ಮಹಿಳೆಯ ಸಬಲೀಕರಣದ ಬಗ್ಗೆ ಸಾಕಷ್ಟು ಸಮೀಕ್ಷೆಗಳು ನಡೆಯುತ್ತಿರುತ್ತವೆ. ಈಗ ಮತ್ತೊಂದು ಸಮೀಕ್ಷೆ ವರದಿ ಹೊರಗೆ ಬಿದ್ದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 5 (NFHS-5) ವರದಿ ಬಿಡುಗಡೆ ಮಾಡಿದೆ. ಇದ್ರಲ್ಲಿ ಸಾಕಷ್ಟು ಕುತೂಹಲಕಾರಿ ವಿಷ್ಯ ಬಹಿರಂಗವಾಗಿದೆ.
ಭಾರತ (India) ದಲ್ಲಿ ಮಹಿಳೆ (Woman) ಯರ ಜೀವನ ಶೈಲಿ ಭಿನ್ನವಾಗಿದೆ. ದೇಶ ಎಷ್ಟೇ ಅಭಿವೃದ್ಧಿ (Development) ಹೊಂದಿದ್ದರೂ, ಮಹಿಳೆಯರ ವಿಷ್ಯದಲ್ಲಿ ಇನ್ನೂ ಸಾಕಷ್ಟು ಬದಲಾವಣೆಯಾಗಬೇಕಿದೆ. ಮಹಿಳೆಯರ ಬಗ್ಗೆ ಇತ್ತೀಚಿಗೆ ಸಮೀಕ್ಷೆ (Survey) ಯೊಂದು ನಡೆದಿದೆ. ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ವರದಿ ಬಿಡುಗಡೆ ಮಾಡಿದ್ದಾರೆ. ಅವರು ಬಿಡುಗಡೆ ಮಾಡಿದ ವರದಿ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿತ್ತು. ಜೂನ್ 17, 2019 ರಿಂದ ಜನವರಿ 30,2020 ರ ನಡುವೆ 17 ರಾಜ್ಯಗಳು ಮತ್ತು 5 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಮತ್ತು ಜನವರಿ 2, 2020 ಮತ್ತು ಏಪ್ರಿಲ್ 30, 2021 ರ ನಡುವೆ, 11 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎರಡನೇ ಹಂತದಲ್ಲಿ ಡೇಟಾ ಸಂಗ್ರಹ ಮಾಡಲಾಗಿತ್ತು.
ಈ ಡೇಟಾವನ್ನು ಮನ್ಸುಖ್ ಎಲ್ಲರ ಮುಂದಿಟ್ಟಿದ್ದಾರೆ. ವರದಿ ಪ್ರಕಾರ, ಭಾರತದಲ್ಲಿ ಶೇಕಡಾ 82ರಷ್ಟು ಮಹಿಳೆಯರು ತಮ್ಮ ಗಂಡನೊಂದಿಗೆ ಲೈಂಗಿಕತೆಯನ್ನು ನಿರಾಕರಿಸುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಅದ್ರ ಪ್ರಕಾರ, ಐದರಲ್ಲಿ ನಾಲ್ಕು ಮಹಿಳೆಯರು (82 ಪ್ರತಿಶತ) ಲೈಂಗಿಕತೆಯನ್ನು ಬಯಸದಿದ್ದರೆ ತಮ್ಮ ಪತಿಯನ್ನು ನಿರಾಕರಿಸಬಹುದು ಎಂದು ಹೇಳಲಾಗಿದೆ. ಗೋವಾದಲ್ಲಿ ಶೇಕಡಾ 82ರಷ್ಟು ಮಹಿಳೆಯರು ಇಲ್ಲ ಎಂದು ಹೇಳುವ ಸಾಧ್ಯತೆಯಿದೆ. ಅರುಣಾಚಲ ಪ್ರದೇಶದಲ್ಲಿ ಶೇಕಡಾ 63ರಷ್ಟು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡಾ 65 ರಷ್ಟು ಮಹಿಳೆಯರು ಇದನ್ನು ಹೇಳುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಸಮೀಕ್ಷೆಯ ಸಮಯದಲ್ಲಿ, ಲಿಂಗ ವರ್ತನೆಗಳ ಬಗ್ಗೆ ಪುರುಷರಿಗೆ ಕೆಲವು ಹೆಚ್ಚುವರಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಪತ್ನಿ, ಪತಿಯೊಂದಿಗೆ ಸೆಕ್ಸ್ ನಿರಾಕರಿಸಿದಾಗ ಏನು ಮಾಡಬಹುದು ಎಂದು ಪ್ರಶ್ನೆ ಕೇಳಲಾಗಿತ್ತು. ಈ ಸಮಯದಲ್ಲಿ ನಾಲ್ಕು ವಿಧದ ನಡವಳಿಕೆಯನ್ನು ಅವರು ಮಾಡ್ತಾರೆಯೇ ಎಂದು ಕೇಳಲಾಗಿತ್ತು.
