ದಾರೆ.

ಮಾನವ ಸಂಪರ್ಕಗಳನ್ನು ನಿರ್ಮಿಸುವ ನನ್ನ ಉತ್ಸಾಹದ ಆಧಾರದ ಮೇಲೆ ನಾನು ವ್ಯವಹಾರವನ್ನು ನಿರ್ಮಿಸಿದ್ದೇನೆ. ಅನೇಕ ಜನರು ಸೂಕ್ತ ಸಾಂತ್ವನ ಸಿಗದೆ ಒದ್ದಾಡುತ್ತಾರೆ. ನಾನಿದನ್ನು ಸುಲಭವಾಗಿ ನೀಡುತ್ತಿದ್ದೇನೆ ಎಂದು ಟ್ರಿಷರ್ ಹೇಳಿದ್ದಾರೆ. ಕಡಲ್ ಥೆರಪಿಸ್ಟ್‌ಗಳೊಂದಿಗೆ, ನೀವು ಅವರ ಸಮಯ, ಗಮನ ಮತ್ತು ಕಾಳಜಿಯನ್ನು ನೇಮಿಸಿಕೊಳ್ಳುತ್ತಿದ್ದೀರಿ. ಇದು ಕೇವಲ ಅಪರಿಚಿತರನ್ನು ತಬ್ಬಿಕೊಳ್ಳುವುದಕ್ಕಿಂತ ಹೆಚ್ಚಿನದಾಗಿದೆ. ಕೆಲವರು ಇದನ್ನು ಮೊದಲಿಗೆ ಸ್ವಲ್ಪ ವಿಚಿತ್ರವಾಗಿ ಕಾಣುತ್ತಾರೆ, ಆದರೆ ಇದು ಸಂಪೂರ್ಣವಾಗಿ ಸಾಮಾನ್ಯವಾಗಿದೆ, ಮತ್ತು ಅವರು ಬೇಗನೆ ಆರಾಮದಾಯಕವಾಗುತ್ತಾರೆ ಎಂದು ಅವರು ಸೇರಿಸಿದರು.

ಮದುವೆ ಫಿಕ್ಸ್ ಆಗ್ತಿದ್ದಂತೆ ಶಾಕಿಂಗ್ ವಿಷ್ಯ ಸರ್ಚ್ ಮಾಡ್ತಾರಂತೆ ಹುಡುಗೀರು!

ಟ್ರೆಷರ್ ಹತ್ತು ವರ್ಷಗಳ ಹಿಂದೆ ಮಾನವ ಸಂಪರ್ಕಗಳ ಹಿಂದಿನ ವಿಜ್ಞಾನದ ಬಗ್ಗೆ ತಿಳಿದುಕೊಂಡರು ಮತ್ತು ಮೇ 2022ರಲ್ಲಿ ಅದನ್ನು ವ್ಯವಹಾರವಾಗಿ ಪರಿವರ್ತಿಸಿರು. ಈ ಹಗ್ ಥೆರಪಿಯ ಬಗ್ಗೆ ವಿವರಿಸುವ ಟ್ರೆಷರ್‌, ಇದು ಯಾವಾಗಲೂ ಲೈಂಗಿಕವಲ್ಲದ ಪ್ರಕ್ರಿಯೆಯಾಗಿದೆ. ಅದು ವ್ಯಕ್ತಿಗೆ ಏನು ಬೇಕೋ ಅದನ್ನು ಆಧರಿಸಿದೆ. ನಾವು ಭೇಟಿಯಾಗುತ್ತೇವೆ. ಅವರ ಸಮಸ್ಯೆಗಳನ್ನು ಕೇಳುತ್ತೇವೆ. ವ್ಯಕ್ತಿಯ ಅಗತ್ಯತೆಗೆ ಬೇಕಾದ ಸುರಕ್ಷಿತ ಮತ್ತು ಶಾಂತತೆಯನ್ನು ಅನುಭವಿಸಲು ಅವರಿಗೆ ಸಹಾಯ ಮಾಡುತ್ತದೆ ಎಂದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!