
ದುಬಾರಿ ಲೈಫ್ ನಲ್ಲಿ ದುಡಿಮೆ ಅನಿವಾರ್ಯ. ತಂದೆ – ತಾಯಿ ಇಬ್ಬರೂ ಕೆಲಸಕ್ಕೆ ಹೊರಗೆ ಹೋಗುವ ಪರಿಸ್ಥಿತಿ ಈಗಿದೆ. ಪಾಲಕರಿಬ್ಬರೂ ಕೆಲಸಕ್ಕೆ ಹೋದ್ರೆ ಮಕ್ಕಳು ಒಂಟಿಯಾಗ್ತಾರೆ. ಕೆಲವೇ ಕೆಲವು ಮಂದಿ ಮಕ್ಕಳನ್ನು ಅಜ್ಜ – ಅಜ್ಜಿ ಬಳಿ ಬಿಡ್ತಾರೆ. ಬಹುತೇಕರು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗ್ತಾರೆ. ಮನೆಯಲ್ಲಿ ಮಕ್ಕಳನ್ನಷ್ಟೇ ಬಿಟ್ಟು ಹೋಗೋದು ಸುಲಭವಲ್ಲ. ಅನೇಕ ಸವಾಲುಗಳು ಇದರಲ್ಲಿದೆ. ಹಾಗೆಯೇ ಪಾಲಕರಲ್ಲಿ ಒಂದು ಭಯವಿರುತ್ತದೆ. ಮಕ್ಕಳು ಮನೆಯಲ್ಲಿ ಸುರಕ್ಷಿತವಾಗಿ ಇರ್ತಾರಾ ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವ ಪಾಲಕರು ಕೆಲ ಟಿಪ್ಸ್ ಪಾಲನೆ ಮಾಡಿದ್ರೆ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ನಾವಿಂದು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವ ಮುನ್ನ ಪಾಲಕರು ಏನು ತಿಳಿದಿರಬೇಕು ಎಂಬುದನ್ನು ಹೇಳ್ತೇವೆ.
ಸಾಧ್ಯವಾದಷ್ಟು ಒಬ್ಬರು ಮನೆ (Home) ಯಲ್ಲಿರಿ : ಈಗ ವರ್ಕ್ ಫ್ರಂ ಹೋಮ್ (Work From Home) ಆಯ್ಕೆಯನ್ನು ಅನೇಕ ಕಂಪನಿಗಳು ನೀಡಿವೆ. ಹಾಗಾಗಿ ಇಬ್ಬರಲ್ಲಿ ಒಬ್ಬರು ಈ ಆಯ್ಕೆಯನ್ನು ಪಡೆಯಬಹುದು. ಇಲ್ಲವೆ ಶಿಫ್ಟ್ ನಲ್ಲಿ ಕೆಲಸ ಮಾಡಬಹುದು. ತಾಯಿ ಮಾರ್ನಿಂಗ್ ಕೆಲಸ ಮಾಡಿದ್ರೆ ತಂದೆ ಇವನಿಂಗ್ ಕೆಲಸ ಮಾಡುವ ಆಯ್ಕೆ ತೆಗೆದುಕೊಳ್ಳಬಹುದು. ಇಲ್ಲವೆ ಮನೆಯಲ್ಲಿಯೇ ಮಾಡುವ ಕೆಲಸಗಳು ಸಾಕಷ್ಟಿದೆ. ತಾಯಿ ಇದನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
ಸಹಾಯಕರನ್ನು ನೇಮಿಸಿಕೊಳ್ಳಿ : ಮನೆಯಲ್ಲಿ ಕೆಲಸ (Work) ಮಾಡಲು ಸಾಧ್ಯವಿಲ್ಲ ಎನ್ನುವವರು ಮಕ್ಕಳನ್ನು ನೋಡಿಕೊಳ್ಳಲು ಸಹಾಯಕರನ್ನು ನೇಮಕ ಮಾಡಬಹುದು. ಸಹಾಯಕರನ್ನು ನೇಮಿಸಿಕೊಳ್ಳುವಾಗ ನೀವು ಎಚ್ಚರಿಕೆ ವಹಿಸಬೇಕು. ಯಾಕೆಂದ್ರೆ ಸಹಾಯಕರು ಅನೇಕ ಬಾರಿ ಮಕ್ಕಳ ಜೊತೆ ಕೆಟ್ಟದಾಗಿ ವರ್ತಿಸುವ ಸಾಧ್ಯತೆಯಿರುತ್ತದೆ. ಹಾಗಾಗಿ ಅವರ ಪೂರ್ವಾಪರ ವಿಚಾರಿಸಿ ಅವರನ್ನು ನೇಮಕ ಮಾಡಿ.
ಅಜ್ಜ –ಅಜ್ಜಿ ಇದ್ರೆ ಅವರನ್ನು ಮನೆಯಲ್ಲಿಟ್ಟುಕೊಳ್ಳಿ : ಅಜ್ಜ – ಅಜ್ಜಿಯಿಂದ ಮಕ್ಕಳು ಸಾಕಷ್ಟನ್ನು ಕಲಿಯುತ್ತಾರೆ. ಹಾಗಾಗಿ ನಿಮಗೆ ಸಾಧ್ಯವಿದೆ ಎಂದಾದ್ರೆ ನೀವು ಅಜ್ಜ – ಅಜ್ಜಿಯನ್ನು ಮನೆಯಲ್ಲಿ ತಂದಿಟ್ಟುಕೊಳ್ಳಿ. ಮನೆಯಲ್ಲಿ ಯಾರೂ ಇಲ್ಲ ಎನ್ನುವುದಕ್ಕಿಂತ ಮನೆಯಲ್ಲಿ ಹಿರಿಯರಿದ್ದರೆ ಬಹಳ ಒಳ್ಳೆಯದು.
