
ಪವನ್ ಕುಮಾರ್ ಎಂ
ಶಂಕರಘಟ್ಟ.
ಮೊದಮೊದಲು ಅವಳು ಓರೆಗಣ್ಣಿನಲ್ಲಿ ನೋಡಿದ ನೆನಪು ನನ್ನ ನೆನಪಿನ ಕಾದಂಬರಿಯ ಶೀರ್ಷಿಕೆ ಅನ್ನಿಸುತ್ತೆ. ಯಾಕೆಂದರೆ ಅವಳ ಆ ನೋಟಕ್ಕೆ ಅಲ್ವಾ ನನ್ನನ್ನು ನಾನು ಮರೆತಿದ್ದು. ಅದೇ ಆ ಕಣ್ಣು, ನನ್ನ ಕಣ್ಣು ಮುಚ್ಚಿದರೆ ಸಾಕು ನನ್ನೊಳಗೆ ಆ ಕಣ್ಣು ತೆರೆಯುತ್ತದೆ. ಈ ಹಳೆ ನೆನಪುಗಳೇ ಹಾಗೆ ಅನ್ಸುತ್ತೆ. ಮಾಯದ ಗಾಯದ ಬರೆಯಂತೆ. ಯಾಕಂದ್ರೆ ಗಾಯ ಮಾಯವಾದರೂ ಕಲೆ ಮಾತ್ರ ಉಳಿದುಕೊಂಡಿರುತ್ತದೆ.
ಅವಳೆಂದರೆ ಅದೇನೋ ಸೆಳೆತ ನನ್ನೊಳಗೆ. ಅವಳೆಂದರೆ ಅದ್ಯಾಕೋ ನನ್ನ ತುಟಿ ಅರಳಲು ಆರಂಭಿಸುತ್ತಿತ್ತು. ಅವಳ ಹೆಸರನ್ನ ಹೇಳಿದರೆ ಸಾಕು ಹೃದಯ ಅರಳಿದಂತಾಗುತ್ತಿತ್ತು. ಅವಳ ಧ್ವನಿ ಕೇಳಿದರೆ ನನ್ನ ನಾನೇ ಮರೆಯುತ್ತಿದ್ದೆ. ಆದರೆ ಇನ್ಮುಂದೆ ಅದು ಹೇಗೆ ನೆನೆಯಲಿ ನಾ ಅವಳನ್ನ. ಅವಳು ಕನಸಲಿ ಬಂದು ಮಾಯವಾದಂತೆ ಮಾಯವಾಗಲು ಹೊರಟಿಹಳಲ್ಲ ನನ್ನ ಮರೆತು.
ಹುಡುಗರೇ ನೆನಪಿಟ್ಕೊಳ್ಳಿ, ಹುಡುಗೀರು ನೀವಂದುಕೊಂಡಂತಿರೋಲ್ಲ!
ಗುರುತು ಪರಿಚಯ ಇಲ್ಲದ ನಮ್ಮ ನಡುವೆ ಅದ್ಯಾವಾಗ ಪ್ರೀತಿಯ ಬೇರು ಭದ್ರವಾಗಿ ಬೇರೂರಿತ್ತು ಅಂತ ನನಗೆ ತಿಳಿಯಲೇ ಇಲ್ಲ. ನನಗೆ ಗೊತ್ತಿಲ್ಲದಂತೆ ನಾನು ಅವಳ ಮೇಲೆ ಅವಲಂಬನೆ ಆಗಿ ಹೋಗಿದ್ದೆ. ಅದೇ ಅತಿಯಾದ ಪ್ರೀತಿ ಇಂದು ನನ್ನನ್ನ ನೋವಿನ ಸಾಗರದಲ್ಲಿ ಮುಳುಗಿಸುತ್ತಿದೆ. ಪಾರ್ಕು ಸಿನಿಮಾ ಸುತ್ತಲಿಲ್ಲ, ನೈಟ್ ರೈಡ್ ಎಂದು ಹೋಗಲಿಲ್ಲ, ಕೇವಲ ನೋವು ನಲಿವಿನ ಹಸ್ತಾಂತರ ಆದರೂ ಅವಳ ಮೇಲೆ ಅಷ್ಟುಅವಲಂಬನೆ ಆಗಿ ಹೋದೆನಲ್ಲ.
