
ಬಾಣಂತನ ಮಹಿಳೆಯರ ಜೀವನದ ಪ್ರಮುಖ ಘಟ್ಟ. ಈ ಸಂದರ್ಭದಲ್ಲಿ ಗರ್ಭಿಣಿ (Pregnant)ಯ ಮನಸ್ಸು ಹಾಗೂ ದೇಹ ಎರಡೂ ಸೂಕ್ಷ್ಮವಾಗಿರುತ್ತದೆ. ಹೀಗಾಗಿಯೇ ಆಕೆಯ ಆರೈಕೆಗೆ ಮನೆಯ ಹಿರಿಯರೆಲ್ಲರೂ ಒಟ್ಟು ಸೇರುತ್ತಾರೆ. ಆಕೆ ಯಾವುದೇ ಕೆಲಸ ಮಾಡದಂತೆ ಆರಾಮ ಮಾಡಲು ಸೂಚಿಸುತ್ತಾರೆ. ಆಕೆಯ ಅಗತ್ಯತೆಗಳನ್ನು ಪೂರೈಸುತ್ತಾರೆ. ಮಹಿಳೆ ಗರ್ಭಿಣಿಯಾದಾಗ ಆಕೆಯ ವಿಶ್ರಾಂತಿ ಹಾಗೂ ಮಗುವಿನ ಆರೈಕೆಗೆಂದೇ ಮೆಟರ್ನಿಟಿ ಲೀವ್ (Maternity Leave)ನೀಡಲಾಗುತ್ತದೆ.
ಹೆರಿಗೆ ಪ್ರಯೋಜನ ಕಾಯಿದೆಯ ಪ್ರಕಾರ ಮಹಿಳಾ ಉದ್ಯೋಗಿಗಳು ಗರ್ಭಿಣಿಯಾದಾಗ ಗರಿಷ್ಠ 12 ವಾರಗಳ (84 ದಿನಗಳು) ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ. ಈ 12 ವಾರಗಳಲ್ಲಿ ಆರು ವಾರಗಳ ರಜೆಯು ಪ್ರಸವೋತ್ತರ ರಜೆಯಾಗಿದೆ. ಗರ್ಭಪಾತ ಅಥವಾ ಗರ್ಭಾವಸ್ಥೆಯ ವೈದ್ಯಕೀಯ ಮುಕ್ತಾಯದ ಸಂದರ್ಭದಲ್ಲಿ, ಕೆಲಸಗಾರನಿಗೆ ಆರು ವಾರಗಳ ಪಾವತಿಸಿದ ಹೆರಿಗೆ ರಜೆಗೆ ಅರ್ಹತೆ ಇದೆ ಎಂದು ತಿಳಿಸಲಾಗಿದೆ.
Cinnamon Health Benefits: ಮಕ್ಕಳಾಗುತ್ತಿಲ್ಲ ಎಂಬ ಚಿಂತೆಯೇ ? ದಾಲ್ಚಿನ್ನಿ ತಿಂದು ನೋಡಿ
ಪೋಷಕರು ಎಂದರೆ ತಂದೆ-ತಾಯಿ ಹಾಗೂ ಇಬ್ಬರು ಕೂಡಾ ಹೌದು, ಹೀಗಿದ್ದಾಗ ಒಂದು ಮಗು ಜನಿಸಿದಾಗ ಅಲ್ಲಿ ಅಪ್ಪ (Father) ಹಾಗೂ ಅಮ್ಮ (Mother) ಇಬ್ಬರಿಗೂ ಸಮಾನವಾಗಿ ಜವಾಬ್ದಾರಿಯಿರುತ್ತದೆ. ತಾಯಿ ಮಕ್ಕಳ ಕಾಳಜಿ (Care) ವಹಿಸುವಂತೆ ತಂದೆಯೂ ಅದಕ್ಕೆ ಆಸರೆಯಾಗಬೇಕು. ಹೀಗಾಗಿಯೇ ಗರ್ಭಿಣಿಯರು ಮೆಟರ್ನಿಟಿ ತೆಗೆದುಕೊಳ್ಳುವಂತೆ ಆಕೆಯ ಪತಿ ಪೆಟರ್ನಿಟಿ ಲೀವ್ (Paternity leave) ತೆಗೆದುಕೊಳ್ಳಬಹುದಾಗಿದೆ.
ಗರ್ಭದೊಳಗೆ ಪುಟ್ಟ ಜೀವ ಬೆಳೆಯುತ್ತಿದೆ ಎಂಬುದನ್ನು ತಿಳಿದ ಕೂಡಲೇ ತಾಯಿ ಅದರ ಕಾಳಜಿ ವಹಿಸಲು ಶುರು ಮಾಡುತ್ತಾಳೆ. ಮಗುವಿನೊಂದಿಗೆ ತಾಯಂದಿರು ಯಾವಾಗಲೂ ಇರುತ್ತಾರೆ. ಅದೇ ರೀತಿ ಆರಂಭಿಕ ತಿಂಗಳುಗಳಲ್ಲಿ ತಂದೆಯ ಪಾತ್ರವು ಅಷ್ಟೇ ಮಹತ್ವದ್ದಾಗಿದೆ.
ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಅವರು ಇತ್ತೀಚೆಗೆ ಮೂರು ವಾರಗಳ ಪಿತೃತ್ವ ರಜೆ ಅಥವಾ ಪೆಟರ್ನಿಟಿ ರಜೆಯನ್ನು ತೆಗೆದುಕೊಂಡರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಟ್ವಿಟರ್ ಸಿಇಒ ಪರಾಗ್ ಅಗರವಾಲ್ ನಡೆಗೆ ಸಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದೆ. ಈ ನಿರ್ಧಾರವನ್ನು ಟ್ವಿಟರ್ ಸಿಎಫ್ ಒ ನೆಡ್ ಸೆಗಲ್ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೇರಿದಂತೆ ಹಲವರು ಶ್ಲಾಘಿಸಿದ್ದಾರೆ. ಈ ಹಿಂದೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್ ಬರ್ಗ್ ಸಹ 2 ತಿಂಗಳುಗಳ ಕಾಲ ಪೆಟರ್ನಿಟಿ ಲೀವ್ ತೆಗೆದುಕೊಂಡಿದ್ದರು. ಮಗು ಜನಿಸಿದ ಬಳಿಕವೂ ದೀರ್ಘ ರಜೆಯನ್ನು ಪಡೆದುಕೊಂಡಿದ್ದರು.
ತನ್ನ ಹಾಗೂ ಮಗುವಿನ ಆರೋಗ್ಯಕ್ಕಾಗಿ ಗರ್ಭಿಣಿ ಮಹಿಳೆಗೆ Vastu Tips
ಟ್ವಿಟರ್ ಸಿಎಫ್ ಒ ನೆಡ್ ಸೆಗಲ್ ಟ್ವೀಟ್ ಮಾಡಿ, ‘ಪ್ರತಿಯೊಬ್ಬರೂ ತಂದೆಯಾದಾಗ ಈ ರೀತಿ ರಜೆ ತೆಗೆದುಕೊಳ್ಳಬೇಕೆಂದುನಾನು ಬಯಸುತ್ತೇನೆ’ ಎಂದು ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪತಿ ವಿರಾಟ್ ಕೊಹ್ಲಿ ಕೂಡಾ ಮಗು ವಮಿಕಾ ಹುಟ್ಟಿದ ಸಮಯದಲ್ಲಿ ಪಿತೃತ್ವ ರಜೆಗಾಗಿ ಮೂರು ತಿಂಗಳ ರಜೆ ತೆಗೆದುಕೊಂಡಿದ್ದರು.
ಪಿತೃತ್ವ ರಜೆಯನ್ನು ಸಾಮಾನ್ಯಗೊಳಿಸುವ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಪೋಲೋ ಆಸ್ಪತ್ರೆಯ ಹಿರಿಯ ಮನೋವೈದ್ಯ ಡಾ.ರೋಷನ್ ಜೈನ್, ಮಗುವಿನ ಜನನವು ಪೋಷಕರ ಜನ್ಮವೂ ಆಗಿದೆ. ಹೆರಿಗೆಯು ದಂಪತಿಗಳ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಯಾಗಿದೆ ಮತ್ತು ಆ ಬದಲಾವಣೆಯು ರೋಮಾಂಚನಕಾರಿ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಹೀಗಾಗಿ ಮಗುವಿನ ಪಾಲನೆಗೆ ಪೋಷಕರು ಇಬ್ಬರೂ ಲಭ್ಯವಿರುವುದು ನಿರ್ಣಾಯಕವಾಗಿದೆ’ ಎನ್ನುತ್ತಾರೆ.
ಬಾಲಿವುಡ್ ನಟ ಶಾಹೀದ್ ಕಪೂರ್ ಸಹ ಪತ್ನಿ ಮೊದಲ ಮಗುವಿಗೆ ಗರ್ಭಿಣಿಯಾಗಿದ್ದಾಗ 6 ತಿಂಗಳ ಪೆಟರ್ನಿಟಿ ಲೀವ್ ತೆಗೆದುಕೊಂಡಿದ್ದರು. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸಹ ಪೆಟರ್ನಿಟಿ ಲೀವ್ ತೆಗೆದುಕೊಡಿದ್ದರು. ಈ ಕುರಿತಾಗಿ ಮಾತನಾಡಿರುವ ಅವರು 'ಮಕ್ಕಳಾಗುವುದು ಜೀವನದಲ್ಲಿಯೇ ಒಂದು ಅದ್ಭುತ ಅನುಭವ. ಅದರಲ್ಲಿ ತಂದೆ-ತಾಯಿ ಇಬ್ಬರ ಪಾತ್ರವೂ ಇರಬೇಕು. ಮಕ್ಕಳ ಜತೆ ಉತ್ತಮ ಬಾಂಡಿಂಗ್ ಬೆಳೆಯಲು ಹುಟ್ಟಿದ ಕೆಲವು ತಿಂಗಳುಗಳ ಪುರುಷರು ಸಹ ಅವರ ಜತೆಗೇ ಇರುವುದು ಅವಶ್ಯಕ' ಎಂದು ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.