ಸಿಸಿಟಿವಿ ಅಳವಡಿಸಿ : ಮಕ್ಕಳು ಮನೆಯಲ್ಲಿ ಒಬ್ಬರೇ ಇರಲಿ ಇಲ್ಲ ಸಹಾಯಕರ ಜೊತೆ ಇರಲಿ, ಮನೆಯಲ್ಲಿ ಸಿಸಿಟಿವಿ ಅಳವಡಿಸುವುದು ಒಳ್ಳೆಯದು. ಅದನ್ನು ಮೊಬೈಲ್ ಗೆ ಕನೆಕ್ಟ್ ಮಾಡುವ ಆಪ್ ಗಳು ಲಭ್ಯವಿದೆ. ನೀವು ಕಚೇರಿಯಲ್ಲೇ ಕುಳಿತು ಮಕ್ಕಳು ಏನು ಮಾಡ್ತಿದ್ದಾರೆ ಎಂಬುದನ್ನು ಪರೀಕ್ಷಿಸಬಹುದು. ಮಕ್ಕಳಿಗೆ ಅಪಾಯವಿದೆ ಎಂದಾಗ ಅವರನ್ನು ಬೇಗ ರಕ್ಷಿಸಬಹುದು.
ಮನೆಯಲ್ಲಿ ಒಂದು ಮೊಬೈಲ್ ಇರಲಿ : ಮಕ್ಕಳ ಕೈಗೆ ಒಂದು ಮೊಬೈಲ್ ಕೊಟ್ಟು ಹೋಗಿ. ಮೊಬೈಲ್ ಬಳಕೆಯನ್ನು ಮಕ್ಕಳಿಗೆ ವಿಶೇಷವಾಗಿ ಕಲಿಸಬೇಕಾಗಿಲ್ಲ. ನಿಮ್ಮ ನಂಬರ್ ಡೈಲ್ ಮಾಡಲು ಮಕ್ಕಳಿಗೆ ಹೇಳಿಕೊಟ್ಟರೆ ಸಾಕು.
Kids Care: ಮಕ್ಕಳಿಗೆ ಅವಮಾನವಾಗುವ ಮಾತನ್ನಾಡ್ಬೇಡಿ
ಮನೆ ಬಗ್ಗೆ ಮಕ್ಕಳಿಗೆ ಮಾಹಿತಿ ಇರಲಿ : ಮನೆ ಬಾಗಿಲನ್ನು ಹಾಕುವುದು ಹಾಗೂ ತೆಗೆಯುವುದನ್ನು ಮಕ್ಕಳಿಗೆ ತಿಳಿಸಿ. ಮನೆಯ ಲಾಕ್ ಹಾಕಲು ಮಕ್ಕಳಿಗೆ ಹೇಳಿ. ಮನೆಯಲ್ಲಿ ಯಾರೂ ಒಲ್ಲದ ವೇಳೆ ಬಾತ್ ರೂಮ್ ಬಾಗಿಲು ಹಾಕಿಕೊಳ್ಳದಂತೆ ಮಕ್ಕಳಿಗೆ ಹೇಳಿ.
ಅಪರಿಚಿತರ ಬಗ್ಗೆ ಎಚ್ಚರ : ಮನೆಗೆ ಅಪರಿಚಿತರು ಬಂದ್ರೆ ಯಾವುದೇ ಕಾರಣಕ್ಕೂ ಬಾಗಿಲು ತೆರೆಯದಂತೆ ಮಕ್ಕಳಿಗೆ ತಿಳಿಸಿ. ಅಪರಿಚಿತರ ಜೊತೆ ಚರ್ಚೆ ಮಾಡದಂತೆ ಅವರಿಗೆ ಹೇಳಿ.
ಮಕ್ಕಳು ಮುದ್ದು ಅಂತ ಹೆಚ್ಚು ಮುತ್ತು ಕೊಡೋದು ಸರೀನಾ ?
ಗ್ಯಾಸ್ ಆಫ್ ಮಾಡಲು ಮರೆಯಬೇಡಿ : ಮಕ್ಕಳು ಮನೆಯಲ್ಲಿದ್ದಾಗ ಎಲ್ಲ ವಸ್ತುವನ್ನೂ ಬಳಸ್ತಾರೆ. ಗ್ಯಾಸ್ ನಂತಹ ಅಪಾಯಕಾರಿ ವಸ್ತುವನ್ನು ಅವರು ಮುಟ್ಟಬಹುದು. ಹಾಗಾಗಿ ಮನೆಯಿಂದ ಹೊರಗೆ ಹೋಗುವ ಮುನ್ನ ಗ್ಯಾಸ್ ಆಫ್ ಮಾಡಿ ಹೋಗಿ. ಅವರಿಗೆ ಅಗತ್ಯವಿರುವ ಎಲ್ಲ ವಸ್ತುಗಳು ಕೈಗೆ ಸಿಗುವಂತೆ ಇಟ್ಟು ಹೋಗಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.