ಯಾರೋ ಮೋಹನ ಯಾವ ರಾಧೆಗೋ ಪಡುತಿರುವನು ಪರಿತಾಪ;ಒಂದು ಮಧುರ ಕಥಾ ಪ್ರಸಂಗ!

By Suvarna News  |  First Published Feb 13, 2020, 8:59 AM IST

ಅಂದು ಗುರುವಾರ. ನನ್ನ ಫ್ರೆಂಡ್ಸ್‌ ಮದುವೆ. ನಾನು ಮದುವೆಗೆ ಹೋಗಬೇಕು ಅಂದುಕೊಂಡಿರಲಿಲ್ಲ. ನನ್ನ ಫ್ರೆಂಡ್‌ ಕಾಲ್‌ ಮಾಡಿ ನಿನ್ನವಳು ಬರ್ತಾಳೆ ಬಾ ಎಂದಾಕ್ಷಣ ಮದುವೆಗೆ ಹೋಗಬೇಕು ಎನ್ನುವ ಆಸೆ ಹುಟ್ಟಿತು.


ರಾಜು.ಕೆ

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ,ಬಳ್ಳಾರಿ.

Tap to resize

Latest Videos

undefined

ತುಂಬಾ ವರ್ಷಗಳ ನಂತರ ಅವಳನ್ನು ನೋಡಬೇಕೆಂಬ ಆಸೆಯಿಂದ ಬೇಗ ರೆಡಿಯಾಗಿ ಮದುವೆ ಮಂಟಪಕ್ಕೆ ಹೋದೆ. ನನ್ನ ಕಣ್ಣುಗಳು ಅವಳನ್ನು ನೋಡಬೇಕೆಂಬ ಕಾತುರದಲ್ಲಿದ್ದವು. ನನ್ನೆಲ್ಲಾ ಫ್ರೆಂಡ್ಸ್‌ ಕಂಡರೂ ನನ್ನವಳು ಕಾಣಲಿಲ್ಲ. ಹುಡುಕತೊಡಗಿದೆ. ಆಗ ಕಂಡಳು ನೋಡಿ ವಧುವಿನ ಪಕ್ಕದಲ್ಲಿ ಪಿಂಕ್‌ ಸೀರೆ ಉಟ್ಟು. ನಾಸಿಕದಲ್ಲಿ ಹೊಳೆಯುವ ಮೂಗುತಿ ನಗೆ ಬೀರಿ ನರ್ತಿಸುತ್ತಿತ್ತು.

ಅವನಿಗೆ ಗೊತ್ತಿಲ್ಲ, ಅವಳು ಹೇಳಲ್ಲ; ಇದೊಂದು ಕ್ಯೂಟ್‌ ಲವ್‌ ಸ್ಟೋರಿ!

ಕೆಳಗಿಳಿದು ಬಂದು ಕಿರುನಗೆ ಬೀರುತ್ತಾ ನನ್ನ ಫ್ರೆಂಡ್‌ ಹತ್ತಿರ ಮಾತಾಡುತ್ತಿದ್ದಳು. ಆ ಸಮಯದಲ್ಲಿ ನಾನು ಹೋಗಿ ಮಾತನಾಡಿಸಲ್ಲ, ಬೇಡ ಬೇಡ ಅಂದುಕೊಂಡು ಅವಳನ್ನು ನೋಡುತ್ತಾ ಸುಮ್ಮನೆ ಕುಳಿತೆ. ಮನಸ್ಸಿನಲ್ಲಿ ನಾನು ಅಂದುಕೊಳ್ಳುತ್ತಿದ್ದೆ, ನನ್ನ ಬಳಿ ಬಂದರೂ ಮಾತನಾಡಿಸದೆ ಹಾಗೆ ಹೋಗಿ ಕೂರಬೇಡ, ಈ ಮನಸ್ಸಿಗೆ ನೋವು ಆಗುತ್ತೆ. ಆಮೇಲೆ ಸುಮ್ಮನೆ ನನ್ನ ಫ್ರೆಂಡ್ಸ್‌ ಜೊತೆ ಮಾತನಾಡತೊಡಗಿದ್ದೆ. ಅವಳ ಕೈ ಬಳೆ ಶಬ್ದ, ಅವಳ ಕಿರುನಗೆ ನನ್ನನ್ನು ಸೆಳೆಯುತ್ತಿತ್ತು. ಓಪನ್‌ ಹೇರ್‌ ಬಿಟ್ಟುಕೊಂಡು, ಕೂದಲು ಹಾರಾಡಿಸಿಕೊಂಡು ನನ್ನ ಪಕ್ಕದಲ್ಲಿ ಓಡಾಡಬ್ಯಾಡವೇ ಸಾಂಗ್‌ ಹೇಳುತ್ತಾ ಫ್ರೆಂಡ್ಸ್‌ ನನಗೆ ಕಾಮಿಡಿ ಮಾಡತೊಡಗಿದರು. ನಾನು ಕಿರುನಗೆ ಬೀರುತ್ತಾ ನಗತೊಡಗಿದೆ.

ಹುಡುಗರೇ ನೆನಪಿಟ್ಕೊಳ್ಳಿ, ಹುಡುಗೀರು ನೀವಂದುಕೊಂಡಂತಿರೋಲ್ಲ!

ಆಗ ನಮ್ಮ ಫ್ರೆಂಡ್ಸ್‌ ಗ್ರೂಪ್‌ನಲ್ಲಿ ನನ್ನವಳು ಕೂಡಿಕೊಂಡಳು. ನನ್ನೆದೆಯ ಕೋಟೆಯಲ್ಲಿ ಕೂಡಿಟ್ಟಅಮೂಲ್ಯವಾದ ಮನಸ್ಸನ್ನು ಕದ್ದ ಚೋರಿಗೆ, ನಿನ್ನ ಮುದ್ದು ಮುಖಕ್ಕೆ ಮೂಗುತ್ತಿ ಚೆನ್ನಾಗಿದೆ ಎಂದು ಹೇಳಿಬಿಟ್ಟೆ. ಅದಕ್ಕೆ ಮರು ಉತ್ತರವಾಗಿ ನೀನು ಕೂಡ ಚೆನ್ನಾಗಿ ಕಾಣುತ್ತೀಯಾ ಅಂದು ಹೇಳಿದಳು. ಆ ಸಂದರ್ಭದಲ್ಲಿ ಸಂತೋಷಕ್ಕೆ ಪಾರವೇ ಇರಲಿಲ್ಲ.

click me!