ಅವನಿಗೆ ಗೊತ್ತಿಲ್ಲ, ಅವಳು ಹೇಳಲ್ಲ; ಇದೊಂದು ಕ್ಯೂಟ್‌ ಲವ್‌ ಸ್ಟೋರಿ!

By Suvarna News  |  First Published Feb 13, 2020, 8:50 AM IST

ನನ್ನ ಗೆಳತಿ ಮಯೂರಿ, ಎದುರು ಬದುರು ಮನೆ ನಮ್ಮದು. ಹೈಸ್ಕೂಲಿನಿಂದ ಜೊತೆಗೆ ಶಾಲೆಗೆ ಹೋಗುತ್ತಿದ್ದೆವು. ಹೋಮ್‌ವರ್ಕ್ ಕೂಡ ಜೊತೆ ಜೊತೆಗೆ ಮಾಡುತ್ತಿದ್ದೆವು. ಅವಳು ತುಂಬಾ ಮುಗ್ಧ ಹುಡುಗಿ. ಆದ್ರೆ ಬೇಗ ಸಿಟ್ಟು ಬರುವುದು, ಅಷ್ಟೇ ಬೇಗ ಕರಗುವಳು. ಪದವಿಗೆ ಕೂಡ ಒಂದೇ ಕಾಲೇಜಿಗೆ ಸೇರಿದೆವು. ನೃತ್ಯ, ಹಾಡಿನಲ್ಲಿ ಯಾರಿಂದಲೂ ಅವಳನ್ನು ಮೀರಿಸಲು ಸಾಧ್ಯವಾಗುತ್ತಿರಲಿಲ್ಲ. 


ಚೈತ್ರ, ಎಸ್‌.ಡಿ.ಎಮ್‌ ಕಾಲೇಜು, ಉಜಿರೆ.

ನಾವಿಬ್ಬರೂ ಯಾವತ್ತಿಗೂ ನೃತ್ಯ ಮಾಡಿದರೆ ಇಬ್ಬರೂ ಜೊತೆಗೆ, ಹಾಡು ಹಾಡಿದರೆ ಇಬ್ಬರೂ ಜೊತೆಗೆ ಅಷ್ಟುನಾನು ಅವಳನ್ನು ಹಚ್ಚಿಕೊಂಡಿದ್ದೆ. ಅದೆಷ್ಟೋ ರಹಸ್ಯ ವಿಷಯಗಳನ್ನು ನಮ್ಮಲ್ಲಿ ಹಂಚಿಕೊಂಡಿದ್ದೇವೆ. ಯಾವತ್ತೂ ನಮ್ಮಿಬ್ಬರ ಗೆಳೆತನದಲ್ಲಿ ಮನಸ್ತಾಪ ಬರಲಿಲ್ಲ. ಜಗಳವಾಗಿದೆ ಆದ್ರೆ ಕ್ಷಣಿಕ ಮಾತ್ರ.

Tap to resize

Latest Videos

undefined

ಪ್ರೀತಿ ಎಂಬ ಪದ ನನ್ನ ಬಾಯಿಯಲ್ಲಿ ಬಂದಾಗ ಆಕೆ ನನಗೆ ಬೈದು ಬುದ್ಧಿ ಹೇಳುತ್ತಿದ್ದಳು. ಒಮ್ಮೆ ಹೀಗೆ ಒಬ್ಬ ಹುಡುಗ ನನ್ನ ಬಳಿ ಬಂದು ಪ್ರೀತಿಯ ಪ್ರಸ್ತಾವನೆ ಮಾಡಿದಾಗ ಅವನಿಗೆ ಬೈದು ನನ್ನ ಉತ್ತರ ಅವಳೇ ಕೊಟ್ಟಿದ್ದಳು, ಅವಳಿಗೆ ನೀನು ಇಷ್ಟಇಲ್ಲ. ಸುಮ್ಮನೆ ಟೈಮ್‌ ವೇಸ್ಟ್‌ ಮಾಡಿಕೊಳ್ಳಬೇಡ. ಓದಿನ ಕಡೆ ಗಮನ ಕೊಡು ಎಂದು ಬುದ್ಧಿ ಹೇಳಿದ್ದಳು.

