
ಭಾರತೀಯ ಮದುವೆಗಳು ಹೆಚ್ಚು ಸಿದ್ಧತೆ, ಗಲಾಟೆ-ಗದ್ದಲಗಳಿಂದ ಕೂಡಿರುತ್ತದೆ. ಹೀಗಾಗಿ ಮದುವೆಯ ರಾತ್ರಿ ಹೆಚ್ಚಿನ ದಂಪತಿಗಳಿಗೂ ಹೆಚ್ಚು ನಿರೀಕ್ಷಿತ ರಾತ್ರಿಯಾಗಿರುವುದಿಲ್ಲ. ಇದು ಅನೇಕ ಕಾರಣಗಳಿಂದಾಗಿರಬಹುದು-ಕಳಪೆ ಲೈಂಗಿಕ ಶಿಕ್ಷಣ, ಆತಂಕ, ಹೆದರಿಕೆ ಅಥವಾ ಸಂವಹನದ ಕೊರತೆ-ಇದಕ್ಕಾಗಿ ಬಹಳಷ್ಟು ಜನರು ಮದುವೆಯ ನಂತರ ತಮ್ಮ ಮೊದಲ ರಾತ್ರಿಯಲ್ಲಿ ಲೈಂಗಿಕತೆಯನ್ನು ಹೊಂದುವ ಕಲ್ಪನೆಯನ್ನು ಭಯಪಡುತ್ತಾರೆ. ವಾಸ್ತವವಾಗಿ, ಕೆಲವರು ಈ ದಿನಕ್ಕೆ ವಾರಗಳ ಮುಂಚೆಯೇ ನಿದ್ದೆಯಿಲ್ಲದ ರಾತ್ರಿಯನ್ನು ಪಡೆಯಲು ಪ್ರಾರಂಭಿಸುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಆಲೋಚನೆಯೇ ಅವರ ಒತ್ತಡದ ಮಟ್ಟವನ್ನು ಮತ್ತೊಂದು ಹಂತಕ್ಕೆ ಹೆಚ್ಚಿಸುತ್ತದೆ. ಮೊದಲ ರಾತ್ರಿಯ ಬಗ್ಗೆ ಕೆಲ ಮಹಿಳೆಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರು ಏನು ಹೇಳಿದ್ದಾರೆ ತಿಳಿದುಕೊಳ್ಳೋಣ.
ಫಸ್ಟ್ ನೈಟ್ ಎಂದರೆ ಏನೆಂದೇ ಗೊತ್ತಿರಲ್ಲಿಲ್ಲ: ನಾನು ಹಿಂದೆಂದೂ ಯಾರೊಂದಿಗೂ ಡೇಟಿಂಗ್ ಮಾಡಿರಲಿಲ್ಲ ಮತ್ತು ಮದುವೆಯ (Marriage) ರಾತ್ರಿ ಏನಾಗಬಹುದು ಎಂಬುದರ ಕುರಿತು ನಾನು ಭಯದಿಂದ ನಡುಗುತ್ತಿದ್ದೆ. ಸೆಕ್ಸ್‌ನಿಂದ ನೋವಾಗುತ್ತದೆಯೇ ? ರಕ್ತಸ್ರಾವವಾಗುವುದೇ? ನಾನು ಏನು ಮಾಡಬೇಕು? ನನ್ನ ಮನಸ್ಸಿನಲ್ಲಿ ಲೆಕ್ಕವಿಲ್ಲದಷ್ಟು ಪ್ರಶ್ನೆಗಳಿದ್ದವು ಮತ್ತು ಅವು ನನಗೆ ಚಕಿತಗೊಳಿಸುತ್ತಿದ್ದವು. ನನ್ನ ಸಂದೇಹಗಳನ್ನು ಸ್ಪಷ್ಟಪಡಿಸಲು ನಾನು ಇಂಟರ್ನೆಟ್‌ನಲ್ಲಿ ಉತ್ತರಗಳನ್ನು ಹುಡುಕಿದೆ. ಆದರೂ ಸಮಾಧಾನವಾಗಲ್ಲಿಲ್ಲ.. ಆದರೆ ನನ್ನ ಪತಿ ನಿಜವಾಗಿಯೂ ತಾಳ್ಮೆ ಹೊಂದಿದ್ದರು ಮತ್ತು ನನ್ನ ಆತಂಕಗಳನ್ನು ಅರ್ಥಮಾಡಿಕೊಂಡರು. ಇತರರಿಗಿಂತ ಭಿನ್ನವಾಗಿ, ನಾವು ಫಸ್ಟ್‌ನೈಟ್ ಆಚರಿಸಿದ್ದೆವು.
