
ದಾಂಪತ್ಯ ಅತ್ಯಂತ ಸುಂದರವಾದ ಸಂಬಂಧ ಎಂಬುದರಲ್ಲಿ ಎರಡು ಮಾತಿಲ್ಲ. ಅರೇಂಜ್ಡ್ ಮ್ಯಾರೇಜ್ ಆಗಿರಲಿ ಅಥವಾ ಲವ್ ಮ್ಯಾರೇಜ್ ಆಗಿರಲಿ ಸಂಬಂಧ ಸುಮಧುರವಾಗಿರುತ್ತದೆ. ಮದುವೆಯಾದ್ಮೇಲೆ ದಂಪತಿ ಪ್ರೀತಿಯಿಂದ ಜಗಳವಾಡೋದು, ಕಿರುಚಾಡೋದು ಮಾಮೂಲಿ. ಸಣ್ಣಪುಟ್ಟ ಜಗಳಗಳು ಸಂಬಂಧವನ್ನು ಗಟ್ಟಿ ಮಾಡುತ್ವೆ ಎಂದು ಹಿರಿಯರು ಹೇಳ್ತಾರೆ. ಇಬ್ಬರು ಎಷ್ಟೇ ಅರ್ಥ ಮಾಡಿಕೊಂಡಿದ್ದಾರೆ ಎಂದ್ರೂ, ಸಂಸಾರ ಶುರುವಾಗಿ 30 ವರ್ಷ ದಾಟಿದ್ರೂ, ಲಕ್ಷಾಂತರ ಪ್ರಯತ್ನಗಳ ನಂತರವೂ, ದಂಪತಿ ನಡುವೆ ದೈನಂದಿನ ಜೀವನದಲ್ಲಿ ವಿವಾದಗಳು ಉದ್ಭವಿಸುತ್ತವೆ. ಆಗಾಗ ನಡೆಯುವ ಗಲಾಟೆ ಹಿತವೆನಿಸಬಹುದು. ಆದ್ರೆ ಪ್ರತಿ ದಿನ, ಪ್ರತಿ ಕೆಲಸಕ್ಕೂ ಇಬ್ಬರ ಮಧ್ಯೆ ಜಗಳ ಶುರುವಾದ್ರೆ, ಸಣ್ಣ ವಿಷ್ಯಗಳು ದೊಡ್ಡದಾದ್ರೆ ಆಗ ಸಂಬಂಧ ಹಾಳಾಗುತ್ತದೆ. ದಾಂಪತ್ಯದಲ್ಲಿ ಬಿರುಕು ಶುರುವಾಗುತ್ತದೆ.
ದಂಪತಿ (Couple), ಸಂಸಾರದಲ್ಲಿ ಸಾರ ಕಳೆದುಕೊಳ್ತಾರೆ. ಅನೇಕ ಬಾರಿ ಸಂಗಾತಿ (Partner) ಮಧ್ಯೆ ಶುರುವಾಗುವ ಜಗಳ ತುಂಬಾ ಸಣ್ಣ ಕಾರಣಕ್ಕಾಗಿರುತ್ತದೆ. ಆದ್ರೆ ಬರ್ತಾ ಬರ್ತಾ ಅದು ದೊಡ್ಡದಾಗುತ್ತದೆ. ವಿಚ್ಛೇದಿತರು ತಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎಂಬ ಸಂಗತಿಯನ್ನು ಹೇಳಿದ್ದಾರೆ. ಅದರಲ್ಲಿ ಕೆಲವೊಂದು ಚಿತ್ರ-ವಿಚಿತ್ರ ಕಾರಣಗಳಿವೆ. ಅದನ್ನು ತಿಳ್ಕೊಂಡ್ರೆ ನೀವು ಸಹ ಬೆಚ್ಚಿಬೀಳೋದು ಖಂಡಿತ.
ಶಕ್ತಿಯಿಲ್ಲದ ವ್ಯಕ್ತಿ ಮದುವೆಯಾಗಿ ಬಾಳು ಹಾಳ್ಮಾಡ್ಕೊಂಡ ಮಹಿಳೆ
ಚಹಾ ಮಾಡಲು ನಿರಾಕರಿಸಿದ ಹೆಂಡತಿ: 1985ರಲ್ಲಿ, ಒಬ್ಬ ವ್ಯಕ್ತಿ ತನ್ನ ಪತ್ನಿ (Wife) ತನಗೆ ಮತ್ತು ತನ್ನ ಸ್ನೇಹಿತರಿಗಾಗಿ ಚಹಾ ತಯಾರಿಸಲು ನಿರಾಕರಿಸಿದ್ದಕ್ಕೆ ಗಂಡ ಸಿಟ್ಟುಗೊಂಡನು. ಘಟನೆ ನಡೆದು ಒಂದೂವರೆ ತಿಂಗಳ ನಂತರ ವಿಚ್ಛೇದನ (Divorce)ವನ್ನು ಪಡೆದುಕೊಂಡನು. ಕೆಲವು ಸಂದರ್ಭಗಳಲ್ಲಿ ಆಕೆ ತಯಾರಿಸುವ ಚಹಾ (Tea) ಸಂಪೂರ್ಣ ಅಸಹ್ಯಕರವಾಗಿರುತ್ತಿತ್ತು. ಯಾಕೆಂದರೆ ಅವಳಿಗೆ ಸರಿಯಾದ ಪ್ರಮಾಣದ ಸಕ್ಕರೆ ಮತ್ತು ಹಾಲನ್ನು ಬಳಸಲು ತಿಳಿಯುತ್ತಿರಲ್ಲಿಲ್ಲ. ಚಹಾದಷ್ಟು ಸರಳ ಪಾನೀಯವನ್ನೂ ತಯಾರಿಸಲಾಗದ ಆಕೆಯ ಅಸಮರ್ಥತೆಯಿಂದ ಗಂಡ ಕಂಗಾಲಾದನು. ಇದಕ್ಕೆ ಪೂರಕವಾಗಿ ಸ್ನೇಹಿತರು ಮನೆಗೆ ಆಗಮಿಸಿದಾಗ ಆಕೆ ಚಹಾ ಮಾಡಲು ನಿರಾಕರಿಸಿದ್ದು ಇನ್ನಷ್ಟು ಸಿಟ್ಟಿಗೆ ಕಾರಣವಾಯಿತು ಎಂದು ತಿಳಿದುಬಂದಿದೆ.
