ಪ್ರೀತಿಯಲ್ಲಿ ಮೋಸವಾದ್ರೆ ಅದನ್ನು ಸಹಿಸೋದು ಕಷ್ಟ. ಐದು ವರ್ಷಗಳಿಂದ ಜೊತೆಗಿದ್ದ ಪತ್ನಿ ದ್ರೋಹ ಬಗೆದ್ರೆ ಕೋಪ ವಿಕೋಪಕ್ಕೆ ತಿರುಗುತ್ತೆ. ಇದಕ್ಕೆ ನ್ಯೂಯಾರ್ಕ್ ಪೊಲೀಸ್ ಉತ್ತಮ ನಿದರ್ಶನ. ಪತ್ನಿ ತನಗೆ ಮಾತ್ರವಲ್ಲ ಆತನಿಗೂ ಸಿಗಬಾರದು ಎಂಬ ಕಾರಣಕ್ಕೆ ಪೊಲೀಸ್ ಮಾಡಿದ ಕೆಲಸವೇನು ಗೊತ್ತಾ?
ತ್ರಿಕೋನ ಪ್ರೇಮ ಕಥೆ (Love Story) ದುರಂತದಲ್ಲಿ ಅಂತ್ಯ ಕಂಡಿದೆ. ಘಟನೆ ನಡೆದಿರೋದು ನ್ಯೂಯಾರ್ಕ್ (New York) ನಲ್ಲಿ. ಹತ್ಯೆ ನಂತ್ರ ಗುಂಡು ಹಾರಿಸಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡ ವ್ಯಕ್ತಿ 36 ವರ್ಷದ ಶಾನ್ ಆರ್ಮ್ ಸ್ಟೆಡ್. ತನ್ನ ಪತ್ನಿಯ ಪ್ರೇಮಿಗೆ ಗುಂಡು ಹಾರಿಸಿದ ಆರ್ಮ್ ಸ್ಟೆಡ್ ನಂತ್ರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಆರ್ಮ್ ಸ್ಟೆಡ್ ಮನೆ ಕಾವಲು ಕಾಯ್ತಿರುವ ಪೊಲೀಸರು ಅನೇಕ ಮಾಹಿತಿ ಕಲೆ ಹಾಕ್ತಿದ್ದಾರೆ.
ಆರ್ಮ್ ಸ್ಟೆಡ್ ಪತ್ನಿ ವಯಸ್ಸು 35 ವರ್ಷ. ಆಕೆ ಹೆಸರು ಅಲೆಕ್ಸಾಂಡ್ರಾ ವಾಂಡರ್ಹೆಡೆನ್. ನ್ಯೂಯಾರ್ಕ್‌ನ ಹೊಟೇಲ್ ಗೆ 20 ವರ್ಷದ ಎಡ್ವರ್ಡ್ ವಿಲ್ಕಿನ್ಸ್ ನೊಂದಿಗೆ ಬಂದಿದ್ದಳು. ಪತ್ನಿ ಹಾಗೂ ಆಕೆ ಪ್ರೇಮಿಯನ್ನು ಹಿಂಬಾಲಿಸಿದ್ದ ಆರ್ಮ್ ಸ್ಟೆಡ್ ಅಲ್ಲಿಗೆ ಬಂದಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಪತ್ನಿ ಹಾಗೂ ಪ್ರೇಮಿ ಬಫಲೋ ವೈಲ್ಡ್ ವಿಂಗ್ಸ್ ಹೊಟೇಲ್ ನಿಂದ ಕಾಲ್ಕಿತ್ತಿದ್ದಾರೆ. ಕಾರ್ ನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನ ಕೂಡ ಮಾಡಿದ್ದಾರೆ. ಆದ್ರೆ ಕಾರ್ ಹತ್ತುವ ಮೊದಲೇ ಆರ್ಮ್ ಸ್ಟೆಡ್ ಗುಂಡು, ಎಡ್ವರ್ಡ್ ಎದೆ ಹೊಕ್ಕಿದೆ. ಆರ್ಮ್ ಸ್ಟೆಡ್ 16 ಬಾರಿ ಗುಂಡು ಹಾರಿಸಿದ್ದಾನೆ.