ಹುಡುಗರೇ ನೆನಪಿಟ್ಕೊಳ್ಳಿ, ಹುಡುಗೀರು ನೀವಂದುಕೊಂಡಂತಿರೋಲ್ಲ!

ಪದವಿ ಕೊನೆಯ ವರುಷ, ನಮ್ಮ ಕಾಲೇಜಿನ ಒಂದು ಸಮಾರಂಭದಲ್ಲಿ ಇಬ್ಬರೂ ಜೊತೆಗೆ ಒಂದು ಹಾಡನ್ನು ಹಾಡಿದೆವು. ನಮ್ಮ ಸ್ನೇಹಿತರು ಎಲ್ಲರೂ ಬಂದು ನಮ್ಮನ್ನು ಹೊಗಳುತ್ತಿದ್ದ ಸಮಯ, ಬೇರೆ ವಿಭಾಗದ ಒಬ್ಬ ವಿದ್ಯಾರ್ಥಿ ನಮ್ಮತ್ತ ಬಂದು, ನೀವು ಇವತ್ತು ಹಾಡಿದ ಹಾಡು ಸ್ಟುಡಿಯೋದಲ್ಲಿ ರೆಕಾರ್ಡ್‌ ಮಾಡ್ಲಿಕ್ಕೆ ಇದ್ದೆ. ನಾಳೆ ಮುಂಜಾನೆ ಮಂಗಳೂರಿಗೆ ಹೋಗಲು ತಯಾರಾಗಿ ಹಾಡು ಸರಿಯಾಗಿ ಅಭ್ಯಾಸ ಮಾಡಿ ಬನ್ನಿ ಎಂದು ಹೇಳಿ ಹೋದ.

ಇಬ್ಬರೂ ಮುಂಜಾನೆ ಅವನಿಗಾಗಿ ಬಸ್‌ಸ್ಟ್ಯಾಂಡ್‌ನಲ್ಲಿ ಕಾಯುತ್ತಿದ್ದೆವು. ಅವನು ಬಂದ ಕೂಡಲೇ ಮಯೂರಿ ಎದ್ದು ಹಲೋ ಎಂದಳು. ಆವತ್ತು ಅವಳ ನಡವಳಿಕೆ ಪೂರ್ತಿ ಬದಲಾಗಿತ್ತು. ನಾನು ಗಮನಿಸುತ್ತಾ ಹೋದೆ. ಬಸ್ಸಿನಲ್ಲಿ ಅವನ ಹಿಂದುಗಡೆ ಸೀಟ್‌ನಲ್ಲಿ ಕುಳಿತಳು. ಅವನನ್ನೇ ನೋಡುತ್ತಿದ್ದಳು. ಸ್ವಲ್ಪ ಹೊತ್ತಿನ ನಂತರ ಅವಳ ಕಥೆ ಶುರುವಾಯಿತು. ನನಗೆ ಏನೋ ಆಗಿದೆ ಚೈತ್ರ, ಹಾಗೆ ಹೀಗೆ ಎಂದು ನನ್ನ ಬಳಿ ಹೇಳಲು ಪ್ರಾಂಭಿಸಿದಳು. ನಾನು ಕೂಡ ಅವಳು ಹೇಳುವುದಕ್ಕೆ ತಲೆ ಆಡಿಸುತ್ತಾ ಕುಳಿತೆ. ಮತ್ತೆ ವಿಷಯಕ್ಕೆ ಬಂದಳು ಅದೇನೆಂದರೆ ಅವಳು ಅವನನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ಬಗ್ಗೆ.