ಮನದೊಳಗೆ ನೂರು ಕನಸನ್ನ ಕಟ್ಟಿಒಲ್ಲದ ಮನಸ್ಸಿನಿಂದ ಹಸೆಮಣೆಯನ್ನ ಏರಿ ನೀ ಇನ್ಯಾರದ್ದೋ ಕೈ ಹಿಡಿದು ಹೋಗುವೆ. ಆದರೆ ನಾನು ಏನು ಮಾಡಲಿ ಹೇಳು. ನೆನಸಿಕೊಂಡರೆ ಸಾಕು ಕಣ್ಣ ಸಂದಿಯಲ್ಲಿ ನೀರು ಜಾರುವುದೇ ತಿಳಿಯುವುದಿಲ್ಲ. ದೇಹದ ನೋವಿಗೆ ಮಾತ್ರೆ ಇರುವಂತೆಯೇ ಮನಸ್ಸಿನ ನೋವಿಗೆ ಮಾತ್ರೆ ಇರಬಾರದಿತ್ತೆ. ಇದ್ದಿದ್ದರೆ ತಿಂದು ಬಿಡುತ್ತಿದ್ದೆ ಎಲ್ಲವನ್ನೂ ನಾನೊಬ್ಬನೇ ಯಾರಿಗೂ ಕೊಡದಂತೆ.
ಅವನಿಗೆ ಗೊತ್ತಿಲ್ಲ, ಅವಳು ಹೇಳಲ್ಲ; ಇದೊಂದು ಕ್ಯೂಟ್ ಲವ್ ಸ್ಟೋರಿ!
ಅಷ್ಟಕ್ಕೂ ಅದೇನು ಉಳಿದಿದೆ ಅಲ್ವಾ ನೀ ಬಿಟ್ಟು ಹೋದ ಮೇಲೆ ನನಗೆ. ಇವೆಲ್ಲವನ್ನು ನೆನಪು ಮಾಡಿಕೊಂಡರೆ ಮನದೊಳಗೆ ದುಃಖವು ಉಮ್ಮಳಿಸಿ ಬರುತ್ತದೆ. ಅದನ್ನ ನಾನಾದರೂ ಯಾರ ಹತ್ತಿರ, ಹೇಗೆ ಹೇಳಿಕೊಳ್ಳಲಿ ಹೇಳು. ಅದಕ್ಕೆ ಪದಗಳ ಮೂಲಕ ಹೊರ ಹಾಕುತ್ತಿದ್ದೇನೆ.
ಮನದೊಳಗೆ ಕನಸಿನ ಕೋಟೆ ಕಟ್ಟಿನಿನ್ನ ಸುಖವನ್ನೇ ಬಯಸಿದ ನಾನು ನಿನಗಾಗಿ ಏನು ಹೇಳಲು ಸಾಧ್ಯ ನೀ ಸುಖವಾಗಿ ಇರಲಿ ಎಂದು ಹೇಳುವುದು ಬಿಟ್ಟು. ಪ್ಲೀಸ್ ನನ್ನ ಮದ್ವೆಗೆ ಕರೆಯೋ ಪ್ರಯತ್ನ ಮಾಡ್ಬೇಡ. ಯಾಕಂದ್ರೆ ನನಗೆ ಅದನ್ನ ತಡೆದುಕೊಳ್ಳಲು ಶಕ್ತಿ ಇಲ್ಲ. ಇರಲಿ ಬಂದದ್ದನ್ನ ಅನುಭವಿಸುತ್ತೇನೆ. ಹ್ಯಾಪಿ ಮ್ಯಾರೀಡ್ ಲೈಫ್. ಹ್ಯಾಪಿ ವ್ಯಾಲೆಂಟೈನ್ ಡೇ, ಲವ್ ಯೂ.
ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ;ಒಂದು ಮಧುರ ಕಥಾ ಪ್ರಸಂಗ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.