ಆರ್ಮ್ ಸ್ಟೆಡ್ ಯಾರು? :
ಆರ್ಮ್ ಸ್ಟೆಡ್ 2011 ರಲ್ಲಿ NYPD ಗೆ ನೇಮಕಗೊಂಡಿದ್ದನಂತೆ. 11 ವರ್ಷಗಳಿಂದ ಪೊಲೀಸ್ ಕೆಲಸ ಮಾಡ್ತಿದ್ದ ಆರ್ಮ್ ಸ್ಟೆಡ್ ಗೆ 105,000 ಡಾಲರ್ ವೇತನ ಬರ್ತಿತ್ತಂತೆ. ಆರ್ಮ್ ಸ್ಟೆಡ್ ವಿರುದ್ಧ ಈಗಾಗಲೇ ಐದು ಪ್ರಕರಣ ದಾಖಲಾಗಿತ್ತಂತೆ. ಆದ್ರೆ ಯಾವುದೇ ಕೇಸ್ ವಿಚಾರಣೆವರೆಗೆ ಬರ್ಲಿಲ್ಲವಂತೆ. ಆರ್ಮ್‌ಸ್ಟೆಡ್ ಜೂನ್ 2016 ರಲ್ಲಿ ಹಾರ್ಲೆಮ್‌ನಲ್ಲಿ ತನ್ನ ನಾಯಿಯನ್ನು ವಾಕಿಂಗ್ ಮಾಡುವಾಗ ಕಿರುಕುಳ ನೀಡಿ ಸುದ್ದಿಯಾಗಿದ್ದ.
ಆತ್ಮಹತ್ಯೆಗೆ ಶರಣಾದ ಆರ್ಮ್ ಸ್ಟೆಡ್ : ಎಡ್ವರ್ಡ್ ಗೆ ಗುಂಡು ಹಾರಿಸಿದ ನಂತ್ರ ಆರ್ಮ್‌ಸ್ಟೆಡ್ ತನ್ನ ಬಂದೂಕನ್ನು ಮರುಲೋಡ್ ಮಾಡಿ ತನಗೆ ಗುಂಡು ಹಾರಿಸಿಕೊಂಡಿದ್ದಾನೆ. ಸ್ಥಳದಲ್ಲಿಯೇ ಆತ ಕೂಡ ಸಾವನ್ನಪ್ಪಿದ್ದಾನೆ. ಆದ್ರೆ ಹೆಂಡತಿಗೆ ಯಾವುದೇ ಅಪಾಯವಾಗಿಲ್ಲವೆಂದು ನ್ಯೂಯಾರ್ಕ್ ಪೊಲೀಸ್ ವರದಿ ಮಾಡಿದ್ದಾರೆ.
ಇದನ್ನೂ ಓದಿ: ಪತಿ ಜೊತೆ ಲೈಂಗಿಕ ಕ್ರಿಯೆ ನಿರಾಕರಿಸಲು ಭಾರತದಲ್ಲಿ ಶೇ.82ರಷ್ಟು ಮಹಿಳೆಯರು ಸಮರ್ಥರು
ಪ್ರತ್ಯಕ್ಷದರ್ಶಿಗಳು ಹೇಳೋದೇನು? : ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ. ಸುಮಾರು 8 ಗುಂಡು ಹಾರಿಸಿದ್ದನ್ನು ನಾವು ಕೇಳಿದ್ದೇವೆ. ಎಡ್ವರ್ಡ್ ಸತ್ತ ನಂತ್ರವೂ ಆರ್ಮ್ ಸ್ಟೆನ್ ಗುಂಡ ಹಾರಿಸುತ್ತಲೇ ಇದ್ದ. ನಂತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರ ರಕ್ತದ ಹೊಳೆ ಅಲ್ಲಿ ಹರಿದಿತ್ತು. ಆರ್ಮ್ ಸ್ಟೆಡ್ ಪತ್ನಿ, ಬಫಲೋ ವೈಲ್ಡ್ ವಿಂಗ್ಸ್ ಒಳಗೆ ಮತ್ತು ಹೊರಗೆ ಕಿರುಚುತ್ತಾ ಓಡುತ್ತಿದ್ದಳು. ಅವಳು ಜೋರಾಗಿ ಅಳುತ್ತಿದ್ದಳು. ಹೊಟೇಲ್ ನಿಂದ ಹೊರಬರುವ ಪ್ರಯತ್ನ ನಡೆಸುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಇದನ್ನೂ ಓದಿ: ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ 49 ವರ್ಷದ ಸಚಿವನ 18ರ ಹರೆಯದ ಪತ್ನಿ
ನೆರೆಯವರು ಹೇಳೋದೇನು? : ಆರ್ಮ್ ಸ್ಟೆಡ್ ವಿಷ್ಯ ಕೇಳಿ ನೆರೆಯವರು ದಂಗಾಗಿದ್ದಾರೆ. ಆರ್ಮ್ ಸ್ಟೆಡ್ ಈ ರೀತಿ ವರ್ತಿಸಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಗಂಡ – ಹೆಂಡತಿ ಮಧ್ಯೆ ಯಾವುದೇ ಸಮಸ್ಯೆಯಿದ್ದಂತೆ ಕಾಣ್ತಿರಲಿಲ್ಲ. ಇಬ್ಬರು ತುಂಬಾ ಆತ್ಮೀಯರಾಗಿದ್ದರು. ಇಬ್ಬರೂ ಯಾವಾಗಲೂ ಸ್ನೇಹದಿಂದ ಇರುತ್ತಿದ್ದರು. ಹಲೋ ಹೇಳಲು ಯಾವಾಗಲೂ ಕೈಕುಲುಕುತ್ತಿದ್ದರು. ಅವರು ಕಿರಿಚಿದ್ದನ್ನು ನಾನು ಕೇಳೇ ಇಲ್ಲ. ಅವರಿಬ್ಬರ ಮಧ್ಯೆ ಸಮಸ್ಯೆಯಿತ್ತು ಅನ್ನೋದನ್ನು ನಂಬಲು ಸಾಧ್ಯವಿಲ್ಲವೆಂದು ನೆರೆಯವರು ಹೇಳಿದ್ದಾರೆ.
ಆರ್ಮ್‌ಸ್ಟೆಡ್ ಕಳೆದ ಐದು ವರ್ಷಗಳಿಂದ ತನ್ನ ಹೆಂಡತಿಯೊಂದಿಗೆ ಲಾಗ್ ಕ್ಯಾಬಿನ್‌ನಲ್ಲಿ ವಾಸಿಸುತ್ತಿದ್ದನಂತೆ. ನಾಯಿ ವ್ಯಾಪಾರ ಮಾಡ್ತಿದ್ದ ಆತ, ನಾಯಿಗಳನ್ನು ನೋಡಿಕೊಳ್ಳಲು ಸ್ಥಳೀಯ ಮಕ್ಕಳನ್ನು ನೇಮಿಸಿದ್ದನಂತೆ. ಆರ್ಮ್ ಸ್ಟೆಡ್ ಕುಟುಂಬದಲ್ಲಿ ಅನೇಕರು ಪೊಲೀಸರಿದ್ದಾರೆ. ಪತ್ನಿ ತನಗೆ ಮೋಸ ಮಾಡ್ತಿದ್ದಾಳೆ ಎಂಬುದು ಗೊತ್ತಾಗ್ತಿದ್ದಂತೆ ಆತನ ಕೋಪ ನೆತ್ತಿಗೇರಿದೆ. ಫೋನ್ ಟ್ರ್ಯಾಪ್ ಮಾಡಿ ಈ ವಿಷ್ಯವನ್ನು ಆರ್ಮ್ ಸ್ಟೆಡ್ ಪತ್ತೆ ಹಚ್ಚಿದ್ದ ಎನ್ನಲಾಗಿದೆ.