ಎಣ್ಣೆಯಾಗಿ ನಮ್ಮೊಳಗಿನ ಸ್ಫೂರ್ತಿಯ ದೀಪ ಎಂದೂ ಆರದಿರಲಿ

ಯಾವತ್ತೂ ಪ್ರೀತಿ ಎಂಬ ವಿಷಯಕ್ಕೆ ವಿರುದ್ಧವಾಗಿದ್ದ ಮಯೂರಿಯಲ್ಲಿ ಆ ದಿನ ಪ್ರೀತಿಯ ಮಾತು ಕೇಳಿ ನನಗ್ಯಾಕೋ ನಂಬಲು ಸಾಧ್ಯವಾಗಲಿಲ್ಲ.ಅವನು ಅವಳಿಗೆ ದೂರದ ಸಂಬಂಧಿಯಂತೆ, ಮನೆಕಾರ್ಯಕ್ರಮದ ಸಮಯದಲ್ಲಿ ಅವನನ್ನು ತುಂಬಾ ಸರಿ ನೋಡಿದ್ದೇನೆ ಎಂದು ಆ ದಿನ ಬಾಯಿ ಬಿಟ್ಟಳು. ಅಲ್ಲಿ ಮಯೂರಿಯ ಮೊದಲ ಪ್ರೀತಿ ಶುರುವಾಯಿತು .

ಜೀನ್ಸ್‌ಟಾಪ್‌ಗಳನ್ನು ಧರಿಸುತ್ತಿದ್ದ ಮಯೂರಿಯ ಬಟ್ಟೆಯ ಶೈಲಿ ಬದಲಾಯಿತು. ಚೂಡಿದಾರ್‌, ಕೈ ಬಳೆ, ಹಣೆಗೆ ಬೊಟ್ಟು. ಹೀಗೆ ಮಯೂರಿ ಅವನ ಪ್ರೀತಿಯನ್ನು ಒಲಿಸಿಕೊಳ್ಳಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಳು. ಕಾಲೇಜಿಗೆ ಬೇಗ ಬಂದು ಅವನಿಗಾಗಿ ಹುಡುಕಾಟ, ಊಟದ ಸಮಯದಲ್ಲೂ ಕೂಡ ಕ್ಯಾಂಟಿನ್‌ ಬಳಿ ಕಾಯುತ್ತಿದ್ದಳು. ಅವನ ಊಟದ ನಂತರ, ಅವನು ಕುಳಿತ ಕುರ್ಚಿಯಲ್ಲಿಯೇ ಅವಳು ಕುಳಿತು ಊಟ ಮಾಡುತ್ತಿದ್ದಳು. ಯಾವತ್ತೂ ಗ್ರಂಥಾಲಯದ ಕಡೆ ಮುಖಮಾಡದ ಮಯೂರಿ ಅವನಿಗಾಗಿ ಹೋಗುತ್ತಿದ್ದಳು. ಕಾರ್ಯಕ್ರಮ ಇದ್ದ ಸಮಯದಲ್ಲಿ ಅವನ ಹಿಂದಿನ ಸೀಟಿನಲ್ಲಿ ಇವಳೇ ಕೂರುತ್ತಿದ್ದಳು. ಬೇರೆ ಯಾರಾದ್ರೂ ಕುಳಿತುಕೊಂಡಿದ್ದಾರೆ ಎಬ್ಬಿಸುತ್ತಿದ್ದಳು. ಮತ್ತೇನಂದ್ರೆ ಅವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲಿಗೆ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದಳು. ಕೇಳಿದ್ರೆ ಅವಳಿಗೆ ಧೈರ್ಯಕ್ಕಾಗಿ ನಾನು ಜೊತೆಗೇ ಇರಲೇಬೇಕಂತೆ. ಒಂದು ದಿನ ಅವನು ಕಾಲೇಜಿನಲ್ಲಿ ಕಾಣಿಸದೆ ಹೋದರೆ ನನ್ನನ್ನು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಅಕಸ್ಮಾತ್‌ ಮನೆಗೆ ಹೋದರೂ ಫೋನ್‌ ಮಾಡಿ ತನ್ನ ವಿರಹ ವೇದನೆಯನ್ನು ಹೇಳಿಕೊಳ್ಳುತ್ತಿದ್ದಳು .ಅವಳಿಗೂ ಅಂದು ನಿದ್ದೆ ಇಲ್ಲ,ನನಗೂ ಇಲ್ಲ.