ಸೆಕ್ಸ್ ನಿರಾಕರಿಸಿದಾಗ ಪತಿ ಕೋಪಗೊಳ್ಳಲು ಮತ್ತು ಅವಳನ್ನು ಬೈಯಲು, ಆಕೆಗೆ ಹಣವನ್ನು ನೀಡಲು ನಿರಾಕರಿಸುವುದು ಅಥವಾ ಯಾವುದೇ ರೀತಿಯ ಆರ್ಥಿಕ ಸಹಾಯವನ್ನು ನೀಡಲು ನಿರಾಕರಿಸುವುದು, ಅವಳು ಬಯಸದಿದ್ದರೂ ಬಲವಂತವಾಗಿ ಅವಳೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಇಲ್ಲವೆ ಇನ್ನೊಬ್ಬ ಮಹಿಳೆ ಜೊತೆ ಲೈಂಗಿಕ ಸಂಬಂಧ ಬೆಳೆಸುವ ಆಯ್ಕೆಯನ್ನು ನೀಡಲಾಗಿತ್ತು.
ಗಂಡ-ಹೆಂಡ್ತಿ ಜಗಳದ ಮಧ್ಯೆ ಕೂಸು ಬಡವಾಗ್ಬಾರ್ದು ಅಂದ್ರೆ ಹೀಗೆ ಮಾಡಿ
15-49 ವರ್ಷ ವಯಸ್ಸಿನ ಪುರುಷರಲ್ಲಿ ಕೇವಲ 6 ಪ್ರತಿಶತ ಪುರುಷರು ಮಾತ್ರ ತಮ್ಮ ಹೆಂಡತಿ ಲೈಂಗಿಕತೆಯನ್ನು ನಿರಾಕರಿಸಿದರೆ ನಾಲ್ಕು ರೀತಿಯಲ್ಲಿ ವರ್ತಿಸುವ ಹಕ್ಕಿದೆ ಎಂದು ಒಪ್ಪುತ್ತಾರೆ. ಆದರೆ 19 ಪ್ರತಿಶತ ಪುರುಷರು, ಪತ್ನಿ ಸೆಕ್ಸ್ ನಿರಾಕರಿಸಿದ್ರೆ ಪತಿಗೆ ಕೋಪಗೊಳ್ಳುವ ಮತ್ತು ಅವಳನ್ನು ನಿಂದಿಸುವ ಹಕ್ಕಿದೆ ಎಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ನಾಲ್ಕು ವರ್ತನೆಯಲ್ಲಿ ಯಾವುದನ್ನೂ ಒಪ್ಪದ ಪುರುಷರ ಸಂಖ್ಯೆ ಶೇಕಡಾ 70 ಕ್ಕಿಂತ ಹೆಚ್ಚಿದೆ.