ಗಂಡ ಮಾಂಸಾಹಾರ ತಿನ್ನುತ್ತಾನೆ: ಜೈನ ಮಹಿಳೆಯ ರಜಪೂತ ಸಂಗಾತಿಯನ್ನು ಮದ್ವೆಯಾಗಿದ್ದಳು. ಆದರೆ ಮದುವೆಯ ನಂತರ ಗಂಡ ಮಾಂಸಾಹಾರ (Nonveg)ವನ್ನು ತಿನ್ನುವುದನ್ನು ತಪ್ಪಿಸಲು ಆಕೆಯಿಂದ ಸಾಧ್ಯವಾಗಲ್ಲಿಲ್ಲ. ಗಂಡ ಯಾವಾಗಲೂ ಚಿಕನ್ ತಂದೂರಿ ಮತ್ತು ಮಟನ್ ಬಿರಿಯಾನಿ ತಿನ್ನುವುದನ್ನು ನೋಡಲು ಆಕೆಗೆ ರೇಜಿಗೆಯೆನಿಸುತ್ತಿತ್ತು. ಮಾತ್ರವಲ್ಲ ಆತ ಹೆಂಡತಿಗೆ ಸುಳ್ಳು ಹೇಳಿ ಮನೆಯಿಂದ ಹೊರ ಹೋಗಿ ನಾನ್‌ವೆಜ್ ತಿನ್ನುತ್ತಿದ್ದನು. ಇದನ್ನು ಕಂಡುಕೊಂಡ ಹೆಂಡತಿ (Wife) ಇನ್ನು ಮುಂದೆ ಸುಳ್ಳುಗಾರನನ್ನು ನಂಬಲು ಸಾಧ್ಯವಿಲ್ಲ ಎಂದು ವಿಚ್ಛೇದನ ಪಡೆದುಕೊಂಡಳು.
ವಿಚ್ಛೇದಿತ ವ್ಯಕ್ತಿ ಜೊತೆ Date ಮಾಡೋವಾಗ ಈ ತಪ್ಪು ಮಾಡ್ಬೇಡಿ
ಹೆಂಡತಿಯ ಮುಖದಲ್ಲಿ ಮೊಡವೆ: ಹೆಂಡತಿಯ ಮುಖದಲ್ಲಿ ಮೊಡವೆ (Pimple)ಗಳನ್ನ ನೋಡಿ ತಾನು ಬೇಸತ್ತಿದ್ದಾಗಿ ಹೇಳಿಕೊಂಡ ಪತಿಯೊಬ್ಬ ವಿಚ್ಛೇದನ ಪಡೆಯಲು ಅರ್ಜಿ ಹಾಕಿದ್ದಾನೆ. ಸಹಿಸಲು ಸಾಧ್ಯವಾಗದಷ್ಟು ಮಟ್ಟಿಗೆ ಹೆಂಡತಿಯ ಮುಖದಲ್ಲಿ ಮೊಡವೆಗಳಿತ್ತು ಎಂದು ಹೇಳಿ ಡೈವೋರ್ಸ್ ನೀಡುವಂತೆ ಕೋರ್ಟ್‌ನಲ್ಲಿ ಅರ್ಜಿ ಹಾಕಿದ್ದನು.
ಸಂಗಾತಿಯ ತೂಕ ಹೆಚ್ಚಳ: ತೂಕ ಹೆಚ್ಚಾಗುವುದು ವಿಚ್ಛೇದನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ, ಇದು ಮೇಲ್ನೋಟಕ್ಕೆ ವಿಚಿತ್ರವೆನಿಸಬಹುದು, ಆದರೆ ಸ್ಥೂಲಕಾಯತೆಯು ವಿಚ್ಛೇದನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಕೆಲವು ಸಂದರ್ಭಗಳಲ್ಲಿ, ಪ್ರಮುಖ ತೂಕ ಹೆಚ್ಚಳವು ಇತರ ಸಂಗಾತಿಯು ಕಡಿಮೆ ದೈಹಿಕವಾಗಿ ಆಕರ್ಷಿತರಾಗಲು ಕಾರಣವಾಗುತ್ತದೆ. ಇತರರಿಗೆ, ತೂಕ ಹೆಚ್ಚಾಗುವುದು ಸ್ವಾಭಿಮಾನವನ್ನು ಕಡಿಮೆ ಮಾಡುತ್ತದೆ, ಇದು ಅನ್ಯೋನ್ಯತೆಯೊಂದಿಗೆ ತೊಂದರೆಗಳಿಗೆ ಕಾರಣವಾಗುತ್ತದೆ ಮತ್ತು ವಿಚ್ಛೇದನಕ್ಕೆ ಕಾರಣವಾಗಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.