ವಯಸ್ಸಿಗೆ ಬಂದ್ರೂ ಪಾಲಕರು ಮದುವೆ ಮಾಡ್ತಿಲ್ಲ ಏನು ಮಾಡ್ಲಿ?
ಮೊದಲ ರಾತ್ರಿ ವಿಚಿತ್ರವಾಗಿತ್ತು: ಹೆತ್ತವರು ಮದುವೆಯನ್ನು ನಿಶ್ಚಯಿಸಿದರು. ಹೀಗಾಗಿ ನನ್ನ ಪತಿ ಮತ್ತು ನಾನು ಮದುವೆಗೆ ಮೊದಲು ಸಂಪರ್ಕಿಸಲು ಸಮಯ ಸಿಕ್ಕಿರಲಿಲ್ಲ. ಹೀಗಾಗಿ ನಮ್ಮ ಮೊದಲ ರಾತ್ರಿ (First night) ಒಂದು ವಿಚಿತ್ರವಾದ ಅನುಭವವಾಗಿತ್ತು. ನಾವಿಬ್ಬರೂ ಸಮಾನವಾಗಿ ಗೊಂದಲದಲ್ಲಿದ್ದೆವು. ಫಸ್ಟ್ ನೈಟ್‌ಗಾಗಿ ಸಂದರ್ಭಕ್ಕಾಗಿ ವಿಶೇಷವಾಗಿ ಅಲಂಕರಿಸಲ್ಪಟ್ಟ ಮಲಗುವ ಕೋಣೆಯಲ್ಲಿ ನಾವಿಬ್ಬರೂ ಮೊದಲ ಹದಿನೈದು ನಿಮಿಷಗಳ ಮಾತನಾಡುತ್ತಲೇ ಇದ್ದೆವು. ಯಾಕೆಂದರೆ ನಾವು ಸಂಪೂರ್ಣವಾಗಿ ಅಪರಿಚಿತರಾಗಿದ್ದೆವು ಎಂದು ನವ ವಿವಾಹಿತೆ ಹೇಳಿದ್ದಾರೆ.
ರಕ್ಷಣೆಯ ಬಗ್ಗೆ ಏನು: ನಮ್ಮ ಮೊದಲ ರಾತ್ರಿಯಲ್ಲಿ ನಾವು ಲೈಂಗಿಕತೆ (Sex)ಯನ್ನು ಪ್ರಾರಂಭಿಸಿದಾಗ, ನನ್ನ ಪತಿ ಯಾವ ರೀತಿಯ ರಕ್ಷಣೆಯನ್ನು ಬಳಸುತ್ತಾರೆ ಎಂಬುದು ನನ್ನ ಏಕೈಕ ಕಾಳಜಿಯಾಗಿತ್ತು. ನಾನು ಈ ಬಗ್ಗೆ ಗಾಬಾರಿಯಾಗಿದ್ದೆ. ಮೊದಲ ಇಪ್ಪತ್ತು ನಿಮಿಷಗಳವರೆಗೆ ಅವನು ಯಾವುದೇ ಕಾಂಡೋಮ್ ಬಳಸುವುದನ್ನು ನಾನು ನೋಡಲಿಲ್ಲ. ನಂತರ ಅವರು ಕಾಂಡೋಮ್ ಪ್ಯಾಕೆಟ್ ತೆರೆಯುವುದನ್ನು ನಾನು ನೋಡಿದೆ ಮತ್ತು ನೆಮ್ಮದಿಯಾಯಿತು ಎಂದು ಇನ್ನೊಬ್ಬ ಮಹಿಳೆ (Woman) ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ವಿಭಿನ್ನ ಲೈಂಗಿಕ ಆದ್ಯತೆ: ನನ್ನ ಪತಿ ಮತ್ತು ನಾನು ಮದುವೆಗೆ ಮೊದಲು ನಮ್ಮ ಲೈಂಗಿಕ ಆದ್ಯತೆಗಳನ್ನು ಚರ್ಚಿಸಿದೆವು ಮತ್ತು ನಾವು ವಿಭಿನ್ನ ಆಸಕ್ತಿಗಳನ್ನು ಹೊಂದಿದ್ದೇವೆ ಎಂದು ಕಂಡುಹಿಡಿದೆವು. ಅವರು ಲೈಂಗಿಕ ಜೀವನದಲ್ಲಿ ಚಮತ್ಕಾರಿ ಸಂಗತಿಗಳನ್ನು ಪ್ರಯತ್ನಿಸಲು ಬಯಸಿದ್ದರು ಮತ್ತು ಅವುಗಳಲ್ಲಿ ಯಾವುದರ ಬಗ್ಗೆಯೂ ನಾನು ಕೇಳಿರಲಿಲ್ಲ. ಹೀಗಾಗಿ ನನ್ನ ಮೊದಲ ರಾತ್ರಿ ನಿಜವಾಗಿಯೂ ಭಯಾನಕವಾಗಿತ್ತು ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಹೀಗಿದ್ದೂ ಪರಸ್ಪರ ಮಾತುಕತೆಯ ಮೂಲಕ ಗೊಂದಲವನ್ನು ಬಗೆಹರಿಸಿ ಮೊದಲ ರಾತ್ರಿ ಮಾಡಿಕೊಂಡೆವು ಎಂದಿದ್ದಾರೆ.
ಸೆಕ್ಸ್ ಲೈಫ್ ಸಖತ್ತಾಗಿರಲು ಪಾಲಿಸಿ ಈ '3S' ಸೂತ್ರ, ದುಶ್ಚಟದಿಂದ ದೂರವಾಗಿ
ಲೈಂಗಿಕ ಕ್ರಿಯೆ ಬಗ್ಗೆ ಭಯ: ನಾನು ನಿಶ್ಚಯಿತ ವಿವಾಹವನ್ನು ಹೊಂದಿದ್ದೆ ಮತ್ತು ನಾವು ಮದುವೆಯಾಗುವ ಮೊದಲು ಕೇವಲ ಮೂರು ಬಾರಿ ಭೇಟಿಯಾದೆವು. ನಾನು ಅವನನ್ನು ಇಷ್ಟಪಡುತ್ತೇನೆ ಎಂದು ನನಗೆ ತಿಳಿದಿತ್ತು. ಆದರೆ ಅವನ ಬಗ್ಗೆ ಅಷ್ಟೇನೂ ತಿಳಿದಿರಲಿಲ್ಲ. ಒಟ್ಟಿಗೆ ಇರುವ ಮೊದಲ ರಾತ್ರಿಯಲ್ಲಿ ಲೈಂಗಿಕ ಕ್ರಿಯೆ ನಡೆಸಲು ಸಿದ್ಧವಾಗಿರಲ್ಲಿಲ್ಲ. ನಾನು ಅವನೊಂದಿಗೆ ನನ್ನ ಗೊಂದಲವನ್ನು ಹಂಚಿಕೊಂಡಿದ್ದೇನೆ ಮತ್ತು ನಾನು ಅದಕ್ಕೆ ಸಿದ್ಧವಾದಾಗ ಮಾತ್ರ ನಾವು ಲೈಂಗಿಕತೆಯನ್ನು ಹೊಂದಿದೆವು ಎಂದು ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.