ಇದಲ್ಲದೆ ಮಹಿಳೆಯರ ಗಳಿಕೆ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದೆ. ವಿವಾಹಿತ ಮಹಿಳೆಯರಲ್ಲಿ ಉದ್ಯೋಗದ ಪ್ರಮಾಣವು ಶೇಕಡಾ 32 ರಷ್ಟಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಉದ್ಯೋಗದಲ್ಲಿರುವ ವಿವಾಹಿತ ಮಹಿಳೆಯರಲ್ಲಿ, 15 ಪ್ರತಿಶತದಷ್ಟು ಮಹಿಳೆಯರು ಸಂಬಳ ಸಹ ಪಡೆಯುವುದಿಲ್ಲ ಮತ್ತು 14 ಪ್ರತಿಶತದಷ್ಟು ಮಹಿಳೆಯರು ತಮ್ಮ ಗಳಿಕೆಯನ್ನು ಹೇಗೆ ಖರ್ಚು ಮಾಡುತ್ತಾರೆ ಎಂಬುದರ ಮೇಲೆ ನಿಯಂತ್ರಣ ಹೊಂದಿಲ್ಲ. ಭಾರತದಲ್ಲಿ 15-49 ವಯೋಮಾನದ ವಿವಾಹಿತ ಮಹಿಳೆಯರಲ್ಲಿ ಕೇವಲ 32 ಪ್ರತಿಶತದಷ್ಟು ಮಹಿಳೆಯರು ಮಾತ್ರ ಉದ್ಯೋಗದಲ್ಲಿದ್ದಾರೆ. ಅದೇ 15-49 ವಯೋಮಾನದ ಕೆಲಸ ಮಾಡುವ ಪುರುಷರ ಸಂಖ್ಯೆ ಶೇಕಡಾ 98ರಷ್ಟಿದೆ.
ಹೆಂಡತಿ ಬಿಟ್ಟು ಸ್ವಂತ ತಾಯಿ ಜತೆ ಸಂಸಾರ, ಲೈಂಗಿಕ ಬದುಕು ಮೈಂಡ್ ಬ್ಲೋಯಿಂಗ್ ಅಂತೆ ಕರ್ಮ
ಒಂಟಿಯಾಗಿ ಪ್ರಯಾಣ ಬೆಳೆಸದ ಮಹಿಳೆಯರು : ಶೇಕಡಾ 56 ರಷ್ಟು ಮಹಿಳೆಯರಿಗೆ ಏಕಾಂಗಿಯಾಗಿ ಮಾರುಕಟ್ಟೆಗೆ ಹೋಗಲು ಅನುಮತಿಯಿದೆ. ಹಾಗೆ ಶೇಕಡಾ 52 ರಷ್ಟು ಮಹಿಳೆಯರು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸ್ವತಂತ್ರತೆ ಹೊಂದಿದ್ದಾರೆ. ಶೇಕಡಾ 50 ರಷ್ಟು ಜನರು ಹಳ್ಳಿ ಅಥವಾ ಸಮುದಾಯದ ಹೊರಗೆ ಹೋಗುವ ಅಧಿಕಾರ ಹೊಂದಿದ್ದಾರೆ. ಒಟ್ಟಾರೆ ಹೇಳ್ಬೇಕೆಂದ್ರೆ ಭಾರತದಲ್ಲಿ ಶೇಕಡಾ 42ರಷ್ಟು ಮಹಿಳೆಯರು ಮಾತ್ರ ಈ ಮೂರು ಪ್ರದೇಶಕ್ಕೆ ಹೋಗುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದ್ರೆ ಶೇಕಡಾ 5ರಷ್ಟು ಮಹಿಳೆಯರು ಈ ಮೂರೂ ಸ್ಥಳಕ್ಕೆ ಹೋಗುವ ಅಧಿಕಾರ ಹೊಂದಿಲ್ಲ. ಆದ್ರೆ ಈ ಅಂಕಿ ಬೇರೆ ಬೇರೆ ರಾಜ್ಯದಲ್ಲಿ ಬೇರೆ ಬೇರೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.