ವಾಟ್ಸಪ್‌ ಸ್ಟೇಟಸ್‌ಗಳಲ್ಲಿ ಅವನಿಗಾಗಿ ಕವನ ಬರೆಯುತ್ತಿದ್ದಳು, ಹಾಡು ಹಾಡುತ್ತಿದ್ದಳು. ಅವಳ ಗ್ಯಾಲರಿ ಪೂರ್ತಿ ಅವನದೇ ಫೋಟೋ. ಪುಸ್ತಕ ಪೂರ್ತಿ ಅವರಿಬ್ಬರ ಹೆಸರು ತುಂಬಿ ತುಳುಕಾಡುತ್ತಿತ್ತು.

ಬಾಲಿವುಡ್ ಫೇಮಸ್ ಲವ್ ಬ್ರೇಕಪ್‌ ಜೋಡಿಗಳಿವು!

ಅವನೆದುರು ಬಂದಾಗ ಅವಳ ಎದೆ ಬಡಿತ ಜೋರಾಗುತ್ತಿತ್ತು, ಕೆನ್ನೆ ಕೆಂಪಾಗುತ್ತಿತ್ತು, ಕೈಗಳು ನಡುಗುತ್ತಿತ್ತು. ಅದೇನೋ ಅಂತಾರಲ್ಲ ವನ್‌ ಸೈಡ್‌ ಲವ್‌. ಹಾಗೆ ಇವಳದೂ ಅದೇ ಕಥೆ. ಅವರಿಬ್ಬರು ಒಬ್ಬರಿಗೊಬ್ಬರು ಒಂದು ದಿನ ಮಾತನಾಡಿದವರಲ್ಲ. ಇವತ್ತಿಗೂ ತನ್ನ ಪ್ರೀತಿಯನ್ನು ಅವನ ಬಳಿ ಹಂಚಿಕೊಳ್ಳಲಿಲ್ಲ.ಅದೇ ಪ್ರೀತಿ ಇಂದಿಗೂ ಇದೆ,ಆದ್ರೆ ಹೇಳುವ ಧೈರ್ಯ ಇನ್ನೂ ಬರಲಿಲ್ಲ. ಅಂದು ಸ್ಟುಡಿಯೋದಲ್ಲಿ ಹಾಡಿದ ಹಾಡನ್ನು ಮತ್ತೆ ಮತ್ತೆ ಕೇಳುತ್ತಾ ಅವನ ನೆನಪಿನಲ್ಲೇ ಇರುತ್ತಾಳೆ. ಅವನ ನೆನಪು ಕಾಡಿದರೆ ನನಗೆ ಕರೆ ಮಾಡಿ 2-3 ಗಂಟೆಗಳ ಕಾಲ ಮಾತನಾಡುತ್ತಾ ಅವನ ಬಗ್ಗೆ ಹೇಳುತ್ತಾ ಕುಳಿತುಕೊಳ್ಳುತ್ತಾಳೆ. ನಾನು ಪ್ರತಿಕ್ರಿಯಿಸದೆ ಇದ್ದಲ್ಲಿ ಮಯೂ ಸಿಟ್ಟಿಗೇಳುತ್ತಾಳೆ. ಅವಳನ್ನು ಸಮಾಧಾನ ಪಡಿಸಲು ಹೆಚ್ಚೇನು ಮಾಡಬೇಕಾಗಿಲ್ಲ,ಅವನ ಒಂದು ಫೋಟೋ ಕಳುಹಿಸಿದರೆ ಸಾಕು ಕರಗಿ ನೀರಾಗುತ್ತಾಳೆ.

click me!